Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 30 January 2012

ಇತಿಹಾಸವನ್ನು ಅನಾವರಣಗೊಳಿಸಿದ 'ಆವರಣ'

ಆವರಣ ಪುಸ್ತಕ ಬಿಡುಗಡೆಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಈ ಪುಸ್ತಕದ ಬಗ್ಗೆ ಬಹಳಷ್ಟು ಕೇಳಿದ್ದೆ. ಒಮ್ಮೆ ಓದಬೇಕೆಂದು ಅಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದಾಗಿ ಓದಿರಲಾಗಲಿಲ್ಲ. ಇತ್ತೀಚೆಗಷ್ಟೇ ನನ್ನ ಸಹೋದರ ಸದಾನಂದ ಈ ಪುಸ್ತಕವನ್ನು ತಂದಿದ್ದ. ಪುಸ್ತಕ ಕಂಡವನೇ ಎಲ್ಲ ಕೆಲಸಗಳನ್ನು ಬಿಟ್ಟು ಆವರಣದ ಪುಸ್ತಕದೊಳಗೆ ಹುದುಗಿ ಹೋಗಿದ್ದೆ.

                     ಇತಿಹಾಸವೆಂಬುದು ಸತ್ಯಘಟನೆಗಳ ಮೇಲೆ ಕಟ್ಟಿರುವ ಸಮಾಧಿ. ಆಂಗ್ಲರು, ಯುರೋಪಿಯನ್ನರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಮಗಿಷ್ಟ ಬಂದಂತೆ ತಮಗೆ ಅನುಕೂಲವಾಗುವಂತೆ ಇತಿಹಾಸವನ್ನು ತಿರುಚಿಕೊಂಡಿದ್ದಾರೆ. ಈ ಸಂಗತಿ ಹಾಗೂ ಭಾವನೆ ಆವರಣವನ್ನು ಓದುತ್ತಾ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೇವಲ ಇತಿಹಾಸ ಅಧ್ಯಯನಕಾರರನ್ನಲ್ಲದೇ, ಎಲ್ಲ ವರ್ಗದ, ಎಲ್ಲ ಕ್ಷೇತ್ರದ ಜನರ ಗಮನ, ಆಸಕ್ತಿ ಬೆಳೆಸಿಕೊಂಡು ಹೋಗುವಲ್ಲಿ ಈ ಕೃತಿ ಸಫಲವಾಗಿದೆ.

                       ಈ ಕೃತಿ ಓದಿದ ಮೇಲೆ ಮುಸ್ಲಿಂರನ್ನು ದ್ವೇಷಿಸಬೇಕಾಗಿಲ್ಲ. ಏಕೆಂದರೆ, ಇತಿಹಾಸದಲ್ಲಿ ತುರ್ಕರಿಂದ ನಡೆದ ಯಾವುದೇ ದುಷ್ಕೃತ್ಯಕ್ಕೆ ಈಗಿನ ನಮ್ಮ ಮುಸ್ಲಿಂರು ಭಾಜನರಲ್ಲ. ಹಾಗೇ ನೋಡಿದರೆ ಬಹುತೇಕ ಮುಸ್ಲಿಂರ ಪೂರ್ವಜರು ಹಿಂದೂ ಅಥವಾ ಇತರ ಧರ್ಮದವರಾಗಿದ್ದು, ಆಗಿನ ತುರ್ಕರ ಆಡಳಿತದಲ್ಲಿ ಕಾರಣಾಂತರಗಳಿಂದ ಮತಾಂತರ ಹೊಂದಿದವರು. ಡಾ|| ಎಸ್.ಎಲ್.ಭೈರಪ್ಪನವರು ಕೂಡ ಈ ಮಾತನ್ನು ಅನುಮೋದಿಸುತ್ತಾರೆ.
ಈಗಲೂ ಭಾರತ, ಭಾರತೀಯರಿಗಾಗಿ ಹಾಗೂ ಭಾರತೀಯರಾಗಿ ಶ್ರಮಿಸುವ, ಪ್ರಾರ್ಥನೆ ಸಲ್ಲಿಸುವ ಬಹುಸಂಖ್ಯಾತ ಮುಸ್ಲಿಂರು ನಮ್ಮ ನಡುವೆ ಇದ್ದಾರೆ. (ಕೆಲವರು ಇದಕ್ಕೆ ಅಪವಾದ ಇರಬಹುದು.) ಏನೇ ಆಗಲಿ ನಾವೆಲ್ಲ ಒಂದೇ. ಯಾವ ಧರ್ಮವೂ ಶ್ರೇಷ್ಠವಲ್ಲ, ಯಾವ ಧರ್ಮವೂ ಕನಿಷ್ಠವಲ್ಲ. ಅಲ್ಲವೇ...?


   ಚಕ್ರವರ್ತಿ ಸೂಲಿಬೆಲೆ ಅವರು 'ಆವರಣ' ಪುಸ್ತಕದ ಕುರಿತು ಬರೆದ ಬರಹ ಇಲ್ಲಿದೆ.

‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಬಂತು.
ಅದಾಗಲೇ ಆವರಣದ ಪುಟಗಳಲ್ಲಿ ನಾನು ಹುದುಗಿ ಹೋಗಿದ್ದೆ. ’ಸಾರ್ಥ’ದ ನಂತರ ಭೈರಪ್ಪನವರು ಬರೆದಿರುವ ಈ ಐತಿಹಾಸಿಕ ವಸ್ತುವಿನ ಕಾದಂಬರಿ ಇದೇ. ಮಧ್ಯಯುಗೀನ ಭಾರತೀಯ ಇತಿಹಾಸವನ್ನು ನಯವಾಗಿ ಕಡೆಯುತ್ತ, ಸತ್ಯದರ್ಶನ ಮಾಡಿಸುತ್ತ, ನಮಗೆ ಗೊತ್ತಿರುವ ವಿಚಾರಗಳಲ್ಲಿ ಇನ್ನೂ ಆಳಕ್ಕೆ ಇಳಿಯುತ್ತ ಒಂದು ಹೊಸ ಲೋಕಕ್ಕೆ ಭೈರಪ್ಪನವರು ನಮ್ಮನ್ನು ಕರೆದೊಯ್ಯುತ್ತಾರೆಂದರೆ ಅಚ್ಚರಿಯಲ್ಲ.
ಎಲ್ಲಕ್ಕೂ ಮುಖ್ಯವೆಂದರೆ ಬುದ್ಧಿಜೀವಿಗಳ ಸೋಗು ಹಾಕಿಕೊಂಡ ಸೋಕಾಲ್ಡ್ ಚಿಂತಕರನ್ನು ಬಯಲಿಗೆಳೆದು ತಂದಿರುವುದು ಈ ಕೃತಿಯ ಗಮನಾರ್ಹ ಅಂಶ. ಬಹುಶಃ ಬೇರಾವ ಕಾದಂಬರಿಕಾರನೂ ಇಂತಹುದೊಂದು ’ಪ್ರಯತ್ನ’ ಕ್ಕೂ ಕೈಹಾಕಲಾರ!
ಆಧುನಿಕ ಶಿಕ್ಷಣ ಪಡೆದ ಹಳ್ಳಿಯ ಮನೆಯ ಲಕ್ಷಿ ಗಾಂಧಿವಾದಿ ತಂದೆಯ ಮಾತನ್ನು ಧಿಕ್ಕರಿಸಿ ಮಿತ್ರ, ಪ್ರಿಯಕರ ಅಮೀರನನ್ನು ಮದುವೆಯಾಗುವುದು ಕಾದಂಬರಿಯ ಮುಖ್ಯ ಅಂಶ. ಪ್ರತಿಯೊಂದು ಪಾತ್ರಗಳು ಆಡುವ ಮಾತೂ ಅತ್ಯಂತ ಮಾರ್ಮಿಕ. ಮದುವೆಯಾಗಹೊರಟ ಮಗಳಿಗೆ ಸದಾ ಸಮಾಜದಲ್ಲಿಯೇ ಇರುವ ತಂದೆ ಬುದ್ಧಿವಾದ ಹೇಳುತ್ತಾನೆ, ’ನಾಳೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಗ ದೇವಸ್ಥಾನಗಳನ್ನು ನಾಶ ಮಾಡುವವನಾಗುತ್ತಾನೆ’. ತಂದೆಯನ್ನು ಧಿಕ್ಕರಿಸಿದ ಮಗಳು ಧರ್ಮತೊರೆದು ಮತಾಂತರಗೊಂಡು ರಜಿಯಾ ಆಗಿ ಅಮೀರನ ತೋಳು ಸೇರುತ್ತಾಳೆ. ಆಕೆಯ ಇಸ್ಲಾಂ ಪ್ರೀತಿ, ಬುರ್ಕಾದ ಬಗೆಗಿನ ಗೌರವ, ಹಿಂದೂ ದ್ವೇಷವೆಲ್ಲ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸಲಾರಂಭಿಸುತ್ತದೆ. ಕೆಲವು ವರ್ಷಗಳ ಹಿಂದೆ ಇಂತಹುದೇ ಘಟನೆಯೊಂದು ಕೇರಳದಲ್ಲಿ ನಡೆದಿತ್ತು. ಕಮಲಾದಾಸ್
ಎಂಬಾಕೆ ಹಿಂದೂ ಧರ್ಮದಿಂದ ಮತಾಂತರಿತಳಾಗಿ ಇಸ್ಲಾಂ ಸ್ವೀಕರಿಸಿದ್ದಳು. ಆಕೆ ಇಸ್ಲಾಂನ್ನು ಹೊಗಳಿದ ಒಂದೊಂದು ಪದವೂ ಪತ್ರಿಕೆಗಳಲ್ಲಿ ಅದರಲ್ಲೂ ವಿಶೇಷವಾಗಿ ಇಂಗ್ಲೀಷ್ ಪತ್ರಿಕೆಗಳಲ್ಲಿ ರಾರಾಜಿಸುತ್ತಿದ್ದವು. ಅದೇನು ಯೋಗಾಯೋಗವೋ ದೇವರೇ ಬಲ್ಲ. ’ಆವರಣ’ ಹೊರಬರುವ ವೇಳೆಗೆ, ಕಮಲಾದಾಸ್ ಇಸ್ಲಾಂ ’ಆವರಣ’ದಿಂದ ಹೊರಬಂದ ಸುದ್ದಿ ಬಂದಿದೆ. ಇಸ್ಲಾಂನ ಆಂತರಿಕ ನಡಾವಳಿಗಳಿಂದ ಬೇಸತ್ತ ಕಮಲಾದಾಸ್ ಈಗ ಎಲ್ಲವನ್ನೂ ತೊರೆದು ಪ್ರತ್ಯೇಕವಾಗಿ ಮಗನ ಬಳಿ ಇರಲಾರಂಭಿಸಿದ್ದಾಳೆ. ಹೀಗೇಕಾಗಿರಬಹುದು ಎಂಬುದಕ್ಕೆ ಆವರಣ ಸ್ಪಷ್ಟ ಉತ್ತರ. ನಮ್ಮ ನಡುವೆ ಮತಗಳ ತಾಕಲಾಟ ಇರದು ಎನ್ನುತ್ತಲೇ ಮದುವೆಯಾದ ಅಮೀರ್ ಅಪ್ಪ-ಅಮ್ಮನನ್ನು ಮೆಚ್ಚಿಸಲೋಸುಗ ಹೆಂಡತಿಗೆ ಒಂದಷ್ಟು ಕಟ್ಟಳೆ ವಿಧಿಸುತ್ತಾನೆ. ಕಾಫಿರರು ಧರಿಸುವ ಕುಂಕುಮ ಇಡಬೇಡ ಎನ್ನುತ್ತಾನೆ. ಕೊನೆಗೆ ಕುರಿ-ಕೋಳಿ ತಿಂದವನಿಗೂ ಒಗ್ಗದ ದನದ ಮಾಂಸವನ್ನೂ ಆಕೆಗೆ ತಿನ್ನಿಸಿಬಿಡುತ್ತಾನೆ!
ಧಾರ್ಮಿಕ ನೆಲೆಗಟ್ಟಿನಲ್ಲಿ ಬಿರುಕುಬಿಟ್ಟ ದಾಂಪತ್ಯ ವೈಚಾರಿಕ ಹಿನ್ನೆಲೆಯಲ್ಲಿ ಕಂದಕವೇ ಆಗಿಬಿಡುತ್ತದೆ. ಈ ಘಟನೆಗಳನ್ನು ಮುಂದಿಟ್ಟುಕೊಂಡೇ ಭೈರಪ್ಪನವರು ಇಸ್ಲಾಂನ್ನು ವಿವೇಚಿಸುವ ರೀತಿ ಮನೋಜ್ಞವಾದುದು. ಮೂರು ಬಾರಿ ತಲಾಕ್ ಹೇಳಿದರೆ ಹೆಂಡತಿಯನ್ನು ಬಿಟ್ಟಂತೆ ಎಂಬುದನ್ನು ಅಮೀರನ ಮೂಲಕ ಸ್ಪಷ್ಟಪಡಿಸುತ್ತಾರೆ. ಮುಸಲ್ಮಾನ ಹುಡುಗರು ಹಿಂದೂ ಹುಡುಗಿಯರನ್ನು ಮದುವೆಯಾಗಬೇಕಾದರೆ ಇಲ್ಲಿಯ ಕಾನೂನಿನಂತೆ ರಿಜಿಸ್ಟರ್ ಮದುವೆಯಾಗದೇ, ನಿಕಾಹ್ ಆಗುವುದೇಕೆಂಬುದು ಕೂಡ ಕಾದಂಬರಿಯ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ. ರಿಜಿಸ್ಟರ್ ಮದುವೆಯಾದರೆ ಅದು ಶರೀಯತ್‌ನ್ನು ಮೀರಿಬಿಡುತ್ತದೆ, ಆಮೇಲೆ ಇಷ್ಟ ಬಂದಾಗಲೆಲ್ಲ ತಲಾಕ್ ಹೇಳುವುದು ಸಾಧ್ಯವಾಗಲಾರದು ಎಂಬ ಹೆದರಿಕೆ. ಬುದ್ಧಿಜೀವಿ ಶಾಸ್ತ್ರಿ ಲಕ್ಷಿ ಯ ಮದುವೆಯ ಸಂದರ್ಭದಲ್ಲಿ ವಹಿಸದ ಈ ಎಚ್ಚರಿಕೆ ತನ್ನ ಮಗಳು ಮುಸ್ಲೀಂ ಹುಡುಗನನ್ನು ಮದುವೆಯಾಗುವಾಗ ವಹಿಸುವುದರಲ್ಲಿಯೇ ಈ ಅಂಶ ದೃಢಪಡುತ್ತದೆ. ಇರಲಿ, ಕಥೆಯ ಮುಖ್ಯ ತಿರುವು ಹಂಪಿ. ಹಂಪಿಯಲ್ಲಿನ ವಿನಾಶಕ್ಕೆ ಕಾರಣ ಮುಸಲ್ಮಾನರಲ್ಲ, ಶೈವ-ವೈಷ್ಣವರ ಕಾದಾಟ ಎಂಬುದನ್ನು ತೋರಿಸುವ ಹಪಾಪಿತನ ಸರ್ಕಾರಕ್ಕೆ. ಆ ಕುರಿತಂತೆ ಸಾಕ್ಷ ಚಿತ್ರ ಮಾಡಿ ಮುಸಲ್ಮಾನರನ್ನು ಓಲೈಸಬೇಕೆಂಬ ತವಕ ಬೇರೆ. ಸಾಕ್ಷ ಚಿತ್ರ ಮಾಡುವ ಕಾಂಟ್ರಾಕ್ಟು ನಿರ್ದೇಶಕ ಅಮೀರನಿಗೇ!. ಲಕ್ಷಿ ಅಲಿಯಾಸ್ ರಜಿಯಾಳದೇ ಸ್ಕ್ರಿಪ್ಟು. ಹಂಪಿಯ ಸರ್ಕಾರಿ ಬಂಗಲೆಯಲ್ಲಿ ನಿಂತು ಕಣ್ಣಾಡಿಸಿದ ಲಕ್ಷಿ ಗೆ ಯಾಕೋ ಈ ವಿಚಾರ ರುಚಿಸಲಿಲ್ಲ. ಶೈವ-ವೈಷ್ಣವರು ತಮ್ಮ ನಡುವಿನ ಕಿತ್ತಾಟಕ್ಕಾಗಿ ತಾವೇ ಕಟ್ಟಿದ ಮಂದಿರಗಳನ್ನು ಒಡೆಯುತ್ತಾರೆಂಬುದನ್ನು ಆಕೆಗೆ ಊಹಿಸಲೂ ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಅಕ್ಕಪಕ್ಕದವರು ಕಾದಾಡುತ್ತಲೇ ಇರುತ್ತಾರೆ, ಹಾಗಂತ ಅವಕಾಶ ಸಿಕ್ಕರೂ ಮಂದಿರವನ್ನು ಒಡೆಯದೇ ಕೈಮುಗಿದು ಆಶೀರ್ವಾದ ಪಡೆಯುತ್ತಾರೆ. ಅಂತಹುದರಲ್ಲಿ ವಿರೂಪಾಕ್ಷನನ್ನೇ ವಿರೂಪಗೊಳಿಸುವ ಕೆಲಸ ಅವರು ಮಾಡಿರಲಾರರು, ಇದು ಮುಸಲ್ಮಾನ ದ್ರೋಹಿಗಳದೇ ಕೆಲಸ ಎಂಬುದು ಆಕೆಗಂತೂ ಸ್ಪಷ್ಟವಾಗಿತ್ತು. ಈ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಅಮೀರನಿಗಂತೂ ಖಂಡಿತ ಇರಲಿಲ್ಲ. ಅಮೀರ ಮುಖವಾಡ ಅಷ್ಟೇ. ಅವನ ನೆಪದಲ್ಲಿ ಬೀದಿಗೆ ಬಿದ್ದಿರುವರು ಅನೇಕ ನಾಟಕಕಾರರು, ಬುದ್ಧಿಜೀವಿಯ ಸೋಗಿನಲ್ಲಿ ಅರೆಗಡ್ಡ ಬಿಟ್ಟು ಮೆರೆದಾಡುತ್ತಿರುವವರು. ಇತಿಹಾಸದಲ್ಲಿ ಹುದುಗಿರುವ ಅನೇಕ ಸತ್ಯಗಳನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗೆ ಒಪ್ಪಿಕೊಂಡುಬಿಟ್ಟರೆ ಅವರ ಅಸ್ತಿತ್ವವೇ ಕೊನೆಯಾಗಿಬಿಡುತ್ತದೆ.
ಮೂರು ವರ್ಗದ ಜನರಿರುತ್ತಾರೆ. ಪಟ್ಟ ಭದ್ರ ಹಿತಾಸಕ್ತಿಗಳ ಚಿಂತನೆಗೆ ತಕ್ಕಂತೆ ವಾದ ಮಂಡಿಸುವವರು ಕೆಲವು ಜನ. ಆ ವಾದವನ್ನು ಯಾವ ಕಾರಣಕ್ಕೂ ವಿರೋಧಿಸದೇ ವಿರೋಧಿಗಳನ್ನು ಜರಿದು ಬಾಯ್ಮುಚ್ಚುವಂತೆ ಮಾಡುವವರು ಮತ್ತೊಂದಷ್ಟು ಜನ. ಇನ್ನೂ ಒಂದು ವರ್ಗ. ಆ ವರ್ಗಕ್ಕೆ ಈ ಜನರ ವಾದ-ಚಿಂತನೆ ಎಳ್ಳಷ್ಟೂ ಇಷ್ಟವಾಗದು, ಆದರೆ ಇವರೊಡನಿದ್ದರೆ ಕೀರ್ತಿ ಪ್ರಾಪ್ತಿಯಾಗುವುದೆಂಬ ಲೋಭಿತನ. ಇವರುಗಳೇ ಸೇರಿ ಭಾರತೀಯ ಇತಿಹಾಸವನ್ನು ಮಸುಕು ಮಸುಕಾಗಿಸಿಬಿಟ್ಟಿದ್ದಾರೆ. ಆಕ್ರಮಣ ಮಾಡಿ ನಮ್ಮ ಹೆಣ್ಣು ಮಕ್ಕಳನ್ನು ಜನಾನಾಕ್ಕೆ ಸೇರಿಸಿಕೊಂಡ, ಗಂಡಸರನ್ನು ಷಂಡರನ್ನಾಗಿಸಿದ ಜನಾಂಗವನ್ನು ಕಂಡರೆ ಇವರಿಗೆ ಅದೇಕೋ ಪ್ರೀತಿ. ಭಾರತೀಯ ಮುಸಲ್ಮಾನರನ್ನು ’ನೀವು ಭಾರತೀಯರು’ ಎಂದು ಕರೆದರೆ ಅವರಿಗೆ ಇರಿಸು-ಮುರುಸು! ಇಲ್ಲಿನ ಮುಸಲ್ಮಾನರ ಮೂಲಪುರುಷರೂ, ಹಿಂದೂಗಳ ಮೂಲ ಪುರುಷರೂ ಅದೇ ಋಷಿಗಳು ಎಂಬುದನ್ನು ಅವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದರೆ ಇಂದಿನ ಸಮಸ್ಯೆಗಳೇ ಇರುತ್ತಿರಲಿಲ್ಲ. ಅಲ್ಲದೇ ಮತ್ತೇನು? ’ಮಧ್ಯಯುಗದಲ್ಲಿ ಹಿಂದೂಧರ್ಮದಿಂದ ಮತಾಂತರಗೊಂಡ ಜನರಲ್ಲವೇ ಇವರು! ಘೋರಿ-ಘಜ್ನಿಯರು ಇವರ ಮೂಲ ಪುರುಷರಲ್ಲವೇ ಅಲ್ಲ. ಇವರ ತಾಯ್ನಾಡು ಭಾರತ, ದೂರದ ಅರಬ್ಬೀ ರಾಷ್ಟ್ರಗಳಲ್ಲ’. ಈ ಮಾತುಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದೇಕೆ? ಮಾತನಾಡುವಾಗ ಭೈರಪ್ಪನವರು ಹೇಳಿದ್ದರು, ’ಇತಿಹಾಸವನ್ನು ಬಳಸಿಕೊಳ್ಳಬೇಕು, ತಿರುಚಬಾರದು’. ಸಾಕ್ಷ ಚಿತ್ರ ಮಾಡುವ ಮೂಲಕ, ದೊಡ್ಡ ಮಟ್ಟದ ಸೆಮಿನಾರ್ ಗಳನ್ನು ಆಯೋಜಿಸುವ ಮೂಲಕ ಶತ-ಶತಮಾನಗಳ ಇತಿಹಾಸ ತಿರುಚುತ್ತಲೇ ಬಂದಿದ್ದೇವೆ.ಆದರೆ ಲಕ್ಷಿ ಸೆಟೆದು ನಿಂತಳು. ಆಗಲೇ ಆಕೆಗೆ ತಂದೆ ತೀರಿಕೊಂಡ ಸುದ್ದಿ ಸಿಕ್ಕಿತು. ಹಳ್ಳಿಗೆ ಓಡಿದಳು. ಅಂತ್ಯ ಸಂಸ್ಕಾರಕ್ಕೆ ಸಜ್ಜಾದಳು. ಗೋಮಾಂಸ ಭಕ್ಷಣೆಗೆ ಪ್ರಾಯಶ್ಚಿತ್ತ ಮಾಡಿಕೊಂಡು ಶ್ರದ್ಧೆಯಿಂದ ಅಂತ್ಯಸಂಸ್ಕಾರ ನಡೆಸಿದಳು. ತಂದೆಯ ಕೋಣೆ ಹೊಕ್ಕರೆ ರಾಶಿಯಾಗಿ ಬಿದ್ದ ಇತಿಹಾಸದ ಪುಸ್ತಕಗಳು. ಕಾದಂಬರಿ ಬರೆಯಲು ಕುಳಿತಳು. ಅಪ್ಪನ ಟಿಪ್ಪಣಿಗಳ ಆಧಾರದ ಮೇಲೆ ಅವಳ ಬರವಣಿಗೆ ಶುರುವಾಯ್ತು. ಸೋತ ರಜಪೂತರ ೧೭ರ ಪ್ರಾಯದ ರಾಜಕುವರನನ್ನು ಮನಸಬ್‌ದಾರಿಗಳು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುವುದು, ಅವನ ಬೀಜಗಳನ್ನು ಒಡೆಸಿ ಜನಾನಾದಲ್ಲಿ ಸೇವೆಗೆ ಹಾಕುವುದು, ಸುಂದರ ಹೆಣ್ಣು ಮಕ್ಕಳನ್ನು ಸೇನಾಪತಿಗಳು ಬಯಸಿದಾಗ ಬಳಸುವ ವಸ್ತುಗಳಂತೆ ನೋಡಿಕೊಳ್ಳುವುದು ಎಲ್ಲವೂ ರೇಜಿಗೆ ಹುಟ್ಟಿಸುವಂತಹ ಆಚರಣೆಗಳೇ.
