Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday, 6 March 2013

ಉಗ್ರವಾದ ಮತ್ತು ಭಾರತದ ಭದ್ರತಾ ವ್ಯವಸ್ಥೆ


         "ಹಿಂಸಾತ್ಮಕ ಮಾರ್ಗದ ಮೂಲಕ ಗುರಿ ಈಡೇರಿಸಿಕೊಳ್ಳುಇವ ಯತ್ನವನು ಉಗ್ರವಾದ" ಎನ್ನಬಹುದು. ಇಂಥ ಯತ್ನಗಳು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ನಡೆಯುತ್ತವೆ. ಇದು ಭಾರತದ ತುಂಬಾ ಹರಡಿ ಅಮಾಯಕ ಜನರ ಜೀವ ಮತ್ತು ಆಸ್ತಿ-ಪಾಸ್ತಿಗಳ ಮಾರಣ ಹೋಮ ಮಾಡುತ್ತಿರುವುದು ತುಂಬಾ ಶೋಚನೀಯ ಸ್ಥಿತಿ ತಲುಪಿದೆ. ಇಂಥ ಯತ್ನಗಳ ಹಿಂದೆ ಧರ್ಮ, ರಾಜಕೀಯ, ಹಣ, ಪ್ರತೀಕಾರ, ಕೋಮು ದ್ವೇಷ ಹೆಚ್ಚಿಸುವ, ಅಧಿಕಾರ ಗಿಟ್ಟಿಸಿಕೊಳ್ಳುವ ಉದ್ದೇಶಗಳನ್ನು ಗುರುತಿಸಬಹುದು.

 "ಕೊಲ್ಲು ಅಥವಾ ಕೊಲ್ಲಲ್ಪಡು" ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ತನ್ನ ದೈತ್ಯ ಹಿಡಿತದ ಮೂಲಕ ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವಂತಹ ದುಷ್ಕೃತ್ಯಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂಥ ಉಗ್ರರ ದಾಳಿಗಆಳು ಕೇವಲ ಯಾವುದೇ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೇಶದಲ್ಲಿರುವ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸರಣಿಯೋಒಪಾದೇಯಲ್ಲಿ ನಡೆಯುತ್ತಿರುವುದು ದೇಶದ ಜನತೆಗೆ ಆತಂಕ ಸೃಷ್ಟಿಸಿದೆ.

      ಉಗ್ರವಾದ ಎಂಬುವುದು ಮಾನವ ಕುಲಕ್ಕೆ ಅಂಟಿದ ಶಾಪ. ನಾಗರಿಕ ಸಮಾಜ ನೆಮ್ಮಂದಿಯಿಂದಿರಲು ಬಿಡದ ಒಂದು ಬಹುರೂಪಿ. ಜನರ ಮಾರಣಹೋಮ ಮಾಡುವಂಥ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಇಂತಹ ಉಗ್ರವಾದ ದುಷ್ಕೃತ್ಯಗಳು ಇಂದು ಬಹುತೇಕ ಜನದಟ್ಟಣೆ ನಗರಗಳಲ್ಲೇ ಸಂಭವಿಸುತ್ತಿವೆ. ದೆಹಲಿ, ಮುಂಬಯಿ, ಜೈಪುರ, ಅಹಮದಾಬಾದ್, ಬೆಂಗಳೂರು, ಪುಣೆ, ಹೈದ್ರಾಬಾದ್ ಇತ್ಯಾದಿ ಓಡಾಡುವ ಸ್ಥಳಗಳಲ್ಲಿ ಅಂದರೆ ಸರ್ಕಾರಿ ಕಚೇರಿಗಳು, ಹೊಟೇಲಗಳು, ಕೋರ್ಟ್ ಆವರಣ, ದೇವಾಲಯ ಆವರಣ, ವಾಣಿಜ್ಯ ಕಟ್ಟಡಗಳ ಪ್ರದೇಶಗಳಲ್ಲಿ ನಡೆದು ಸಾವಿರಾರು ಜನರ ಮಾರಣಹೋಮ ಮಾಡಿ,ಕ್ ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿವೆ.

