Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday, 12 November 2017

ಐ.ಎ.ಎಸ್. ಆಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಸದವಕಾಶವಾಗಿದೆ.

ಐ.ಎ.ಎಸ್. ಆಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಸದವಕಾಶವಾಗಿದೆ. ಪಾಲ್ಗೊಳ್ಳಿ

Monday, 22 May 2017

KAS Achiever speech

ಕೆ.ಎ.ಎಸ್. ಪರೀಕ್ಷೆಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಲೆಂಬ ಉದ್ದೇಶದಿಂದ ಈ ವಿಡಿಯೋ ಲಿಂಕ್ ಇಲ್ಲಿ ನೀಡುತ್ತಿದ್ದೇನೆ.
ಶ್ರೀ ಪುಂಡಲೀಕ್ ಮಾನವರ ಅವರು ಇತ್ತೀಚಿಗೆ ಬಂದ ಕೆ.ಎ.ಎಸ್. ಫಲಿತಾಂಶದಲ್ಲಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ಆಯ್ಕೆಯಾಗಿದ್ದು ನಿನ್ನೆ (ದಿನಾಂಕ 21/5/2017) ನಡೆದ ‘ಕೆ.ಎ.ಎಸ್. ಉಚಿತ ಕಾರ್ಯಾಗಾರ’ (ಚಾಣಕ್ಯ ಕರಿಯರ್ ಅಕಾಡೆಮಿಯ ಶ್ರೀ ಎನ್.ಎಂ.ಬಿರಾದಾರ ಗುರುಗಳ ನೇತೃತ್ವದಲ್ಲಿ ನಡೆದ ಕಾರ್ಯಾಗಾರ)ದಲ್ಲಿ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
ಅದರ ವಿಡಿಯೋ ಲಿಂಕ್ ಕೆಳಗಿದೆ. ಕ್ಲಿಕ್ ಮಾಡಿ. 
https://www.youtube.com/watch?v=aNfvzze8_Ok&t=18s

- ಗುರುಪ್ರಸಾದ್ ಎಸ್ ಹತ್ತಿಗೌಡರ

Saturday, 11 February 2017

ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರಿಲ್ಲ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈಗಾಗಲೇ ೪-೫ ಕಂಪ್ಯೂಟರ್‌ಗಳನ್ನು ಕೊಡಲಾಗಿದೆ. ಆದರೆ ಈ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಹೇಳುವವರು ಯಾರೊಬ್ಬರೂ ಶಿಕ್ಷಕರಿಲ್ಲ. ಇದರಿಂದ ಹಳ್ಳಿಯ ಮಕ್ಕಳಿಗೆ ಇನ್ನೂ ಕಂಪ್ಯೂಟರ್ ಜ್ಞಾನವು ಏನೆಂಬುದು ಗೊತ್ತೇ ಇಲ್ಲ. ದಯಮಾಡಿ ಸಂಬಂಧಪಟ್ಟ ಮುಖ್ಯೋಪಾಧ್ಯಾಯರು, ಸಿ.ಆರ್.ಪಿ.ಗಳು, ಅಲ್ಲಿರುವ ಗ್ರಾಮ ಪಂಚಾಯಿತಿ, ತಾಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಂ.ಎಲ್.ಎ ಹಾಗೂ ಎಂ.ಪಿ. ಇದನ್ನು ತತಕ್ಷಣ ಗಣನೆಗೆ ತೆಗೆದುಕೊಂಡು ಪ್ರತಿ ಶಾಲೆಗಳೀಗೆ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಕೊಡುವುದರಿಂದ ಮುಂದೆ ಅವರಿಗೆ ಈ ಕಂಪ್ಯೂಟರ್ ಜ್ಞಾನವು ಉಪಯೋಗವಾಗುತ್ತದೆ.  ಇದರಿಂದ ತಂತ್ರಜ್ಞಾನದ ಕ್ಷೇತ್ರದಲ್ಲಿ ಹಳ್ಳಿಯ ಮಕ್ಕಳಿಂದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಏಕೆಂದರೆ, ಇದು ಕಂಪ್ಯೂಟರ್ ಯುಗ. ದಯಮಾಡಿ ಮುಗ್ಧ ಮಕ್ಕಳಿಗೆ ಮೋಸ ಮಾಡಬೇಡಿ. ಇದೇ ಮಕ್ಕಳೇ ನಮ್ಮ ಪಾಲಿನ ದೇವರು. ಮುಂದಿನ ದೇಶದ ನಾಗರಿಕರು. ಇಂಥ ಮಕ್ಕಳಿಗೆ ಒಳ್ಳೆಯ ಗಣಿತ, ಒಳ್ಳೆಯ ವಿಜ್ಞಾನ, ಒಳ್ಳೆಯ ಕಂಪ್ಯೂಟರ್ ಜ್ಞಾನ ಮತ್ತು ಒಳ್ಳೆಯ ಇಂಗ್ಲೀಷ ವಿಷಯದ ಜ್ಞಾನ ಹಾಗೂ ಇತರೆ ವಿಷಯದ ಜ್ಞಾನವನ್ನು ಮಕ್ಕಳಿಗೆ ಕೊಡುವುದರಿಂದ ಮುಂದೆ ಅವರು ವಿಜ್ಞಾನಿಗಳಾಗಬಹುದು. ದೊಡ್ಡ ವೈದ್ಯರಾಗಬಹುದು, ಒಳ್ಳೆಯ ನರೇಂದ್ರ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭ್‍ಭಾಯ್ ಪಟೇಲ್, ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳಾಗಬಹುದು. ಒಂದು ವೇಳೆ ಈ ಮಕ್ಕಳಿಗೆ ಒಳ್ಳೆಯ ಜ್ಞಾನವನ್ನು ಕೊಡದೇ ಇದ್ದರೆ ನಮ್ಮ ದೇಶಕ್ಕೆ ನಷ್ಟವಾಗುತ್ತದೆ. ದಯಮಾಡಿ ಮಕ್ಕಳನ್ನು ಗಣನೆಗೆ ತೆಗೆದುಕೊಂಡು ಒಳ್ಳೆಯ ಜ್ಞಾನವನ್ನು ಕೊಡಲು ಪ್ರಯತ್ನಿಸಿ. ಎಲ್ಲ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ.