ಈ ಆಚರಣೆಗಳಾವುವೂ ಹೊಸತಲ್ಲ. ಎಲ್ಲವೂ ಇಸ್ಲಾಂನ ಹುಟ್ಟಿನೊಂದಿಗೇ ಬಂದದ್ದು. ಅರೇಬಿಯಾಲ್ಲಿ ಬನಿಕುರೈಝ ಎಂಬ ಯಹೂದಿ ಪಂಗಡ ಪ್ರವಾದಿ ಅಲಂಕಾರಕ್ಕೆ ಜೋಡಿಸಿಟ್ಟವಲ್ಲ. ಪ್ರತಿ ಪುಸ್ತಕದ ಪುಟ-ಪುಟಗಳಲ್ಲಿಯೂ ಅಪ್ಪನೇ ಕೈಯಾರ ಬರೆದ ಟಿಪ್ಪಣಿ. ಆ ಟಿಪ್ಪಣಿಗಳ ಮೇಲೆ ಕಣ್ಣಾಡಿಸಿದಾಗಲೇ ಆಕೆಗೆ ಗೊತ್ತಾದುದು, ’ಭಾರತದಲ್ಲಿ ಮುಸಲ್ಮಾನರ ಆಳ್ವಿಕೆ ಅತ್ಯಂತ ಕ್ರೂರ ಘಟ್ಟ!’.
ಲಕ್ಷಿ ಆ ಕೋಣೆಯ ಹೊರಗೆ ಇಣುಕಲಿಲ್ಲ. ತಿಂಗಳುಗಳು ಕಳೆದವು, ವರುಷಗಳು ಉರುಳಿದವು. ಆಗಾಗ ಅಮೀರನ ಬಳಿ ಹೋಗಿ ದಾಂಪತ್ಯ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಬರುತ್ತಿದ್ದಳು. ತಾನೇ ರಬ್ಬರಿನ ಹಾಳೆಯಂತೆ ಅಮೀರನ ಮೈಮೇಲೆ ಬಿದ್ದರೂ ಆತ ಅವಳನ್ನು ಪಕ್ಕಕ್ಕೆ ತಳ್ಳಿ ಎದ್ದು ಹೋಗುತ್ತಿದ್ದ. ಸ್ವಾಭಿಮಾನ ಎಷ್ಟು ಸಹಿಸೀತು. ಅಮೀರ್ ಮತ್ತೊಬ್ಬ ಅಚ್ಚ ಮುಸ್ಲೀಂ ಹುಡುಗಿಯನ್ನು ಮದುವೆಯಾದ ಸುದ್ದಿ ಕೇಳಿದ ಮೇಲಂತೂ ಲಲ್ಲೆಗರೆಯುವ ಮನಸ್ಸೂ ಮುರಿಯಿತು. ಇನ್ನೊಂದು ಮದುವೆಯೇಕೆ? ಎಂದಿದ್ದಕ್ಕೆ ಅಮೀರ್ ಉತ್ತರಿಸಿದ್ದ, ’ನಿನಗಿನ್ನೂ ತಲಾಖ್ ಕೊಟ್ಟಿಲ್ಲ!’. ಇಸ್ಲಾಂ ಪ್ರಕಾರ ತಲಾಖ್ ಕೊಡದೇ ನಾಲ್ವರು ಹೆಂಡಿರನ್ನು ಒಟ್ಟಿಗೇ ನಿಭಾಯಿಸಬಹುದು.ಐದನೆಯವಳು ಬೇಕಾದಾಗ ಮಾತ್ರ ನಾಲ್ಕರಲ್ಲಿ ಒಬ್ಬರಿಗೆ ತಲಾಖ್! ಐದನೆಯವಳನ್ನು ರಖೇಲ್ ಆಗಿ ಬಳಸಿದರೆ ತಪ್ಪಿಲ್ಲ. ಇದೆಲ್ಲಾ
ಅವರಿಗೆ ಶಾಸ್ತ್ರ ಸಮ್ಮತ . ಸ್ವತಃ ಪ್ರವಾದಿಗಳೇ ನಡೆದು ತೋರಿದ ಹಾದಿ. ಲಕ್ಷಿ ಐತಿಹಾಸಿಕ ವಿಶ್ಲೇಷಣೆಗಳೊಂದಿಗೆ ಕಾದಂಬರಿ ಬರೆಯಲು ಕುಳಿತಳು. ಅಪ್ಪನ ಟಿಪ್ಪಣಿಗಳ ಆಧಾರದ ಮೇಲೆ ಅವಳ ಬರವಣಿಗೆ ಶುರುವಾಯ್ತು.
ಅರೇಬಿಯಾಲ್ಲಿ ಬನಿಕುರೈಝ ಎಂಬ ಯಹೂದಿ ಪಂಗಡ ಪ್ರವಾದಿ ಮಹಮ್ಮದ ರನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ, ಇಸ್ಲಾಂ ಧರ್ಮೀಯರು ಅವರ ಕೋಟೆಗೆ ಲಗ್ಗೆ ಹಾಕಿದರು. ಶರಣಾದ ಆ ಯಹೂದಿಗಳು ಪ್ರವಾದಿಯಿಂದ ಕರುಣೆ ಬೇಡಿದರು. ಪ್ರವಾದಿಗಳ ಸೈನಿಕರು ಒಳಗಿದ್ದ ಏಳುನೂರು ಜನ ಗಂಡಸರ ಕೈಗಳನ್ನು ಬೆನ್ನಿಗೆ ಕಟ್ಟಿಕೊಂಡು ಹೊರತಂದರು. ಒಂದು ಸಾವಿರದ ಇನ್ನೂರು ಜನ ಹೆಂಗಸರು ಮಕ್ಕಳನ್ನು ಪ್ರತ್ಯೇಕವಾಗಿ ದನದ ಹಿಂಡಿನಂತೆ ಹೊರದಬ್ಬಿ ತಂದರು. ಶಾಂತಿಯ ರೂಪ ಮಹಮ್ಮದರು ಯಾರೊಬ್ಬರನ್ನೂ ಕ್ಷಮಿಸಲಿಲ್ಲ. ಅವರಿಗೆ ಶಿಕ್ಷೆ ವಿಧಿಸುವಂತೆ ಒಬ್ಬನನ್ನು ಕೇಳಿಕೊಂಡರು. ಆತ ’ಗಂಡಸರಿಗೆಲ್ಲ ಶಿರಚ್ಛೇದನ, ಅವರ ಆಸ್ತಿ ಹಂಚಿಕೆಯಾಗಬೇಕು. ಹೆಂಗಸರು ಮಕ್ಕಳು ಗುಲಾಮರಾಗಬೇಕು’ ಎಂದು ಬಿಟ್ಟ. ಪ್ರವಾದಿಗಳು ಅದನ್ನು ಸಮ್ಮತಿಸಿ ಈ ತೀರ್ಪು ಕೊಟ್ಟ ಸಾದನಿಗೆ ಸ್ವರ್ಗದಲ್ಲಿ ಅತ್ಯುತ್ತಮ ಸ್ಥಾನ ದೊರಕಲೆಂದು ಪ್ರಾರ್ಥಿಸಿದರು. ಆನಂತರ ಗಂಡಸರ ಶಿರಚ್ಛೇದನ ವಾಯ್ತು. ಹೆಂಗಸರು, ಮಕ್ಕಳನ್ನು ಸೈನಿಕರು ಹಂಚಿಕೊಂಡರು. ಅತ್ಯಂತ
ಸುಂದರಿಯಾದ ಇಪ್ಪತ್ತೆರಡು ವರ್ಷದ ರಹೆನಾ ಎಂಬುವಳನ್ನು ಪ್ರವಾದಿಗಳು ಆಯ್ದುಕೊಂಡರು. ಅವಳನ್ನು ಮದುವೆಯಾಗಲು ಪ್ರವಾದಿಗಳೇನೋ ಆಹ್ವಾನಿಸಿದರು. ಆದರೆ ತನ್ನ ಧರ್ಮ ತ್ಯಾಗ ಮಾಡಲು ಅವಳು ಒಪ್ಪಲಿಲ್ಲ. ಆದ್ದರಿಂದ ಅವಳನ್ನು ಹಾಗೆಯೇ ಬೆಲೆವೆಣ್ಣಾಗಿ ಇಟ್ಟುಕೊಂಡರು (ಪುಟ-೨೦೪).
ಇಡಿಯ ಆವರಣದಲ್ಲಿ ಅನಾವರಣವಾಗದ ವ್ಯಕ್ತಿತ್ವ ಎಂದರೆ ಅಕ್ಬರ್, ಭೈರಪ್ಪನವರು ಮುಲ್ಲಾನ ಕೈಲಿ ಅಕ್ಬರನನ್ನು ತೆಗಳುವ ಮೂಲಕ ಅವನು ಶ್ರೇಷ್ಠನಾಗಿದ್ದ ಎಂಬ ಕಲ್ಪನೆ ಕಟ್ಟಿಕೊಡುವ ಪ್ರಯತ್ನ ಮಾಡಿಬಿಟ್ಟಿದ್ದಾರೆನಿಸುತ್ತದೆ. ತನ್ನ ಹದಿನಾಲ್ಕನೆಯ ವಯಸ್ಸಿಗೆ ಕಾಫಿರನನ್ನು ಕೊಂದು ಶಸ್ತ್ರಾಭ್ಯಾಸಕ್ಕೆ ವೇಗ ಪಡೆದುಕೊಂಡವನು ಅವನು. ಜೆಸಿಯಾ ತಲೆಗಂದಾಯ ಹೇರಿ ಹಿಂದೂಗಳನ್ನು ಹೊಸಕಿ ಹಾಕುವ ಪ್ರಯತ್ನ ಅವನದಿತ್ತು. ಬಹುಶಃ ಈಗಿನ ಸೆಕ್ಯುಲರ್ ಬುದ್ಧಿ ಜೀವಿಗಳಿದ್ದಾರಲ್ಲ, ಅವರೆಲ್ಲರ ನಾಯಕನಾಗಿ ಅವನನ್ನು ಕಾಣಬಹುದೇನೋ? ನವರತ್ನ ರಾಜಾರಾಂರ ಕೃತಿಗಳಲ್ಲಿ ಕಂಡು ಬರುವ ಅಕ್ಬರ್ ಆವರಣದಲ್ಲಿ ಮಾಯವಾಗಿರುವುದು ಅಚ್ಚರಿ.
ಎಲ್ಲ ಸರಿ, ಇಂತಹುದೊಂದು ಕೃತಿ ಈಗ ಬೇಕಿತ್ತೇ? ತುಂಬಾ ಜನ ಪ್ರಶ್ನೆ ಕೇಳ್ತಾರೆ. ’ಈಗಲ್ಲದೇ ಮತ್ಯಾವಾಗ?’ ಎಂಬ ಪ್ರಶ್ನೆಯೇ ಅವರಿಗೆ ಉತ್ತರವಾಗಬಹುದು. ಇತಿಹಾಸವನ್ನು ಕತ್ತಲಿಗೆ ದೂಡುವ ಪ್ರಯತ್ನವನ್ನು ನಾವು ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದೇವೆ. ಸ್ವಾತ್ರಂತ್ರ ಬಂದ ಹೊಸತರಲ್ಲಿ ಹಿಂದೂ-ಮುಸಲ್ಮಾನರು ಒಟ್ಟೊಟ್ಟಾಗಿ ಇರುವುದರಿಂದ ಅವರು ಹಿಂದೆ ಮಾಡಿದ ಕುಕೃತ್ಯಗಳ ಬಗ್ಗೆ ಮಾತನಾಡುವುದು ಬೇಡ ಎಂಬ ಅಘೋಷಿತ ನಿಯಮವನ್ನು ನಮ್ಮ ಇತಿಹಾಸಕಾರರು ಆರೋಪಿಸಿಕೊಂಡು ಬಿಟ್ಟರು. ಬರು-ಬರುತ್ತಾ ಅಪದ್ಧಗಳನ್ನು ಸಮರ್ಥಿಸಿಕೊಳ್ಳುವ, ಸತ್ಕರ್ಮಗಳನ್ನುಆರೋಪಿಸುವ ಕೆಲಸ ಜೋರಾಗಿ ಸಾಗಿತು. ಟಿಪ್ಪೂ ಕೆಟ್ಟವನಲ್ಲ ಎಂದು ಸಾಬೀತು ಪಡಿಸಲಿಕ್ಕೆ ಆತನು ಜೀವನದಲ್ಲೇ ಮಾಡದ ಒಳ್ಳೆಯ ಕೆಲಸಗಳನ್ನೆಲ್ಲ ಅವನಿಗೆ ಆರೋಪಿಸಿ ಹೀರೋ ಮಾಡಲಾಯ್ತು. ಜಹಾಂಗೀರ, ಅಕ್ಬರ್ ಕೊನೆಗೆ ಔರಂಗಜೇಬನನ್ನೂ ಈ ಇತಿಹಾಸಕೋರರು ಬಿಡಲಿಲ್ಲ. ಇತಿಹಾಸ ಮುಚ್ಚಿಡಬೇಕಾದ್ದಲ್ಲ, ಬಿಚ್ಚಿಡಬೇಕಾದ್ದು. ಹಿಟ್ಲರ್ ಮಾಡಿದ ಕೆಲಸ ಅತ್ಯಂತ ಹೇಯ ಎಂಬುದು ಅರಿವಾಗಿಯೇ ಪಶ್ಚಾತ್ತಾಪದ ಬುದ್ಧಿ ಬಂದಿದ್ದು. ಅದನ್ನು ಬಿಟ್ಟು ಕೆಲವರಿಗೆ ನೋವಾದೀತು ಎಂಬ ಕಾರಣಕ್ಕೆ ಅವನನ್ನು ಬಾಯ್ತುಂಬಾ ಹೊಗಳಿದರೆ ಅದು ಹೇಯವಲ್ಲವೇನು?
ನಮ್ಮ ಇತಿಹಾಸ ಈಗ ಬೆಳಕಿಗೆ ಬರಬೇಕಿದೆ. ಅಥವಾ ಕತ್ತಲ ಪುಟಗಳ ಮೇಲೆ ನಾವೇ ಬೆಳಕು ಚೆಲ್ಲಬೇಕಿದೆ. ಭೈರಪ್ಪನವರು ಆವರಣದ ಮೂಲಕ ಮಾಡಿದ್ದು ಅದೇ ಕೆಲಸ. ಇಷ್ಟಕ್ಕೂ ಔರಂಗಜೇಬನ ಸಾಚಾತನ ಹೇಳುವುದರಿಂದ ಯಾರ ಮನಸ್ಸಾದರೂ ಯಾಕೆ ನೋಯಬೇಕು ಹೇಳಿ? ಇಲ್ಲಿರು ಯಾರಿಗೂ ಔರಂಗಜೇಬ ಪೂರ್ವಜನಲ್ಲ. ಬಾಬರ್ ಮೂಲ ಪುರುಷನಲ್ಲ. ಹಾಗೇನಾದರೂ ಅವರನ್ನೇ ಪೂರ್ವಜರೆಂದು ಭಾವಿಸುವುದಾದರೆ ಅಂಥವರು ಭಾರತೀಯರೇ ಅಲ್ಲ. ಭಾರತೀಯರಲ್ಲದವರಿಗೆ ನೋವಾಗುತ್ತದೆಂಬ ಮಾತ್ರಕ್ಕೆ ಇತಿಹಾಸವನ್ನು ಮುಚ್ಚಿಡುವುದು ಸರಿಯೂ ಅಲ್ಲ ಬಿಡಿ. ಇಷ್ಟಕ್ಕೂ ’ಅಸ್ಪೃಶ್ಯತೆ ಪಾಪ, ನಮ್ಮ ಹಿಂದಿನ ಪೀಳಿಗೆಯವರು ಅಂತಹ ಹೀನ ಕಾರ್ಯ ಮಾಡಿದ್ದರು. ಹಿಂದೂ ಸಮಾಜಕ್ಕೆ ಅಂಟಿದ ಅಭಿಶಾಪ ಅದು’ ಎಂಬುದನ್ನು ಒಪ್ಪಿ ಇಡೀ ಸಮಾಜ ಇತಿಹಾಸದ ಆ ಮಗ್ಗಲುಗಳನ್ನು ಸ್ವೀಕರಿಸಿಲ್ಲವೇ? ಹೌದು. ಸ್ವೀಕಾರ ಬೇಕು. ತೆರೆದೆದೆಯಿಂದ ಸ್ವೀಕರಿಸಬೇಕು. ಭೈರಪ್ಪನವರು ಅತ್ಯಂತ ಸೂಕ್ತ ಸಮಯದಲ್ಲಿಯೇ ಈ ಕೃತಿ ಬರೆದು ಭಾರತೀಯ ಇತಿಹಾಸಕ್ಕೆ ಕೊಡುಗೆ ನೀಡಿದ್ದಾರೆ.ಇತಿಹಾಸವನ್ನು ಕಾದಂಬರಿಯ ಶೈಲಿಯಲ್ಲಿ ಕಡೆದಿಟ್ಟು ಸಾಹಿತ್ಯ ಲೋಕಕ್ಕೂ ಸೇವೆಗೈದಿದ್ದಾರೆ.

Monday 23 January 2012

ಇ-ಮೇಲ್ ಮೂಲಕ ಬಂದ ಲೇಖನ

Give me Blood, I promise you Freedom!
ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಒಂದೆಡೆ ಸುಭಾಷ್ ಹಾಗೂ ಇತರೆ ಕ್ರಾಂತಿಕಾರಿಗಳು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇವಲ ಕೆಲ ಆಡಳಿತಾತ್ಮಕ ಸ್ವಾತಂತ್ರ್ಯ ಕೊಟ್ಟರೆ ಸಾಕೆಂದು ಭಾವಿಸಿ 1931ರಲ್ಲಿ ಎರಡನೇ ದುಂಡುಮೇಜಿನ ಸಭೆಗೆ ಬ್ರಿಟನ್್ಗೆ ತೆರಳಲು ಮುಂದಾದ ಗಾಂಧೀಜಿ ಭಾರತೀಯರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದನಿಸಿತು.
ಹಾಗಂತ ಸುಭಾಶ್ಚಂದ್ರ ಬೋಸ್ ಗಾಂಧೀಜಿಯವರಂತೆ ಎಂದೂ ಸಣ್ಣತನ ತೋರಲಿಲ್ಲ!
ಅಭಿಪ್ರಾಯಭೇದ ಸ್ವಾತಂತ್ರ್ಯ ಚಳವಳಿಗೆ ಅಡ್ಡಬರಲು ಬಿಡಲಿಲ್ಲ. ನಿಜಹೇಳಬೇಕೆಂದರೆ ಸುಭಾಷ್ ಅವರ ಗುಣನಡತೆಯಲ್ಲೇ ಸಣ್ಣತನಕ್ಕೆ ಸ್ಥಾನವಿರಲಿಲ್ಲ. ಖ್ಯಾತ ಅಧ್ಯಾತ್ಮ ಗುರು ಓಶೋ ರಜನೀಶ್ ಅವರಿಗೂ ಇಷ್ಟವಾದ ಸಂಗತಿಯೂ ಅದೇ. ಸುಭಾಷ್ ಅವರನ್ನು ಬಹಳ ಮೆಚ್ಚಿಕೊಂಡಿದ್ದ ಅವರು ಸುಭಾಷ್-ಗಾಂಧಿ ಬಗ್ಗೆ ಹೀಗೆ ಹೇಳುತ್ತಾರೆ-’I am reminded of a young man. His name was Subhash Chandra. He became a great revolutionary and I have tremendeous respect for him, because he was the only man in India who opposed Mahatma Gandhi; he could see that all this Mahatmahood is simply politics and nothing else’. ಅಂದಮಾತ್ರಕ್ಕೆ ತಲೆಯಲ್ಲಿ ರಕ್ತ ಕ್ರಾಂತಿಯನ್ನೇ ತುಂಬಿಕೊಂಡಿದ್ದ ವ್ಯಕ್ತಿ ಸುಭಾಶ್ಚಂದ್ರ ಬೋಸ್ ಎಂದು ಭಾವಿಸಬೇಡಿ. ಆ ಕಾಲಕ್ಕೆ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್್ಗೆ ಹೋಗಿ ಬ್ಯಾರಿಸ್ಟರ್ ಆಗಿ ಕರಿಕೋಟಿನೊಂದಿಗೆ ಭಾರತಕ್ಕೆ ಯಾರೂ ಬರಬಹುದಿತ್ತು. ಆದರೆ. ಐಸಿಎಸ್ (Indian Civil Service) ಪಾಸಾಗಲು ಹೆಚ್ಚೂ ಕಡಿಮೆ ಸಾಧ್ಯವೇ ಇರಲಿಲ್ಲ! ಪಾಸಾಗಲು ಬ್ರಿಟಿಷರೇ ಅವಕಾಶ ಕೊಡುತ್ತಿರಲಿಲ್ಲ. ಒಂದು ವೇಳೆ ಪಾಸುಮಾಡಿದರೆ ಉನ್ನತ ಆಡಳಿತಾತ್ಮಕ ಸ್ಥಾನಗಳನ್ನು ಭಾರತೀಯರೇ ಆಕ್ರಮಿಸಿ ಬಿಡುತ್ತಾರೆಂಬ ಭಯ ಬ್ರಿಟಿಷರಿಗಿತ್ತು. ಇಂಥ ಅಡೆತಡೆಗಳ ನಡುವೆಯೂ ಐಸಿಎಸ್ ಪಾಸು ಮಾಡಿದ ಮೊದಲ ವ್ಯಕ್ತಿ ರವೀಂದ್ರನಾಥ ಟಾಗೋರರ ಹಿರಿಯಣ್ಣ ಸತ್ಯೇಂದ್ರನಾಥ್ ಬೋಸ್! ಅದು 1863ರಲ್ಲಿ. ನಂತರ ಯಾರಿಂದಲೂ ICS ಪಾಸು ಮಾಡಲಾಗಿರಲಿಲ್ಲ. ಒಂದಿಲ್ಲೊಂದು ಕ್ಷುಲ್ಲಕ ಕಾರಣ ಕೊಟ್ಟು ನಪಾಸು ಮಾಡಿಬಿಡುತ್ತಿದ್ದರು. ಅಂಥ ಅರವಿಂದ ಘೋಷ್್ರನ್ನೇ ಫೇಲು ಮಾಡಿದ್ದರು, ಯಾಕೆ ಗೊತೆ?್ತ ಅರವಿಂದರು ಈ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ICS ಪರೀಕ್ಷೆಯ ಪ್ರತಿಯೊಂದು ಸಬ್ಜೆಕ್ಟ್್ಗಳಲ್ಲೂ ಮೊದಲಿಗರಾಗಿ ಪಾಸಾದರು. ಇನ್ನೇನು ICS ಅಧಿಕಾರಿಯಾದರು ಎನ್ನುವಷ್ಟರಲ್ಲಿ ಕುದುರೆ ಸವಾರಿ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ಫೇಲು ಮಾಡಿದರು. ಕುದುರೆ ಸವಾರಿಗೂ ICS ಪಾಸಾಗಿ ಅಧಿಕಾರಶಾಹಿಯಾಗುವುದಕ್ಕೂ ಏನು ಸಂಬಂಧವೋ ಗೊತ್ತಿಲ್ಲ, ಆದರೆ ಇಂತಹ ಅಡಚಣೆಗಳ ನಡುವೆಯೂ ಸುಭಾಶ್ಚಂದ್ರ ಬೋಸ್ ಐಈಖ ಮಾಡಲು ಇಂಗ್ಲೆಂಡ್್ಗೆ ತೆರಳಿದರು. ಅಂತಿಮ ಪರೀಕ್ಷೆಯಲ್ಲಿ ಇಂಗ್ಲೆಂಡ್್ಗೇ 4ನೇಯವರಾಗಿ ತೇರ್ಗಡೆಯಾದರು. ಅದರಲ್ಲೂ ಇಂಗ್ಲಿಷ್್ರ ಮಾತೃಭಾಷೆಯಾದ ಇಂಗ್ಲಿಷ್ ವಿಷಯದಲ್ಲಿ ಭಾರತೀಯ ಬೋಸ್ ಮೊದಲಿಗರಾಗಿ ಪಾಸಾಗಿದ್ದರು. ಬ್ರಿಟಿಷರ ಯಾವ ತಂತ್ರಗಳೂ ಬೋಸ್ ICS ಅಧಿಕಾರಿಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ICS ಮಾಡಿದವರು ವೃತ್ತಿಗೆ ತೆರಳುವ ಮೊದಲು ಗವರ್ನರ್ ಮುಂದೆ ಸಾಂಪ್ರದಾಯಿಕವಾದ ಒಂದು ಇಂಟರ್್ವ್ಯೂ ಎದುರಿಸಬೇಕು. ಆ ಘಟನೆಯನ್ನು ಓಶೋ ಬಹಳ ಚೆನ್ನಾಗಿ ವಿವರಿಸುತ್ತಾರೆ. ಈ ಬೆಂಗಾಲಿಗಳು ಎಲ್ಲಿಗೇ ಹೋಗಲಿ, ಅದು ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಾಗಿರಲಿ ಬಗಲಲ್ಲೊಂದು ಕೊಡೆಯನ್ನು ಹಿಡಿದೇ ಹೋಗುತ್ತಾರೆ. ಹಾಗೇಕೆ ಎಂದೂ ಯಾರಿಗೆ ಗೊತ್ತಿಲ್ಲ. ಆದರೆ ಕೊಡೆ ಮಾತ್ರ ಕಾಯಂ ಕೈಯಲ್ಲಿರುತ್ತದೆ. ತಲೆಗೆ ಹ್ಯಾಟ್ ಧರಿಸಿ ಗವರ್ನರ್ ಜನರಲ್ ಕಚೇರಿಗೆ ಕಾಲಿರಿಸಿದ ಸುಭಾಷ್ ಬಗಲಲ್ಲೂ ಕೊಡೆಯೊಂದಿರುತ್ತದೆ! ಹಾಗೆ ಬಂದವರೇ ಕುರ್ಚಿಯಲ್ಲಿ ಆಸೀನರಾಗುತ್ತಾರೆ. ಅದನ್ನು ಕಂಡು ಕೆಂಡಾಮಂಡಲರಾದ ಗವರ್ನರ್, “ನಿನಗೆ ಮ್ಯಾನರ್ಸೆ ಗೊತ್ತಿಲ್ಲ. ನಿನ್ನನ್ನು ICS ಪಾಸು ಮಾಡಿದವನಾನು? ಎಂದು ಚೀರಾಡುತ್ತಾರೆ!!
ಆಗ ಸುಭಾಷ್ ಕೇಳುತ್ತಾರೆ-ಯಾವ ಮ್ಯಾನರ್ಸ್ ಬಗ್ಗೆ ಮಾತನಾಡುತ್ತಿದ್ದೀರಿ ನೀವು?
ಗವರ್ನರ್ ಜನರಲ್-ಒಳಬಂದ ಕೂಡಲೇ ಹ್ಯಾಟ್ ತೆಗೆದು ಗೌರವ ಸೂಚಿಸಬೇಕೆಂದು ನಿನಗೆ ಗೊತ್ತಿಲ್ಲವೆ? ಜತೆಗೆ ಕುಳಿತುಕೊಳ್ಳುವ ಮೊದಲು ನನ್ನ ಅನುಮತಿ ಪಡೆದೆಯಾ?
ಬಗಲಲ್ಲಿದ್ದ ಕೊಡೆಯ ಕೊಕ್ಕೆಯನ್ನು ಗವರ್ನರ್ ಜನರಲ್್ನ ಕುತ್ತಿಗೆ ಸುತ್ತಾ ಹಾಕಿದ ಸುಭಾಷ್ ಹೇಳುತ್ತಾರೆ- “ನಡತೆ ಬಗ್ಗೆ ಮಾತನಾಡುವ ನೀನು ಮೊದಲು ಸರಿಯಾಗಿ ನಡೆದುಕೋ. ನಾನು ಒಳಬಂದಾಗ ನೀನು ಮೊದಲು ಎದ್ದು ನಿಲ್ಲಬೇಕಿತ್ತು. ಇಷ್ಟಕ್ಕೂ ಅತಿಥಿ ನಾನೋ ನೀನೋ? ಹ್ಯಾಟು ತೆಗೆದು ಅತಿಥಿಗೆ ಮೊದಲು ನೀನು ಗೌರವ ಸೂಚಿಸಬೇಕಿತ್ತು. ಆದರೆ, ನೀನು ಆ ಕೆಲಸ ಮಾಡಿದೆಯಾ? ಹಾಗಿರುವಾಗ ನಾನೇಕೆ ಹ್ಯಾಟು ತೆಗೆದು ಗೌರವ ಸೂಚಿಸಲಿ? ಇನ್ನು ನಾನು ಒಳಬಂದಾಗ ಕುಳಿತುಕೊಂಡೇ ಇದ್ದೆಯಲ್ಲ ಅದಕ್ಕೆ ನನ್ನ ಅನುಮತಿ ಪಡೆದಿದ್ದೆಯಾ? ಅಂದಮೇಲೆ ನಾನೇಕೆ ನಿನ್ನ ಅನುಮತಿ ಪಡೆಯಬೇಕು? ನೀನು ಹೆಚ್ಚೆಂದರೆ ನನ್ನನ್ನು ICS” ನಿಂದ ತಿರಸ್ಕರಿಸಬಹುದು. ಆದರೆ, ಆ ಅವಕಾಶ ನಿನಗೆ ಕೊಡುವುದಿಲ್ಲ. ನಿನ್ನ ICS ಅನ್ನು ನಾನೇ ತಿರಸ್ಕರಿಸುತ್ತಿದ್ದೇನೆ”. ಹಾಗೆಂದು ಹೊರಬಂದರು.
ಅದು ಸುಭಾಷ್ ವ್ಯಕ್ತಿತ್ವ!
1930ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಬಂಧಿತರಾದ ಸುಭಾಷ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಕಲ್ಕತ್ತಾದ ಮೇಯರ್ ಆಗಿ ಆಯ್ಕೆಯಾದರು. ನಂತರವೂ ಬಂಧನ ತಪ್ಪಲಿಲ್ಲ. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೊಳಗಾದ ಬೋಸರಿಗೆ ಟಿಬಿ ಕಾಯಿಲೆ ಬಂದಿದೆ ಎಂದು ತಿಳಿಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಜರ್್ಲ್ಯಾಂಡ್್ಗೆ ಕಳುಹಿಸಬೇಕೆಂದು ಶಿಫಾರಸ್ಸು ಮಾಡಲಾಯಿತು. ಒಂದು ಕಡೆ ಚಿಕಿತ್ಸೆ ನೆಪದಲ್ಲಿ ದೇಶದಿಂದ ಹೊರದಬ್ಬಿದರೆ ದೊಡ್ಡ ತಲೆನೋವು ಕಡಿಮೆಯಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರೆ ಇನ್ನೊಂದೆಡೆ ದೇಶದಿಂದ ಹೊರಹೋದರೆ ಬ್ರಿಟಿಷರ ಅಡ್ಡಿ ಆತಂಕಗಳಿಲ್ಲದೆ ತಮ್ಮ ಚಟುವಟಿಕೆಗಳನ್ನು ಇನ್ನೂ ತೀವ್ರಗೊಳಿಸಬಹುದೆಂದು ಬೋಸ್ ಭಾವಿಸಿದರು. 1933, ಫೆಬ್ರವರಿ 23ರಂದು ಯುರೋಪ್್ನತ್ತ ಪಯಣ ಆರಂಭಿಸಿದ ಬೋಸ್, 36ರವರೆಗೂ ವಿದೇಶಗಳಲ್ಲಿದ್ದ್ದು ಭಾರತೀಯ ಕ್ರಾಂತಿಕಾರಿಗಳನ್ನು ಭೇಟಿಯಾಗಿ ಸಂಪರ್ಕ ಸಾಧಿಸಿದರು. ಜತೆಗೆ ಯುರೋಪ್್ನ ಸಮಾಜವಾದಿಗಳನ್ನೂ ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ಕೋರಿದರು. ಇಟಲಿಯ ಸರ್ವಾಧಿಕಾರಿ ಬೆನೆಟ್ ಮುಸೋಲಿನಿಯನ್ನು ಭೇಟಿ ಮಾಡಿದ ನಂತರ ವಿಯೆನ್ನಾವನ್ನೇ ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. 1936, ಮಾರ್ಚ್ 27ರಂದು ಭಾರತಕ್ಕೆ ಆಗಮಿಸಿದ ಕೂಡಲೇ ಬೋಸರನ್ನು ನೇರವಾಗಿ ಸೆರೆಮನೆಗೆ ಕಳುಹಿಸಲಾಯಿತು. ಒಂದು ವರ್ಷ ಸುಮ್ಮನಿದ್ದು ಬಿಡುಗಡೆಯಾಗಿ ಹೊರಬಂದ ಕೂಡಲೇ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಆ ವೇಳೆಗಾಗಲೇ ಸುಭಾಷ್ ಹಾಗೂ ಗಾಂಧಿ ನಡುವಿನ ಸಂಘರ್ಷ ತಣ್ಣಗಾಗಿತ್ತು. ಜತೆಗೆ ಸುಭಾಷ್ ಹೆಸರು ದೇಶಕ್ಕೇ ಪರಿಚಿತವಾಗಿತ್ತು. 1938ರಲ್ಲಿ ಹರಿಪುರದಲ್ಲಿ ನಡೆಯಲಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೋಸ್ ಮುಂದಾದರು. ಆ ಕಾರಣಕ್ಕಾಗಿ ಒಂದು ತಿಂಗಳ ಇಂಗ್ಲೆಂಡ್ ಪ್ರವಾಸ ಕೈಗೊಂಡರು. ಸದಾ ಬ್ರಿಟಿಷರ ಕಣ್ಗಾವಲಿನಲ್ಲಿದ್ದ ಬೋಸರದ್ದು ದಿಟ್ಟ ನಿರ್ಧಾರವಾಗಿತ್ತು. ಇಂಗ್ಲೆಂಡ್ ಪ್ರವಾಸದ ವೇಳೆ ಭಾರತೀಯ ವಿದ್ಯಾರ್ಥಿಗಳನ್ನು ಮಾತ್ರವಲ್ಲ ಭಾರತದ ಬಗ್ಗೆ ಮೃದು ನಿಲುವು ಹೊಂದಿದ್ದ ಲೇಬರ್ ಪಕ್ಷದ ನಾಯಕರು ಹಾಗೂ ರಾಜಕೀಯ ಚಿಂತಕರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಯಾಚಿಸಿದರು. ಭಾರತಕ್ಕೆ ಮರಳಿದ ಬೋಸ್ 1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಆದರು.
ಎಲ್ಲರ ಬಾಯಲ್ಲೂ ಬೋಸ್ ಬೋಸ್, ಗಾಂಧೀಜಿ ಎದೆ ಡುಸ್!
1939ರಲ್ಲಿ ಪುನರಾಯ್ಕೆ ಬಯಸಿದ ಬೋಸರನ್ನು ಸೋಲಿಸಲು ಗಾಂಧೀಜಿ ಮುಂದಾದರು. ಆದರೆ, ಬೋಸರನ್ನು ಎದುರಿಸುವ ತಾಕತ್ತು ಯಾರಿಗೂ ಇರಲಿಲ್ಲ. ಸ್ವತಃ ಸ್ಪರ್ಧಿಸಿದರೆ ತನ್ನ ಸಣ್ಣ ಬುದ್ಧಿ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯ ಗಾಂಧೀಜಿಗೆ. ಆ ಕಾರಣಕ್ಕೆ ಡಾ. ಪಟ್ಟಾಭಿ ಸೀತಾರಾಮಯ್ಯ ಎಂಬ ತಮ್ಮ ಚೇಲಾರನ್ನು ಉಮೇದುದಾರರನ್ನಾಗಿ ಮಾಡಿ, “ಪಟ್ಟಾಭಿ ಸೋಲು ನನ್ನ ಸೋಲು’ ಎಂದರು. ಆದರೆ, ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಯುವ ಮನಸ್ಸುಗಳು ಬೋಸ್್ರ ಬೆಂಬಲಕ್ಕೆ ನಿಂತ ಕಾರಣ ಪಟ್ಟಾಭಿ ಸೀತಾರಾಮಯ್ಯನವರು ಸೋತು ಬೋಸ್ ವಿಜಯಿಯಾದರು. ಅವತ್ತು I am beyond love and hate. I am beyond anger, violence’ ಎನ್ನುತ್ತಿದ್ದ ಗಾಂಧೀಜಿಯವರ ನಿಜರೂಪ ಬೆಳಕಿಗೆ ಬಂತು. ಸುಭಾಶ್ಚಂದ್ರ ಬೋಸರನ್ನು ಅಧ್ಯಕ್ಷರೆಂದು ಘೋಷಿಸುವ ಸಮಾರಂಭಕ್ಕೇ ಗಾಂಧೀಜಿ ಹೋಗಲಿಲ್ಲ. ಆದರೇನಂತೆ ಸುಭಾಷ್ ಗಾಂಧೀಜಿ ಮಟ್ಟಕ್ಕಿಳಿಯಲಿಲ್ಲ. ಗಾಂಧೀಜಿ ಕಾಂಗ್ರೆಸ್ ಅನ್ನೇ ಬಣಗಳನ್ನಾಗಿ ಒಡೆಯಲು ಮುಂದಾಗುತ್ತಿದ್ದಾರೆ ಎಂದು ತಿಳಿದ ಕೂಡಲೇ ಸ್ವಾತಂತ್ರ್ಯ ಗಳಿಸುವುದಷ್ಟೇ ನಮ್ಮೆಲ್ಲರ ಏಕಮಾತ್ರ ಗುರಿಯಾಗಬೇಕು, ವೈಯಕ್ತಿಕ ಪ್ರತಿಷ್ಠೆ ಹಾಗೂ ಮಹತ್ವಾಕಾಂಕ್ಷೆಗೆ ಪಕ್ಷ-ಚಳವಳಿ ಒಡೆಯಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೇ ಬೋಸ್ ರಾಜಿನಾಮೆ ನೀಡಿದರು. ಅಷ್ಟೇ ಅಲ್ಲ, 1941, ಜನವರಿ 19ರಂದು ಬ್ರಿಟಿಷರ ಕಣ್ತಪ್ಪಿಸಿ ಜರ್ಮನಿ ಹಾಗೂ ಜಪಾನ್್ಗೆ ತೆರಳುವ ಮೂಲಕ ದೇಶದಿಂದಲೇ ಹೊರನಡೆದರು. Just imagine, ಮುಸೊಲಿನಿ, ಹಿಟ್ಲರ್್ರನ್ನು ಭೇಟಿಯಾಗುವುದೆಂದರೆ ಸಾಮಾನ್ಯ ಮಾತೇ? ಅದೂ ಯಾವ ರಾಷ್ಟ್ರದ ಪ್ರಧಾನಿ, ಅಧ್ಯಕ್ಷ, ಪ್ರಭುವಲ್ಲದೆ ಕೇವಲ ಒಬ್ಬ ಕ್ರಾಂತಿಕಾರಿಗಳ ನೇತಾರನಾಗಿ?!
ಆ ಮೂಲಕ ವಿದೇಶದಲ್ಲೇ ಆಝಾದ್ ಹಿಂದ್ ಫೌಜ್ ಕಟ್ಟಿದ್ದ ಅವರು ಬಂದೂಕಿನಿಂದ ಸ್ವಾತಂತ್ರ್ಯ ಪಡೆಯಲು ಮುಂದಾದರು. ನಿಮಗೆ ಗೊತ್ತಿರಲಿ, 1943ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದ ನಮ್ಮ ದೇಶದ ಮೊಟ್ಟಮೊದಲ ಭಾಗಗಳೆಂದರೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು. ಅವುಗಳನ್ನು ಗೆದ್ದುಕೊಂಡ ಸುಭಾಷ್ ಸ್ವರಾಜ್ ಹಾಗೂ ಶಹೀದ್ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು. Give me blood, I Promise you Fredom ಎಂದು ರೇಡಿಯೋ ಮೂಲಕ ದೇಶವಾಸಿಗಳಿಗೆ ಕರೆಕೊಟ್ಟಿದ್ದೂ ಅದೇ ಸಂದರ್ಭದಲ್ಲಿ. ಎಷ್ಟೇ ಆಗಲಿ ಇತಿಹಾಸ ಸೃಷ್ಟಿಯಾಗುವುದು ಹೇಡಿಗಳಿಂದಲ್ಲ, ಸುಭಾಷ್್ರಂಥ ವೀರಕಲಿಗಳಿಂದ. ನಿಮಗೆ ಇನ್ನೂ ಒಂದು ಅಂಶ ಗೊತ್ತಿರಲಿ, ಭಾರತಕ್ಕೆ ಸ್ವಾತಂತ್ರ್ಯ ದೊರೆಕಿದ ಸಂದರ್ಭದಲ್ಲಿ (1945ರಿಂದ 51) ಬ್ರಿಟನ್್ನಲ್ಲಿ ಆಡಳಿತ ನಡೆಸುತ್ತಿದ್ದುದು ಲೇಬರ್ ಪಕ್ಷ ಹಾಗೂ ಪ್ರಧಾನಿಯಾಗಿದ್ದಿದ್ದು ಕ್ಲಿಮೆಂಟ್ ಅಟ್ಲಿ. ಅವತ್ತು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಅಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟಾಗ ವಿನ್್ಸ್ಟನ್ ಚರ್ಚಿಲ್ ಖಡಾಖಂಡಿತವಾಗಿ ವಿರೋಧಿಸಿದರು. ಒಂದು ವೇಳೆ, ಅಟ್ಲಿ ಪ್ರಧಾನಿಯಾಗಿಲ್ಲದೆ ಇದ್ದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದು ಇನ್ನೂ ವಿಳಂಬವಾಗುತ್ತಿತ್ತು. ಅಂದು ಅಟ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೆ ಒಲವು ತೋರಿಸಿದ್ದರ ಹಿಂದೆಯೂ ಒಂದು ಕಾರಣವಿದೆ. 1938ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದಾಗ ಲೇಬರ್ ಪಕ್ಷದ ನೇತಾರರಾದ ಕ್ಲಿಮೆಂಟ್ ಅಟ್ಲಿ, ಅರ್ಥರ್ ಗ್ರೀನ್್ವುಡ್, ಹೆರಾಲ್ಡ್ ಲಾಸ್ಕಿ, ಜಿಡಿಎಸ್ ಕೋಲ್ ಮತ್ತು ಸರ್ ಸ್ಟಾಫೋರ್ಡ್ ಕ್ರಿಪ್ಸ್ ಮುಂತಾದವರಿಗೆ ಭಾರತಕ್ಕೆ ಏಕೆ ಸ್ವಾತಂತ್ರ್ಯ ನೀಡಬೇಕೆಂದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇ ಸುಭಾಶ್ಚಂದ್ರ ಬೋಸ್! ಅದು 1947ರಲ್ಲಿ ನಮ್ಮ ನೆರವಿಗೆ ಬಂತು.
ಅಂತಹ ಗಂಡುಮಗನ ಜನ್ಮದಿನವಿದು.
1897, ಜನವರಿ 23ರಂದು ಜನಿಸಿದ ಸುಭಾಶ್ಚಂದ್ರ ಬೋಸ್ ಇವತ್ತು 115ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೊಳಗೆ ಸ್ವಾಭಿಮಾನ, ಹೋರಾಟ ಮನೋಭಾವನೆ ತುಂಬಿದ ಅವರನ್ನು ಮರೆಯಲಾದೀತೆ? ಈ ದೇಶ ಎಷ್ಟೋ “ನೇತಾ’ಗಳನ್ನು (ನೇತಾರರು) ಕಂಡಿದೆ. ಆದರೆ, “ನೇತಾಜಿ’ (ನಮ್ಮ ಪ್ರೀತಿ, ಗೌರವಕ್ಕೆ ಭಾಜನರಾದ ನೇತಾರ) ಮಾತ್ರ ಅವರೊಬ್ಬರೇ ಅಲ್ಲವೇ?


ಇ-ಮೇಲ್ ಮೂಲಕ ಬಂದಿದ್ದು ಸತೀಶ್ ನರಸನಾಯಕ

ಗಾಂಧೀಜಿಯವರ ಅಂತಿಮ ಕ್ಷಣಗಳು

         

                       ೧೯೪೮ ಜನೆವರಿ ೩೦ರಂದು ಮಹಾತ್ಮಾ ಗಾಂಧಿ ಎಂದಿನಂತೆ ಆ ದಿನವೂ ನಸುಕಿನ ೩-೩೦ ಗಂಟೆಗೆ ಎದ್ದಿದ್ದರು. ವಿಪರೀತ ಚಳಿ ಇತ್ತು. ಆದರೂ, ಕಳೆದ ನಾಲ್ಕು ತಿಂಗಳಿನಿಂದ ತಂಗಿದ್ದ ಹೊಸ ದಿಲ್ಲಿಯ ಬಿರ್ಲಾಹೌಸ್‍ನಲ್ಲಿ ಎಂದಿನಂತೆ ತಮ್ಮ ಪರಿವಾರದೊಡನೆ ಬೆಳಗಿನ ಪ್ರಾರ್ಥನೆಯನ್ನು ಪೂರೈಸಿದರು.
                                ಕೆಲ ಸಮಯದ ನಂತರ ಗಾಂಧೀಜಿ ತಮ್ಮ ಪ್ರಶ್ನೋತ್ತರಗಳ ಕಡತ ತರಿಸಿಕೊಂಡು ಕುಳಿತರು. ಆ ದಿನ ಬರೆಯಬೇಕಾಗಿದ್ದ ಪತ್ರಗಳಲ್ಲಿ ಇತ್ತೀಚೆಗೆ ಮಗಳನ್ನು ಕಳೆದುಕೊಂಡಿದ್ದ ಸಹೋದ್ಯೋಗಿಯೊಬ್ಬರನ್ನು ಸಂತೈಸುವದು ಒಂದಾಗಿತ್ತು. ಅವರು ಬರೆದರು-"ನಾನು ಹೇಗೆ ನಿನ್ನನ್ನು ಸಂತೈಸಲಿ; ಸಾವು ಮಾನವನ ನಿಜವಾದ ಮಿತ್ರ; ನಮ್ಮನ್ನು ದುಃಖಿಸುವಂತೆ ಮಾಡುವದು ನಮ್ಮ ಅಜ್ಞಾನವೇ. ಸುಲೋಚನಳ ಆತ್ಮಚೇತನ ನಿನ್ನೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ."
                     ತೈಲದ ಮಸಾಜ್ ಹಾಗೂ ಸ್ನಾನದ ನಂತರ, ಗಾಂಧೀಜಿ ತಮ್ಮ ಪರಿವಾರದಲ್ಲಿದ್ದ ಚಿಕ್ಕವರನ್ನು ಯುವತಿಯರನ್ನು ಕೀಟಲೆ ಮಾಡುತ್ತಿದ್ದರು- ದುರ್ಬಲ, ಕೃಶ ಶರೀರಗಳೆಂದು. ಅದೇ ದಿನ ಬೆಳಗಿನ ರೈಲುಗಾಡಿಯಿಂದ ಊರಿಗೆ ಹೋಗಬೇಕಿದ್ದ ಒಬ್ಬಳು ನಿಲ್ದಾಣಕ್ಕೆ ಹೋಗಲು ವಾಹನ ಸಿಗದ ಕಾರಣ ರೈಲು ತಪ್ಪಿಸಿಕೊಂಡಿದ್ದನ್ನು ತಿಳಿದ ಗಾಂಧೀಜಿ ಅವಳೇಕೆ ರೈಲು ನಿಲ್ದಾಣಕ್ಕೆ ನಡೆದು ಹೋಗಲಿಲ್ಲ ಎಂದು ಕೇಳಿದರು. ಅದು ಅವರ ತಮಾಷೆ-ಹಾಸ್ಯವಾಗಿರಲಿಲ್ಲ. ತಮ್ಮಂತೆಯೆಏ ತಮ್ಮ ಸಹಚರರೂ ಸಹ ಸಮಸ್ಯೆಗಳನ್ನು ಯಾವ ಕಿರಿಕಿರಿ ಇಲ್ಲದೇ ಎದುರಿಸಬೇಕೆಂದೇ ಗಾಂಧಿಯವರು ನಿರೀಕ್ಷಿಸುತ್ತಿದ್ದರು. ಒಮ್ಮೆ ದಕ್ಷಿಣ ಭಾರತದಲ್ಲಿ ಪ್ರವಾಸದಲ್ಲಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನ ಇಂಧನ ತೀರಿ ನಿಂತುಬಿಟ್ಟಾಗ ಸಮೀಪದ ರೈಲು ನಿಲ್ದಾಣವರೆಗೆ ಅಂದರೆ ಇಪ್ಪತ್ತೊಂದು ಕಿಲೋಮೀಟರ್ ದೂರವನ್ನು ಸಂತೋಷದಿಂದಲೇ ನಡೆದಿದ್ದರು.
                     ಬೆಳಗಿನ ಜಾವ ೯-೩೦ ಘಂಟೆಗೆ ಗಾಂಧೀಜಿ ತಮ್ಮ ಅಂದಿನ ಮೊದಲ ಭೋಜನ ಸ್ವೀಕರಿಸಿದರು. ಬೇಯಿಸಿದ ತರಕಾರಿ, ಹನ್ನೆರಡು ಔಂಸುಗಳಷ್ಟು ಆಡಿನ ಹಾಲು, ನಾಲ್ಕು ಟೊಮೆಟೋ ಹಣ್ಣು, ನಾಲ್ಕು ಕಿತ್ತಳೆ, ಗಜ್ಜರಿ ರಸ, ಶುಂಠಿಯ ಡಿಕಾಕ್ಷನ್ ನಿಂಬೆ ಹಾಗೂ ಲೋಳೆಸರ-ಅವರ ಆಹಾರ. ಇದು ಇಷ್ಟೆಯೇ ಎನ್ನುವದಾದಲ್ಲಿ ಅದಕ್ಕೆ ಕಾರಣವೂ ಇತ್ತು. ಇತ್ತೀಚಿನ ಉಪವಾಸದಿಂದ ಅವರಿನ್ನೂ ನಿಶ್ಯಕ್ತರಾಗಿಯೇ ಇದ್ದರು. ಜನೆವರಿ ೧೨ರಂದು ಗಾಂಧೀಜಿಯವರ ನಿಕಟ ಸಹಾಯಕಿ ಸುಶೀಲಾ ನಾಯರ ಸಂಜೆಯ ಪ್ರಾರ್ಥನೆಯಲ್ಲಿ ಗಾಂಧೀಜಿಯವರ ಉಪವಾಸದ ಪ್ರಕಟಣೆ ಮಾಡಿದ್ದರು. ಅಂದು ಸೋಮವಾರ ಗಾಂಧೀಜಿಯವರದು ಮೌನವ್ರತ; ಮಾತನಾಡುವಂತಿರಲಿಲ್ಲ. ಎಲ್ಲ ಸಮುದಾಯಗಳ ಜನರು ಹುತ್ಪೂರ್ವಕವಾಗಿ ಒಂದಾಗುಗುವರೆಗೂ ಗಾಂಧೀಜಿ ನಿರಶನ ನಡೆಸುವರೆಂದು ನಾಯರ ಪ್ರಕಟಿಸಿದ್ದರು.
                              ನಿರಶದ ನಿರ್ಣಯ ಕ್ಲೇಶಪೂರ್ಣವಾಗಿತ್ತು. ಭಾರತದ ವಿಭಜನೆಯನ್ನು ತಡೆಯಲಾಗದ ಗಾಂಧೀಜಿ, ವಿಭಜನೆ ನಂತರ ಸ್ಫೋಟಗೊಂಡ ಕೋಮು ಗಲಭೆ ಸಾವು ನೋವುಗಳನ್ನು ಅಸಹಾಯಕರಾಗಿ ನೋಡುತ್ತಿರಬೇಕಾಗಿತ್ತು. ಪಾಕಿಸ್ತಾನದಿಂದ ಬಂದಿದ್ದ ಕ್ರೋಧಿತ, ಹತಾಶ ಸಿಖ್ ಹಾಗೂ ಹಿಂದೂ ನಿರಾಶ್ರಿತರಿಂದ ಬಿರಿದು ತುಂಬಿದ್ದ ದೆಹಲಿ ಸಹ ಮತೀಯ ಸಂಘರ್ಷದಿಂದ ತತ್ತರಿಸಿತ್ತು. ರಾಷ್ಟ್ರದ ರಾಜಧಾನಿಯಲ್ಲೇ ತಾವೆಷ್ಟು ಅಸುರಕ್ಷಿತ ಭಾವದಲ್ಲಿದ್ದೇವೆಂದು ಪ್ರತಿದಿನ ಮುಸಲ್ಮಾನರ ನಿಯೋಗಗಳು ಗಾಂಧಿಯವರೆದುರು ಹೇಳಿಕೊಳ್ಳುತ್ತಲೇ ಇದ್ದವು.
                                        ಇತರ ಹಲವು ವಿಷಯಗಳೂ ಗಾಂಧಿಯವರನ್ನು ಕಷ್ಟಕ್ಕೀಡು ಮಾಡಿದ್ದವು. ಅಖಂಡ ಭಾರತದ ವಿದೇಶಿ ವಿನಿಮಯದಲ್ಲಿನ ಪಾಲು ಎಂದು ಪಾಕಿಸ್ತಾನಕ್ಕೆ ೫೫ಕೋಟಿ ರೂಪಾಯಿಗಳನ್ನು ಭಾರತವು ಕೊಡಬೇಕಾಗಿತ್ತು. ಆದರೆ ಕಾಶ್ಮೀರದಲ್ಲಿ ಭಾರತ-ಪಾಕ್ ಯುದ್ಧ ಆರಂಭಗೊಂಡ ಕಾರಣ ಈ ಹಣವನ್ನು ಕೊಡುವದಿಲ್ಲವೆಂದು ಭಾರತ ಸರ್ಕಾರ ನಿರ್ಧರಿಸಿತು. ಪಾಕಿಸ್ತಾನವು ಈ ಹಣವನ್ನು ನಮ್ಮ ವಿರುದ್ಧವೇ ಹಾರಿಸುವ ಗುಂಡುಗಳ ತಯಾರಿಕೆಗೆ ಬಳಸುತ್ತಿದೆಂದು ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕಾರಣ ನೀಡಿದ್ದರು. ಆದರೆ ಹಣ ಕೊಡದಿರುವದು ನೈತಿಕವಾಗಿ ತಪ್ಪು ಎಂದೇ ಗಾಂಧಿಯವರು ಸಾಧಿಸಿದರು.
                       ಕಾಂಗ್ರೆಸ್ಸಿಗರ ಭ್ರಷ್ಟಾಚಾರ
                  ಗಾಂಧಿಯವರ ಮಟ್ಟಿಗೆ ನೋವಿನ ಮತ್ತೊಂದು ಸಮಸ್ಯೆಯೆಂದರೆ ಕಾಂಗ್ರೆಸ್ಸಿಗರಲ್ಲಿ ಹೆಚ್ಚುತ್ತಿದ್ದ ಭ್ರಷ್ಟಾಚಾರ. ಕಾಂಗ್ರೆಸ್ ಶಾಸಕರು ಅಪರಾಧಿಗಳನ್ನು ರಕ್ಷಿಸುತ್ತ ಹಣ ಗಳಿಸುವ ಮಟ್ಟಕ್ಕೂ ಹೋಗಿದ್ದಾರೆಂದು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಗಾಂಧಿಯವರಿಗೆ ಪತ್ರ ಬರೆದು ತಿಳಿಸಿದ್ದರು. ಬ್ರಿಟಿಷ್ ಸರ್ಕಾರವೇ ಹೆಚ್ಚು ಒಳ್ಳೆಯದಿತ್ತೆಂದು ಜನ ಹೇಳಲಾರಂಭಿಸಿದರೆಂದೂ ಪತ್ರದಲ್ಲಿ ಅವರು ಬರೆದಿದ್ದರು. ನಿಜವೆಂದರೆ ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಸ್ತುತಿ ಪೂರ್ಣವಾಗಿದ್ದು ಅದು ವಿಸರ್ಜನೆಗೊಂಡು ರಾಷ್ಟ್ರದ ಹಳ್ಳಿಗಳ ಸಾಮಾಜಿಕ, ನೈತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ "ಲೋಕಸೇವಕ ಸಂಘ"ವಾಗಿ ಹೊರಹೊಮ್ಮಬೇಕೆಂದು ಗಾಂಧೀಜಿ ಬಯಸಿದ್ದರು.
                     ಕೊನೆಯ ಉಪವಾಸ
               ಜನೆವರಿ ೧೩ರಂದು ಪೂರ್ವಾಹ್ನ ೧೧-೩೫ ಗಂಟೆಗೆ ಗಾಂಧಿಯವರ ಹದಿನೇಳನೆಯ ಹಾಗೂ ಕೊನೆಯ ಉಪವಾಸ ಆರಂಭವಾಯಿತು. ಇಪ್ಪತ್ನಾಲ್ಕು ಘಂಟೆಗಳೊಳಗಾಗಿಯೇ ಭಾರತದ ಸಚಿವ ಸಂಪುಟ ಸಭೆ ಸೇರಿ ಪಾಕಿಸ್ತಾನದ ಬಾಕಿ ಹಣದ ಬಗೆಗಿನ ತನ್ನ ನಿರ್ಣಯದ ಮರುಪರಿಶೀಲನೆ ನಡೆಸಿತು. ಅದೇ ಕಾಲಕ್ಕೆ ಈ ಉಪವಾಸ ಇನ್ನೊಂದು ಪರಿಣಾಮವನ್ನೂ ಮಾಡಿತ್ತು. ಮಹಾತ್ಮರು ಮುಸ್ಲಿಮರ ಪಕ್ಷಪಾತಿ ಆಗಿದ್ದಾರೆಂದು ಆಗಲೇ ಭಾವಿಸುತ್ತಿದ್ದ ಜನರ ಮುನಿಸನ್ನೂ ಇದು ಹೆಚ್ಚಿಸಿತು. ಅಂದು ಸಂಜೆ ಸಿಖ್ ನಿರಾಶ್ರಿತರ ಗುಂಪೊಂದು ಬಿರ್ಲಾ ಹೌಸ್ ಎದುರು ನಿಂತು ಅವರ ವಿರುದ್ಧ ಘೋಷಣೆ ಕೂಗಿದರು. "ಗಾಂಧಿ ಸತ್ತರೆ ಸಾಯಲಿ, ನಮಗೆ ಪ್ರತಿಕಾರ ಬೇಕು, ರಕ್ತಕ್ಕೆ ರಕ್ತ..."
                          ಗಾಂಧಿಯವರನ್ನು ಭೇಟಿಯಗಿ ಅದೇ ಬಿರ್ಲಾ ಭವನದಿಂದ ಹೊರನಡೆದಿದ್ದ ಜವಾಹರಲಾಲ ನೆಹರೂ ಈ ಕೂಗು ಕೇಳಿದವರೇ ಕೋಪೋದ್ರಿಕ್ತರಾಗಿ ತಮ್ಮ ಕಾರಿನಿಂದ ಜಿಗಿದು ಪ್ರದರ್ಶನಕಾರರ ಕಡೆಗೇ ಧಾವಿಸಿದರು. "ಯಾರದು, ಧೈರ್ಯವಿದ್ದವರು ಪುನಃ ಈ ಮಾತುಗಳನ್ನು ನನ್ನೆದುರು ಹೇಳಲಿ, ಅವರು ನನ್ನನ್ನು ಮೊದಲು ಕೊಲ್ಲಬೇಕಾಗುತ್ತದೆ..." ಎಂದು ಗುಡುಗಿದರು. ಮತ ಪ್ರದರ್ಶನಕಾರರೆಲ್ಲ ಚದುರಿ ಹೋದರು.
                     ಉಪವಾಸದ ಮೂರನೇ ದಿನ; ೭೮ ವರ್ಷದ ಮಹಾತ್ಮಾ ಗಾಂಧಿ ಬಹಳಷ್ಟು ಅಶಕ್ತರಾಗಿದ್ದರು. ಪ್ರಾರ್ಥನಾ ಸಭೆಯಲ್ಲಿ ಅವರು ಮಾಡುತ್ತಿದ್ದ ಉಪದೇಶಗಳು ಜನರಿಗೆ ಕೇಳಿಸದಷ್ಟು ಅವರ ಧ್ವನಿ ಮಂದವಾಯಿತು. ಕೆಲವೊಮ್ಮೆ ಅವರು ಬರೆದು ಕೊಟ್ಟಿದ್ದನ್ನು ಬೇರೆಯವರು ಓದಿ ಹೇಳುತ್ತಿದ್ದರು. ಉಪವಾಸ ಹಾಗೇ ಮುಂದುವರೆಯಿತು. ಮಹಾತ್ಮರ ಪ್ರಕೃತಿ ದಿನದಿನಕ್ಕೆ ಕ್ರಮೇಣ ಕ್ಷೀಣಿಸಿತು. ಕುರ್ಚಿಯಲ್ಲಿ ಕೂಡಿಸಿ ಬಾತ್‍ರೂಮ್‍ಗೆ ಕರೆದೊಯ್ಯಬೇಕಾಯಿತು. ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದ ವೈದ್ಯರು ಅವರ ಕಿಡ್ನಿ ವಿಫಲಗೊಳ್ಳುತ್ತಿವೆ ಎಂದರು. ನಿರಶನ ಕೊನೆಗೊಳ್ಳುವಂತೆ ಮನವೊಲಿಸುವ ಯತ್ನಗಳು ತೀವ್ರಗೊಂಡವು. ಮಹಾತ್ಮರು ಒಪ್ಪಲಿಲ್ಲ. ಮಹಾತ್ಮರು ಹಿಂದೂಸ್ಥಾನದಲ್ಲಿ ಶಾಂತಿಯನ್ನು ನೆಲೆಸುವ ಸಲುವಾಗಿ ತಮ್ಮ ಮನಸ್ಸಿನಲ್ಲಿ ಮೂಡಿದ ಏಳು ಕರಾರುಗಳನ್ನು ಎಲ್ಲರೂ ನಡೆಸಿಕೊಟ್ಟರೆ ತಾವು ಉಪವಾಸವನ್ನು ಕೈ ಬಿಡುವೆನೆಂದು ತಿಳಿಸಿದರು. ಆಗ ದಿಲ್ಲಿಯ ಶಾಂತಿ ಸಮಿತಿಯ ಸದಸ್ಯರು, ಹಿಂದೂ ಮುಸಲ್ಮಾನ, ಸಿಖ್ ಧುರೀಣರು ಮಹಾತ್ಮರ ಪ್ರಾಣ ಉಳಿಸಲು ಅವರ ಏಳು ಕರಾರುಗಳನ್ನು ನಡೆಸಿ ಕೊಡುವದಾಗಿ ಆಶ್ವಾಸನೆ ಕೊಟ್ಟರು. ದಿಲ್ಲಿಯ ಗಲಭೆಯ ಪರಿಣಾಮವಾಗಿ ೧೧೭ ಮಸೀದೆಗಳು ಹಿಂದೂ ದೇವಾಲಯಗಳಾಗಿ ಹಾಗೂ ವಾಸಸ್ಥಳಗಳಾಗಿ ಪರಿವರ್ತಿಸಲ್ಪಟ್ಟಿವೆ. ಅವೆಲ್ಲವುಗಳನ್ನು ಪುನಃ ಮಸೀದೆಗಳನ್ನಾಗಿ ನಿರ್ಮಿಸಬೇಕು. ದಿಲ್ಲಿಯ ಕರೋಲ್ ಭಾಗ, ಸಬಜಿಮಂಡಿ ಮತ್ತು ಪಹಾರಗಂಜ ಭಾಗಗಳಲ್ಲಿ ಮುಸಲ್ಮಾನರು ಯಾವುದೇ ಹೆದರಿಕೆ ಇಲ್ಲದೇ ಸ್ವತಂತ್ರವಾಗಿ ತಿರುಗಾಡುವಂತಾಗಬೇಕು. ಪಾಕಿಸ್ತಾನದಿಂದ ಒತ್ತಾಯದಿಂದ ಗುಳೇ ಕಟ್ಟಿಕೊಂಡು ಹೋದ ಮುಸಲ್ಮಾನರು ಹಿಂದಿರುಗಿ ಬಂದರೆ ಹಿಂದುಗಳು ಅವರಿಗೆ ಆಶ್ರಯ ಕೊಡಬೇಕು ಎಂದು ಮುಂತಾಗಿ ಏಳು ಕರಾರುಗಳನ್ನು ಹಾಕಿದ್ದರು. ಕೋಮು ಸೌಹಾರ್ದತೆ ವೃದ್ಧಿಸಲು ತಾವು ಕಟಿಬದ್ಧ ಎಂದು ಹಿಂದೂ ಮತ್ತು ಮುಸ್ಲಿಮರ ನಿಯೋಗಗಳು ಭರವಸೆ ನೀಡಿದವು. ಪಾಕಿಸ್ತಾನವೂ ಸೇರಿ ಉಪಖಂಡದಾದ್ಯಂತ ಮಹಾತ್ಮರ ಸುರಕ್ಷೆಗಾಗಿ ಪ್ರಾರ್ಥನೆಗಳು ನಡೆದವು. ಈ ಉಪವಾಸ ಮುಖಂಡರ ಮನಸ್ಸನ್ನು ಪರಿವರ್ತನೆ ಮಾಡಿತು. ಜನರ ಹೃದಯ ಪರಿವರ್ತನೆ ಆಯಿತು. ಆದರೂ ಮಹಾತ್ಮರು ಹಿಂದೂ ಧರ್ಮದ ದ್ರೋಹಿಗಳೆಂದು ಕೆಲವು ಹಿಂದೂವಾದಿಗಳ ತಿಳಿವಳಿಕೆಯಾಗಿತ್ತು. ಅವರನ್ನು ರಾಜಕೀಯ ರಂಗದಿಂದ ಪೂರ್ಣವಾಗಿ ಇಲ್ಲದಂತೆ ಮಾಡುವ ಪ್ರಯತ್ನಗಳು ನಡೆದವು. 
                           ಜನೆವರಿ ೧೮ ರಂದು ೧೨-೪೫ ಘಂಟೆಗೆ ಮಹಾತ್ಮಾ ತಮ್ಮ ಉಪವಾಸ ಕೊನೆಗೊಳಿಸಿದರು. ಆರ್.ಎಸ್.ಎಸ್. ಹಾಗೂ ಹಿಂದೂ ಮಹಾಸಭಾ ಸೇರಿ ಎಲ್ಲ ಸಮುದಾಯಗಳ ೧೩೦ ಸದಸ್ಯರಿದ್ದ ಸಮಿತಿ ಗಾಂಧಿಯವರ ಎದುರು ಶಾಂತಿ ಕಾಪಾಡುವ ವಚನ ನೀಡಿತು. ಗ್ಲುಕೋಸ್ ಸೇರಿಸಿದ್ದ ಕಿತ್ತಳೆ ಹಣ್ಣಿನ ರಸ ಸೇವಿಸಿ ಅವರು ಉಪವಾಸ ಬಿಟ್ಟರು.

                                   ಕೊನೆಯ ದಿನ
                                ಜನೆವರಿ ೩೦ ರಂದು ಭೋಜನಾನಂತರ ಗಾಂಧಿಯವರು ತಮ್ಮ ಆಪ್ತ ಸಹಾಯಕ ಪ್ಯಾರೇಲಾಲ ನಾಯಕ ಜೊತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಒಂದು ಸಣ್ಣ ನಿದ್ದೆಯನ್ನೂ ಮಾಡಿದರು. ಆಮೇಲೆ ನಿಸರ್ಗ ಚಿಕಿತ್ಸಾ ಕ್ರಮದಂತೆ ತಮ್ಮ ಹೊಟ್ಟೆಯ ಮೇಲೆ ಮಣ್ಣಿನ ಲೇಪನ ಮಾಡಿಕೊಂಡರು. ನಿಸರ್ಗ ಚಿಕಿತ್ಸೆಯಲ್ಲಿ ದೃಢ ವಿಶ್ವಾಸವಿದ್ದ ಅವರು ಇಂಥ ಮಣ್ಣಿನ ಲೇಪನ ದೇಹದಲ್ಲಿನ ವಿಷಾಂಶಗಳನ್ನು ತೆಗೆದು ಶುದ್ಧಗೊಳಿಸುವದೆಂದು ನಂಬಿದ್ದರು.
                      ಆ ದಿನ ಸಂಜೆ ಅನೇಕರು ಗಾಂಧೀಜಿಯವರ ಸಂದರ್ಶನಕ್ಕಾಗಿ ಬಂದಿದ್ದರು. ಅವರಲ್ಲಿ ಪ್ರಮುಖರಾದವರು ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ತಮ್ಮ ಮಗಳು ಮಣಿಬೇನ್ ಜೊತೆಗೆ ಅವರು ಸಂಜೆ ೪ ಗಂಟೆಗೆ ಆಗಮಿಸಿದರು. ಸರ್ದಾರ್ ಪಟೇಲರಿಗೂ ಜವಾಹರಲಾಲ ನೆಹರು ಅವರಿಗೂ ಅನೇಕ ವಿಷಯಗಳಲ್ಲಿ ಪರಸ್ಪರ ಆಗುತ್ತಿರಲಿಲ್ಲವೆಂದೂ ಬಹಿರಂಗ ಸತ್ಯವೇ. ಅಷ್ಟೇ ಅಲ್ಲದೆ, ನಿಮ್ಮಲ್ಲಿ ಒಬ್ಬರು ಮಂತ್ರಿಮಂಡಳಕ್ಕೆ ರಾಜೀನಾಮೆ ನೀಡಬೇಕೆಂದೂ ಗಾಂಧೀಜಿ ಮೊದಲೊಮ್ಮೆ ಸೂಚಿಸಿದ್ದು ಉಂಟು. ಆದರೆ ಇಬ್ಬರೂ ಅನಿವಾರ್ಯ ಎಂದು ತಾವು ಭಾವಿಸುವದಾಗಿಯೂ ಅವರು ಹೇಳಿದ್ದರು.
                        ಸಂಜೆ ೪-೩೦ಕ್ಕೆ ಗಾಂಧಿಯವರ ಮೊಮ್ಮಗಳು ಅಭಾ ಸಂಜೆ ಭೋಜನಕ್ಕೆ ಸಜ್ಜು ಮಾಡಿಕೊಂಡು ಬರುವವರೆಗೂ ಮಾತಾಡುತ್ತಲೇ ಇದ್ದರು. ಆಹಾರ ಬೆಳಗಿನ ಊಟದಂತೆಯೇ ಇತ್ತು. ಅದು ಪ್ರತಿದಿನದ ಪ್ರಾರ್ಥನಾ ಸಭೆಗೆ ಹೊರಡುವ ಸಮಯ ಸಭೆಗೆ ಹೊರಡುವ ಸಮಯ ಸಭೆಗೆ ತಡವಾಗುವದನ್ನು ಗಾಂಧಿಯವರು ಸಹಿಸುವವರಲ್ಲ ಎಂಬುದನ್ನು ತಿಳಿದಿದ್ದ ಅಭಾ ಚಡಪಡಿಸಿದರು. ಮಧ್ಯ ಪ್ರವೇಶಿಸುವ ಧೈರ್ಯಮಾಡಲಿಲ್ಲ. ಕೊನೆಗೆ ಹತಾಶಳಾಗಿ ಗಾಂಧಿಯವರ ಪಾಕೆಟ್ ಗಡಿಯಾರವನ್ನೇ ತೆಗೆದು ಅವರ ಮುಖದೆದುರು ಹಿಡಿದರೂ ಆಕೆ ಹಿಡಿದಳು. ಅದೂ ಕೆಲಸ ಮಾಡಲಿಲ್ಲ. ೫-೧೦ ಗಂಟೆಗೆ ಪಟೇಲರ ಪುತ್ರಿ ಮಣಿಬೇನ್ ಮಧ್ಯ ಪ್ರವೇಶಿಸಿದಾಗಲೇ ಗಾಂಧಿಯವರು ಮೇಲೆದ್ದರು. ಅವರು ಹೊರಡುತ್ತಿದ್ದಂತೆಯೇ ಸೇವಕನೊಬ್ಬ ಬಂದು ಕಾಠೇವಾಡದಿಂದ ಇಬ್ಬರು ಕಾರ್ಯಕರ್ತರು ಬಂದಿದ್ದು ನಿಮ್ಮನ್ನು ಕಾಣಬಯಸಿದ್ದಾರೆಂದು ತಿಳಿಸಿದ. "ಪ್ರಾರ್ಥನೆ ನಂತರ ಬರುವಂತೆ ಹೇಳು, ಆವಾಗ ಅವರನ್ನು ನಾನು ನೋಡುತ್ತೇನೆ. ನಾನು ಜೀವಿಸಿದ್ದರೆ..." ಎಂದು ಗಾಂಧಿಯವರು ಅವನಿಗೆ ತಿಳಿಸಿದರು.
                                ಕೇಡಿನ ಸೂಚನೆ

                             ಕಳೆದ ಕೆಲ ವಾರಗಳಲ್ಲಿ ಗಾಂಧಿಯವರು ಹಲವಾರು ಬಾರಿ ಸಾವಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹತ್ತು ದಿನಗಳ ಹಿಂದೆ ಅವರ ಪ್ರಾರ್ಥನಾ ಸಭೆಯಲ್ಲಿ ಸುಮಾರು ೨೫ ಮೀಟರ್ ಅಂತರದಲ್ಲಿ ಮದನಲಾಲ ಎಂಬ ತರುಣನು ಬಾಂಬ್ ಎಸೆದನು. ಅದು ಸ್ಫೋಟಗೊಂಡಿತು. ಪುಣ್ಯವಶಾತ್ ಯಾರಿಗೂ ಅಪಾಯವಾಗಲಿಲ್ಲ. ಅವರಿಗೆ ಅದರ ಬಗ್ಗೆ ತಿಳಿಯದೇ ಅವರು ಉಳಿದದ್ದು ದೈವೇಚ್ಛೆಯೇ ಸರಿ. ಸ್ಫೋಟವು ಸಭಿಕರಲ್ಲಿ ಭೀತಿ ಉಂಟು ಮಾಡಿತ್ತು. ಗಾಂಧಿಯವರು ಉದ್ವಸ್ಥಗೊಳ್ಳಲಿಲ್ಲ. ಒಬ್ಬ ವ್ಯಕ್ತಿಯನ್ನು ಈ ಸಂಬಂಧ ಬಂಧಿಸಲಾಗಿತ್ತು. ಶಾಂತರಾಗಿಯೇ ಇದ್ದ ಗಾಂಧಿಯವರು ಅನೇಕ ಪ್ರಶಂಸಾ ಸಂದೇಶಗಳೂ ಬಂದವು. ಆದರೆ ಮರುದಿನದ ಪ್ರಾರ್ಥನಾ ಸಭೆಯಲ್ಲಿ ಅವುಗಳನ್ನು ನಿರಾಕರಿಸಿ ಮಾತನಾಡಿದ ಅವರು ಆ ಸ್ಫೋಟವು ಸೈನ್ಯದವರು ನಡೆಸುವ ಎಂದಿನ ಅಭ್ಯಾಸ ಕ್ರಮಗಳಿಂದಾದದ್ದೆಂದು ತಾವು ತಿಳಿದಿದ್ದೆನೆಂದರು.
                                "ಪೊಲೀಸರು ಬಂಧಿಸಿರುವ ವ್ಯಕ್ತಿ ನನ್ನನ್ನು ಹಿಂದೂಧರ್ಮದ ಶತ್ರುವೆಂದು ಭಾವಿಸಿದ್ದಾನೆ. ಈ ಘಟನೆಗೆ ಕಾರಣನಾದ ವ್ಯಕ್ತಿಯ ಬಗ್ಗೆ ನೀವು ಯಾವುದೇ ದ್ವೇಷ ತಾಳಬಾರದು." ಎಂದು ಸಭೆಯಲ್ಲಿ ಗಾಂಧಿಯವರು ತಿಳಿಸಿದರು. ನನ್ನನ್ನು ಕೊಲ್ಲಲು ದೇವರೇ ತನ್ನನ್ನು ಕಳಿಸಿರುವನೆಂದೇ ಈ ವ್ಯಕ್ತಿ ತಿಳಿದಂತಿದೆ. ಆದರೆ ಇಂಥ ಕೃತಿಗಳು ಹಿಂದೂ ಧರ್ಮವನ್ನು ರಕ್ಷಿಸುವದಿಲ್ಲ ಎಂಬುದನ್ನು ಈ ವ್ಯಕ್ತಿಯ ಹಿಂದಿರುವವರು ಅಥವಾ ಯಾರ ಕೈಗೊಂಬೆ ಈತನಾಗಿದ್ದಾನೋ ಅವರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. ಬಾಂಬ್ ಸ್ಫೋಟದ ನಂತರ ಬಿರ್ಲಾ ಭವನಕ್ಕೆ ಬರುವ ಜನರನ್ನು ಶೋಧ ಮಾಡುವದು ಅವಶ್ಯವೆಂದು ಪೊಲೀಸರ ಅಭಿಪ್ರಾಯವಾಗಿತ್ತು. ಪೊಲೀಸ್ ಮೇಲಾಧಿಕಾರಿಯೊಬ್ಬರು ಸ್ವತಃ ಗಾಂಧೀಜಿಯವರನ್ನು ಭೇಟಿ ಮಾಡಿ ಅವರ ಪ್ರಾಣಕ್ಕೆ ಗಂಡಾಂತರವಿದೆಯಂದು, ಪೊಲೀಸರಿಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಸಮ್ಮತಿಯನ್ನು ನೀಡಬೇಕೆಂದು ವಿನಂತಿಸಿಕೊಂಡನು. ಅದಕ್ಕೆ ಮಹಾತ್ಮರು, "ನನ್ನ ಪ್ರಾಣ ಪರಮಾತ್ಮನ ಕೈಯಲ್ಲಿದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ನಾನು ಸಾಯಬೇಕೆಂದು ಅವನ ಇಚ್ಚೆ ಇದ್ದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಪ್ರಾರ್ಥನಾ ಸಭೆಗೆ ಬರುವ ಜನರನ್ನು ತಡೆಯುವದು. ಅವರಿಗೆ ಅಡ್ಡಿಯನ್ನುಂಟು ಮಾಡುವದನ್ನು ನಾನು ಸಹಿಸುವದಿಲ್ಲ." ಎಂದು ಹೇಳಿದರು.
                                     ರಾಮ... ರಾಮ
                                    ಜನೆವರಿ ೩೦ ರಂದು ಸಂಜೆ; `ವಾಕಿಂಗ್ ಸ್ಟಿಕ್' ಎಂದೇ ಭಾವಿಸಿದ್ದ ಮೊಮ್ಮಕ್ಕಳು ಅಭಾ ಮತ್ತು ಮನು ಇವರ ಭುಜಗಳ ಮೇಲೆ ಕೈ ಇರಿಸಿ ಗಾಂಧಿಯವರು ಪ್ರಾರ್ಥನಾ ಮೈದಾನದತ್ತ ನಡೆದರು. ಅಂದು ತಮಗೆ ನೀಡಿದ್ದ ಗಜ...ರಿ ಕಸುವಾಗಿದ್ದುದನ್ನು ಪ್ರಸ್ತಾಪಿಸುತ್ತಾ "ಓ ನೀನಿಂದು ನನಗೆ ಪಶು ಆಹಾರ ನೀಡಿರುವಿ" ಎಂದು ಛೇಡಿಸಿದರು. ಕಸ್ತೂರಬಾ ಅವರು ಇದಕ್ಕೆ ಕುದುರೆಯ ಆಹಾರ ಎನ್ನುತ್ತಿದ್ದರೆಂದು ಅಭಾ ಪ್ರತಿಯಾಗಿ ನಗುತ್ತಲೇ ಉತ್ತರಿದಳು.
             "ಬಾಪು ನಿಮ್ಮ ಗಡಿಯಾರವನ್ನು ನಿರ್ಲಕ್ಷಿಸುತ್ತಿದ್ದೀರಿ. ಅದರ ಕಡೆ ನೀವು ನೋಡುತ್ತಲೇ ಇಲ್ಲ" ಅಭಾ ಆಕ್ಷೇಪಿಸಿದಳು. "ನಾನೇಕೆ ನೋಡಬೇಕು; ನೀವೇ ನನ್ನ ಸಮಯಪಾಲಕರಲ್ಲವೇ" ಗಾಂಧಿಯವರು ನುಡಿದರು. ಆದರೆ ಸಮಯಪಾಲಕರನ್ನೂ ನೀವು ನೋಡುತ್ತಿಲ್ಲವಲ್ಲ, ಅಭಾ ಮಾರುತ್ತರ ನೀಡಿದಳು. ಗಾಂಧಿ ನಕ್ಕರಷ್ಟೆ.
              ಪ್ರಾರ್ಥನಾ ಮೈದಾನಕ್ಕೆ ತೆರಳುವ ಪಾವಟಿಗಳ ಮೇಲೆ ಬರುತ್ತಾ ಗಾಂಧೀಜಿ ನುಡಿದರು. "ನಾನು ಹತ್ತು ನಿಮಿಷ ತಡಮಾಡಿದೆ, ಸರಿಯಾಗಿ ಐದು ಘಂಟೆಗೆ ನಾನಿಲ್ಲಿರಬೇಕು."
                     ಖಾದಿ ಬಟ್ಟೆಯಿಂದ ಅಲಂಕೃತ ವೇದಿಕೆಯೆಡೆಗೆ ಅವರು ನಡೆದು ಹೋಗುತ್ತಿದ್ದಂತೆ ಅವರ ಹಿಂದೆ ಸೂರ್ಯ ಮುಳುಗುತ್ತಿದ್ದ; ಸೇರಿದ್ದ ಜನ ಸರಿದು ದಾರಿ ಬಿಡುತ್ತಿದ್ದರು. ನಮಸ್ತೆ ಎಂದು ಹೇಳುತ್ತ ಜನರ ಅಭಿನಂದನೆಗಳನ್ನು ಅವರು ಸ್ವೀಕರಿಸುತ್ತಿದ್ದರು. ಮಹಾತ್ಮರು ವ್ಯಾಸ ಪೀಠದಿಂದ ೩೦ ಫೂಟ್ ದೂರದಲ್ಲಿರುವಾಗಲೇ, ಜನರನ್ನು ಸರಿಸುತ್ತ ಖಾದಿಧಾರಿ ಯುವಕನೊಬ್ಬ ಗಾಂಧಿಯವರತ್ತ ಧಾವಿಸಿದ. ಮಹಾತ್ಮರ ಚರಣ ಸ್ಪರ್ಷಿಸಲು ಹೊರಟವನಂತೆ ಕಂಡ ಅವನನ್ನು "ಬೇಡ ಈಗಾಗಲೇ ತಡವಾಗಿದೆ" ಎಂದು ಮನು ಹೇಳಿ ಆತನ ಕೈ ಹಿಡಿದು ತಡೆಯಲೆತ್ನಿಸಿದಳು. ಆದರೆ ಅವಳನ್ನು ತಳ್ಳಿದ ಆ ವ್ಯಕ್ತಿ ಗಾಂಧಿಯವರೆದುರು ಬಾಗಿ ಕೈ ಜೋಡಿಸಿ ಪಿಸ್ತೂಲಿನಿಂದ ಮೂರು ಗುಂಡುಗಳನ್ನು ಹಾರಿಸಿದ. ಒಂದು ಮಹಾತ್ಮರ ಹೊಟ್ಟೆಯಲ್ಲಿ, ಎರಡು ಅವರ ಎದೆಯಲ್ಲಿ ಹೊಕ್ಕವು. ರಾಮ... ರಾಮ.. ಎನ್ನುತ್ತ ಮಹಾತ್ಮ ಕುಸಿದರು. ಅವರನ್ನು ತಕ್ಷಣ ಬಿರ್ಲಾ ಭವನಕ್ಕೆ ಒಯ್ಯಲಾಯಿತು. ವೈದ್ಯರು ಬಂದು ನೋಡುವದರೊಳಗಾಗಿ ಸಂಪೂರ್ಣ ಸ್ಮೃತಿ ತಪ್ಪಿತ್ತು. ಗುಂಡು ಹಾರಿಸಿದ ಮುಂದಿನ ೩೫ ನಿಮಿಷಗಳಲ್ಲಿ ಅವರ ಪ್ರಾಣಜ್ಯೋತಿ ನಂದಿ ಹೋಗಿತ್ತು. ಎಲ್ಲೆಡೆಯಲ್ಲಿಯೂ ಕತ್ತಲೆ ಕವಿದಂತಾಯಿತು. ಮೂರನೇಯ ದಿವಸ ಅವರ ಪಾರ್ಥಿವ ಶರೀರಕ್ಕೆ ಮಹಾತ್ಮಾ ಗಾಂಧೀಜೀ ಕಿ ಜೈ, ಮಹಾತ್ಮಾ ಅಮರ ಹೈ ಎಂಬ ದುಃಖತಪ್ತ ಜನ, ಜೈ ಘೋಷಣೆಗಳೊಂದಿಗೆ ಯಮುನಾನದಿ ದಂಡೆಯ ರಾಜಘಾಟದಲ್ಲಿ ಅಗ್ನಿಸ್ಪರ್ಶ ಮಾಡಿತು. ಗಾಂಧೀಜಿಯವರನ್ನು ಕೊಲೆ ಮಾಡಿದ ನಾಥೂರಾಮ ಗೋಡ್ಸೆ ಎಂಬ ಬ್ರಾಹ್ಮಣ ಯುವಕ ಕಟ್ಟಾ ಹಿಂದೂವಾದಿ. ಅವನನ್ನು ೫ನೇ ನವ್ಹೆಂಬರ್ ೧೯೪೯ ರಂದು ಅಂಬಾಲಾ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಮಹಾತ್ಮಾ ಗಾಂಧಿ ತಮ್ಮ ನೈಜ ಮಿತ್ರ(ಸಾವು)ನನ್ನು ಸಂಧಿಸಿದ್ದರು. ಆದರೆ ಅವರ ಆತ್ಮಚೇತನ ನಿನ್ನೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ.

Thursday 19 January 2012

ಶತಮಾನೋತ್ಸವ ಆಚರಿಸಿಕೊಂಡ ರಾಷ್ಟ್ರಗೀತೆ



       ಭಾರತದ ರಾಷ್ಟ್ರೀಯತೆ, ಸಾರ್ವಭೌಮತೆ ಮತ್ತು ಐಕ್ಯತೆಯನ್ನು ಸಾರುವ ಭಾರತದ ರಾಷ್ಟ್ರಗೀತೆಯಾದ `ಜನಗಣಮನ'ವು ಡಿಸೆಂಬರ್ ೨೭, ೨೦೧೧ಕ್ಕೆ ೧೦೦ವರ್ಷ ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು.

       ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ರವರು ರಚಿಸಿದ ಜನಗಣಮನ ಗೀತೆಯನ್ನು ರಾಷ್ಟ್ರೀಯ ಕಾಂಗ್ರೆಸ್‍ನ ಕಲ್ಕತ್ತಾ ಅಧಿವೇಶನದಲ್ಲಿ ಡಿಸೆಂಬರ್ ೨೭, ೧೯೧೧ರಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಭಾರತ ದೇಶದ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಘೋಷಿಸಿ ಅಳವಡಿಸಿಕೊಳ್ಳಲಾಯಿತು. ದೇಶದ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ದೇಶದ ಹೆಮ್ಮೆಯ ಸಂಕೇತವಾದ ಜನಗಣಮನವನ್ನು ಹಾಡಲಾಗುತ್ತದೆ. ಬ್ರಿಟಿಷರು ಬ್ರಿಟನ್ ದೇಶದ ರಾಷ್ಟ್ರಗೀತೆಯಾದ `ದಿ ಗಾಡ್ ಸೇವ್ ದಿ ಕ್ವೀನ್' ಎಂಬ ಗೀತೆಯನ್ನು ಭಾರತದ ರಾಷ್ಟ್ರಗೀತೆಯನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದ ಕಾಲದಲ್ಲಿ ರವೀಂದ್ರನಾಥ ಟ್ಯಾಗೋರ್‌ರವರು ದೇಶದ ವೈವಿಧ್ಯತೆ, ಏಕತೆ ಮತ್ತು ಸಾರ್ವಭೌಮತೆಯನ್ನು ಪ್ರತಿನಿಧಿಸುವ ರಾಷ್ಟ್ರಗೀತೆಯನ್ನು ಪ್ರತಿನಿಧಿಸುವ ರಾಷ್ಟ್ರಗೀತೆಯನ್ನು ದೇಶಕ್ಕೆ ಅರ್ಪಿಸಿದರು.

          `ಗುರುದೇವ್' ಎಂದೇ ಖ್ಯಾತರಾದ ಬಂಗಾಳಿ ಕವಿ ರವೀಂದ್ರನಾಥ್ ಟ್ಯಾಗೋರ್‌ರವರು ಮೇ೭, ೧೮೬೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ದೇವೇಂದ್ರನಾಥ್ ಟ್ಯಾಗೋರ್ ಮತ್ತು ಶಾರದಾ ದೇವಿಯವರ ಪುತ್ರರಾಗಿ ಜನಿಸಿದರು. ೨೦೧೧ರಲ್ಲಿ ಇವರ ೧೫೦ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇವರು ಬರೆದ `ಗೀತಾಂಜಲಿ' ಕೃತಿಗೆ ೧೯೧೩ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಈ ಮೂಲಕ ಏಷ್ಯಾದಲ್ಲೇ ನೊಬೆಲ್ ಪ್ರಶಸ್ತಿ ಪಡೆದ ಮೊದಲಿಗರು ಎಂಬ ಖ್ಯಾತಿ ಹೊಂದಿದ್ದಾರೆ. ರವೀಂದ್ರನಾಥ್ ಟ್ಯಾಗೋರ್‌ರವರು ಗಾಂಧೀಜಿಯವರನ್ನು `ಮಹಾತ್ಮಾ' ಎಂದು ಕರೆದಿದ್ದರು. ಇಂದಿರಾ ಗಾಂಧಿಯವರನ್ನು ಪ್ರಿಯದರ್ಶಿನಿ ಎಂದು ಕರೆದಿದ್ದರು. ಪಶ್ಚಿಮ ಬಂಗಾಳದ ಶಾಂತಿ ನಿಕೇತನದಲ್ಲಿ `ವಿಶ್ವ ಭಾರತಿ'ಯನ್ನು ೧೮೬೩ರಲ್ಲಿ ಸ್ಥಾಪಿಸಿದರು. ಇವರು ಬಾಂಗ್ಲಾದೇಶದ ರಾಷ್ಟ್ರಗೀತೆಯಾದ `ಆಮಾರ್ ಸೋನಾರ್ ಬಂಗಾಳ..." ಎಂಬ ಪದ್ಯವನ್ನು ೧೯೦೫ರಲ್ಲಿ ಬಂಗಾಳದ ವಿಭಜನೆ ಸಂದರ್ಭದಲ್ಲಿ ಬರೆದರು. ಈ ಪದ್ಯದ ಮೊದಲ ಹತ್ತು ಸಾಲುಗಳನ್ನು ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನಾಗಿ ೧೯೭೨ರಲ್ಲಿ ಅಳವಡಿಸಿಕೊಳ್ಳಲಾಗಿದೆ. ರವೀಂದ್ರನಾಥ ಟ್ಯಾಗೋರ್‌ರವರು ಆ.೭,೧೯೪೧ರಲ್ಲಿ ನಿಧನರಾದರು. ಎಕ್ಲಾ ಚೋಲಾರೆ ಎಂಬುದು ರವೀಂದ್ರನಾಥ ಟ್ಯಾಗೋರ್ ಬರೆದ ದೇಶಭಕ್ತಿ ಗೀತೆಯಾಗಿದೆ.


    ಪ್ರಶ್ನೆಗಳು

೧. ರಾಷ್ಟ್ರಗೀತೆಯ ಮೂಲ ರಚನೆ ಯಾವ ಭಾಷೆಯಲ್ಲಿದೆ?
          ಸಂಸ್ಕೃತ ಮಿಶ್ರಿತ ಬಂಗಾಳಿ ಭಾಷೆಯಲ್ಲಿದೆ.

೨. ರಾಷ್ಟ್ರಗೀತೆಯನ್ನು ಆಯ್ಕೆ ಮಾಡಿರುವುದು ಎಲ್ಲಿಂದ?
   ಬ್ರಹ್ಮೋಮಂತ್ರದ ಮೊದಲ ಐದು ಪ್ಯಾರಾಗಳು

೩. ರಾಷ್ಟ್ರಗೀತೆಯ ಮೊದಲ ಹೆಸರು : ಭಾರತ ಭಾಗ್ಯ ವಿಧಾತ

ಭಾರತದ ರಾಷ್ಟ್ರಗೀತೆಯನ್ನು ಹಾಡುವ ಅವಧಿ ಎಷ್ಟು?
     ೫೨ ಸೆಕೆಂಡು

ರಾಷ್ಟ್ರಗೀತೆ ಜನಗಣಮನವನ್ನು ಮೊದಲ ಬಾರಿಗೆ ಪ್ರಕಟಿಸಿದ್ದು ಯಾವಾಗ?
    ರವೀಂದ್ರನಾಥ ಟ್ಯಾಗೋರ್‌ರವರ ತತ್ವಬೋಧ ಪ್ರಕಾಶಿಕ ಮತ್ತು ಬ್ರಹ್ಮ ಸಮಾಜ ಪತ್ರಿಕೆಯಲ್ಲಿ ೧೯೧೧ರಲ್ಲಿ ಪ್ರಕಟಿಸಲಾಗಿತ್ತು.

    ರಾಷ್ಟ್ರಗೀತೆಯನ್ನು ಇಂಗ್ಲೀಷ್‍ಗೆ ಭಾಷಾಂತರಿಸಿದ್ದು ಯಾವಾಗ?
   ಫೆ.೨೮,೧೯೧೯ರಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನ ಪಲ್ಲಿ ಬಳಿಯಲ್ಲಿನ ಬೆಸೆಂಟ್ ಥಿಯೋಸೋಫಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಐರಿಷ್ ಕವಿ ಜೇಮ್ಸ್ ಕುಸ್ಸಿನ್‍ರವರು ಆಹ್ವಾನದಂತೆ ಜನಗಣಮನವನ್ನು ಇಂಗ್ಲೀಷ್‍ಗೆ ಭಾಷಾಂತರಿಸಿ . `ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂಬ ಶೀರ್ಷಿಕೆ ನೀಡಿದರು.

ರಾಷ್ಟ್ರಗೀತೆಗೆ ರಾಗ ಸಂಯೋಜನೆ ಯಾವಾಗ ಮಾಡಲಾಯಿತು?
       ರವೀಂದ್ರನಾಥ ಟ್ಯಾಗೋರ್‌ರವರು ಪ್ರಸ್ತುತವಾಗಿ ಹಾಡುವ ರಾಷ್ಟ್ರಗೀತೆಯ ದಾಟಿಗೆ ರಾಗ ಸಂಯೋಜಿಸಿದರು. 
* ಕಸ್ಸಿನ್‍ರವರ ಪತ್ನಿ ಸಂಗೀತಜ್ಞೆ ಮಾರ್ಗರೇಟ್‍ರವರು `ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂಬ ಹೆಸರಿನ ಜನಗಣಮನಕ್ಕೆ ಸಂಗೀತ ಸಂಯೋಜನೆ ಮಾಡಿದರು.

 ರಾಷ್ಟ್ರಗೀತೆಯನ್ನು ಸಂಕ್ಷಿಪ್ತವಾಗಿ ಹಾಡುವ ಸಂದರ್ಭದಲ್ಲಿ ತೆಗೆದುಕೊಳ್ಳುವ ಕಾಲ: ರಾಷ್ಟ್ರಗೀತೆಯನ್ನು ಸಂಕ್ಷಿಪ್ತವಾಗಿ ಹಾಡುವಾಗ ಮೊದಲ ಮತ್ತು ಕೊನೆಯ ಸಾಲನ್ನು ೨೦ಸೆಕೆಂಡ್ ಅವಧಿಯಲ್ಲಿ ಹಾಡಲಾಗುತ್ತದೆ.

Saturday 14 January 2012

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಮೌಲ್ಯ ಶಿಕ್ಷಣ


                             ¯ÉÃR£À         
               gÁ¶ÖçÃ0iÀi ²PÀët ¤Ãw ªÀÄvÀÄÛ ªÀiË®å ²PÀët

    ¨sÁgÀvÀ zÉñÀªÀÅ GvÀÛªÀÄ ¸ÀA¸ÀÌöÈw0iÀÄ ¸ÀA¥ÀæzÁ0iÀÄzÀ £É¯É«ÃqÀÄ. gÁªÀiÁ0iÀÄt-ªÀĺÁ¨sÁgÀvÀUÀ¼ÀAxÀ ZÁjwæPÀ PÀvÉUÀ¼ÀÄ ¨sÁgÀwÃ0iÀÄjUÉ EªÀÅ ªÀiÁUÀðzÀ²ðUÀ¼ÀÄ. M¼Éî0iÀÄzÀ£ÀÄß w½¹ M¼Éî0iÀÄzÀ£ÀÄß ¨ÉÆâü¸ÀĪÀÅzÉà gÁªÀiÁ0iÀÄt. PÉlÖzÀÝ£ÀÄß w½¹ M¼Éî0iÀÄzÀ£ÀÄß ¨ÉÆâü¸ÀĪÀÅzÉà ªÀĺÁ¨sÁgÀvÀ. EAzÀÄ ªÀiÁ£ÀªÀ ²PÀët ¥ÀqÉ0iÀÄĪÀÅzÀÄ PÉêÀ® ZÁjwæPÉÆÌøÀÌgÀ GvÀÛªÀiÁA±ÀUÀ¼À£ÀÄß ºÁUÀÆ ªÀiÁ£À«Ã0iÀÄ UÀÄtUÀ¼À£ÀÄß ¥ÀqÉ0iÀÄĪÀÅzÀPÉÆÌøÀÌgÀ JAzÀÄ ºÉüÀ§ºÀÄzÀÄ. ¥ÁæaãÀ PÁ®¢AzÀ EA¢£ÀªÀgÉUÀÆ ªÀiÁ£ÀªÀ ¸ÀĸÀA¸ÀÌöÈvÀ£ÁUÀ®Ä, GvÀÛªÀÄ £ÁUÀjPÀ£É¤¹PÉÆAqÀÄ GvÀÛªÀÄ £ÀqɸÀ®Ä ¥Àæ0iÀÄw߸ÀÄvÀÛ¯Éà §A¢zÁÝ£É. EzÀPÉÌ C£ÉÃPÀ ¸ÀºÀPÁgÀUÀ½ªÉ. ªÀÄ£É, ªÀÄoÀ, ªÀĹâ, ZÀZïð ºÁUÀÆ ±Á¯É PÁ¯ÉÃdÄUÀ¼ÀÄ ¥ÀævÀåPÀë ºÁUÀÆ ¥ÀgÉÆÃPÀëªÁV £ÉÊwPÀ ¨ÉÆÃzsÀ£É0iÀÄ£ÀÄß ªÀiÁqÀÄvÁÛ §A¢zÀÄÝ, EAzÀÄ F PÁ0iÀÄðPÀæªÀĪÀ£ÀÄß ±Á¯É PÁ¯ÉÃdÄUÀ¼À°è ªÀiÁqÀ¨ÉÃPÁVzÉ.

   ªÀiË®å ²PÀëtªÀÇ ¥Àæw0iÉƧ⠪ÀåQÛUÀÆ CªÀ±ÀåªÁVzÉ. ªÀiË®åUÀ½AzÀ ªÀåQÛ ¥ÀjªÀļÀ«®èzÀ ¥ÀŵÀàzÀAvÉ. DvÀ¤UÉ ¸ÀªÀiÁdzÀ°è 0iÀiÁªÀÅzÉà MAzÀÄ jÃw0iÀÄ ¸ÁÜ£À«®è. CAzÀgÉ ªÀiË®åUÀ½®èzÉà ªÀåQÛ0iÀÄ£ÀÄß PÀ¤µÀÖªÁV PÁtÄvÁÛgÉ. DzÀÝjAzÀ fêÀ£ÀzÀ°è ªÀiË®åUÀ½UÀÆ ªÀåQÛUÀÆ ¸ÀA§AzsÀ«zÉ. M§â ªÀåQÛ0iÀÄ£ÀÄß CªÀ£ÀÄ ºÉÆA¢gÀĪÀ ªÀiË®åUÀ¼À DzsÁgÀzÀ ªÉÄÃ¯É GvÀÛªÀÄ£ÉAzÀÄ w½0iÀįÁUÀÄvÀÛzÉ. ªÀiË®åUÀ¼ÀÄ ªÀåQÛ0iÀÄ ªÀåQÛvÀéªÀ£ÀÄß gÀƦ¸ÀĪÀÅzÀ®èzÉ CªÀ£À WÀ£ÀvÉ UËgÀªÀUÀ½AzÀ ¨Á¼ÀĪÀAvÉ ªÀiÁUÀðzÀ±Àð£À ¤ÃqÀÄvÀÛzÉ.

       ªÀiË®å ²PÀëtzÀ CªÀ±ÀåPÀvÉ0iÀÄ£ÀÄß UÀªÀÄ£ÀzÀ°èlÄÖPÉÆAqÀÄ gÁ¶ÖçÃ0iÀÄ ²PÀët ¤Ãw0iÀÄ°è (J£ï.¦.E) ªÀiË®å ²PÀëtzÀ §UÉÎ F PɼÀV£À «µÀ0iÀÄUÀ¼À°è ºÉüÀ¯ÁVzÉ.

1)     CvÁåªÀ±ÀåPÀ ªÀiË®åUÀ¼À CzsÀB¥ÀvÀ£À, ¸ÀªÀiÁdzÀ°è ºÉZÀÄÑwÛgÀĪÀ ¸ÀªÀðjÃw0iÀÄ wgÀ¸ÁÌgÀ ªÀÄ£ÉÆèsÁªÀ EªÀÅUÀ¼ÀÄ ºÉZÀÄÑ DvÀAPÀPÁj0iÀiÁVzÀÄÝ, ²PÀëtªÀ£ÀÄß ¸ÁªÀiÁfPÀ ªÀÄvÀÄÛ £ÉÊwPÀ ªÀiË®åUÀ¼À£ÀÄß ¨É¼É¸À®Ä MAzÀÄ ¥Àæ¨sÁªÀ ¥ÀÇtð ¸ÁzsÀ£ÀªÀ£ÁßV ªÀiÁqÀĪÀ zÀȶ֬ÄAzÀ ¥ÀoÀåPÀæªÀÄzÀ°è ºÉÆAzÁtÂPÉUÀ¼À£ÀÄß ªÀiÁqÀĪÀ CªÀ±ÀåPÀvÉ0iÀÄ PÀqÉUÉ ºÉZÀÄÑ UÀªÀÄ£À ºÀj¸À¨ÉÃPÁVzÉ.
2)    ¸ÁA¸ÀÌöÈwPÀªÁV ªÉÊ«zsÀåvÉ0iÀÄ£ÀÄß ºÉÆA¢gÀĪÀ £ÀªÀÄä ¸ÀªÀiÁdzÀ°è ²PÀëtªÀÅ LPÀåvÉ ªÀÄvÀÄÛ ¨sÁªÉÊPÀåvÉ0iÀÄ£ÀÄß ¸Á¢ü¸ÀĪÀAxÀ ¸ÁªÀðwæPÀ ªÀÄvÀÄÛ ¤gÀAvÀgÀ ªÀiË®åUÀ¼À£ÀÄß £ÀªÀÄä d£ÀgÀ°è ¨É¼É¸À®Ä ¥Àæ0iÀÄw߸À¨ÉÃPÀÄ. CAxÀ ªÀiË®å ²PÀëtªÀÅ ¸ÀÄzsÁgÀuÁ «gÉÆâü ªÀÄ£ÉÆèsÁªÀ, zsÁ«ÄðPÀ CAzsÀ±ÀæzÉÞ, »A¸É, ªÀÄÆqsÀ£ÀA©PÉ ªÀÄvÀÄÛ CzÀȵÀÖªÁzÀ EªÀÅUÀ¼À£ÀÄß vÉÆqÉzÀÄ ºÁPÀ®Ä ¸ÀºÁ0iÀÄ ªÀiÁqÀ¨ÉÃPÀÄ.
3)     F J®è ºÉÆÃgÁlzÀ eÉÆvÉUÉ ªÀiË®å ²PÀëtªÀÅ £ÀªÀÄä ¥ÀgÀA¥ÀgÉ, gÁ¶ÖçÃ0iÀÄ UÀÄjUÀ¼ÀÄ, ¸ÁªÀðwæPÀ zÀ馅 EªÀÅUÀ¼À ªÉÄÃ¯É DzsÁjvÀªÁVgÀĪÀ C¥ÀæwªÀÄ zsÀ£ÁvÀäPÀ CA±ÀUÀ¼À£ÀÄß M¼ÀUÉÆArzÉ. ªÀiË®å ²PÀëtªÀÅ F ¸ÀégÀÆ¥ÀPÉÌ ¥ÁæxÀ«ÄPÀ ¥ÁæªÀÄÄRåvÉ0iÀÄ£ÀÄß ¤ÃqÀ¨ÉÃPÀÄ.
                   ¸ÀªÀiÁdzÀ°è MAzÀÄUÀÆr §zÀÄPÀ¨ÉÃPÁzÀgÉ ¦æÃw, ¸ÀºÉÆÃzÀgÀvÀé, PÀëªÀÄvÉ, ¥À±ÁÑvÁÛ¥À, MUÀÎlÄÖ, ¸ÉêÉ, UÀÄA¦£À ±ÀQÛ, dªÁ¨ÁÝj, PÀgÀÄuÉ, £Áå0iÀÄ ªÀÄÄAvÁzÀ ªÀiË®åUÀ¼À CªÀ±ÀåPÀvÉ EzÉ. EAxÀ ªÀiË®åUÀ¼À£ÀÄß ¸ÁªÀiÁfPÀ ªÀiË®åUÀ¼É£ÀÄߪÀgÀÄ. EzÀ®èzÉ PÀvÀðªÀå, vÁ¼Éä, £ÀqÀvÉ, «ÄvÀªÀå0iÀÄvÀ£À, OzÁvÀåð, ¸ÀÆáwð, ¤µÉ×, PÀÈvÀdÕvÉ, ¸ÁévÀAvÀæ÷å, ¸ÀAPÀ®à ªÀÄÄAvÁzÀ ªÀiË®åUÀ¼ÀÆ ¨ÉÃPÁUÀÄvÀÛªÉ. EªÀÅUÀ¼À£ÀÄß £ÉgɺÉÆgÉ0iÀÄ ªÀiË®åUÀ¼ÉAzÀÄ PÀgÉ0iÀÄĪÀgÀÄ. ¸ÀªÀiÁd CUÉÆÃZÀgÀ ªÀiÁzÀj CxÀªÁ ¤Ãw ¤0iÀĪÀÄUÀ¼À£ÀÄß ºÉÆA¢zÉ. CzÀgÀ°è GvÀÛªÀÄgÁV §zÀÄPÀ¨ÉÃPÁzÀgÉ F J®è ¸ÁªÀiÁfPÀ ªÀiË®åUÀ¼ÀÄ CªÀ±ÀåªÁV ¨ÉÃPÀÄ.

   gÁPÉÃZïgÀªÀgÀÄ ªÀiË®åUÀ¼À£ÀÄß JgÀqÀÄ «zsÀUÀ¼À°è «AUÀr¹zÁÝgÉ.
1)     ¸ÁzsÀPÀ ªÀiË®åUÀ¼ÀÄ
2)    CAwªÀÄ ªÀiË®åUÀ¼ÀÄ
   µÁªÀgï CªÀgÀÄ ªÀiË®åUÀ¼À£ÀÄß ªÀÄÆgÀÄ «zsÀUÀ¼À°è «AUÀr¹zÁÝgÉ.
1)     ¸ËAzÀ0iÀÄð ªÀiË®åUÀ¼ÀÄ
2)    ¸ÁzsÀPÀ ªÀiË®åUÀ¼ÀÄ
3)     £ÉÊwPÀ ªÀiË®åUÀ¼ÀÄ
          0iÀÄÄ 1979gÀ°è 84 ªÀiË®åUÀ¼À£ÀÄß UÀÄgÀÄw¹zÉ. CªÀÅUÀ¼ÉAzÀgÉ :
1.     G¥ÀªÁ¸À
2.     EvÀgÀgÀ ¸ÁA¸ÀÌöÈwPÀ ªÀiË®åUÀ¼À£ÀÄß ¥Àæ±ÀA¹¸ÀĪÀÅzÀÄ
3.     C¸ÀàöȱÀåvÁ «gÉÆÃzsÀ
4.     ¥ËgÀvÀé
5.     EvÀgÀgÀ£ÀÄß CªÀUÁºÀ£ÉUÉ vÉUÉzÀÄPÉƼÀÄîªÀÅzÀÄ
6.     E£ÉÆߧâgÀ §UÉÎ PÁ¼Àf
7.     ¸ÀºÀPÁgÀ
8.     ±ÀÄavÀé
9.     C£ÀÄPÀA¥À
10.   ¸ÁªÀiÁ£Àå PÁgÀt
11.   ¸ÀªÀðgÀ M½vÀÄ
12.   zsÉÊ0iÀÄð
13.   ¸Ëd£Àå
14.   PÀÄvÀƺÀ®
15.   ¥ÀæeÁ¥Àæ¨sÀÄvÀé ¤zsÁðgÀ vÉUÉzÀÄPÉƼÀÄîªÀÅzÀÄ
16.   DgÁzsÀ£É
17.   ªÉÊ0iÀÄÄQÛPÀ WÀ£ÀvÉ
18.   PÉ®¸ÀPÉÌ UËgÀªÀ
19.   PÀvÀðªÀå
20.  ²¸ÀÄÛ
21.   ¸À»µÀÄÚvÉ
22.  ¸ÀªÀiÁ£ÀvÉ
23.   UɼÉvÀ£À
24.  £ÀA©PÉ ¤µÀÄ×gÀvÉ
25.   £ÀªÀÄäzÉA§ ¨sÁªÀ£É
26.  ¸ÁévÀAvÀæ÷å
27.  ªÀÄÄAzÁ¯ÉÆÃZÀ£É
28.  M¼Éî0iÀÄ £ÀqÀvÉ
29.  ¸À¨sÀå UÀȺÀ¸ÀÜ£À
30.   PÀÈvÀdÕvÉ
31.   ¥ÁæªÀiÁtÂPÀvÉ
32.   G¥ÀPÁgÀ ¨sÁªÀ£É
33.   ªÀiÁ£À«Ã0iÀĪÁzÀ
34.   DgÉÆÃUÀå fêÀ£À
35.   ¥ÁægÀA¨sÀ
36.   ¸ÀªÀÄUÀævÉ
37.   £Áå0iÀÄ
38.   zÀ0iÉÄ
39.   ¥ÁætÂzÀ0iÉÄ
40.  PÀvÀðªÀå ¤µÉ×
41.   £Á0iÀÄPÀvÀé
42.   gÁ¶ÖçÃ0iÀÄ MUÀÎlÄÖ
43.   gÁ¶ÖçÃ0iÀÄ ¥ÀæeÉÕ
44.  C»A¸É
45.   gÁ¶ÖçÃ0iÀÄ ¨sÁªÉÊPÀåvÉ
46.  «zsÉÃ0iÀÄvÉ
47.  ±ÁAw
48.  ªÉüÉ0iÀÄ ¸ÀzÀÄ¥À0iÉÆÃUÀ
49.  ¸ÀªÀÄ0iÀÄ ¥Á®£É
50.   zÉñÀ¥ÉæêÀÄ
51.   ¤ªÀÄð®vÉ
52.   eÁÕ£ÀzÀ C£ÉéõÀuÉ
53.   ¸ÀA¥À£ÀÆä®vÉ
54.   ¤0iÀÄ«ÄvÀvÀ£À
55.   EvÀgÀgÀ §UÉÎ UËgÀªÀ
56.   ªÀÈzÀÞgÀ §UÉÎ ¥ÀÇdå ¨sÁªÀ£É
57.   ¤µÀÌ¥Àl
58.   ¸ÀgÀ¼À fêÀ£À
59.   ¸ÁªÀiÁfPÀ £Áå0iÀi
60.  ¸Àé0iÀiA ²¸ÀÄÛ
61.   ¸Àé0iÀÄA ¸ÀºÁ0iÀÄ
62.  DvÀä UËgÀªÀ
63.   DvÀä ¸ÉÜöÊ0iÀÄð
64.  ¸Àé0iÀÄA DzsÁgÀ
65.   ¸Àé0iÀÄA PÀvÀðªÀå
66.   ¸Àé0iÀÄA «±Áé¸À
67.  ¸Àé0iÀÄA ¤§ðAzsÀ
68.  ¸Àé0iÀÄA ¤UÀæºÀuÉ
69.  ¸ÀªÀiÁd ¸ÉêÉ
70.  ªÀiÁ£ÀªÀ PÀÄ®zÀ MUÀÎlÄÖ
71.   ¸ÁªÀiÁfPÀ dªÁ¨ÁÝj0iÀÄ CjªÀÅ
72.  M¼Éè0iÀÄzÀÄ ªÀÄvÀÄÛ PÉlÖzÀÝgÀ ªÀåvÁå¸ÀzÀ CjªÀÅ
73.   ¸ÁªÀiÁfPÀªÁzÀ
74.  PÀgÀÄuÉ
75.   eÁvÁåwÃvÀªÁzÀ ªÀÄvÀÄÛ J®è zsÀªÀÄðUÀ½UÉ UËgÀªÀ
76.  ¸ÀgÀ¼À fêÀ£À
77.  ±ÉÆÃzsÀ£É0iÀÄ ¸ÀÆáwð
78.  UÀÄA¥ÀÅ PÉ®¸À
79.  ¸ÀvÀåvÉ
80.  vÁ¼Éä
81.   ¸ÁªÀðwæPÀ ¸ÀvÀå
82.  ¸ÁªÀðwæPÀ ¥ÉæêÀÄ
83.   gÁ¶ÖçÃC ªÀÄvÀÄÛ £ÁUÀjPÀ ¸ÀA¥ÀwÛUÉ UËgÀªÀ
84.  ¸ÀÈd£À²Ã®vÉ
        F CA±ÀUï¼À£ÀÄß UÀªÀĤ¹zÁUÀ gÁ¶ÖçÃ0iÀÄ ²PÀët ¤Ãw ªÀÄvÀÄÛ ªÀiË®å ²PÀëtªÀÅ JAvÀºÀ MAzÀÄ CzÀÄãvÀ ±ÀQÛ JA§ÄzÀÄ UÉÆvÁÛUÀÄvÀÛzÉ. EzÀÄ ªÀÄ£ÀĵÀå¤UÉÆAzÀÄ D¨sÀgÀt«zÀÝAvÉ. 0iÀiÁgÀÄ EzÀ£ÀÄß zsÀj¹PÉƼÀÆîªÀgÉÆà CªÀgÀÄ CAzÀªÁV ZÉAzÀªÁV PÁtĪÀgÀÄ ªÀÄvÀÄÛ «ªÉÃPÀ¥ÀÇtð ªÀåQÛ0iÀiÁV £ÀqÉzÀÄPÉƼÀÄîªÀgÀÄ.

¯ÉÃR£À §gÉzÀªÀgÀÄ : ²æêÀÄw «d0iÀÄ®Që÷äà .©. ±ÉlUÁgÀ
                                            ¸À.².
                     ¸ÀgÀPÁj PÀ£ÀßqÀ ºÉtÄÚ ªÀÄPÀ̼À ±Á¯É £ÀA.12
                     SÁeÁ C«Äãï zÀUÁð
                     vÁ : f: ©eÁ¥ÀÅgÀ -586103