ಉಗ್ರರ ದಾಳಿ ಹೆಚ್ಚುವುದಕ್ಕೆ ಕಾರಣಗಳು:

೧. ಭಯೋತಾದನೆ ಕೃತ್ಯಗಳ ತನಿಖೆಯಲ್ಲಿ ನಿಧಾನಗತಿ.

೨. ಭಯೋತ್ಪಾದನಾ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ನೀತಿ.

೩. ಉಗ್ರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡದೇ ಇರುವುದು.

ಭಾರತದಲ್ಲಿ ನಡೆದ ಪ್ರಮುಖ ಉಗ್ರವಾದ ಅಟ್ಟಹಾಸಗಳುಲ್:

* ಮಾರ್ಚ್ ೧೩, ೧೯೯೩ - ಮುಂಬೈನಲ್ಲಿ ಬಾಂಬ್ ಸ್ಫೋಟ್. ೨೫೦ ಜನರ ಸಾವು.
* ಡಿಸೆಂಬರ್ ೧೩, ೨೦೦೧ - ಸಂಸತ್ ಮೇಲೆ ಉಗ್ರರ ದಾಳಿ. ೧೧ ಜನರ ಸಾವು.
* ಮೇ ೧೩, ೨೦೦೮ - ರಾಜಸ್ಥಾನದ ಜೈಪುರದಲ್ಲಿ ಬಾಂಬ್ ಸ್ಫೋಟ್. ೬೮ ಜನರ ಸಾವು.
* ಜುಲೈ ೨೬, ೨೦೦೮ - ಗುಜರಾತ್ ಅಹಮದಾಬಾದ್‍ನಲ್ಲಿ ಬಾಂಬ್ ಸ್ಫೋಟ. ೫೭ ಜನರ ಸಾವು.
* ನವೆಂಬರ್ ೨೬, ೨೦೦೮ - ಮುಂಬೈನ ತಾಜ್ ಮತ್ತು ಓಬೆರಾಯ್ ಹೊಟೆಲ್‍ಗಳ ಮೇಲೆ ಉಗ್ರರ ದಾಳಿ. ೧೬೬ ಜನರ ಸಾವು.

* ಜುಲೈ ೧೩, ೨೦೧೧ -  ಮುಂಬೈನ ದಾದರ್ ಮತ್ತು ಜವೇರಿ ಬಜಾರ್‌ಗಳಲ್ಲಿ ಸರಣಿಬಾಂಬ್ ಸೊಫೋಟ. ೨೧ ಜನರ ಸಾವು.
* ಇತ್ತೀಚೆಗೆ ಫೆಬ್ರವರಿ ೨೧, ೨೦೧೩ - ಹೈದರಾಬಾದ್‍ನ ದಿಲ್‍ಸುಖ್ ನಗರದಲ್ಲಿ ಸರಣಿ ಬಾಂಬ್ ಸ್ಫೋಟ. ೧೬ ಜನರ ಸಾವು.

          ಇವೆಲ್ಲ ಉಗ್ರರು ನಡೆಸಿದ ಬಾಂಬ್ ಸ್ಫೋಟ ಕೃತ್ಯಗಳನ್ನು ಗಮನಿಸಿದರೆ ಭಾರತದಲ್ಲಿನ ಭದ್ರತೆ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಇವೇ ಸಾಕ್ಷಿ ಎಂದು ಹೇಳಬಹುದು. ಏಕೆಂದರೆ ಇವತ್ತಿನ ದಿನಮಾನಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದದಂತಹ ನೆರೆ ರಾಷ್ಟ್ರಗಳು ಕುಮ್ಮಕ್ಕು ನೀಡುತ್ತಿರುವ ಸಂಗತಿ ತಿಳಿದುಬರುತ್ತದೆ. ಜಗತ್ತಿನ ದೊಡ್ಡಣ್ಣವೆಂದೇ ಖ್ಯಾತವಾದ ಅಮೇರಿಕ ದೇಶಕ್ಕೆ ಬೇಕಾಗಿರುವ ಪಾಕಿಸ್ತಾನದಲ್ಲಿ ನೆಲೆಸಿರುವ ಹಫೀಜ್ ಮಹ್ಮದ್ ಸಯೀದ್. ಈ ಉಗ್ರರನ್ನು ಹುಡುಕಿ ಕೊಟ್ಟವರಿಗೆ ಆ ದೇಶ ಸುಮಾರು ೫೦ ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಆದರೂ ಆ ಉಗ್ರ ಇನ್ನು ಕೈಗೆ ಸಿಗುತ್ತಿಲ್ಲ. ಇದು ಅಮೇರಿಕಾಕ್ಕೆ ತಲೆ ನೋವಾಗಿದೆ.