               ಕಂಪ್ಯೂಟರ್ ಶಿಕ್ಷಕರಾಗಿ ಅರೆಕಾಲಿಕ ಸೇವೆ ಸಲ್ಲಿಸಲು ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಅಂಥ ವಿದ್ಯಾರ್ಥಿಶಿಕ್ಷಕರನ್ನು ಗುರುತಿಸಿ ಅವರಿಗೆ ಕಂಪ್ಯೂಟರ್ ಶಿಕ್ಷಕರಾಗಿ ನೇಮಿಸಿ.

Saturday, 26 November 2016

ಮೂಳೆಶಾಸ್ತ್ರ

ªÀÄƼɱÁ¸ÀÛç
OSTEOLOGY
ªÀÄƼÉUÀ¼À PÀÄjvÀÄ CzsÀåAiÀÄ£À ªÀiÁqÀĪÀÅzÀ£ÀÄß ªÀÄƼɱÁ¸ÀÛç J£ÀÄߪÀgÀÄ.
ªÀAiÀĸÀÌ ªÀiÁ£ÀªÀ£À°è PÀAqÀħgÀĪÀ ªÀÄƼÉUÀ¼ÀÄ 206
aPÀÌ ªÀÄUÀÄ«£À°è PÀAqÀħgÀĪÀ ªÀÄƼÉUÀ¼À ¸ÀASÉå 300
ªÀÄƼÉUÀ¼À£ÀÄß 2 ¨sÁUÀUÀ¼À£ÁßV «AUÀr¸À¯ÁVzÉ.
1.   CPÉì¯ï C¹Ü¥ÀAdgÀ (Axial skeleton)
2.   C£ÀħAzsÀ C¹Ü¥ÀAdgÀ (Appendicular skeleton)

1.   DPÉìöʯï C¹Ü (Axial skeleton):- EzÀgÀ°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 80. CPÉìöʯï C¹Ü, vÀ¯É§ÄgÀÄqÉAiÀÄ ªÀÄƼÉUÀ¼À£ÀÄß, PÀ±ÉÃgÀÄPÀ ¸ÀÛA¨sÀzÀ ªÀÄƼÉUÀ¼À£ÀÄß ªÀÄvÀÄÛ JzÉAiÀÄ UÀÆr£À ªÀÄƼÉUÀ¼À£ÀÄß M¼ÀUÉÆArzÉ.
* vÀ¯É§ÄgÀÄqÉ (Skull)
     EzÀÄ ªÀÄÄRzÀ ªÀÄƼÉUÀ¼À£ÀÄß vÀ¯ÉUÀÆrãÀ ªÀÄƼÉUÀ¼À£ÀÄß, JgÀqÀÆ PÉ«AiÀÄ ªÀÄƼÉUÀ¼À£ÀÄß ªÀÄvÀÄÛ £Á°UÉ PɼÀUÉ EgÀĪÀ hyoid’ ªÀÄƼÉUÀ¼À£ÀÄß M¼ÀUÉÆArzÉ. (29)
1.   ªÀÄÄR (face) :- ªÀÄÄRzÀ°è 14 ªÀÄƼÉUÀ¼ÀÄ PÀAqÀħgÀÄvÀÛªÉ. CªÀÅ F PɼÀV£ÀAwªÉ.
1.   UÀ®èzÀ ªÀÄƼÉUÀ¼ÀÄ (zygomatic bones) (2)
2.   PÀtÄÚUÀÄqÉØAiÀÄ ªÀÄƼÉUÀ¼ÀÄ (Lacrimal bones) (2)
3.   ªÉÄîݪÀqÉAiÀÄ ªÀÄƼÉUÀ¼ÀÄ (Maxilla bones) (2)
4.  ¨Á¬ÄAiÀÄ CAUÀ¼ÀzÀ ªÀÄƼÉUÀ¼ÀÄ (Palatine bones) (2)
5.   ªÀÄÆV£À ªÉÄð£À ªÀÄƼÉUÀ¼ÀÄ (Superior nasal bones) (2)
6.   ªÀÄÆV£À PɼÀ ªÀÄƼÉUÀ¼ÀÄ (Inferior bones) (2)
7.    Vomer bone (in between nasal cavity) - ªÀÄÆV£À JgÀqÀÄ PÀĺÀgÀUÀ¼À ªÀÄzsÉå PÀAqÀħgÀÄvÀÛzÉ. (1)
8.  Mandible bone - ¨Á¬ÄAiÀÄ PɼÀzÀªÀqÉAiÀÄ ªÀÄƼÉ. EzÀÄ ZÀ°¸ÀĪÀ ªÀÄƼÉ. (1)

