Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday 17 March 2013

ಹೀಗೊಂದು ವಿಭಿನ್ನ, ವಿಶೇಷ ಪತ್ರಿಕೆ `ಸ್ಪರ್ಧಾ ಚಾಣಕ್ಯ'


ಪ್ರಿಯ ಸ್ಪರ್ಧಾರ್ಥಿಗಳೇ,
          ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದಾ ಸಿದ್ಧತೆ ನಡೆಸುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಸ್ತತ ಹಲವಾರು ಪತ್ರಿಕೆಗಳು ನಿರತವಾಗಿರುವುದು ತಮಗೆಲ್ಲ ತಿಳಿದಿರುವ ಸಂಗತಿ. ಅವುಗಳಲ್ಲಿ ವಿಶಿಷ್ಟವಾದುದ್ದು ಹಾಗೂ ವಿನೂತನ ಪ್ರಯೋಗಗಳಿಗೆ ಹೆಸರಾಗಿರುವ `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ತಮಗೆ ಪರಿಚಯಿಸಬೇಕೆಂಬುದು ನನ್ನ ಉದ್ದೇಶ. `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ವಿಜಾಪುರ (ವಿಜಯಪುರ)ದ ಹೆಮ್ಮೆಯ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ `ಚಾಣಕ್ಯ ಕರಿಯರ್ ಅಕಾಡೆಮಿ' ಪ್ರತಿ ಪಾಕ್ಷಿಕಗೊಮ್ಮೆ ಪ್ರಕಟಿಸುತ್ತಿದೆ. ಪ್ರಚಲಿತ ಘಟನೆಗಳು, ಸಾಮಾನ್ಯ ಜ್ಞಾನ ವಿಭಾಗ, ಸಂಸ್ಥೆಯ ಸ್ಥಾಪಕ ಮುಖ್ಯಸ್ಥರಾದ ಹಾಗೂ ಪ್ರಧಾನ ಸಂಪಾದಕರಾದ ಶ್ರೀ ಎನ್.ಎಂ.ಬಿರಾದಾರ ಅವರು ಬರೆಯುವ `ಸಮಾಧಾನ ಅಂಕಣ' ಎಷ್ಟೋ ನೊಂದ, ದಾರಿಕಾಣದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ, ದಾರಿದೀಪವಾಗಿದೆ. ನಡೆದಾಡುವ ದೇವರೆಂದೆ ಜನಪ್ರಿಯರಾದ, ಅಸಂಖ್ಯಾತ ಜನರ ಆರಾಧ್ಯ ದೈವವಾದ ವಿಜಾಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ `ದಿವ್ಯ ಸಂದೇಶ' ಮತ್ತು ಖ್ಯಾತ ಶಿಕ್ಷಣ ತಜ್ಞರು ಮತ್ತು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶ್ರೀ ಡಾ. ಗುರುರಾಜ ಕರಜಗಿಯವರ `ವ್ಯಕ್ತಿತ್ವ ವಿಕಸನ' ಅಂಕಣ ಪ್ರಕಟವಾಗುತ್ತಿವೆ. ಇವಲ್ಲದೇ ತಾನಾಜಿ ಇಂಗಳೆ ಅವರ ಪ್ರಬಂಧ ಲೇಖನ, ಚಾಣಕ್ಯ ಕರಿಯರ್ ಅಕಾಡೆಮೆ ಉಪನ್ಯಾಸಕರಾದ ಶ್ರೀ ಬಿ.ಡಿ.ಪಾಟೀಲ ಅವರಿಂದ ಕನ್ನಡ ವಿಷಯದ ಮಾಹಿತಿ ಹಾಗೂ ಮತ್ತೋರ್ವ ಉಪನ್ಯಾಸಕರಾದ ಶ್ರೀ ಸಂತೋಷ್ ಕುಲಕರ್ಣಿ ಅವರಿಂದ ಗಣಿತ ವಿಷಯದ ಸಮಸ್ಯೆಗಳ ಬಿಡಿಸುವಿಕೆಯ ಲೇಖನ, ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಲೇಖನಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಹೀಗೆ ಹಲವಾರು ವೈವಿಧ್ಯಮಯ ವಿಷಯಗಳನ್ನು ಹೊತ್ತು ಪ್ರತಿ ಪಾಕ್ಷಕಕ್ಕೊಮ್ಮೆ ರಾಜ್ಯದ ಎಲ್ಲ ಭಾಗಗಳ ಪುಸ್ತಕ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ತಾವು ಕೂಡ ಖರೀದಿಸಿ ಒಮ್ಮೆ ಓದಿ ತಮ್ಮ ಅಮೂಲ್ಯ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ತಿಳಿಸಿ.
                                           - ಜ್ಞಾನಮುಖಿ
                                  (ಗುರುಪ್ರಸಾದ್ ಎಸ್. ಹತ್ತಿಗೌಡರ)
     ಪತ್ರಿಕೆಯ ವಿಳಾಸ
   ಸ್ಪರ್ಧಾ ಚಾಣಕ್ಯ ಪಾಕ್ಷಿಕ ಪತ್ರಿಕಾಲಯ
    ಮಲಘಾಣ ಬಿಲ್ಡಿಂಗ್, 3ನೇ ಮಹಡಿ, ಮೀನಾಕ್ಷಿ ಚೌಕ
     ಬಿಜಾಪುರ - 586101   ದೂರವಾಣಿ: 08352-240197

             ಕಾರ್ಯಾಲಯ 9900056218
 ಪ್ರಸರಣ: 9538038531
ಮಿಂಚಂಚೆ: - spardha_chanakya@yahoo.com

Thursday 14 March 2013

ಶಿಶುಮನೋವಿಜ್ಞಾನ ಮತ್ತು ವಿಕಸನ ಪಠ್ಯಕ್ರಮ

 ಪ್ರಿಯ ಸ್ಪರ್ಧಾರ್ಥಿಗಳೇ,
       ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪಠ್ಯಕ್ರಮದಲ್ಲಿ ಶಿಶು ಮನೋವಿಜ್ಞಾನ ಪಠ್ಯಕ್ರಮ ಅಳವಡಿಸಿರುವುದು ತಮಗೆಲ್ಲ ತಿಳಿದ ಸಂಗತಿ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಿದ್ಧವಾಗುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಲೆಂದು ಪಠ್ಯಕ್ರಮವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಶಿಶುಮನೋವಿಜ್ಞಾನ ಮತ್ತು ವಿಕಸನ ಪಠ್ಯಕ್ರಮ

ಮವಿನ ವಿಕಾಸ ಮತ್ತು ಕಲಿಕೆ

ಮಗುವಿನ ವರ್ತನೆಯನ್ನು ಅಧ್ಯಯನ ಮಾಡುವ ವಿಧಾನಗಳು

೧. ಅವಲೋಕನ
೨. ಸಂದರ್ಶನ
೩. ಮನೋವಿಜ್ಞಾನ ಪರೀಕ್ಷಣೆಗಳು

೨. ಮನೋವಿಕಾಸದಲ್ಲಿ ಅನುವಂಶೀಯತೆ ಮತ್ತು ಪರಿಸರದ ಪಾತ್ರ
೩. ಕಲಿಕಾ ಪರಿಕಲ್ಪನೆ
೪. ಕಲಿಕೆಯ ಮೂಲ ಸಿದ್ಧಾಂತಗಳು
   ಎ) ಅನುಬಂಧನಾ ಕಲಿಕೆ
   ಬ) ಒಲನೋಟ ಕಲಿಕೆ
   ಕ) ಜ್ಞಾನಾತ್ಮಕ ಕಲಿಕೆ (ಪಿಯಾಜೆ, ಬ್ರೂನರ್, ವೈಗೋಟಸ್ಕಿ)

೫. ಕಲಿಕೆ ಮತ್ತು ವಿಕಾಸಗಳ ಸಂಬಂಧಗಳು
   ಕಲಿಕಾರ್ಥಿಯ ಸಿದ್ಧತಾ ಪರಿಪಕ್ವತೆ

೬. ಫಿಯಾಜೆ, ಕೋಹ್ಲರ್, ವೈಗೋಟಸ್ಕಿ (ಸಂರಚನಾತ್ಮಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನ)

೭. ಮಗುವಿನ ಪರಿಕಲ್ಪನೆ ಅಭಿವೃದ್ಧಿಯಾತ್ಮಕ ಮತ್ತು ಮಗು ಕೇಂದ್ರಿತ ಶಿಕ್ಷಣ
    ಅ) ಚಟುವಟಿಕೆ ಆಧಾರಿತ ಬೋಧನಾ ಮತ್ತು ಕಲಿಕಾ ಪದ್ಧತಿಗಳು.
    ಬ್) ಸಮಸ್ಯೆ ಆಧಾರಿತ ಕಲಿಕೆ

೮. ಬುದ್ಧಿಶಕ್ತಿ ಸಂರಚನೆಯ ವಿಮರ್ಶಾತ್ಮಕ ದೃಷ್ಟಿಕೋನ (ಸ್ಫಿಯರ್‌ಮನ್, ಗಿಲ್ಫೋರ್ಡ್, ಥರ್‌ಸ್ಟನ್, ಗಾರ್ಡ್‍ನರ್ ಮರ್ಫಿ)

೯. ಭಾಷೆ ಮತ್ತು ಚಿಂತನೆ
   ಫಿಯಾಜೆ, ಜೋಮಸ್ಕಿ ಮತ್ತು ವೈಗೋಟಸ್ಕಿಯವರ ಮೂಲ ದೃಷ್ಟಿಕೋನಗಳು

೧೦. ಸಾಮಾಜಿಕ ಸಂರಚನೆಯಾಗಿ ಲಿಂಗಭಿನ್ನತೆ
  ಲೈಂಗಿಕ ಭಿನ್ನತೆಗಳ ಪಾತ್ರ, ಲಿಂಗ ಪಕ್ಷಪಾತದ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು

೧೧. ಕಲಿಕಾರ್ಥಿಗಳಲ್ಲಿ ವೈಯುಕ್ತಿಕ ಭಿನ್ನತೆಗಳು, ಸಮುದಾಯ, ಧರ್ಮ, ಜಾತಿ, ಭಾಷೆ, ಲಿಂಗ ಇವುಗಳ ಹಿನ್ನೆಲೆಯಲಿ ಕಲಿಕಾರ್ಥಿಗಳಲ್ಲಿ ಇರುವ ವ್ಯತ್ಯಾಸಗಳು

೧೨. ಕಲಿಕಾ ದತ್ತಕಾರ್ಯ ಮತ್ತು ಕಲಿಕಾ ಮೌಲ್ಯಮಾಪನ ಇವುಗಲ ಭಿನ್ನತೆಗಳು- ಶಾಲಾಧಾರಿತ ಮೌಲ್ಯಮಾಪನ

೧೩. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ
    ಮುಂಗಾಣಿಕೆಗಳು ಮತ್ತು ಅಭ್ಯಾಸಗಳು

೧೪. ಕಲಿಕಾರ್ಥಿಯ ಸಾಧನೆಯ ಮೌಲ್ಯಮಾಪನ
    ಶ್ರೇಣಿ ಕೂಡುವಿಕೆ

೧೫. ವ್ಯಕ್ತಿತ್ವ ವಿಕಸನ
     ವ್ಯಕ್ತಿತ್ವದ ಪರಿಕಲ್ಪನೆ ಮತ್ತು ಮೂಲ ಉಪಗಮಗಳು ( ಮನೋವಿಶ್ಲೇಷಣೆ ಮತ್ತು ಗುಣ ಸಿದ್ಧಾಂತ) ಸಮಾಯೋಜನಾ ತಂತ್ರಗಳು)

ಕಲಿಕೆ ಮತ್ತು ಕಲಿಕಾ ತಂತ್ರಗಳು

೧. ಮಕ್ಕಳು ಹೇಗೆ ಕಲಿಯುತ್ತಾರೆ ಮತ್ತು ಯೋಚಿಸುತ್ತಾರೆ.
    ಶಾಲಾ ಸಾಧನೆಯಲ್ಲಿ ಮಕ್ಕಳು ಹೇಗೆ ಮತ್ತು ಏಕೆ ಅಪಯಶಸ್ಸು ಹೊಂದುತ್ತಾರೆ?

೨. ಕಲಿಕೆ ಮತ್ತು ಸಾಧನೆಯಲ್ಲಿ ವಿವಿಧ ಕಾರಕಾಂಶಗಳ ಪ್ರಭಾವಗಳು

೩. ಬೋಧನಾ ಮತ್ತು ಕಲಿಕೆಗಳ ಮೂಲ ಪ್ರಕ್ರಿಯೆಗಳು
    ಎ) ಮಕ್ಕಳ ಕಲಿಕಾ ತಂತ್ರಗಳು
    ಬಿ) ಸಾಮಾಜಿಕ ಚಟುವಟಿಕೆಯಾಗಿ ಕಲಿಕೆ
    ಸಿ) ಸಾಮಾಜಿಕ ಸಂಬಂಧಗಳ ಕಲಿಕೆ

೪. ವೈಜ್ಞಾನಿಕ ಅನ್ವೇಷಕನಾಗಿ ಮತ್ತು ಸಮಸ್ಯಾ ಪರಿಹಾರಕನಾಗಿ ಮಗು ( ಫಿಯಾಜೆ, ಬ್ರೂನರ್ ಮತ್ತು ವೈಗೋಟಸ್ಕಿಯವರ ದೃಷ್ಟಿಕೋನಗಳು)

೫. ಮಗುವಿನಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಇರುವ ಪರ್ಯಾಯ ಪರಿಕಲ್ಪನೆಗಳು
   ಕಲಿಕಾ ಪ್ರಕ್ರಿಯೆಯಲ್ಲಿ ಕಲಿಕಾರ್ಥಿಯ ದೋಷಗಳನ್ನು ಗುರುತಿಸುವ ಮಹತ್ವ (ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮಗುವಿನ ಸ್ವಯಂ ಲಕ್ಷಣಗಳು)

೬. ಜ್ಞಾನಾತ್ಮಕ ಮತ್ತು ಸಂವೇಗಾತ್ಮಕ ಲಕ್ಷಣಗಳು
   ಸಂವೇಗಗಳು
    ಮೂಲ ಸಂವೇಗಗಳು
     ಬಾಲ್ಯಾವಸ್ಥೆಯ ಸಂವೇಗಗಳ ಲಕ್ಷಣಗಳು
    ಸಂವೇಗಗಳ ವಿಕಾಸ (ಬ್ರಿಡ್ಜ್‍ರವರ ಪ್ರಕಾರ) ಜ್ಞಾನಾತ್ಮಕ (ಚಿಂತನೆ, ತರ್ಕ, ಸಮಸ್ಯೆ ಪರಿಹಾರ ಮತ್ತು ಅನ್ವೇಷಣೆ)

೭. ಅಭಿಪ್ರೇರಣೆ ಮತ್ತು ಕಲಿಕೆ
   ಎ) ಕಲಿಕೆಯ ಮೇಲೆ ಅಭಿಪ್ರೇರಣೆಯ ಪ್ರಭಾವ
   ಬಿ) ಮಾಸ್ಲೋರವರ ಅಭಿಪ್ರೇರಣಾ ಶ್ರೇಣಿ

೮. ಕಲಿಕೆಗೆ ಕೊಡುಗೆಯಾಗಿ ವಿವಿಧ ಕಾರಕಾಂಶಗಳು
 ವೈಯುಕ್ತಿಕ ಮತ್ತು ಪರಿಸರ

ಕೃಪೆ : ಸ್ಪರ್ಧಾ ಚಾಣಕ್ಯ ಪಾಕ್ಷಿಕ ಪತ್ರಿಕೆ

Wednesday 6 March 2013

ಪ್ರಕೃತಿ ಚಿಕಿತ್ಸೆ



 ಈ ಸಮಕಾಲೀನ ಸಂದರ್ಭದಲ್ಲಿ ಆಸ್ಪತ್ರೆಗಳು, ರೋಗಿಯು ತನ್ನ ದೇವರನ್ನು ಕಾಣುವ ಆಲಯಗಳಾಗಿ ಉಳಿದಿಲ್ಲ. ಹಾಗೊಂದು ವೇಳೆ ಇರುವುದಾದರೆ ಅವನು ಅತ್ಯಂತ ದುಬಾರಿಯಾದ ವೈಭವೋಪೇತ ವೈದ್ಯಕೀಯ ಚಿಕಿತ್ಸೆಯ ವೆಚ್ಚವನು ಭರಿಸಲು ಸಮರ್ಥನಾಗುವುದಾದರೆ ಮಾತ್ರ. ಭಾರತದ ಬಹುಪಾಲು ಜನತೆಯು ಈ ದುಬಾರಿ ಚಿಕಿತ್ಸೆಯ ಅವಕಾಶದಿಂದ ವಂಚಿತವಾಗಿದೆ. ಭಾರತದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾದ ಆಯುರ್ವೇದವೂ ಸಹ ಅತಿ ವೆಚ್ಚದ ಪ್ಯಾಕೇಜುಗಳಲ್ಲಿ ಬರುತ್ತಿದ್ದು ಸಾಮಾನ್ಯ ಜನತೆಯಿಂದ ದೂರವಾಗುವ ಸೂಚನೆಗಳು ಕಂಡುಬರುತ್ತಿವೆ. ಭಾರತವು ತನ್ನ ಯಾವ ಪ್ರಾಕೃತಿಕ ಚಿಕಿತ್ಸಾ ವಿಧಾನದಿಂದ ಪ್ರಸಿದ್ಧಿಯನ್ನು ಪಡೆದಿತ್ತೋ ಅಂತಹ ಎಲ್ಲ ಸಂಬಂಧವನ್ನು ಇಂದಿನ ಆಧುನಿಕ ವಿಜ್ಞಾನವು ಕಡಿದು ಹಾಕುತ್ತಿರುವ ಸಂದರ್ಭದಲ್ಲಿಯೂ ಸಹ ಪ್ರಸ್ತುತ ಜಾರ್ಖಂಡದ ಬುಡಕಟ್ಟು ಜನರು ತಮ್ಮ ಪ್ರಾಚೀನ ಪರಂಪರೆಯಿಂದ ಬಂದಿರುವ ವೈದ್ಯಕೀಯ ತಿಳಿವಳಿಕೆಯನ್ನು ರೋಗಗಳೊಂದಿಗೆ ಹೋರಾಡಲು ಅತ್ಯಂತ ಸಹಜ ರೀತಿಯ ಹೆಚ್ಚು ವೆಚ್ಚವಿಲ್ಲದ ವಿಧಾನಗಳನ್ನು ಉಪಯೋಗಿಸುವುದನ್ನು ಮುಂದುವರೆಸಿದ್ದಾರೆ.

        ಹೊಡೊಪತಿಯು ಒಂದು ವಿಶಿಷ್ಟ ಪ್ರಕಾರದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಜಾರ್ಖಂಡ ರಾಜ್ಯದ ಬುಡಕಟ್ಟು  ಜನಾಂಗದವರಿಗೆ ಸೇರಿದ್ದಾಗಿದೆ. ಇದು ಅನೇಕ ಪ್ರಾಕೃತಿಕ ಗಿಡಮೂಲಿಕೆಗಳನ್ನು ಹಿಂಡಿ ತೆಗೆದ ರಸಮೂಲಿಕೆಗಳಿಂದ ತಯಾರಿಸಲ್ಪಟ್ಟು, ರೊಗಿಯ ಆರೋಗ್ಯದ ಮೇಳೆ ಯಾವುದೇ ಅಡ್ಡ ಪರಿಣಾಮಗಳನ್ನುಂಟು ಮಾಡದೆ, ಹಲವಾರು ರೋಗಗಳನ್ನು ಗುಣಪಡಿಸುವುದೆಂದು ನಂಬಲಾಗಿದೆ. ಈ ವಿಶಿಷ್ಟ ಪ್ರಾಚೀನ ವೈದ್ಯಕೀಯ ಜ್ಞಾನದ ವೈದ್ಯರಾದ ಡಾ|| ಪಿ.ಪಿ. ಹೆಮ್ ಬ್ರಾಮ್‍ರವರ ಅಭಿಪ್ರಾಯದಂತೆ, "ಮೂಲನಿವಾಸಿಗಳಲ್ಲಿ ಇರುವ ಜನ್ಮ ಸಹಜವಾದ ಗುಣವು ಔಷಧೀಯ ಗಿಡಮೂಲಿಕೆಗಳನ್ನು ಗುರುತಿಸಲು ಅವಕಾಶ ಮಾಡಿಕೊಡುತ್ತದೆ. ಜಾರ್ಖಂಡ ರಾಜ್ಯವು ಸುಮಾರು ಸಾವಿರದ ಇನ್ನೂರು ಪ್ರಕಾರದ, ಸಸ್ಯ ಸಂಬಂಧಿತವದ ವಸ್ತಿ ದ್ರವವನ್ನು ಹೊಂದಿರುವ ಏಕೈಕ ರಾಜ್ಯವಾಗಿ ಮೆರೆದಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳು ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿವೆ. ಮಲೇರಿಯಾ ರೋಗದಿಂದ ಕಾಲಾ ಅಝಾರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ. " ಡಾ|| ಹೆಮ್ ಬ್ರಾಮ್‌ರವರು ಹೊಡೊಪತಿಯೂ ಸಹ ತೀವ್ರತರ ರೋಗಗಳಾದ ಕ್ಯಾನ್ಸರ್ ಮತ್ತು ಏಡ್ಸ್‍ನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಪಡಿಸುವುದೆಂದು ನಂಬುತ್ತಾರೆ. ಅವರು ಸ್ವತಃ ಕ್ಷಯ, ಮಲೇರಿಯಾ, ಅನೀಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಚರ್ಮರೋಗ ಮತ್ತು ಗಂಟುಗಳಿಂದ ತೀವ್ರವಾಗಿ ಬಳಲುತ್ತಿದ್ದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಿದರು.

      ಡಾ|| ಹೆಮ್ ಬ್ರಾಮ್‍ರವರು ತಮ್ಮ ಒಂದು ಉಪನ್ಯಾಸದಲ್ಲಿ ತಾವು ಔಷಧಗಳಲ್ಲಿ ಉಪಯೋಗಿಸುವ ವಸ್ತುಗಳ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೌಹಾಚಾಲ್ ಬಾರ್ ಮತ್ತು ಗುಲ್ಲಾರ್ ವೃಕ್ಷಗಳ ತೊಗಟೆಗಳನ್ನು ಹಿಂದಿ ತೆಗೆದ ರಸದಿಂದ ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತಾರೆ. ಕ್ಷಯರೋಗಕ್ಕಾಗಿ ಅವರು ಮೊಟ್ಟೆಯ ಹಳದಿಭಾಗ, ಹಲಸಿನ ಹಣ್ಣು ಮತ್ತು ಮಾಲ್ ಕಂಗಿನಿ ಬಳ್ಳಿಯ ಎರಡು ಹನಿಗಳನ್ನು ಸೇರಿಸಿ ತಯಾರಿಸಿದ ಔಷಧವನ್ನು ಬಳಸುತ್ತಾರೆ ಮತ್ತು ಕಾಲಾ ಅಝಾರ್ ರೋಗವನ್ನು ಪುನಾರ್ಣವ ಬೇರುಗಳು ಮತ್ತು ಚಾರೈಗೊಡ ಚಕ್ಕೆಯ ರಸಗಳಿಂದ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.

              ಜಾರ್ಖಂಡದಲ್ಲಿರುವ ಅತ್ಯಂತ ದಟ್ಟವಾದ ಸಸ್ಯವರ್ಗವು ಶ್ರೇಷ್ಠವಾದ ಔಷಧೀಯ ಗುಣಗಳಿಂದ ಕೂಡಿದೆ. ಮೂಲನಿವಾಸಿ ಜನಾಂಗವು ದೇಸಿಯ ಆಯುರ್ವೇದ ಪದ್ಧತಿಯಿಂದ ರೋಗಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ತಮ್ಮ ಪೂರ್ವಜರಿಂದ ಪಡೆದದ್ದಾಗಿದೆ. ಕಾಲಕ್ರಮೇಣ ಜನರು ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ತೊರೆದು, ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ಪದ್ಧತಿಯು ತನ್ನ ಹಿಂದಿನ ಗರಿಮೆಯನ್ನು ಕಳೆದುಕೊಳ್ಳುತ್ತಿದೆ. ಡಾ|| ಹೆಮ್ ಬ್ರಾಮ್‍ರವರು ಈ ಪ್ರಾಚೀನ ಪದ್ಧತಿಯನ್ನು ನವೀನಗೊಳಿಸಿ, ಸ್ಥಳೀಯ ಲಾಭರಹಿತ ಸಂಸ್ಥೆಗಳಾದ 'ಹೊಡೂಪತಿ ಸಾಂಸ್ಕೃತಿಕ ಔಷಧ ಸಂಶೋಧನಾ ಮತ್ತು ವಿಕಾಸ ಕೇಂದ್ರ' ಹಾಗೂ `ಫುಲಿನ್ ಮಹಿಳಾ ಚೇತನ ವಿಕಾಸ ಕೇಂದ್ರಗಳ ಮೂಲಕ ಹೊಡೊಪತಿ ಜನಾಂಗದ ಮಹಿಳೆಯರಿಗೆ ತರಬೇತಿಯನ್ನು ಕೊಡುವುದರ ಮೂಲಕ ಗ್ರಾಮೀಣ ಜನರಿಗೆ ಮತ್ತೆ ಪರಿಚಯಿಸಿದರು.

ಉಗ್ರವಾದ ಮತ್ತು ಭಾರತದ ಭದ್ರತಾ ವ್ಯವಸ್ಥೆ


         "ಹಿಂಸಾತ್ಮಕ ಮಾರ್ಗದ ಮೂಲಕ ಗುರಿ ಈಡೇರಿಸಿಕೊಳ್ಳುಇವ ಯತ್ನವನು ಉಗ್ರವಾದ" ಎನ್ನಬಹುದು. ಇಂಥ ಯತ್ನಗಳು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ನಡೆಯುತ್ತವೆ. ಇದು ಭಾರತದ ತುಂಬಾ ಹರಡಿ ಅಮಾಯಕ ಜನರ ಜೀವ ಮತ್ತು ಆಸ್ತಿ-ಪಾಸ್ತಿಗಳ ಮಾರಣ ಹೋಮ ಮಾಡುತ್ತಿರುವುದು ತುಂಬಾ ಶೋಚನೀಯ ಸ್ಥಿತಿ ತಲುಪಿದೆ. ಇಂಥ ಯತ್ನಗಳ ಹಿಂದೆ ಧರ್ಮ, ರಾಜಕೀಯ, ಹಣ, ಪ್ರತೀಕಾರ, ಕೋಮು ದ್ವೇಷ ಹೆಚ್ಚಿಸುವ, ಅಧಿಕಾರ ಗಿಟ್ಟಿಸಿಕೊಳ್ಳುವ ಉದ್ದೇಶಗಳನ್ನು ಗುರುತಿಸಬಹುದು.

 "ಕೊಲ್ಲು ಅಥವಾ ಕೊಲ್ಲಲ್ಪಡು" ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ತನ್ನ ದೈತ್ಯ ಹಿಡಿತದ ಮೂಲಕ ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವಂತಹ ದುಷ್ಕೃತ್ಯಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂಥ ಉಗ್ರರ ದಾಳಿಗಆಳು ಕೇವಲ ಯಾವುದೇ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೇಶದಲ್ಲಿರುವ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸರಣಿಯೋಒಪಾದೇಯಲ್ಲಿ ನಡೆಯುತ್ತಿರುವುದು ದೇಶದ ಜನತೆಗೆ ಆತಂಕ ಸೃಷ್ಟಿಸಿದೆ.

      ಉಗ್ರವಾದ ಎಂಬುವುದು ಮಾನವ ಕುಲಕ್ಕೆ ಅಂಟಿದ ಶಾಪ. ನಾಗರಿಕ ಸಮಾಜ ನೆಮ್ಮಂದಿಯಿಂದಿರಲು ಬಿಡದ ಒಂದು ಬಹುರೂಪಿ. ಜನರ ಮಾರಣಹೋಮ ಮಾಡುವಂಥ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಇಂತಹ ಉಗ್ರವಾದ ದುಷ್ಕೃತ್ಯಗಳು ಇಂದು ಬಹುತೇಕ ಜನದಟ್ಟಣೆ ನಗರಗಳಲ್ಲೇ ಸಂಭವಿಸುತ್ತಿವೆ. ದೆಹಲಿ, ಮುಂಬಯಿ, ಜೈಪುರ, ಅಹಮದಾಬಾದ್, ಬೆಂಗಳೂರು, ಪುಣೆ, ಹೈದ್ರಾಬಾದ್ ಇತ್ಯಾದಿ ಓಡಾಡುವ ಸ್ಥಳಗಳಲ್ಲಿ ಅಂದರೆ ಸರ್ಕಾರಿ ಕಚೇರಿಗಳು, ಹೊಟೇಲಗಳು, ಕೋರ್ಟ್ ಆವರಣ, ದೇವಾಲಯ ಆವರಣ, ವಾಣಿಜ್ಯ ಕಟ್ಟಡಗಳ ಪ್ರದೇಶಗಳಲ್ಲಿ ನಡೆದು ಸಾವಿರಾರು ಜನರ ಮಾರಣಹೋಮ ಮಾಡಿ,ಕ್ ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿವೆ.

ಉಗ್ರರ ದಾಳಿ ಹೆಚ್ಚುವುದಕ್ಕೆ ಕಾರಣಗಳು:

೧. ಭಯೋತಾದನೆ ಕೃತ್ಯಗಳ ತನಿಖೆಯಲ್ಲಿ ನಿಧಾನಗತಿ.

೨. ಭಯೋತ್ಪಾದನಾ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ನೀತಿ.

೩. ಉಗ್ರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡದೇ ಇರುವುದು.

ಭಾರತದಲ್ಲಿ ನಡೆದ ಪ್ರಮುಖ ಉಗ್ರವಾದ ಅಟ್ಟಹಾಸಗಳುಲ್:

* ಮಾರ್ಚ್ ೧೩, ೧೯೯೩ - ಮುಂಬೈನಲ್ಲಿ ಬಾಂಬ್ ಸ್ಫೋಟ್. ೨೫೦ ಜನರ ಸಾವು.
* ಡಿಸೆಂಬರ್ ೧೩, ೨೦೦೧ - ಸಂಸತ್ ಮೇಲೆ ಉಗ್ರರ ದಾಳಿ. ೧೧ ಜನರ ಸಾವು.
* ಮೇ ೧೩, ೨೦೦೮ - ರಾಜಸ್ಥಾನದ ಜೈಪುರದಲ್ಲಿ ಬಾಂಬ್ ಸ್ಫೋಟ್. ೬೮ ಜನರ ಸಾವು.
* ಜುಲೈ ೨೬, ೨೦೦೮ - ಗುಜರಾತ್ ಅಹಮದಾಬಾದ್‍ನಲ್ಲಿ ಬಾಂಬ್ ಸ್ಫೋಟ. ೫೭ ಜನರ ಸಾವು.
* ನವೆಂಬರ್ ೨೬, ೨೦೦೮ - ಮುಂಬೈನ ತಾಜ್ ಮತ್ತು ಓಬೆರಾಯ್ ಹೊಟೆಲ್‍ಗಳ ಮೇಲೆ ಉಗ್ರರ ದಾಳಿ. ೧೬೬ ಜನರ ಸಾವು.

* ಜುಲೈ ೧೩, ೨೦೧೧ -  ಮುಂಬೈನ ದಾದರ್ ಮತ್ತು ಜವೇರಿ ಬಜಾರ್‌ಗಳಲ್ಲಿ ಸರಣಿಬಾಂಬ್ ಸೊಫೋಟ. ೨೧ ಜನರ ಸಾವು.
* ಇತ್ತೀಚೆಗೆ ಫೆಬ್ರವರಿ ೨೧, ೨೦೧೩ - ಹೈದರಾಬಾದ್‍ನ ದಿಲ್‍ಸುಖ್ ನಗರದಲ್ಲಿ ಸರಣಿ ಬಾಂಬ್ ಸ್ಫೋಟ. ೧೬ ಜನರ ಸಾವು.