ಉಗ್ರ ನಿಗ್ರಹಕ್ಕೆ ಕಾನೂನು:

       ಉಗ್ರವಾದ ನಿಗ್ರಹ ಕುರಿತು ಇನ್ನೂ ಸಮಗ್ರವಾದ ಕಾನೂನು ಜಾರಿ ಸಾಧ್ಯವಾಗಿಲ್ಲ. ಟಾಡಾ, ಪೋಟಾದಂತಹ ಕಾನೂನು ಜಾರಿಯಾದರೂ ಅದು ಸದ್ಬಳಕೆ  ಆಗಿದ್ದಕ್ಕಿಂತ ದುರ್ಬಳಕೆಯಾಗಿದ್ದೇ ಹೆಚ್ಚು ಎಂಬ ಆರೋಪ ಕೇಳಿಬರುತ್ತಿದೆ. ಇದೀಗ ಕೇಂದ್ರ ಸರ್ಕಾರ ಎನ್.ಸಿ.ಟಿ.ಸಿ. ಜಾರಿಗೆ ಮುಂದಾದರೂ, ಅದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಉಗ್ರ ಚಟುವಟಿಕೆ ತಡೆಗಟ್ಟುವ ಸಾಹಸವನ್ನು ಅಧಿಕಾರ ರೂಢ ಸರ್ಕರಗಳು, ಆಲೋಚನವಂತಹ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ ಮೆಟ್ಟಿ ನಿಂತು ಕಾರ್ಯ ನಿರ್ವಹಿಸಬೇಕು. ಆಗ ಉಗ್ರವಾದಿಗಳ ಬೇರು ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟಗಳು ಕಠಿಣ ಕಾನೂನು ಜಾರಿಗೆ ಅಡ್ಡಿಯಾಗಿವೆ. ಇನ್ನೂ ಯ್ ಆವುದೇ ಪ್ರಕರಣಗಲಲ್ಲಿ ಆರೋಪ ಪಟ್ಟಿ ಸಲ್ಲಿಸಲು ಕಾಲ ಮಿತಿ ನಿಗದಿ ಮಾಡಲಾಗಿದೆ. ಆದರೆ ವಿಚಾರ ನಡೆಸಲು ನ್ಯಾಯಾಲಯಗಳಿಗೆ ಯಾವುದೇ ಕಾಲ ಮಿತಿಯಿಲ್ಲ. ಹೀಗಾಗಿ ಕಾನೂನಿನಲ್ಲಿ ಇರುವ ಲೋಪಗಳೇ ಕಾನೂನಿನ ಸಮರ್ಪಕ ಜಾರಿಗೆ ಅಡ್ದಿಯಾಗಿವೆ ಎನ್ನಲಾಗಿದೆ.

          ಒಟ್ಟಾರೆಯಾಗಿ ಭಾರತದಲ್ಲಿ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪಾಕ್ ಉಗ್ರ ಅಜ್ಮಲ್ ಕಸಬ್ ಮತ್ತು ಸಂಸತ್ ದಾಳಿ ನಡೆಸಿದ ಅಫ್ಜಲ್‍ಗುರು ತರನಾಗಿ ಗಲ್ಲಿಗೇರಿಸಿದರೆ ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ತಡೆ ತರಬಹುದಾಗಿದೆ. ಇದು ದೇಶವನ್ನಾಳುವ ಸರ್ಕಾರ ಗಮನಿಸಬೇಕು. ಆಗ ಮಾತ್ರ ಭಾರತದಲ್ಲಿ ಉಗ್ರ ಚಟುವಟಿಕೆಗಳು ನಿಲ್ಲಬಹುದು.


           - ತಾನಾಜಿ ಇಂಗಳೆ
             ಸ್ಪರ್ಧಾ ಚಾಣಕ್ಯ


 ಬೆರಳಚ್ಚಿಸಿದವರು : ಜಿ.ಎಸ್.ಹತ್ತಿಗೌಡರ

No comments: