Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 4 May 2013

ನಿಮ್ಮಲ್ಲೂ `ಸುಧಾ' ಇದ್ದಾಳೆ

ನಿಮ್ಮಲ್ಲೂ `ಸುಧಾ' ಇದ್ದಾಳೆ

ಮೂಲ ಲೇಖನ : ಶ್ರೀ ಎನ್.ಎಂ.ಬಿರಾದಾರ
                ಸಂಸ್ಥಾಪಕರು ಮತ್ತು ಮುಖ್ಯಸ್ಥರು
                ಚಾಣಕ್ಯ ಕರಿಯರ್ ಅಕಾಡೆಮಿ ಬಿಜಾಪುರ (ಕರ್ನಾಟಕ)
    ಜೀವನದ ಹೋರಾಟದಲ್ಲಿ ಅಪಮಾನ, ನಿಂದನೆ, ಹಿನ್ನಡೆ, ಸೋಲು ಹಾಗೂ ಜಿಗುಪ್ಸೆ ಇರುವವು. ಇವು ಇರದಿದ್ದರೆ, ಜೀವನ ನೀರಸವಾಗುತ್ತದೆ. ಇವುಗಳನ್ನು ನೀವು ಜೀವನದಲ್ಲಿ ನೀವು ಯಾವ ರೀತಿ ಸ್ವೀಕರಿಸುತ್ತಿರೋ ಎಂಬುವುದು ಮುಖ್ಯ. ಇವುಗಳಿಂದ ಕೆಲವರು ಮನ ನೊಂದುಕೊಂಡು, ಸ್ಪರ್ಧೆಯಿಂದ ಓಡಿ ಹೋಗುತ್ತಾರೆ. ಇನ್ನೂ ಕೆಲವರು ತಮ್ಮ ಸಾಮರ್ಥ್ಯವನು ಹಿಯಾಳಿಸಿದವರಿಗೆ ತೋರಿಸಿ ಕೊಡುವದಕ್ಕೆ ಇನ್ನಷ್ಟು ಶಕ್ತಿಯೊಂದಿಗೆ ಹೆಜ್ಜೆ ಹಾಕುತ್ತಾರೆ. ಇದಕ್ಕೆ ಉದಾಹರಣೆ `ಸುಧಾ' ಎಂಬ ಹುಡುಗಿಯ ಛಲದಿಂದ ಕೂಡಿದ ಜೀವನವನ್ನು ನಿಮಗೆ ಪರಿಚಯಿಸುತ್ತೇನೆ.

 `ಸುಧಾ' ಬೆಳಗಾವಿ ಜಿಲ್ಲೆಯ ಅಥಣಿಯ ತಾಲೂಕಿನ ಒಂದು ಸಣ್ಣ ಗ್ರಾಮದವಳು. ಇವಳು ೪ ನೇ ತರಗತಿಯಲ್ಲಿ ಇದ್ದಾಗಲೇ ಮಾವನೊಂದಿಗೆ ಹಿರಿಯರು ಹೆಸರು ಇಟ್ಟರು. ಅವನು ಆಗ ೮ನೇ ತರಗತಿಯಲ್ಲಿ ಓದುತ್ತಿದ್ದ. ಸುಧಾಳಿಗೆ ಅದರ ಅರಿವೆ ಇರಲಿಲ್ಲ. ಅದು ವಯಸ್ಸು ಕೂಡ ಅಲ್ಲ ಬಿಡಿ. ಶಾಲೆಯಲ್ಲಿ ಚುರುಕಾಗಿದ್ದ ಸುಧಾ ಹಂತ ಹಂತವಾಗಿ ಉತ್ತಮ ದರ್ಜೆಯಲ್ಲಿ ಪಾಸಾಗುತ್ತಾ ಪಿ.ಯು.ಸಿ ಮುಗಿಸಿದಳು. ಅವಳು ಹೈಸ್ಕೂಲಿಗೆ ಬಂದಾಗ ಮಾವನೊಂದಿಗೆ ಹೆಸರು ಕೇಳಿ ಎಲ್ಲಾ ಹುಡುಗಿಯರಂತೆ ನಾಚಿಕೆಯೊಂದಿಗೆ, ಮಾವನ ಬಗ್ಗೆ ತನ್ನದೆಯಾದ ಕನಸು ಕಂಡಳು. ಮನ್ಯಲ್ಲಿ ಯಾರು ಇಲ್ಲದಿದ್ದಾಗ, ಇಬ್ಬರೇ ಗಂಟೆಗಟ್ಟಲೇ  ಮಾತಾಡುತ್ತಿದ್ದರು. ತನ್ನದೆಯಾದ ಲೋಕದಲ್ಲಿ ವಿಹರಿಸುತ್ತಿದ್ದಳು. ಅವನು ಡಿಗ್ರಿ ಮುಗಿಸಿ ವ್ಯಾಪಾರ ಮಾಡಲು ಆರಂಭಿಸಿದನು. ಈ ಕಡೆ ಇವಳು ಬಿ.ಇಡಿ ಕಲಿಯಲು ತನ್ನ ಚಿಕ್ಕಮ್ಮನ ಮಗಳಾದ ಸವಿತಾಳೊಂದಿಗೆ ಹಾರೂಗೇರಿ ಕಾಲೇಜಿಗೆ ಸೇರಿದಳು. ಬಿ.ಇಡಿ. ಫಲಿತಾಂಶ ಬಂದಾಗ ಸುಧಳಿಗೆ ಆಘಾತವಾಗಿತ್ತು. ಅವಳು ಶೇಕಡಾ ೭೦ ಅಂಕಗಳೊಂದಿಗೆ ಪಾಸಾಗಿದ್ದರೆ, ಶೇಕಡಾ ೮೯ ಅಂಕಗಳೊಂದಿಗೆ ಸವಿತಾ ಕಾಲೇಜಿಗೆ ಪ್ರಥಮ ಬಂದಿದ್ದಳು. ಈ ಫಲಿತಾಂಶವು ಸುಧಾಳ ಜೀವನದಲ್ಲಿ ಬಿರುಗಾಳಿಯನು ಉಂಟು ಮಾಡಿತು. ಅವಳು ಯಾರೊಂದಿಗೆ ಮದುವೆ ಕನಸು ಕಂಡಿದ್ದಾಳೋ ಅವನು ಇವಳನ್ನು ನಿರಾಕರಿಸಲು ಆರಂಭಿಸಿದನು. ಇದಕ್ಕೆ ಕಾರಣ ಇವಳದು ಪರ್ಸೆಂಟೇಜ್ ಕಡಿಮೆಯಾಗಿದೆ. ನೌಕಾರಿ ಆಗುವುದಿಲ್ಲವೆಂಬ ಭಾವನೆ ಬೆಳೆಸಿಕೊಂಡನು. ಅವನು ಒಂದು ದಿನ ಸಂಬಂಧಿಕರೆಲ್ಲರನ್ನು ಕೂಡಿಸಿ ನಾನು ಮದುವೆಯಾಗುವುದಿದ್ದರೆ, ಸವಿತಾಳನ್ನು. ನೀವು ಇದಕ್ಕೆ ಒಪ್ಪದಿದ್ದರೆ ಹೊರಗಿನ ಹುಡುಗಿಯನ್ನು ಮದುವೆಯಾಗುತ್ತೇನೆಂದು ನಿರ್ಧಾರ ಹೇಳಿದನು. ಆಗ ಹಿರಿಯರು ತುಪ್ಪ ಎಲ್ಲಿ ಚೆಲ್ಲಿತು ಎಂದರೆ ಕಿಚಡಿಯಲ್ಲಿ ಎಂದು, ಅವನ ನಿರ್ಧಾರಕ್ಕೆ ಒಪ್ಪಿಗೆ ನೀಡದರು. ಆಗ ಹಿರಿಯರು ಸುಧಾಳಿಗೆ ಒಂದು ಮಾತು ಕೇಳಲಿಲ್ಲ. ಅವಳಿಗೆ ತುಂಬಾ ದುಃಖವಾಯಿತು. ಒಂದು ದಿನ ತಾಯಿಯನ್ನು ಕೇಳಿದಾಗ, ನಾವೇನು ಮಾಡಲು ಸಾಧ್ಯವಿದೆ. ನಿನಗೆ ಓದಿ ಹೆಚ್ಚಿನ ಫಲಿತಾಂಶ ಪಡೆಯಲು ಏನು ಕಷ್ಟವಾಗಿತ್ತು ಎಂದು ಹಿಯಾಳಿಸಿದರು. ಬಂಗಾರದಂಥ ಸಂಬಂಧ ನಿನ್ನಿಂದ ಬಿಡಬೇಕಾಯಿತು. ದರಿದ್ರಳಾದ ನಿನ್ನನ್ನು ಯಾರು ಮದುವೆಯಾಗುತ್ತಾರೊ, ಯಾರು ಜೋಡಿಯಾದಾರೂ ಆಘಾತವಾಗುತ್ತದೆ ಎಂದು ಅಸಹ್ಯ ಮಾತುಗಳನ್ನಾಡಿದರು.

        ಸುಧಾ ಹಾಗೂ ಸವಿತಾ ಇಬ್ಬರೂ ಕೂಡಿಕೊಂಡು ಕೋಚಿಂಗ್ ಬಂದರು. ಕೋಚಿಂಗ್‍ನಲ್ಲಿದ್ದಾಗಲೇ ಸವಿತಾಳ ಮದುವೆ ನಡೆಯಿತು. ಮದುವೆ ನಡೆದ ದಿನವೇ `ಸುಧಾ' ನನ್ನ ಹತ್ತಿರ ಬಂದಿದ್ದಳು. ಸರ್, ಇವತ್ತೂ ನಮ್ಮ ಚಿಕ್ಕಮ್ಮನ ಮಗಳ ಮದುವೆ ಇದೆ. ನಾನು ಹೋಗಲಿಲ್ಲ. ನನಗೆ ಧೈರ್ಯ ಹೇಳಿ ಎಂದಾಗ, ನಾನು ಯಾಕೆ ಹೋಗಲಿಲ್ಲ? ಎಂದಾಗ, ಮೇಲಿನ ತನ್ನ ವೃತ್ತಾಂತವನ್ನು ಹೇಳಿದಳು. ಆಯಿತು, ಈಗೇನು ಮಾಡಬೇಕು ಎಂದು ಮಾಡಿದ್ದೀ ಎಂದಾಗ, ಅವನು ನನ್ನದು ನೌಕರಿಯಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾನಲ್ಲ. ಅವನ ಎದುರಿಗೆ ನೌಕರಿ ಮಾಡಬೇಕು ಎಂದು ಅಳಲು ಪ್ರಾರಂಭಿಸಿದಳು. ನಂತರ ಸಾವರಿಸಿಕೊಂಡು ಸರ್, ನಿಮ್ಮ ವ್ಯಕ್ತಿತ್ವ ತರಗತಿ ನನ್ನ ಜೀವನಕ್ಕೆ ಹೊಸ ತಿರುವು ನೀಡಿತು. ನೀವು ಒಂದು ದಿನ ಹೇಳಿದ ಮಾತು ಇವತ್ತಿಗೂ ಕೂಡಾ ನನಗೆ ಸ್ಫೂರ್ತಿಯಾಗಿದೆ. ನಮಗೆ ಅಂಥವರಿಗೆ ನಿಂದನೆ ಮಾಡಿದವರಿಗೆ ನಮ್ಮ ಚಪ್ಪಲಿಯಿಂದ ಉತ್ತರಿಸಬಾರದು. ನಮ್ಮ ಸಾಧನೆಯ ಮೂಲಕ ಉತ್ತರಿಸಬೇಕು ಎಂಬ ಮಾತು ಬಹಳಷ್ಟು ಸ್ಫೂರ್ತಿ ನೀಡಿತು. ನನು ನೌಕರಿಯಾಗದೇ ಊರಿಗೆ ಹೋಗುವುದಿಲ್ಲ ಸರ್, ನನಗೆ ಸಹಾಯ ಮಾಡಿ ಎಂದಳೂ. ಕೋಚಿಂಗ್ ಮುಗಿದ ನಂತರ ಕೂಡಾ ಅವಳು ಬಿಜಾಪುರದಲ್ಲಿ ಇದ್ದು ಓದಲು ಆರಂಭಿಸಿದಳು. ಅವಳ ಪರೀಕ್ಷೆ ಮುಗಿಯುವವರೆಗೆ ಊಟದ ಹಾಗೂ ರೂಮ್ ವ್ಯವಸ್ಥೆ ಮಾಡಿಕೊಟ್ಟೆನು.

        ಮೊನ್ನೆ ಬಂದ ಹೈಸ್ಕೂಲ್ ಫಲಿತಾಂಶದಲ್ಲಿ ಸುಧಾ ಆಯ್ಕೆಯಾಗಿದ್ದಳು. ಸವಿತಾ ೨ ಅಂಕಗಳಿಂದ ಹೊರಗೆ ಉಳಿದಳು. ಸುಧಾ ಛಲ ನೋಡಿ ನನಗೆ ಖುಷಿಯಾಯಿತು. ಸುಧಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದರೆ ಅವರ ಚಿಂತೆ ಮಾಡುತಾ, ಅಳುತ್ತಾ, ಜಿಗುಪ್ಸೆ ಪಡುತ್ತಾ ಜೀವನ ಕಳೆಯುತ್ತಿದ್ದಳು. ಸುಧಾಳ ಮಾವನಿಗೆ ಯಾವ ರೀತಿಯಾಗಿರಬೇಕು ಎಂದು ನೀವೇ ಊಹಿಸಿ.

ಕೊನೆಯ ಮಾತು: ಜೀವನದಲ್ಲಿ ಏನೇ ಘಟಿಸಲಿ, ನಿಮ್ಮ ನಂಬಿಕೆ ಆತ್ಮವಿಶ್ವಾಸ ಹಾಗೂ ಛಲವನ್ನು  ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ 2013 ಸಿದ್ಧತಾ ಮಾಹಿತಿ

ಕರ್ನಾಟಕ ಲೋಕ ಸೇವಾ ಆಯೋಗ (ಕೆ.ಪಿ.ಎಸ್.ಸಿ.)ಯು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗುತ್ತಿದೆ. ಪದವಿ ಹೊಂದಿದ ಅಭ್ಯರ್ಥಿಗಳು ಕೆ.ಎ.ಎಸ್. ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕೆ.ಎ.ಎಸ್. ಕುರಿತಾಗಿ ಹಲವಾರು ಜನರು ನನಗೆ ಆಗಾಗ ಇ-ಮೇಲ್ ಮೂಲಕ, ಎಸ್.ಎಂ.ಎಸ್. ಮೂಲಕ ಮಾಹಿತಿ ಕೇಳುತ್ತಿರುತ್ತಾರೆ. ಅವರಿಗೆಲ್ಲ ಉಪಯುಕ್ತವಾಗಲೆಂದು ಕೆ.ಎ.ಎಸ್. ಪರೀಕ್ಷೆ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಇಲ್ಲಿ ನೀಡಲು ಪ್ರಯತ್ನಿಸುತ್ತಿದ್ದೇನೆ.

ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ 2013 ಸಿದ್ಧತಾ ಮಾಹಿತಿ

ಕೆ.ಎ.ಎಸ್. ಪರೀಕ್ಷೆಗೆ ಅರ್ಹತೆ :

 ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಭಾರತೀಯ ನಾಗರಿಕತ್ವವನ್ನು ಪಡೆದಿರಬೇಕು.

ಪರೀಕ್ಷೆಯ ಹಂತಗಳು :
 ಕೆ.ಎ.ಎಸ್. ನೇಮಕಾತಿ ಪರೀಕ್ಷೆಯು ಮೂರು ಹಂತದಲ್ಲಿ ನಡೆಯುತ್ತದೆ.
೧. ಪೂರ್ವಭಾವಿ ಪರೀಕ್ಷೆ
೨. ಮುಖ್ಯ ಪರೀಕ್ಷೆ
೩. ಸಂದರ್ಶನ

ಪೂರ್ವಭಾವಿ ಪರೀಕ್ಷೆ : -
* ಪೂರ್ವಭಾವಿ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
* ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ.
* ಪ್ರಶ್ನೆಗಳು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಇರುತ್ತವೆ.
* ತಲಾ ಪತ್ರಿಕೆಗಳು ೧೦೦ ಪ್ರಶ್ನೆಗಳನ್ನು ಹೊಂದಿರುತ್ತವೆ. ಪ್ರತಿ ಪ್ರಶ್ನೆಗೆ ೨ ಅಂಕಗಳಿರುತ್ತವೆ.


                                                            ಪೇಪರ್ -1
ವಿಷಯ                                        ಪ್ರಶ್ನೆಗಳು             ಅಂಕಗಳು
ರಾಷ್ಟ್ರೀಯ ಹಾಗೂ
ಅಂತರ್‌ರಾಷ್ಟ್ರೀಯ ಪ್ರಾಮುಖ್ಯತೆ         40                     80
ಮಾನವಿಕ ಶಾಸ್ತ್ರ                              60                    120
ಒಟ್ಟು                                              100                   200

                                                               ಪೇಪರ್ -2
ರಾಜ್ಯದ ಪ್ರಾಮುಖ್ಯತೆ                          40                      80
ವಿಜ್ಞಾನ ತಂತ್ರಜ್ಞಾನದ ಪರಿಸರ
ಮತ್ತು ಪರಿಸರ ಶಾಸ್ತ್ರ                           30                      60
ಸಾಮಾನ್ಯ ಮಾನಸಿಕ ಸಾಮರ್ಥ್ಯ           30                      60
ಒಟ್ಟು                                                100                     200


ಪೇಪರ್ 1 ಪಠ್ಯಕ್ರಮ

 ಪ್ರಥಮ ಪತ್ರಿಕೆ ಸಾಮಾನ್ಯ ಪದವೀಧರರಿಗೆ ಅನುಕೂಲವಾಗುವ ರೀತಿಯಲ್ಲಿ ಪಠ್ಯ ಇರುವುದು. ಇಲ್ಲಿಯ ವಿಷಯಗಳು ಹೆಚ್ಚು ವಿಸ್ತಾರವಾಗಿದ್ದು ಮತ್ತು ಅಳತೆಯಿಂದ ಕೂಡಿದೆ. ಇದು ಎರಡು ಭಾಗಗಳಿಂದ ಕೂಡಿದೆ.

ಭಾಗ - ಎ) ಈ ಭಾಗದಲ್ಲಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಘಟನೆಗಳು ಇರುವುವು.
೧. ರಾಷ್ಟ್ರದಲ್ಲಿ ನಡೆದ ಪ್ರಮುಖ ರಾಜಕೀಯ ಘಟನೆಗಳು
೨. ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು
೩. ಪ್ರಸಿದ್ಧಿ ಪಡೆದ ಸ್ಥಳಗಳು
೪. ಪ್ರಸಿದ್ಧವಾದ ಪ್ರಶಸ್ತಿಗಳು ಮತ್ತು ವ್ಯಕ್ತಿಗಳ ವಿವರಗಳು
೫. ವೈದ್ಯಕೀಯ ಆರೋಗ್ಯ ಹಾಗೂ ಪರಿಸರ ಸಂಬಂಧಪಟ್ಟ ವಿಚಾರಗಳು
೬. ಕ್ರ್‍ಈಡೆಗಳಿಗೆ ಸಂಬಂಧಪಟ್ಟ ವಿಚಾರಗಳು
೭. ದ್ವಿಪಕ್ಷೀಯ ಒಪ್ಪಂದಗಳು
೮. ಜಾಗತಿಕ ಸಂಘಟನೆಗಳು, ಸಮ್ಮೇಳನಗಳು, ಒಪ್ಪಂದಗಳು
೯. ರಾಷ್ಟ್ರ ರಾಷ್ಟ್ರಗಳ ಮಧ್ಯೆ ನಡೆಯುವ ರಾಜಕೀಯ ವಿಚಾರಗಳು
೧೦. ಜಾಗತಿಕ, ಆರ್ಥಿಕ, ಪರಿಸರ ಹಾಗೂ ಜೈವಿಕ ವಿಷಯಗಳು
೧೧. ರಾಷ್ಟ್ರದ ಪ್ರಮುಖ ನೇಮಕಗಳು
೧೨. ಸುಪ್ರೀಂ ಕೋರ್ಟಿನ ಪ್ರಮುಖ ತೀರ್ಪುಗಳು


ಭಾಗ - ಬಿ

 ಇದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಪಟ್ಟಿದೆ. ಬಹಳಷ್ಟು ವಿದ್ಯಾರ್ಥಿಗಳು ಇದು ಮನೋವಿಜ್ಞಾನಕ್ಕೆ ಸಂಬಂಧಪಟ್ಟಿದೆ ಎಂದು ತಿಳಿದುಕೊಂಡಿರುತ್ತಾರೆ. ಈ ಭಾಗದಲ್ಲಿ ಈ ಕೆಳಗಿನ ವಿಷಯಗಳು ಒಳಗೊಂಡಿವೆ.
೧) ಪ್ರಾಚೀನ ಭಾರತದ ಇತಿಹಾಸ
೨) ಮಧ್ಯಕಾಲೀನ ಭಾರತದ ಇತಿಹಾಸ
೩) ಆಧುನಿಕ ಭಾರತದ ಇತಿಹಾಸ
೪) ಕರ್ನಾಟಕ ಇತಿಹಾಸ, ಭಾರತದ ಸಂವಿಧಾನ ಮತ್ತು ರಾಜಕೀಯ
೫) ಭಾರತದ ಆರ್ಥಿಕಾಭಿವೃದ್ಧಿ
೬) ಭಾರತ ಭೂಗೋಳ
೭) ಪ್ರಾಕೃತಿಕ ಭೂಗೋಳ
೮) ಪ್ರಪಂಚದ ಭೂಗೋಳ
೯) ಕರ್ನಾಟಕ ಅರ್ಥಶಾಸ್ತ್ರ
೧೦) ಕರ್ನಾಟಕ ಭೂಗೋಳ
೧೧) ಕರ್ನಾಟಕ ರಾಜಕೀಯ


                                         ಪೇಪರ್ -2

ಭಾಗ -ಎ)
  ರಾಜ್ಯದ ಪ್ರಚಲಿತ ಘಟನೆಗಳು ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಇರುವುವು. ಕೆಳಗಿನ ವಿಷಯಗಳಿಗೆ ಹೆಚ್ಚು ಗಮನ ನೀಡಬೇಕು.
೧) ರಾಜ್ಯದಲ್ಲಿರುವ ಪ್ರಚಲಿತ ಘಟನೆಗಳು
೨) ರಾಜ್ಯದಲ್ಲಿನ ಪ್ರಚಲಿತ ಸ್ಥಳಗಳು
೩) ರಾಜ್ಯದಲ್ಲಿನ ಪ್ರಸಿದ್ಧವಾದ ಪ್ರಶಸ್ತಿಗಳು ಮತ್ತು ಅದರ ವಿವರಗಳು
೪) ರಾಜ್ಯದಲ್ಲಿ ಇಲ್ಲಿಯವರೆಗೆ ಜಾರಿಗೆ ಬಂದಿರುವ ಸಾಮಾಜಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳ ವಿವರಣೆ ಗೊತ್ತಿರಬೇಕು.
೫) ರಾಜ್ಯಕ್ಕೆ ಸಂಬಂಧಪಟ್ಟ ಪ್ರಮುಖ ನೇಮಕಗಳು
೬) ರಾಜ್ಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳು
೭) ಕನ್ನಡಿಗರ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಸಾಧನೆ

ಭಾಗ - ಬಿ ) ಇದರಲ್ಲಿ ಸಾಮಾನ್ಯ ವಿಜ್ಞಾನ ಹಾಗೂ ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇರುವುವು.
೧) ಭೌತಶಾಸ್ತ್ರ
೨) ರಸಾಯನಶಾಸ್ತ್ರ
೩) ಜೀವಶಾಸ್ತ್ರ
೪) ಕಂಪ್ಯೂಟರ್
೫) ತಂತ್ರಜ್ಞಾನ

ಭಾಗ -೩

೧) General Mental Ability  :
  ಲಾಭ ಮತ್ತು ನಷ್ಟ ಬಡ್ಡಿ ಪಾಲುಗಾರಿಕೆ, ಕೆಲಸ ಮತ್ತು ಸಮಯ, ಸಮಯ ಮತ್ತು ರೂ, ರೈಲ್ವೆ ಸಮಸ್ಯೆಗಳು, ಕ್ಯಾಲೆಂಡರ್ ಪ್ರೊಬಬಿಲಿಟಿ ಕ್ಯೂಲ್, ಚಿತ್ರಗಳು)

೨) Analytic Ability :
   ಸರಣಿ, ಸಂಬಂಧಿಕಗಳು, ವರ್ಗೀಕರಣ, ಕೋಡಿಂಗ್-ಡಿ-ಕೋಡಿಂಗ್, ರಕ್ತ ಸಂಬಂಧಗಳು, ದಿಕ್ಕುಗಳು, ಸ್ಥಾನಗಳು, ಹೊಂದಾಣಿಕೆ, ರ್‍ಯಾಂಕ್, ಅಕ್ಷರಮಾಲೆ ಸಮಸ್ಯೆಗಳು, ವೆನ್ ನಕ್ಷೆಗಳು, ಪಜಲ್ ಪರೀಕ್ಷೆ, ಹೇಳಿಕೆಗಳು ಮತ್ತು ಕಾರಣಗಳು)

೩. Basic Numeracy :
  ( ಸಂಖ್ಯಾ ಪದ್ಧತಿ, ಲ.ಸಾ.ಅ., ಮ.ಸಾ.ಅ, ಸರಳೀಕರಣ, ಪ್ರತಿಶತ ಕಂಡು ಹಿಡಿಯುವುದು, ಅನುಪಾತ, ಸರಾಸರಿ )

೪. Logical Reasoning  :
 ಹೇಳೀಕೆಗಳು ಮತ್ತು ನಿರ್ಣಯಗಳು, ಹೇಳಿಕೆಗಳು ಮತ್ತು ವಾದಗಳು, ಹೇಳಿಕೆಗಳು ಮತ್ತು ಊಹೆಗಳು, ಹೇಳಿಕೆಗಳು ಮತ್ತು ಕ್ರಿಯೆಗಳು, ಕಾರಣಗಳು ಮತ್ತು ಪರಿಣಾಮಗಳು, ಪರಿಸ್ಥಿತಿಯ ವಿಶ್ಲೇಷಣೆ)

೫. Data Interpretation :
        (ಟೇಬಲ್ ಚಾರ್ಟ್, ಬಾರ್ ಚಾರ್ಟ್ / ಗ್ರಾಫ್ಸ್, ಪೈ ಚಾರ್ಟ್, ಮಾಹಿತಿ ಅರ್ಥೈಸುವಿಕೆ )


ಈ ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು.

* ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು.

* ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.

* ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.

* ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ ಭಾವಲೋಕದಲ್ಲಿ ಓದುತ್ತಾ ಇರುವುವರು ಅವರು ಎಷ್ಟೇ ಗಂಟೆ ಓದಿದರೂ ಕೂಡಾ, ತಾವು ಯಾವುದು ಓದಿದ್ದು ಎಂಬುದು ಗೊತ್ತಿರುವುದಿಲ್ಲ.

* ಈ ಪರೀಕ್ಷೆಗೆ ಏಷ್ಟು ಗಂಟೆ ತಯಾರಿ ನಡೆಸಬೇಕು ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ನನ್ನ ಪ್ರಕಾರ ಕನಿಷ್ಠ ೧೨ ರಿಂದ ೧೪ ತಾಸು ಓದಬೇಕು. ಕೆಲವರಿಗೆ ಗಾಬರಿಯಾಗಬಹುದು. ಇದಕ್ಕಿಂತ ಕಡಿಮೆ ಅವಧಿಯನ್ನು ತೆಗೆದುಕೊಂಡರೆ, ವಿಷಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆನೋ ಎಂದು ಕೆಲವರು ಹೇಳುವ ಪ್ರಕಾರ ಎಷ್ಟು ಗಂಟೆ ಓದುವುದು ಮುಖ್ಯವಲ್ಲ ಎಷ್ಟು ವಿಷಯ ತಿಳಿದುಕೊಂಡೆವು ಎಂಬುವುದು ಮುಖ್ಯವಾಗುತ್ತದೆ. ಆದರೆ, ಅಧ್ಯಯನಕ್ಕೆ ಕೂಡುವ ಅವಧಿ ಹೆಚ್ಚಿದಂತೆ, ಸಹಜವಾಗಿ ಏಕಾಗ್ರತೆ ಹಾಗೂ ಅರ್ಥ ಮಾಡಿಕೊಳ್ಳುವುದು.

* ಸಾಮಾನ್ಯವಾಗಿ ಯಾವ ಸಮಯದಲ್ಲಿ ಓದಬೇಕು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಓದುತ್ತೇನೆ ಎಂಬುದು ಮುಖ್ಯವಲ್ಲ. ಯಾವುದೇ ಸಮಯದಲ್ಲಿ ಓದಿ ಆದರೆ, ಮನಸ್ಸು ಕೊಟ್ಟು ಅಧ್ಯಯನ ಮಾಡಿ. ಸಾಮಾನ್ಯವಾಗಿ ಇಂಥ ಪರೀಕ್ಷೆಗೆ ತಯಾರಿ ನಡೆಸುವವರು ರಾತ್ರಿಯೇ ಹೆಚ್ಚು ಅಧ್ಯಯನ ಮಾಡುತ್ತಾರೆ.

* ಈ ಪರೀಕ್ಷೆಗೆ ವಿಶೇಷ ತಯಾರಿ ಹಾಗೂ ಪರಿಶ್ರಮ ಬೇಕಾಗುವುದು. ಅದಕ್ಕಾಗಿ ಸಹನೆ ಇರಬೇಕು. ನಿರಂತರ ಓದುತ್ತಾ ಇದ್ದಾಗ, ಅದನ್ನು ಬಿಟ್ಟು ಓಡಿಹೋಗೋಣ ಎಂಬ ಮನಸ್ಸು ಬರುತ್ತದೆ. ಕೆಲವರು ೧೧ನೇ  ಹೆಜ್ಜೆವರೆಗೆ ಬಂದಿರುತ್ತಾರೆ. ಇನ್ನೊಂದು ಹೆಜ್ಜೆ ಇಟ್ಟರೆ, ಗುರಿ ಮುಟ್ಟಲು ಸಾಧ್ಯವಿರುತ್ತದೆ. ಅದನ್ನು ಗುರ್ತಿಸದೆ, ಸಹನೆ ಕಳೆದುಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ. ಓಡಿ ಹೋಗುತ್ತಾರೆ.

* ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ತಯಾರಿ ಮಾಡುವಾಗ ನಮ್ಮ ಓದು ಎಷ್ಟು ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯ ನಮಗೆ ಪ್ರೇರಣೆ ಹಾಗೂ ಸ್ಫೂರ್ತಿ. ಅದಕ್ಕಾಗಿ ಈಗಾಗಲೇ ಯಶಸ್ವಿಯಾದವರ ಸಂದರ್ಶನ ಓದಿ ಹಾಗೂ ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮನಸ್ಸು ಗಟ್ಟಿಯಾಗುತ್ತದೆ. ನಮ್ಮ ಸ್ಪರ್ಧಾ ಚಾಣಕ್ಯ ಪತ್ರಿಕೆಯಲ್ಲಿ ಪ್ರತಿ ತಿಂಗಳು ಸಾಧಕರ ಬಗ್ಗೆ ಪ್ರಕಟಿಸಿದ್ದೇವೆ. ಒಮ್ಮೆ ಓದಿ ನೋಡಿ. ಸಾಧಿಸಲು ಅವರು ತೆಗೆದುಕೊಂಡ ಸಮಯ, ಯಶಸ್ಸಿಗಾಗಿ ಪಟ್ಟ  ಪರಿಶ್ರಮ ಎಲ್ಲವೂ ಗೊತ್ತಾಗುತ್ತದೆ.

* ಓದುವಾಗ ಯಾವುದೇ ವಿಷಯ ತಿಳಿಯದಿದ್ದಾಗ ಗಾಬರಿಯಾಬೇಡಿ. ಎಲ್ಲರಿಗೂ ಎಲ್ಲಾ ವಿಷಯ ಗೊತ್ತಿರುವುದಿಲ್ಲ. ಯಾಕೆಂದರೆ ಯಾರೂ ಇಲ್ಲಿಯವರೆಗೆ ೧೦೦ಕ್ಕೆ ೧೦೦ ಅಂಕಗಳನ್ನು ತೆಗೆದುಕೊಂಡ ಉದಾಹರಣೆ ಇಲ್ಲ. ಕೆಲವರು ಒಂದೂ ಪ್ರಶ್ನೆ ಬರದಿದ್ದಾಗ ನಾನು ದಡ್ಡನೆಂಬ ಭಾವನೆ ಬೆಳೆಸಿಕೊಂಡು ಉತ್ಸಾಹ ಕಳೆದುಕೊಳ್ಳುತ್ತಾರೆ.

* ಕೆಲವರಿಗೆ ಈ ಪರೀಕ್ಷೆ ಎಂದರೆ ಪುಸ್ತಕಗಳನ್ನು ಸಂಗ್ರಹಿಸುವುದು ಎಂದು ತಿಳಿದುಕೊಂಡು ಎಲ್ಲಾ ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ, ಯವುದನ್ನು ಪೂರ್ಣವಾಗಿ ಓದುವುದಿಲ್ಲ. ಉತ್ತಮ ಪುಸ್ತಕಗಳು ಇದ್ದರೆ ಸಾಕು. ಮುಂದಿನ ಸಂಚಿಕೆಯಲ್ಲಿ ಕೆ.ಎ.ಎಸ್. ಪರೀಕ್ಷೆ ತಯಾರಿಗೆ ಇರುವ ಉತ್ತಮ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ.

* ಉನ್ನತ ಪರೀಕ್ಷೆ ಬರೆಯಬೇಕಾದರೆ ಅಧ್ಯಯನದ ಕೊಠಡಿಯು ಕೂಡ ಅಷ್ಟೇ ಉತ್ತಮವಾಗಿರಬೇಕು. ಅಲ್ಲಿಯ ವಾತಾವರಣ ಬಹಳ ಚೆನ್ನಾಗಿರಬೇಕು. ಒಂದು ವೇಳೆ ನೀವು ಇರುವ ರೂಮಿನಲ್ಲಿ ಎಲ್ಲರೂ ಕೆ.ಎ.ಎಸ್. ಆಕಾಂಕ್ಷಿಗಳು ಇದ್ದರೆ ಚೆಂದ. ಬೇರೆ ಪರೀಕ್ಷೆಗೆ ತಯರಾಗುವವರ ಜೊತೆ ಇರಬಾರದು. ಯಾಕೆಂದರೆ, ನಿಮ್ಮದೇ ಕೆ.ಎ.ಎಸ್. ವಾತಾವರಣ ಇರುವುದಿಲ್ಲ. ಹಾಗೂ ಸ್ಫೂರ್ತಿ ಉಂಟಾಗುವುದಿಲ್ಲ.

* ಬೇರೆಯವರು ಓದುವುದನ್ನು ನೋಡಿ, ಅವರ ಪುಸ್ತಕಗಳ ಸಂಗ್ರಹ ನೋಡಿ, ಅವರ ಚರ್ಚೆಯನ್ನು ನೋಡಿ ನೀವು ಗಾಬರಿಯಾಗಬೇಡಿ. ಯಾವತ್ತೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಓದುವಾಗ ನಿಮ್ಮದೇ ಶೈಲಿ ರೂಢಿಸಿಕೊಂಡು ಓದಬೇಕು.

* ಓದುವಾಗ ಮುಖ್ಯವಾದ ವಿಷಯಗಳನ್ನು ಕುರಿತು ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳುವುದು ಉತ್ತಮ. ಸಮಯ ಇರದಿದ್ದಾಗ ಮಾತ್ರ ಪುಸ್ತಕದಲ್ಲಿ ಅಂಡರಲೈನ್ ಮಾಡಿಕೊಳ್ಳಿ. ಇದರಿಂದ ವೇಗವಾಗಿ ಪುನರ್ ಅಧ್ಯಯನ ಮಾಡಲು ಹಾಗೂ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.

* ಇದಕ್ಕಾಗಿ ಗೆಳೆಯರ ಗುಂಪು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಏಕಾಂಗಿ ಓದಬೇಡಿ. ಗುಂಪು ಚರ್ಚೆ ಮಾಡುವಾಗ ಹೊಸ ಹೊಸ ವಿಷಯ ತಿಳಿಯುವುದು ಅಲ್ಲದೆ ಚರ್ಚೆ ಮಾಡಿದ ವಿಷಯವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.

* ಚರ್ಚೆ ಹರಟೆಯಾಗಬಾರದು. ಓದು ಆಯಾಸವಾಗಬಾರದು ಹಾಗೂ ನಿರಂತರ ಉತ್ಸಾಹ ನಿಮ್ಮಲ್ಲಿ ಇರಬೇಕಾದರೆ, ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಯಾದರೂ ಧ್ಯಾನ, ಪ್ರಾಣಾಯಾಮ ಹಾಗೂ ಯೋಗಾಸನ ಮಾಡಬೇಕು. ಇದರಿಂದ ನಮ್ಮ ದೇಹಕ್ಕೆ ಶುದ್ಧವಾದ ಆಮ್ಲಜನಕ ಪೂರೈಕೆಯಾಗುವುದಲ್ಲದೆ, ರಕ್ತ ಪರಿಚಲನೆ ನಿಯಮಿತಗೊಳ್ಳುವುದು. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ. ಪ್ರಾಮಾಣಿಕವಾಗಿ ನಿಮ್ಮನ್ನು ಪರೀಕ್ಷೆಯಲ್ಲಿ ತೊಡಗಿಸಿಕೊಂಡರೆ, ನಿಮ್ಮ ತಯಾರಿ ಉತ್ತಮವಾಗಿರುತ್ತದೆ. ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳದೆ, ಒಂದೇ ಮನಸ್ಸಿನಿಂದ ತಯಾರಿಯಲ್ಲಿ ತೊಡಗಿಸಿಕೊಳ್ಳಿ. ನಿಲ್ಲಬೇಡಿ, ಮುನ್ನುಗ್ಗಿರಿ, ಯಶಸ್ಸು ಸಿಗಲಿ.

* ನಿಮ್ಮದೇ ಆದ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಪ್ರಾರಂಭದಲ್ಲಿ ಟೈಮ್ ಟೇಬಲ್ ಪಾಲನೆ ಮಾಡದೇ ಹೋಗಬಹುದು. ಆದರೆ, ನೀವು ನಿರಂತರವಾಗಿ ಪಾಲನೆ ಮಾಡಿದಂತೆ ರೂಢಿಯಾಗುತ್ತದೆ. ಟೈಮ್ ಟೇಬಲ್ ಇಲ್ಲದಿದ್ದರೆ, ಒಂದು ವಿಷಯ ಹೆಚ್ಚು ಓದುತ್ತೀರಿ, ಇನ್ನೊಂದು ವಿಷಯ ಕಡಿಮೆ ಓದುತ್ತೀರಿ. ನಾನು ಮಾಡೇ ಮಾಡ್ತೀನಿ ಎಂಬ ವಿಶ್ವಾಸ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.