          ಇವೆಲ್ಲ ಉಗ್ರರು ನಡೆಸಿದ ಬಾಂಬ್ ಸ್ಫೋಟ ಕೃತ್ಯಗಳನ್ನು ಗಮನಿಸಿದರೆ ಭಾರತದಲ್ಲಿನ ಭದ್ರತೆ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಇವೇ ಸಾಕ್ಷಿ ಎಂದು ಹೇಳಬಹುದು. ಏಕೆಂದರೆ ಇವತ್ತಿನ ದಿನಮಾನಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದದಂತಹ ನೆರೆ ರಾಷ್ಟ್ರಗಳು ಕುಮ್ಮಕ್ಕು ನೀಡುತ್ತಿರುವ ಸಂಗತಿ ತಿಳಿದುಬರುತ್ತದೆ. ಜಗತ್ತಿನ ದೊಡ್ಡಣ್ಣವೆಂದೇ ಖ್ಯಾತವಾದ ಅಮೇರಿಕ ದೇಶಕ್ಕೆ ಬೇಕಾಗಿರುವ ಪಾಕಿಸ್ತಾನದಲ್ಲಿ ನೆಲೆಸಿರುವ ಹಫೀಜ್ ಮಹ್ಮದ್ ಸಯೀದ್. ಈ ಉಗ್ರರನ್ನು ಹುಡುಕಿ ಕೊಟ್ಟವರಿಗೆ ಆ ದೇಶ ಸುಮಾರು ೫೦ ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಆದರೂ ಆ ಉಗ್ರ ಇನ್ನು ಕೈಗೆ ಸಿಗುತ್ತಿಲ್ಲ. ಇದು ಅಮೇರಿಕಾಕ್ಕೆ ತಲೆ ನೋವಾಗಿದೆ.

ಉಗ್ರ ನಿಗ್ರಹಕ್ಕೆ ಕಾನೂನು:

       ಉಗ್ರವಾದ ನಿಗ್ರಹ ಕುರಿತು ಇನ್ನೂ ಸಮಗ್ರವಾದ ಕಾನೂನು ಜಾರಿ ಸಾಧ್ಯವಾಗಿಲ್ಲ. ಟಾಡಾ, ಪೋಟಾದಂತಹ ಕಾನೂನು ಜಾರಿಯಾದರೂ ಅದು ಸದ್ಬಳಕೆ  ಆಗಿದ್ದಕ್ಕಿಂತ ದುರ್ಬಳಕೆಯಾಗಿದ್ದೇ ಹೆಚ್ಚು ಎಂಬ ಆರೋಪ ಕೇಳಿಬರುತ್ತಿದೆ. ಇದೀಗ ಕೇಂದ್ರ ಸರ್ಕಾರ ಎನ್.ಸಿ.ಟಿ.ಸಿ. ಜಾರಿಗೆ ಮುಂದಾದರೂ, ಅದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಉಗ್ರ ಚಟುವಟಿಕೆ ತಡೆಗಟ್ಟುವ ಸಾಹಸವನ್ನು ಅಧಿಕಾರ ರೂಢ ಸರ್ಕರಗಳು, ಆಲೋಚನವಂತಹ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ ಮೆಟ್ಟಿ ನಿಂತು ಕಾರ್ಯ ನಿರ್ವಹಿಸಬೇಕು. ಆಗ ಉಗ್ರವಾದಿಗಳ ಬೇರು ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟಗಳು ಕಠಿಣ ಕಾನೂನು ಜಾರಿಗೆ ಅಡ್ಡಿಯಾಗಿವೆ. ಇನ್ನೂ ಯ್ ಆವುದೇ ಪ್ರಕರಣಗಲಲ್ಲಿ ಆರೋಪ ಪಟ್ಟಿ ಸಲ್ಲಿಸಲು ಕಾಲ ಮಿತಿ ನಿಗದಿ ಮಾಡಲಾಗಿದೆ. ಆದರೆ ವಿಚಾರ ನಡೆಸಲು ನ್ಯಾಯಾಲಯಗಳಿಗೆ ಯಾವುದೇ ಕಾಲ ಮಿತಿಯಿಲ್ಲ. ಹೀಗಾಗಿ ಕಾನೂನಿನಲ್ಲಿ ಇರುವ ಲೋಪಗಳೇ ಕಾನೂನಿನ ಸಮರ್ಪಕ ಜಾರಿಗೆ ಅಡ್ದಿಯಾಗಿವೆ ಎನ್ನಲಾಗಿದೆ.

          ಒಟ್ಟಾರೆಯಾಗಿ ಭಾರತದಲ್ಲಿ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪಾಕ್ ಉಗ್ರ ಅಜ್ಮಲ್ ಕಸಬ್ ಮತ್ತು ಸಂಸತ್ ದಾಳಿ ನಡೆಸಿದ ಅಫ್ಜಲ್‍ಗುರು ತರನಾಗಿ ಗಲ್ಲಿಗೇರಿಸಿದರೆ ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ತಡೆ ತರಬಹುದಾಗಿದೆ. ಇದು ದೇಶವನ್ನಾಳುವ ಸರ್ಕಾರ ಗಮನಿಸಬೇಕು. ಆಗ ಮಾತ್ರ ಭಾರತದಲ್ಲಿ ಉಗ್ರ ಚಟುವಟಿಕೆಗಳು ನಿಲ್ಲಬಹುದು.


           - ತಾನಾಜಿ ಇಂಗಳೆ
             ಸ್ಪರ್ಧಾ ಚಾಣಕ್ಯ


 ಬೆರಳಚ್ಚಿಸಿದವರು : ಜಿ.ಎಸ್.ಹತ್ತಿಗೌಡರ