2.   vÀ¯ÉUÀÆqÀÄ (Cranium):- vÀ¯ÉAiÀÄUÀÆr£À°è 8 ªÀÄƼÉUÀ¼ÀÄ PÀAqÀħgÀÄvÀÛªÉ. CªÀÅ F PɼÀV£ÀAwªÉ.
1.   ºÀuÉAiÀÄ ªÀÄÆ¼É (frontal bone) (1)  
2.   vÀ¯ÉAiÀÄ UÀÆr£À »A¨sÁUÀzÀ ªÀÄÆ¼É (occipital bone) (1)
3.   ¥Á±ÀðézÀ ªÀÄƼÉUÀ¼ÀÄ (Parietal bones) (2)
4.  ªÉÄ®ÄQ£À ªÀÄƼÉUÀ¼ÀÄ (Temporal bones) (2)
5.   vÀ¯ÉAiÀÄ UÀÆr£À PɼÀ¨sÁUÀzÀ°è PÀAqÀħgÀÄvÀÛzÉ. (Sphenoid bone) (1)
6.   EzÀÄ PÀÆqÀ vÀ¯ÉAiÀÄUÀÆr£À PɼÀ¨sÁUÀzÀ°è PÀAqÀħgÀÄvÀÛzÉ. (Ethmoid bone) (1)
3.   Q«AiÀÄ ªÀÄƼÉUÀ¼ÀÄ :- MAzÀÄ Q«AiÀÄ°è 3 ªÀÄƼÉUÀ¼ÀÄ PÀAqÀÄ §gÀÄvÀÛªÉ.
1.   ¸ÀÄwÛUÉ DPÁgÀzÀ ªÀÄÆ¼É (maleus)
2.   (Incus)
3.   jPÁj£À DPÁgÀzÀ ªÀÄÆ¼É (stapes)
JgÀqÀÆ Q«AiÀÄ°è 6 ªÀÄƼÉUÀ¼ÀÄ PÀAqÀħgÀÄvÀÛªÉ.

4. ºÀAiÉÆÃqï ªÀÄÆ¼É (Hyoid bone):-
    EzÀÄ £Á°UÉ PɼÀUÉ PÀAqÀħgÀÄvÀÛzÉ. ªÀÄvÀÄÛ AiÀiÁªÀ ªÀÄƼÉUÀÆ ¸ÀA¥ÀPÀð ºÉÆA¢gÀĪÀÅ¢®è.

5.  PÀ±ÉÃgÀÄPÀ ¸ÀÛA¨sÀ (Vertabra column):-
     PÀ±ÉÃgÀÄPÀ ¸ÀÛA¨sÀzÀ°è ªÀAiÀĸÀÌgÀ°è 26 PÀ±ÉÃgÀÄPÀ ªÀÄtÂUÀ¼ÀÄ CxÀªÁ ªÀÄƼÉUÀ¼ÀÄ PÀAqÀħgÀÄvÀÛªÉ. ªÀÄvÀÄÛ aPÀÌ ªÀÄPÀ̼À°è 33 PÀ±ÉÃgÀÄPÀ ªÀÄtÂUÀ¼ÀÄ PÀAqÀħgÀÄvÀÛªÉ.
7 PÀ±ÉÃgÀÄPÀ ªÀÄtÂUÀ¼ÀÄ PÀÄwÛUÉ ¨sÁUÀzÀ°è PÀAqÀħgÀÄvÀÛªÉ. EªÀÅUÀ¼À°è Atlas JA§ PÀ±ÉÃgÀÄPÀ ªÀÄt vÀ¯É§ÄgÀÄqÉUÉ ¸ÀA§AzsÀ ºÉÆA¢gÀÄvÀÛzÉ.

* 2£Éà PÀ±ÉÃgÀÄPÀ ªÀÄt ºÉ¸ÀgÀÄ Axis DVzÉ.
* 12 PÀ±ÉÃgÀÄPÀ ªÀÄtÂUÀ¼ÀÄ JzÉAiÀÄUÀÆr£À°è PÀAqÀħgÀÄvÀÛªÉ. F 12 PÀ±ÉÃgÀÄPÀ ªÀÄtÂUÀ½AzÀ JgÀqÀÆ PÀqɬÄAzÀ 12 eÉÆvÉ ¥ÀPÉÌ®§ÄUÀ¼ÀÄ ºÉÆgÀqÀÄvÀÛªÉ.
* 5 PÀ±ÉÃgÀÄPÀUÀ¼À ªÀÄtÂUÀ¼ÀÄ GzÀgÀ ¨sÁUÀzÀ°è PÀAqÀħgÀÄvÀÛªÉ.
* dWÀ£ÀzÀ PÀAPÀt (ZÀ¥ÉàAiÀÄ ªÀÄƼÉ) M¼ÀUÉ 5 PÀ±ÉÃgÀÄPÀ ªÀÄtÂUÀ¼ÀÄ MAzÀPÉÆÌAzÀÄ ¨É¸ÀÄUÉAiÀiÁV PÀÆrPÉÆAqÀÄ MAzÀÄ ªÀÄƼÉAiÀiÁV gÀZÀ£ÉAiÀiÁVgÀÄvÀÛzÉ. (1)
* PÀ±ÉÃgÀÄPÀ ¸ÀÛA¨sÀzÀ PÉÆ£ÉUÉ EgÀĪÀ 4 PÀ±ÉÃgÀÄPÀ ªÀÄtÂUÀ¼ÀÄ MAzÀPÉÆÌAzÀÄ PÀÆr ¨É¸ÀÄUÉAiÀiÁV MAzÀÄ coccynx ªÀÄÆ¼É gÀZÀ£ÉAiÀiÁVgÀÄvÀÛzÉ.

6.  JzÉAiÀÄUÀÆqÀÄ (Thorax) :-
·      ªÀiÁ£ÀªÀ£À JzÉAiÀÄUÀÆqÀÄ 25 ªÀÄƼÉUÀ½AzÀ gÀZÀ£ÉAiÀiÁVzÉ.
·      EªÀÅUÀ¼À°è sternum or Breast bone ¸ÀÛ£À ªÀÄƼÉ. EzÀÄ JgÀqÀÆ ¸ÀÛ£ÀUÀ¼À ªÀÄzsÉå £ÉÃgÀªÁV PÀAqÀħgÀÄvÀÛzÉ.
·      7 eÉÆvÉ ¥ÀPÉÌ®§ÄUÀ¼ÀÄ ¨É¤ß£À ¨sÁUÀzÀ°ègÀĪÀ PÀ±ÉÃgÀÄPÀ ªÀÄtÂUÀ½AzÀ ºÉÆgÀlÄ ªÀÄÄAzÉ §AzÀÄ sternum UÉ £ÉÃgÀªÁV ¸ÀA¥ÀPÀð ºÉÆA¢gÀÄvÀÛzÉ. EªÀÅUÀ¼À£ÀÄß Truth rib-bones JAzÀÄ PÀgÉAiÀÄÄvÁÛgÉ. (¸ÀvÀå ¥ÀPÉ̮ħÄUÀ¼ÀÄ)
·      3 eÉÆvÉ ¥ÀPÉ̮ħÄUÀ¼ÀÄ sternumUÉ »A¢¤AzÀ MAzÀÄ C¥ÀævÀåPÀëªÁV ¸ÀA¥ÀPÀð ºÉÆA¢gÀÄvÀÛzÉ. EªÀÅUÀ½UÉ false rib-bones JAzÀÄ PÀgÉAiÀÄÄvÁÛgÉ.
·      2 eÉÆvÉ ¥ÀPÉÌ®§ÄUÀ¼ÀÄ »A¢¤AzÀ §AzÀÄ ªÀÄÄAzÉ sternumUÉ ¸ÀA¥ÀPÀð ºÉÆA¢®è. EªÀÅUÀ½UÉ floating rib-bones JAzÀÄ PÀgÉAiÀÄÄvÁÛgÉ. (vÉïÁqÀĪÀ ¨ÉÆãÀÄUÀ¼ÀÄ)

C£ÀħAzsÀ C¹Ü Appendicular skeleton :-
EzÀÄ JgÀqÀÆ PÉÊAiÀÄ°ègÀĪÀ ªÀÄƼÉUÀ¼À£ÀÄß, JgÀqÀÆ PÁ®°ègÀĪÀ ªÀÄƼÉUÀ¼À£ÀÄß, JgÀqÀÆ PÉÆgÀ½£À ªÀÄƼÉUÀ¼À£ÀÄß, JgÀqÀÆ ºÉUÀ°£À ªÀÄƼÉUÀ¼À£ÀÆß ªÀÄvÀÄÛ 2 ZÀ¥ÉàAiÀÄ ªÀÄƼÉUÀ¼À£ÀÄß Hip bones M¼ÀUÉÆArzÉ.
1.  PÉÊ (Hand)AiÀÄ°ègÀĪÀ ªÀÄƼÉUÀ¼ÀÄ:-
·      PÉÊgÀmÉÖAiÀÄ°ègÀĪÀ ªÀÄƼÉUÀ¼À£ÀÄß Humerus JAzÀÄ PÀgÉAiÀÄÄvÁÛgÉ. (gÀmÉÖAiÀÄ ªÀÄƼÉ) (1)
·      PÉÊ ªÀÄÄAUÉÊAiÀÄ°è PÀAqÀħgÀĪÀ ªÀÄƼÉUÀ¼À£ÀÄß Radius & ulna  J£ÀÄߪÀgÀÄ. RadiusªÀÅ ulnaQÌAvÀ zÉÆqÀØzÁVgÀÄvÀÛzÉ. ªÀÄvÀÄÛ ºÉ§âgÀ½£À PÀqÉUÉ PÀAqÀħgÀÄvÀÛzÉ. (2)
·      PÉÊ ªÀÄtÂPÀnÖ£À £ÀqÀÄªÉ PÀAqÀħgÀĪÀ ªÀÄƼÉUÀ¼À£ÀÄß Carpal bones JAzÀÄ PÀgÉAiÀÄÄvÁÛgÉ. (8)
·      PÉÊ CAUÉÊAiÀÄ°è PÀAqÀħgÀĪÀ ªÀÄƼÉUÀ¼À£ÀÄß meta carpal bones   JAzÀÄ PÀgÉAiÀÄĪÀgÀÄ. (5)
·      PÉÊ ¨ÉgÀ¼ÀÄUÀ¼À°ègÀĪÀ EgÀĪÀ ªÀÄƼÉUÀ¼À£ÀÄß phalanges  J£ÀÄߪÀgÀÄ. EªÀÅUÀ¼À ¸ÀASÉå 14
·      MAzÀÄ PÉÊAiÀÄ°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 30
·      JgÀqÀÆ PÉÊUÀ¼À°è PÀAqÀħgÀĪÀ ªÀÄƼÉUÀ¼À ¸ÀASÉå 60

2) P稀:-
·      PÁ°£À vÉÆqÉAiÀÄ ¨sÁUÀzÀ°ègÀĪÀ ªÀÄƼÉAiÀÄ£ÀÄß femur JAzÀÄ PÀgÉAiÀÄÄvÁÛgÉ. EzÀÄ zÉúÀzÀ°ègÀĪÀ CvÀåAvÀ §°µÀ× ªÀÄvÀÄÛ zÉÆqÀØzÁzÀ ªÀÄƼÉAiÀiÁVzÉ.
·      ªÉƼÀPÁ®Ä ªÀÄAqÉAiÀÄ°ègÀĪÀ UÉÆïÁPÁgÀ ªÀÄvÀÄÛ ZÀ¥ÀàmÉAiÀiÁzÀ ªÀÄƼÉAiÀÄ£ÀÄß knee cap JAzÀÄ PÀgÉAiÀÄÄvÁÛgÉ. (1)
·      PÁ°£À ªÀÄÄAUÁ°£À°ègÀĪÀ ªÀÄƼÉUÀ¼À£ÀÄß Tibia & fibula JAzÀÄ PÀgÉAiÀÄÄvÁÛgÉ. (2)
·      PÁ°£À ¥ÁzÀzÀ »ªÀÄärAiÀÄ°ègÀĪÀ ªÀÄƼÉUÀ¼À£ÀÄß tarsal bones JAzÀÄ PÀgÉAiÀÄÄvÁÛgÉ. (7)
·      PÁ°£À ¥ÁzÀzÀ CAUÁ°£À°ègÀĪÀ ªÀÄƼÉUÀ¼À£ÀÄß meta darsal JAzÀÄ PÀgÉAiÀÄÄvÁÛgÉ. (5)
·      PÁ°£À ¥ÁzÀzÀ ¨ÉgÀ¼ÀÄUÀ¼À°ègÀĪÀ ªÀÄƼÉUÀ¼À£ÀÄß phalanges J£ÀÄߪÀgÀÄ. (14)
·      MAzÀÄ PÁ°£À°è PÀAqÀÄ §gÀĪÀ MlÄÖ ªÀÄƼÉUÀ¼À ¸ÀASÉå 30
·      JgÀqÀÆ PÁ°£À°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 60
·      PÉÆgÀ½£À ¨sÁUÀzÀ°è EgÀĪÀ 2 ªÀÄƼÉUÀ¼À£ÀÄß clavicle bones or collar bones JAzÀÄ PÀgÉAiÀÄÄvÁÛgÉ.
·      JzÉAiÀÄ UÀÆr£À »A¨sÁUÀzÀ°è CAzÀgÉ ¨É¤ß£À ¨sÁUÀzÀ°è PÀAqÀħgÀĪÀ 2 ªÀÄƼÉUÀ¼À£ÀÄß ¸ÀÌAzÁ¹Ü (¨sÀÄd) JAzÀÄ PÀgÉAiÀÄĪÀgÀÄ. CxÀªÁ ºÉUÀ°£À ªÀÄƼÉUÀ¼ÀÄ scapula bones (2) JAzÀÄ PÀgÉAiÀÄĪÀgÀÄ. EªÀÅ ZÀ¥ÀàmÉAiÀiÁV ªÀÄvÀÄÛ wæPÉÆãÁPÁgÀzÀ°è EgÀÄvÀÛªÉ.
·      ZÀ¥ÀàmÉAiÀÄ ¨sÁUÀzÀ°ègÀĪÀ 2 ªÀÄƼÉUÀ¼À£ÀÄß ZÀ¥ÀàmÉAiÀÄ ªÀÄƼÉUÀ¼ÀÄ CxÀªÁ dWÀ£ÀzÀ PÀAPÀtUÀ¼ÀÄ CxÀªÁ Hip-bones or pelvic girdle JAzÀÄ PÀgÉAiÀÄÄvÁÛgÉ.


Friday, 11 November 2016

ಆಂಟೋನಿಯ ಕಥೆ - ನಮ್ಮ ಕಥೆ


    ರೋಮ್ ಇತಿಹಾಸದ ಪುಟಗಳಲ್ಲಿ ಕಾಣುವ ಈ ಕಥೆ ಒಂದು ಬಹುದೊಡ್ಡ ಆಧ್ಯಾತ್ಮಿಕ ಸತ್ಯವನ್ನು ಸಾರುತ್ತದೆ.
   ರೋಮ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಜರ್ ತನ್ನ ವಿಶ್ವಾಸಿಕನಾದ, ನಂಬಿಕೆಗೆ ಅರ್ಹವಾಗಿದ್ದ ಮಾರ್ಕ್ ಅಂಟೋನಿಯನ್ನು ಕರೆಸಿ ಈಜಿಪ್ಟ್ ದೇಶವನ್ನು ಗೆದ್ದು ಬರುವುದಕ್ಕೆ ಕಳುಹಿಸುತ್ತಾನೆ. ಅತ್ಯಂತ ಕಡಿಮೆಯ ಅವಧಿಯಲ್ಲಿ ಧೀರ ಮಾರ್ಕ್ ಆಂಟೋನಿ ಈಜಿಪ್ಟನ್ನು ಗೆದ್ದು ಅಲ್ಲಿಯ ಅಪಾರ ಸಂಪತ್ತನು ಹೊತ್ತು ತರುತ್ತಾನೆಂಬ ನಂಬಿಕೆ ಸೀಜರ್‌ನಿಗೆ. ಹಾಗೆ ಸಾಧಿಸಿಯೇ ತೀರುತ್ತೇನೆಂದು ಪಣತೊಟ್ಟ ಆಂಟೋನಿ ಸರ್ವಾಧಿಕಾರಿಗೆ ಮಾತು ಕೊಟ್ಟು ಹೊರಡುತ್ತಾನೆ.

     ಆಗ ಈಜಿಪ್ಟ್ ದೇಶದ ರಾಣಿ ಕ್ಲಿಯೋಪಾತ್ರಾ ಅದು ಮಾದಕ ಸೌಂದರ್ಯಕ್ಕೆ ಮತ್ತೊಂದು ಹೆಸರು. ಆಂಟೋನಿ ತನ್ನ ದೇಶವನ್ನು ಗೆಲ್ಲಲು ಬರುತ್ತಿದ್ದಾನೆಂಬ ವಿಷಯ ಆಕೆಗೆ ತಿಳಿಯುತ್ತದೆ. ಆಕೆ ಸುಂದರಿ ಮಾತ್ರವಲ್ಲ ಕಾರ್ಯ ಸಾಧನೆಯಲ್ಲಿ ಮಹಾ ಚತುರೆ. ಬರಲಿ, ಈ ಸೇನಾ ನಾಯಕ. ನಮ್ಮನ್ನು ಗೆಲ್ಲ ಬಂದವನನ್ನು ನಾನೇ ಗೆದ್ದು ಬಿಡುತ್ತೇನೆ ಎಂದು ತೀರ್ಮಾನ ಮಾಡಿ ಒಂದು ಯೋಜನೆಯನ್ನು ತಯಾರು ಮಾಡುತ್ತಾಳೆ. ತನ್ನ ಮಂತ್ರಿಗಳನ್ನು ಕರೆದು ಬರುತ್ತಿರುವ ರೋಮನ್ ಸೇನಾ ನಾಯಕನಿಗೆ ಅಭೂತಪೂರ್ವ ಸ್ವಾಗತವನ್ನು ಏರ್ಪಡಿಸಲು ಆಜ್ಞೆ ಮಾಡುತ್ತಾಳೆ. ಈಜಿಪ್ಟ್ ದೇಶದ ಸಕಲ ಸಂಪತ್ತು, ಸಂಭ್ರಮಗಳನ್ನು ಬೆರೆಸಿ ಆಂಟೋನಿ ಬೆರಗುಗೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಿರುತ್ತಾಳೆ.

     ತನ್ನ ಜೊತೆಗಿದ್ದ ಅತ್ಯಂತ ಸುಂದರಿಯರಾದ ಸೇವಕಿಯರಿಗೆ ವಿವಿಧ ವೇಷ ಭೂಷಣಗಳನ್ನು ಸಿದ್ಧಪಡಿಸಿ ಅವರು ತಮ್ಮ ಸೌಂದರ್ಯದ ಹತ್ತುಪಟ್ಟು ಹೆಚ್ಚಾಗಿ ಕಾಣುವಂತೆ ಮಾಡಿಸುತ್ತಾಳೆ. ಅದ್ಭುತವಾಗಿ ಅಲಂಕೃತ ನಾವೆಗಳಲ್ಲಿ ಆ ಹುಡುಗಿಯರು ತಮ್ಮ ಮೈಮಾಟಗಳನ್ನು ಪ್ರದರ್ಶಿಸುತ್ತಾ ಆಂಟೋನಿಯ ಗಮನ ಸೆಳೆಯಬೇಕೆಂದು ಅವರ ಕರ್ತವ್ಯ. ಕ್ಲಿಯೋಪಾತ್ರಾ ತಾನೇ ಸ್ವತಃ ತನ್ನ ಮೈ ಮುಚ್ಚುವಷ್ಟು ಬಂಗಾರದ ಆಭರಣಗಳನ್ನು ಧರಿಸಿ ಮೊದಲೇ ಸುಂದರಳಾಗಿದ್ದ ತಾನು ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗುವಂತೆ ಮತ್ತೊಂದು ವಿಶೇಷ ನಾವೆಯಲ್ಲಿ ಕುಳಿತುಕೊಂಡು ಮುಂದೆ ಬರುತ್ತಾಳೆ. ಆಕೆಯ ನಿರ್ಧಾರ ಖಚಿತವಾಗಿತ್ತು. ತಾನು ರೋಮ್ ದೇಶದ ಸೇನಾಧಿಪತಿಯನ್ನು ಖಡ್ಗದಿಂದ ಗೆಲ್ಲದೇ, ಒಂದು ಹನಿ ರಕ್ತವನ್ನು ಕಳೆಯದೇ, ಕೇವಲ ತನ್ನ ಕಣ್ಣಂಚಿನ ಕುಡಿ ನೋಟದಿಂದ, ವೈಯಾರದಿಂದ ದೇಹದಿಂದ ಗೆಲ್ಲಬೇಕು.

     ಆಂಟೋನಿ ಈಜಿಪ್ಟ್ ದೇಶದ ತೀರದಲ್ಲಿ ಇಳಿದೊಡನೆ ಅವನಿಗೆ ಆಶ್ಚರ್ಯವಾಗುತ್ತದೆ. ಸನ್ನದ್ಧ ಸೈನ್ಯದೊಡನೆ ಹೋರಾಟ ಮಾಡುವ ಸ್ಥಿತಿಯಲ್ಲಿದ್ದ ಆಂಟೋನಿ ಈ ಅಸಾಧಾರಣ ಸಂಭ್ರಮದ ಸ್ವಾಗತವನ್ನು ಕಂಡು ಬೆರಗಾಗುತ್ತಾನೆ. ಕಂಡಲ್ಲಿ ಹೊಳೆಯುವ ಸಂಪತ್ತು, ಸೌಂದರ್ಯ ಮತ್ತು ಮದ್ಯಗಳಲಿ ಕರಗಿ ಹೋಗುತ್ತಾನೆ. ಅವನನ್ನು ಸ್ವಾಗತಿಸುವ ಕಾರ್ಯಕ್ರಮ ಹಲವಾರು ದಿನಗಳವರೆಗೆ ನಡೆಯುತ್ತದೆ. ಪ್ರತಿದಿನವೂ ವಿಧವಿಧವಾದ ಅಲಂಕಾರ ಮಾಡಿಕೊಂಡ, ಮಾದಕ ಸೌಂದರ್ಯದ ಕ್ಲಿಯೋಪಾತ್ರಾಳ ಭೆಟ್ಟಿಯಾಗುತ್ತಲೆ ಇರುತ್ತದೆ. ಅವಳ ಮಾತಿನ ಮೋಡಿಯಲ್ಲಿ, ಸಾಂಗತ್ಯದಲ್ಲಿ ಆಂಟೋನಿ ತಾನು ಬಂದಿರುವ ಕೆಲಸವನ್ನೆಲ್ಲ ಮರೆತು ಬಿಡುತ್ತಾನೆ. ದಿನಗಳು ಕಳೆದಂತೆ ಆಂಟೋನಿ ಕ್ಲಿಯೋಪಾತ್ರಳ ದಾಸನಂತಾಗಿ ನೈತಿಕವಾಗಿ ಕುಸಿಯುತ್ತ, ಕುಸಿಯುತ್ತ ಆಕೆಯ ಕೈಗೊಂಬೆಯಗುತ್ತಾನೆ.

      ಇತ್ತ ತನ್ನ ನೆಚ್ಚಿನ ಸ್ನೇಹಿತ ಆಂಟೋನಿ ಯಾಕೆ ಮರಳಿ ಬರಲಿಲ್ಲ ಮತ್ತು ಯಾವ ವಿಷಯವನ್ನು ತಿಳಿಸಲಿಲ್ಲ ಎಂದು ಸೀಜರ್ ಕಳವಳಕ್ಕೊಳಗಾಗಿ ತನ್ನ ದೂತರನ್ನು ಕಳುಹಿಸುತ್ತಾನೆ. ಅವರು ಈಜಿಪ್ಟಿಗೆ ಬಂದು ಪರಿಪರಿಯಾಗಿ ಆಂಟೋನಿಗೆ ಹೇಳುತ್ತಾರೆ. ನೀನು ನಮ್ಮ ದೇಶದ ಧೀರನಾಯಕ. ದೇಶ ನಿನ್ನನ್ನು ಕರೆಯುತ್ತಿದೆ. ಟೈಬರ್ ನದಿಯ ರಣಕಹಳೆ ನಿನಗೆ ಕೇಳದೇ? ಬೇಗ ದೇಶವನ್ನು ಗೆದ್ದು ನಡೆ. ಕ್ಲಿಯೋಪಾತ್ರಾಳ ಬಲೆಗೆ ಪೂರ್ತಿಯಾಗಿ ಬಿದ್ದಿದ್ದ ಆಂಟೋನಿ ನಿರ್ವೀರ್ಯನಾಗಿ ಕುಡಿದ ಅಮಲಿನಲ್ಲಿ ಹೇಳುತ್ತಾನೆ. "ರೋಮ್ ಸಾಮ್ರಾಜ್ಯ ಟೈಬಲ್ ನದಿಯಲ್ಲಿ ಕರಗಿ ಹೋಗಲಿ. ಸಾಮ್ರಾಜ್ಯದ ಮಹಾಸೌಧ ಕುಸಿದು ಹೋಗಲಿ. ನನಗೆ ಕ್ಲಿಯೋಪಾತ್ರಳ ಪಾದವೇ ನಿಜಸ್ಥಾನ."

           ಧೀರ ಆಂಟೋನಿಯ ನೈತಿಕತೆಯ ಶಿಥಿಲತೆ ಮನಸ್ಸನ್ನು ತಟ್ಟುತ್ತದೆ. ಆಧ್ಯಾತ್ಮಿಕತೆಯ ದೃಷ್ಟಿಯಿಂದ ನೋಡಿದರೆ, ಅದು ನಮ್ಮೆಲ್ಲರ ಕಥೆಯೂ ಹೌದು. ಏನನ್ನೋ ಮಹತ್ತಾದುದನ್ನು ಸಾಧಿಸಲೆಂದು ಭೂಮಿಗೆ ಮನುಷ್ಯ ದೇಹದಲ್ಲಿ ಬಂದ ನಾವು ಸಣ್ಣ ಸಣ್ಣ ಆಕರ್ಷಣೆಗಳಿಗೆ ನಮ್ಮನ್ನು ತೆತ್ತುಕೊಂಡು ಅದೇ ಮಹತ್ತಾದುದು ಎಂದು ಭ್ರಮೆಪಟ್ಟು ಮೂಲ ಆಶಯ ಮರೆತಾಗ ಆಂಟೋನಿಯ ಕಥೆ ತುಂಬ ಪ್ರಸ್ತುತವೆನಿಸುತ್ತದೆ.

ಕೃಪೆ: ಡಾ|| ಗುರುರಾಜ್ ಕರಜಗಿ

Thursday, 22 September 2016

ಪಿ.ಎಸ್.ಐ. ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?

PSI essay writing information

      ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

 ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ `ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

* ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

* ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.

ಉದಾ: ಟಿಪ್ಪುವಿನ ಸಾಧನೆಗಳು.  ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

* ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

* ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.
ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

* ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

* ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

* ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.
  ಉದಾ: `ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.

* ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.

* ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.

* ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.

* ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.

* ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.
ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.

* ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.

* ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.

* ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.

* ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.

* ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.

* ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.

* ವಾಕ್ಯಗಳು ಮತ್ತು ಅಂಶಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು.

* ನಿಗದಿತ ವೇಳೆಯೊಳಗೆ ಪ್ರಬಂಧ ಬರೆದು ಮುಗಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ.

ಪ್ರಬಂಧ ಬರೆಯುವ ಹಂತಗಳು:
     ಪ್ರಬಂಧ ಬರೆಯುವ ಕಲೆ ಒಂದೇ ದಿನದಲ್ಲಿ ಸಿದ್ಧಿಸುವಂತಹದಲ್ಲ. ಅದಕ್ಕಾಗಿ ದಿನನಿತ್ಯದ ಅಭ್ಯಾಸ ಅಗತ್ಯ.
1) ಪ್ರಬಂಧದ ವಿಷಯ ಆಯ್ಕೆ ಮಾಡಿಕೊಳ್ಳಿ.
2) ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಏನೆಲ್ಲ ಬರೆಯಬಹುದು ಎಂಬುದನ್ನು ಚಿಂತಿಸಿ.
3) ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಿ.
4) ಪ್ರಬಂಧ ಬರೆಯುವ ನಿಯಮಗಳನ್ನು ಅನುಸರಿಸಿ, ವಿಷಯವನ್ನು ನಿರೂಪಿಸಿ, ವಿಶ್ಲೇಷಿಸಿ, ವಿಮರ್ಶಿಸಿ ವ್ಯವಸ್ಥಿತವಾಗಿ ಬರೆಯಿರಿ.
5) ಪ್ರಬಂಧ ಬರೆದು ಮುಗಿಸಿದ ಮೇಲೆ ಕೆಲಹೊತ್ತು ಬಿಟ್ಟು ಮತ್ತೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವುದಾದರೂ ವಾಕ್ಯಗಳು, ಶಬ್ದಗಳು ಇಲ್ಲದಿದ್ದರೂ ಪ್ರಬಂಧದ ಅರ್ಥಕ್ಕೆ ಅಥವಾ ತೂಕಕ್ಕೆ ತೊಂದರೆಯಾಗುವುದಿಲ್ಲ ಎನಿಸಿದರೆ ತೆಗೆದು ಹಾಕಿ. ಬಳಸಿದ ಶಬ್ದ/ವಾಕ್ಯಕ್ಕೆ ಬದಲಾಗಿ ಮತ್ತೆ ಯಾವ ಶಬ್ದ/ವಾಕ್ಯ ಬಳಸಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಚಿಂತಿಸಿ ಸೇರ್ಪಡೆಗೊಳಿಸಿ. ಹೀಗೆ ಒಂದು ಪ್ರಬಂಧವನ್ನು 2-3 ಬಾರಿ ಮತ್ತೆ ಮತ್ತೆ ಬರೆಯಿರಿ.
6) ಪ್ರಬಂಧದಲ್ಲಿ ಬಳಸುವ ಭಾಷೆಗ ಬಹಳ ಪ್ರಾಮುಖ್ಯತೆ ಇದೆ. ಕೆಳಮಟ್ಟದ ಪದಗಳು, ಅಶ್ಲೀಲ ಪದಗಳು, ದ್ವಂದಾರ್ಥ ಪದಗಳು, ಅಸಾಂವಿಧಾನಿಕ ಪದಗಳನ್ನು ಬಳಸುವಂತಿಲ್ಲ. ಭಾವತೀವ್ರತೆಯಿಂದ ಬರೆಯಬಾರದು. ಟೀಕೆ ಮಾಡುವುದಾದರೆ ಮೃದುವಾಗಿ ಮಾಡಬೇಕು.

       ಮಾದರಿ ಪ್ರಬಂಧಗಳ ಅಧ್ಯಯನಕ್ಕಾಗಿ ಗುಣಮಟ್ಟದ ಪುಸ್ತಕಗಳನ್ನು ಓದಿ. ಉದಾ: ಚಾಣಕ್ಯ ಪ್ರಕಾಶನದ ಅರವಿಂದ ಚೊಕ್ಕಾಡಿಯವರ ಪಿ.ಎಸ್.ಐ. ಪ್ರಬಂಧಗಳು, ಕ್ಲಾಸಿಕ್ ಸ್ಟಡಿ ಸರ್ಕಲ್^ನ ಪ್ರಬಂಧಗಳ ಪುಸ್ತಕ, ಸ್ಪರ್ಧಾ ವಿಜೇತ, ಸ್ಪರ್ಧಾ ಚೈತ್ರ ಹಾಗೂ ಇನ್ನಿತರ ಸಂಸ್ಥೆಗಳ ಪುಸ್ತಕಗಳನ್ನು ಪರಾಮರ್ಶಿಸಬಹುದು.

         ಎಲ್ಲಕ್ಕಿಂತ ಮುಖ್ಯವಾಗಿ ಉಳಿದವರೆಲ್ಲರಿಗಿಂತ ಪರಿಣಾಮಕಾರಿಯಾಗಿ ಪ್ರಬಂಧ ಬರೆಯಬಲ್ಲೆ, ವಿಷಯ ನಿರೂಪಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಇಂಥ ಆತ್ಮವಿಶ್ವಾಸಕ್ಕಾಗಿ ಗಳಿಸುವುದಕ್ಕಾಗಿ ಸತತ ವಿಷಯ ಸಂಗ್ರಹ, ಅಧ್ಯಯನ ಅವಶ್ಯ ಹಾಗೂ ನಿರಂತರವಾಗಿ ಜ್ಞಾನಮುಖಿಯಾಗಿರಬೇಕು.

Friday, 16 September 2016

ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ ತುಂಬುತ್ತಿತ್ತು


                   "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ.. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ..." ಬೆಳ್ಳಂಬೆಳ್ಳಿಗೆ ಇಂಥದೊಂದು ಸುಪ್ರಭಾತ ಎಲ್ಲ ಹಿಂದೂಗಳ ಪ್ರತಿ ಮನೆಮನೆಗಳಲ್ಲಿಯೂ ಮೊಳಗುತ್ತಿರುತ್ತದೆ. ಬಹುಶಃ ಈ ಶ್ಲೋಕಕ್ಕೆ ಗಾನಮಾಧುರ್ಯ ತುಂಬಿ ಭಾರತದಾದ್ಯಂತ ಪ್ರಸರಿಸುವಂತೆ ಮಾಡಿದ ಆ ಮಹಾನ್ ಗಾಯಕಿ  ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಮೊದಲ ಮಹಿಳೆ ಎಂ.ಎಸ್.ಎಸ್.

                1916ರ ಸೆಪ್ಟೆಂಬರ್ 16ರಂದು ಮಧುರೈನಲ್ಲಿ ಜನಿಸಿದ ಸುಬ್ಬುಲಕ್ಷ್ಮಿಯವರು ಸಂಗೀತದ ಮನೆತನದ ಹಿನ್ನೆಲೆಯಿಂದ ಬಂದವರು. ಕಾರ್ನಟಿಕ ಸಂಗೀತದಲ್ಲಿ ತಮ್ಮ ಸಂಗೀತಾಭ್ಯಾಸ ಆರಂಭಿಸಿದ ಅವರು ಬದುಕಿರುವಾಗಲೇ ದಂತಕಥೆಯಾದವರು. ಏಷ್ಯಾದ ನೊಬೆಲ್ ಎಂದೇ ಖ್ಯಾತವಾದ ‘ರಾಮನ್ ಮ್ಯಾಗ್ಸೆಸೆ’ ಪ್ರಶಸ್ತಿ ಪಡೆದ ಮೊದಲ ಸಂಗೀತ ವಿದುಷಿಯಾದ ಇವರು 2004ರ ಡಿಸೆಂಬರ್ 11 ರಂದು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದರು ಆದಾಗ್ಯೂ ಅವರು ಹಾಡಿದ ಸಾವಿರಾರು ಹಾಡುಗಳಿಂದ ಭಾರತೀಯರ ಹೃದಯ ನಿವಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಅವರು ಬದುಕಿದ್ದರೆ ಇಂದಿಗೆ 100 ವರ್ಷ ತುಂಬುತ್ತಿತ್ತು. ಸ್ವರ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಜನ್ಮಶತಮಾನೋತ್ಸವದ ಹಾರ್ದಿಕ ಶುಭಾಶಯಗಳು.