Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 12 December 2011

ನಿಷ್ಠಾವಂತ ಪೊಲೀಸ್ ಅಧಿಕಾರಿ ಲೋಕೇಶ್ವರ


              ಪೊಲೀಸ್ ಇಲಾಖೆ ಕೇವಲ ಕ್ರೈಂ ನ್ಯೂಸ್‍ಗಳಿಗೆ ಮಾತ್ರ ಸೀಮಿತವಲ್ಲ. ಅಲ್ಲಿಯೂ ನಿಜವಾದ ಬದುಕಿನ ವರ್ಣ ರಂಜಿತ ಚಿತ್ತಾರ ಕಾಣಬಹುದು. ಅಲ್ಲಿಯೂ ಭಾವನೆಗಳು ಜೀವಂತವಾಗಿವೆ. ಕಲ್ಪನೆಗಳ ಗರಿಗೆದರುತ್ತವೆ. ಈ ಅಪರೂಪದ ಅನುಭವವನ್ನು ನಿಷ್ಠಾವಂತ ಪೊಲೀಸ್ ಅಧಿಕಾರಿಯಾದ ಲೋಕೇಶ್ವರ ಅವರ ಮಾತುಗಳಿಂದ ನೀವು ಪರಿಚಯಿಸಿಕೊಳ್ಳಬಹುದು. ಈ ಲೇಖನ ಓದಿ -

" ನಮ್ಮ ತಂದೆ ರೈತಾಪಿ ಕುಟುಂಬದಿಂದ ಬಂದವರು. ಕಾರಣಾಂತರಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು, ಚಿಕ್ಕವಯಸ್ಸಿನಲ್ಲಿಯೇ ಸ್ವಾಭಿಮಾನದಿಂದ ಹೊರಗೆ ಬಂದು, ತಮ್ಮ ಸ್ವಂತ ಬಾಳ್ವೆಯನ್ನು ಆರಂಭಿಸಿದ್ದರು. ತಿಪಟೂರಿನಲ್ಲಿ ಸಣ್ಣ ಮಟ್ಟದಲ್ಲಿ ಜೀವನ ಪ್ರಾರಂಭವಾಗಿತ್ತು. ಬಡತನದ ವಾತಾವರಣದಲ್ಲೇ ನಾವು ಬೆಳೆದದ್ದು, ಆ ದಿನಗಳಲ್ಲಿ ನಮ್ಮ ಜೀವನ ತುಂಬಾ ಕಠಿಣವಾಗಿತ್ತು. ತಿಪಟೂರಿನ ಗಾಂಧಿನಗರ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಹರಿಜನ, ಮುಸಲ್ಮಾನರೇ ಹೆಚ್ಚಾಗಿದ್ದರು. ಅದರ ಮಧ್ಯೆ ನಮ್ಮದೊಂದು ಲಿಂಗಾಯತ ಕುಟುಂಬ. ಅಲ್ಲಿ ಹರಿಜನ, ಮುಸಲ್ಮಾನರೇ ಹೆಚ್ಚಾಗಿದ್ದರು. ಅದರ ಮಧ್ಯೆ ನಮ್ಮದೊಂದು ಲಿಂಗಾಯತ ಕುಟುಂಬ. ಆ ಮಕ್ಕಳು, ಆ ಜನರ ಜೊತೆ ಬೆಳೆದವನು ನಾನು. ನಮಗೆ ಜೀವನದಲ್ಲಿ ಮನುಷ್ಯನಿಗೆ ಏನೆಲ್ಲಾ ಕಷ್ಟಗಳು ಬರಬಹುದೋ ಅದೆಲ್ಲವನ್ನೂ ಚಿಕ್ಕವಯಸ್ಸಿನಲ್ಲಿಯೇ ಬಹಳ ಹತ್ತಿರದಿಂದ ನೋಡುವಂತಾಯಿತು. ಅದರಿಂದಾಗಿ, ಹಣದ ಮೂಲಕ ಅಥವಾ ಯಾವುದೋ ಪ್ರಭಾವದಿಂದ ಮುಂದೆ ನಾನು ಬೆಳೆಯಬಹುದು ಅನ್ನೋ ಯೋಚನೆ ಇರಲಿಲ್ಲ. ನಾನು ಸ್ವಂತ ಪ್ರತಿಭೆಯಿಂದಲೇ ಬೆಳೆಯಲೇಬೇಕು ಅನ್ನೋ ಛಲ ಹುಟ್ಟುವುದಕ್ಕೂ ಅದೇ ಕಾರಣವಾಗಿತ್ತು. ಬೇರೆ ದಾರಿಯೇ ಇರಲಿಲ್ಲ. ವ್ಯಾಪಾರ ಅಥವಾ ಬೇರೆ ಕೆಲಸಗಳು ನನ್ನ ಗಮನವನ್ನು ಅಷ್ಟಾಗಿ ಓಲೈಸಿರಲಿಲ್ಲ. ನನಗೆ ಕೃಷಿಯಲ್ಲಿ ಆಸಕ್ತಿಯಿದ್ದಾದರೂ ಕಷ್ಟಪಟ್ಟು ಓದಿ ಏನಾದರೂ ಸಾಧಿಸಲೇಬೇಕೆಂಬ ಹುಚ್ಚಿತ್ತು. ತುಂಬಾ ಚೆನ್ನಾಗಿ ಓದುತ್ತಿದ್ದೆ. ೬ನೇ ತರಗತಿಯಲ್ಲಿದ್ದಾಗ ಸಾಮಾನ್ಯ ಜನರ ಅಭಿಪ್ರಾಯದಂತೆ ಅವರಿವರ ಮಾತುಗಲ ಪ್ರಕಾರ, ಹಣ ಅಥವಾಅ ಯಾರದೇಅ ಪ್ರಭವ ಇಲದೆ ಮಿಲಿಟಾರಿ ಸೇರಬಹುದು. ಅಲ್ಲಿ ಪ್ರತಿಭೆಗೆ ಮಾತ್ರ ಆದ್ಯತೆ ಅನ್ನುವ ಮಾತು ಕೇಳಿದ್ದೆ. ವಿದ್ಯಾರ್ಥಿ ವೇತನ ಸಿಗುತ್ತೆ, ನಿವೃತ್ತಿ ಆದ ಮೇಲೆ ಜಮೀನು ಕೊಡುತ್ತಾರೆ ಅನ್ನೋ ವಿಚಾರಗಳೆಲ್ಲಾ ಚರ್ಚೆಯಾಗುತ್ತಿದ್ದವು. ಹೀಗಾಗಿ, ಆ ಸಮಯದಲ್ಲಿ ಅದೇ ನನಗೆ ಸೂಕ್ತವಾದ ಕೆಲಸ ಅನಿಸಿತ್ತು. ಮಿಲಿಟರಿಗೆ ಹೋದರೆ ಕಷ್ಟಪಟ್ಟು ದುಡಿಯಬಹುದು, ದೇಶಸೇವೆಯನ್ನು ಮಾಡಬಹುದು ಅನ್ನೋ ಮನಸ್ಸಾಗಿತ್ತು. ಆಗಿನ ಕಷ್ಟದ ಅನುಭವವೇ ನನ್ನನ್ನು ಆ ರೀತಿ ಯೋಚನೆ ಮಾಡುವಂತೆ ಮಾಡಿತ್ತು. ನಮ್ಮ ತಂದೆಯವರಿಗೆ ಆರು ಜನ ಮಕಳು. ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಸಣ್ಣದೊಂದು ಹೊಟೇಲಿನಿಂದ ಜೀವನ ನಡೆಸುವುದು ಅಷ್ಟೊಂದು ಸುಲಭ ಇರಲಿಲ್ಲ. ತಿಪಟೂರಿನ ಗಾಂಧಿನಗರದಲ್ಲಿ ೭ನೇ ತರಗತಿ ಪಾಸಾಗಿ, ಅನಂತರ ೧೯೭೨ರಲ್ಲಿ ಶ್ರೀ ವಿದ್ಯಾಪೀಠ ಪ್ರೌಢಶಾಲೆಯಲ್ಲಿ  ೮ನೆ ತರಗತಿಗೆ ಸೇರಿಕೊಂಡೆ. ಅಲ್ಲಿಂದ ನನ್ನ ಕ್ರೀಡಾ ಜೀವನ ಪ್ರಾರಂಭವಾಯ್ತು. ಕಬಡ್ದಿ ಆಟಗಾರನಾಗಿ ಸೇರಿಕೊಂಡೆ. ಆಮೇಲೆ ಖೋ ಖೋ ಸೇರಿ ಅದರಲ್ಲೇ ಹೆಚ್ಚು ಪ್ರಖ್ಯಾತಿ ಪಡೆದೆ. ಎಸ್.ಎಸ್.ಎಲ್.ಸಿ.ಗೆ ಬರುವಷ್ಟರಲ್ಲಿ ಕ್ಯಾಪ್ಟೆನ್ ಆಗಿ ತಂಡವನ್ನು ನಿರ್ವಹಿಸುತ್ತಾ ಬಂದೆ. ಆಗಲೂ, ಮನ್ಯಲ್ಲಿ ಬಡತನದ ವಾತಾವರಣ ಹಾಗೆಯೇ ಮುಂದುವರೆದಿತ್ತು. ಜೀವನದಲ್ಲಿ ಮತ್ತೊಬ್ಬರಿಂದ ನಾವು ಮಾನವೀಯತೆಯನ್ನು ನಿರೀಕ್ಷೆ ಮಾಡುತ್ತಿದ್ದಂತ ದಿನಗಳನ್ನು ನಾನು ನೋಡಿದ್ದೆ. ಹೀಗಾಗಿ ಜೀವನದಲ್ಲಿ ನಾವು ಯಾವತ್ತೂ ಮಾನವೀಯತೆ ಮರೆಯಬಾರದು ಎನ್ನುವ ತತ್ವವನ್ನು ಪಾಲಿಸಿಕೊಂಡು ಬಂದಿದ್ದೀನಿ. ಬೆಳೆದಂತೆಲ್ಲ ಕೆಲವು ಜನ ಯಾವ ಕಾರಣಕ್ಕೆ ಇದನ್ನೆಲ್ಲ ಮರೆಯುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ, ನನ್ನ ಮಟ್ಟಿಗೆ ಮರೆಯುವಂಥ ಪ್ರಮೇಯವೇ ಬರಲಿಲ್ಲ. ಜೀವನದ ಬಗ್ಗೆ ನಿಜವಾದ ಭಾವನೆ-ಕಲ್ಪನೆಗಳು ನಮಗೆ ಬೇಕು ಅನ್ನೋದೆ ನನ್ನ ಆಸೆ. ಆಗಲೇ ನಾವು ಸಂತೋಷ ಎಂದರೇನು, ನೆಮ್ಮದಿ ಎಂದರೇನು ಅನ್ನೋದನ್ನ ಅರ್ಥ ಮಡಿಕೊಳ್ಳೋಕೆ ಅದನ್ನು ಅನುಭವಿಸೋಕೆ ಸಾಧ್ಯವಾಗೋದು.

         ನಮ್ಮ ತಂದೆ ಬಡವರಾಗಿದ್ದರೂ, ಅವರನ್ನು ಎಲ್ಲರೂ ಸೇಠು ಎನ್ನುತ್ತಿದ್ದರು. ಮನೆಗೆ ಬಂದವರನ್ನು ಸತ್ಕಾರ ಮಾಡುತ್ತಿದ್ದ ಅವರ ಸಂಭ್ರಮ ನೋಡಿ ಅವರನ್ನು ದಿಲ್‍ದಾರ್ ಅನ್ನುತ್ತಿದ್ದರು. ಮನೆಗೆ ಬಂದವರನ್ನು ಸತ್ಕಾರ ಮಾಡುತ್ತಿದ್ದ ಅವರ ಸಂಭ್ರಮ ನೋಡಿ ಅವರನ್ನು ದಿಲ್‍ದಾರ್ ಅನ್ನುತ್ತಿದ್ದರು. ನಮ್ಮ ತಂದೆ-ತಾಯಿಗೆ ಬೇರೆಯವರನ್ನು ಕಂಡರೆ ಅವರಿಗೆ ಅಷ್ಟೊಂದು ಪ್ರೀತಿ, ಅಷ್ಟೊಂದು ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ, ಸಂತೋಷಕ್ಕೆ ಕೊರತೆ ಇರಲಿಲ್ಲ. ನಮ್ಮ ಹತ್ತಿರ ದುಡ್ಡಿಲ್ಲದೇ ಹೋದರೂ ನೆಮ್ಮದಿ ಇತ್ತು. ತಂದೆಯವರಿಗೆ ಮನೆ ಕಡೆ ಆಸ್ತಿ ಇದ್ದರೂ, ಅದರ ಕಡೆಗೆ ಅವರ ಯೋಚನೆ ಇರಲಿಲ್ಲ. ಆಮೇಲೆ ಅವರು ಹೊಟೇಲ್ ವ್ಯಾಪಾರ ಬಿಟ್ಟು ಕೊಬ್ಬರಿ ವ್ಯಾಪಾರ ಆರಂಭಿಸಿದರು. ಅಲ್ಲಿಂದ ನಮ್ಮ ಜೀವನ ಸ್ವಲ್ಪ ಸುಧಾರಣೆಯಾಯಿತು.

         ನಾನು ಕಾಲೇಜಿಗೆ ಬರುವಷ್ಟರಲ್ಲಿ ನಮ್ಮ ಅಣ್ನ ಟಿ.ಎಸ್.ಬಸವರಾಜ್ ಡಿಗ್ರಿ ಮುಗಿಸಿದ್ದರು. ಅವರೂ ಸಹಾ ಒಳ್ಳೆಯ ಕ್ರೀಡಾಪಟುವಾಗಿದ್ದರು. ಮಾಜಿ ಪುರಸಭೆ ಅಧ್ಯಕ್ಷರಾಗಿದ್ದರು. ಎ.ಪಿ.ಎಂ.ಸಿ. ನಿರ್ದೇಶಕರಾಗಿದ್ದರು. ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಈಗ ಅವರೂ ಕೊಬ್ಬರಿ ಅಂಗಡಿ ಇಟ್ಟಿದ್ದಾರೆ. ನಮ್ಮ ಅಣ್ಣ ಮತ್ತು ನಮ್ಮ ತಮ್ಮ ಇಬ್ಬರೂ ನಮ್ಮ ತಂದೆಯ ಜೊತೆ ವ್ಯಾಪಾರದಲ್ಲಿ ನೆರವಿಗೆ ನಿಂತರು. ಹೀಗಾಗಿ, ೧೯೭೬ರ ನಂತರ ನಮ್ಮ ಕುಟುಂಬದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ೩೬ವರ್ಷದ ನಂತರ ಬದಲಾವಣೆಯ ಗಾಳಿ ಶುರುವಾಯಿತು. ಆಗ ನನಗೆ ೧೬ವರ್ಷ. ಅಲ್ಲಿಯವರೆಗೂ ಜೀವನ ತುಂಬಾ ಕಠಿಣವಾಗಿತ್ತು. ೧೯೮೦ರಲ್ಲಿ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ.ಪದವಿಯನ್ನು ಮುಗಿಸಿದೆ. ಅದೇ ವರ್ಷ ಎನ್.ಡಿ.ಎ. ಮಿಲಿಟರಿ ಪರೀಕ್ಷೆ ಪಾಸು ಮಾಡಿದೆ. ಆದರೆ, ಮನೆಯವರು ನನ್ನನ್ನು ಮಿಲಿಟರಿಗೆ ಕಳುಹಿಸಲಿಲ್ಲ. ಒಂದು ವರ್ಷ ವ್ಯರ್ಥವಾಯಿತು. ೧೯೮೧ರಲ್ಲಿ ಬಿ.ಪಿ.ಎಡ್. ಮುಂದುವರೆಸಿದೆ. ಅದರಲ್ಲಿ ಮ್೩ನೇ ರ್ಯಾಂಕ್ ಪಡೆದುಕೊಂಡೆ. ಆ ಸಂದರ್ಭದಲ್ಲಿ ಅಖಿಲ ಭಾರತ ಅಮತರ ವಿಶ್ವವಿದ್ಯಾಲಯದ ಟೂರ್ನಿಗಳಲ್ಲಿ ಭಾಗವಹಿಸಿದ್ದೆ. ಬೆಂಗಳೂರು ವಿಶ್ವವಿದ್ಯಾಲಯದ ಖೋ ಖೋ ತಂಡದ ನಾಯಕನಾಗಿದ್ದೆ. ನಾನು ಚಿಕ್ಕಬಳ್ಳಾಪುರದಲ್ಲಿ ಕೆ.ವಿ.ವೆಂಕಟಯ್ಯ ತೆಪ್ಪ ಬಿ.ಪಿ.ಎಡ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಸೇರಿದೆ. ಮೊದಲನೆ ವರ್ಷವೇ ನಮ್ಮ ಕಾಲೇಜಿಗೆ ನಾಲ್ಕು ರ್ಯಾಂಕ್, ೨ನೇ ವರ್ಷ ೮ರ್ಯಾಂಕ್ ಗಳಿಸಿತ್ತು. ಪ್ರತಿ ವರ್ಷ ನಮ್ಮ ಕಾಲೇಜಿಗೆ ಹೆಚ್ಚಿನ ರ್ಯಾಂಕ್ ಬರುತ್ತಿತ್ತು. ಅನಂತರ, ಜ್ಯೋತಿ ನಿವಾಸ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕನಾಗಿ ಮೂರು ವರ್ಷ ಕಾರ್ಯನಿರ್ವಹಿಸಿದೆ. ೧೯೯೦ರ ಮಾರ್ಚ್‍ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿ ಆಯ್ಕೆಯಾದೆ. ಆ ಸಂದರ್ಭದಲ್ಲಿ ವೆಂಕಟಸುಬ್ಬಯ್ಯ ಅವರು ರಾಜ್ಯಪಾಲರಾಗಿದ್ದರು. ಆಯ್ಕೆ ಪ್ರಕ್ರಿಯೆ ಮುಗಿಯೋಕೆ ಆರು ವರ್ಷವಾಯಿತು. ತರಬೇತಿ ಮುಗಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು, ಬಾಗೇಪಲ್ಲಿ, ಚಿಕ್ಕಬಲ್ಲಪುರ, ಗೌರಿಬಿದನೂರು, ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸಿದೆ. ಪುನಃ ಸರ್ಕಲ್ ಇನ್ಸಪೆಕ್ಟರ್ ಆಗಿ ಗೌರಿಬಿದರ್ನೂರಿನಲ್ಲಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ರಾಜ್ಯ ಗುಪ್ತದಳ, ನಗರ ಉಪ್ತದಳ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗಲ್ಲಿ ಕೆಲಸ ಆಡಿದ್ದೀನಿ. ಅನಂತ್ರ, ಹೆಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದೆ. ಈಗ ೨ ವರ್ಷಗಳಿಂದ ಉಪ್ಪಾರ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಮರೆಯಲಾಗದ ಘಟನೆ ಎಂದರೆ, ೧೯೯೩ರಲ್ಲಿ ಶೇರ್‍ನಾಗ್ ಮತ್ತು ಅವನ ಸಹೋದರರನ್ನು ದಸ್ತಗಿರಿ ಮಾಡಿದ್ದು, ಅವರು ನಟೋರಿಯಸ್ ಡಕಾಯಿತರಾಗಿದ್ದರು. ಅವರ ಮೇಲೆ ೬೮ ಕೇಸುಗಳಿದ್ದವು. 'ಲಂಕೇಶ ಪತ್ರಿಕೆ'ಯಲ್ಲಿ ದ್ವಾರಕಾನಾಥ ವರದಿಗಾರರಾಗಿದ್ದರು. ಅದೇ ಮೊದಲನೆ ಬಾರಿಗೆ ಪೊಲೀಸ್ ಅಧಿಕಾರಿಯ ಫೋಟೊ ಪ್ರಕಟಿಸಿ, ಪ್ರಶಂಸೆಯ ಲೇಖನ ಬರೆದಿದ್ದರು. ನನ್ನ ಹಾಗೂ ಪ್ರಭಾಕರ್ ತಂಡದ ಸಂಚಿಕೆಯನ್ನು ಆ ಸಂಚಿಕೆಯಲ್ಲಿ ಪ್ರಕಟಿಸಿದ್ದರು. ನಮ್ಮ ಸಾಹಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನನ್ನ ವೃತ್ತಿ ಜೀವನ್ದಲ್ಲಿ ಇಂಥ ಹಲವಾರು ಘಟನೆಗಳಿವೆ."

         ಕೆಲಸದ ಒತ್ತಡ ನಡುವೆಯೂ ಲೋಕೇಶ್ವರ ವರು ಇಷ್ಟೆಲ್ಲ ನುಭವಗಳನ್ನು ಹಂಚಿಕೊಂಡೀದ್ದರು. ಅತ್ಯಂತ ಸಂಯಮದಿಂದ ಬಂದವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಒಂದೆಡೆ ಪೊಲೀಸ್ ಇಲಾಖೆಯ ಸಾಹಸಮಯ ಬದುಕಿನ ಜೊತೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವೌ ನಿಜಕ್ಕೂ ಅಭಿನಂದನೀಯ.

ಸಂದರ್ಶನ: ನಂದಕುಮಾರ್


ಲೋಕೇಶ್ವರ ಅವರಿಗೊಂದು ಅಭಿನಂದನೆ ಸಲ್ಲಿಸಬೇಕೆ..? ಹ್ಯಾಟ್ಸಾಫ್ ಹೇಳಬೇಕೆನಿಸುತ್ತಿದೆಯೇ...? ಇಗೋ ಅವರ ವಿಳಾಸ

ಲೋಕೇಶ್ವರ
ಉಪ್ಪಾರಪೇಠೆ ಪೊಲೀಸ್ ಠಾಣೆ
ಸುಖಸಾಗರ ರೆಸ್ಟೊರೆಂಟ್ ಹತ್ತಿರ
ಧನ್ವಂತರಿ ರಸ್ತೆ
ಉಪ್ಪಾರಪೇಟೆ
ಬೆಂಗಳೂರು - 560009
Ph: 080-22942503

No comments: