Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Wednesday, 6 March 2013
ಪ್ರಕೃತಿ ಚಿಕಿತ್ಸೆ
ಈ ಸಮಕಾಲೀನ ಸಂದರ್ಭದಲ್ಲಿ ಆಸ್ಪತ್ರೆಗಳು, ರೋಗಿಯು ತನ್ನ ದೇವರನ್ನು ಕಾಣುವ ಆಲಯಗಳಾಗಿ ಉಳಿದಿಲ್ಲ. ಹಾಗೊಂದು ವೇಳೆ ಇರುವುದಾದರೆ ಅವನು ಅತ್ಯಂತ ದುಬಾರಿಯಾದ ವೈಭವೋಪೇತ ವೈದ್ಯಕೀಯ ಚಿಕಿತ್ಸೆಯ ವೆಚ್ಚವನು ಭರಿಸಲು ಸಮರ್ಥನಾಗುವುದಾದರೆ ಮಾತ್ರ. ಭಾರತದ ಬಹುಪಾಲು ಜನತೆಯು ಈ ದುಬಾರಿ ಚಿಕಿತ್ಸೆಯ ಅವಕಾಶದಿಂದ ವಂಚಿತವಾಗಿದೆ. ಭಾರತದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾದ ಆಯುರ್ವೇದವೂ ಸಹ ಅತಿ ವೆಚ್ಚದ ಪ್ಯಾಕೇಜುಗಳಲ್ಲಿ ಬರುತ್ತಿದ್ದು ಸಾಮಾನ್ಯ ಜನತೆಯಿಂದ ದೂರವಾಗುವ ಸೂಚನೆಗಳು ಕಂಡುಬರುತ್ತಿವೆ. ಭಾರತವು ತನ್ನ ಯಾವ ಪ್ರಾಕೃತಿಕ ಚಿಕಿತ್ಸಾ ವಿಧಾನದಿಂದ ಪ್ರಸಿದ್ಧಿಯನ್ನು ಪಡೆದಿತ್ತೋ ಅಂತಹ ಎಲ್ಲ ಸಂಬಂಧವನ್ನು ಇಂದಿನ ಆಧುನಿಕ ವಿಜ್ಞಾನವು ಕಡಿದು ಹಾಕುತ್ತಿರುವ ಸಂದರ್ಭದಲ್ಲಿಯೂ ಸಹ ಪ್ರಸ್ತುತ ಜಾರ್ಖಂಡದ ಬುಡಕಟ್ಟು ಜನರು ತಮ್ಮ ಪ್ರಾಚೀನ ಪರಂಪರೆಯಿಂದ ಬಂದಿರುವ ವೈದ್ಯಕೀಯ ತಿಳಿವಳಿಕೆಯನ್ನು ರೋಗಗಳೊಂದಿಗೆ ಹೋರಾಡಲು ಅತ್ಯಂತ ಸಹಜ ರೀತಿಯ ಹೆಚ್ಚು ವೆಚ್ಚವಿಲ್ಲದ ವಿಧಾನಗಳನ್ನು ಉಪಯೋಗಿಸುವುದನ್ನು ಮುಂದುವರೆಸಿದ್ದಾರೆ.
ಹೊಡೊಪತಿಯು ಒಂದು ವಿಶಿಷ್ಟ ಪ್ರಕಾರದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಜಾರ್ಖಂಡ ರಾಜ್ಯದ ಬುಡಕಟ್ಟು ಜನಾಂಗದವರಿಗೆ ಸೇರಿದ್ದಾಗಿದೆ. ಇದು ಅನೇಕ ಪ್ರಾಕೃತಿಕ ಗಿಡಮೂಲಿಕೆಗಳನ್ನು ಹಿಂಡಿ ತೆಗೆದ ರಸಮೂಲಿಕೆಗಳಿಂದ ತಯಾರಿಸಲ್ಪಟ್ಟು, ರೊಗಿಯ ಆರೋಗ್ಯದ ಮೇಳೆ ಯಾವುದೇ ಅಡ್ಡ ಪರಿಣಾಮಗಳನ್ನುಂಟು ಮಾಡದೆ, ಹಲವಾರು ರೋಗಗಳನ್ನು ಗುಣಪಡಿಸುವುದೆಂದು ನಂಬಲಾಗಿದೆ. ಈ ವಿಶಿಷ್ಟ ಪ್ರಾಚೀನ ವೈದ್ಯಕೀಯ ಜ್ಞಾನದ ವೈದ್ಯರಾದ ಡಾ|| ಪಿ.ಪಿ. ಹೆಮ್ ಬ್ರಾಮ್‍ರವರ ಅಭಿಪ್ರಾಯದಂತೆ, "ಮೂಲನಿವಾಸಿಗಳಲ್ಲಿ ಇರುವ ಜನ್ಮ ಸಹಜವಾದ ಗುಣವು ಔಷಧೀಯ ಗಿಡಮೂಲಿಕೆಗಳನ್ನು ಗುರುತಿಸಲು ಅವಕಾಶ ಮಾಡಿಕೊಡುತ್ತದೆ. ಜಾರ್ಖಂಡ ರಾಜ್ಯವು ಸುಮಾರು ಸಾವಿರದ ಇನ್ನೂರು ಪ್ರಕಾರದ, ಸಸ್ಯ ಸಂಬಂಧಿತವದ ವಸ್ತಿ ದ್ರವವನ್ನು ಹೊಂದಿರುವ ಏಕೈಕ ರಾಜ್ಯವಾಗಿ ಮೆರೆದಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳು ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿವೆ. ಮಲೇರಿಯಾ ರೋಗದಿಂದ ಕಾಲಾ ಅಝಾರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ. " ಡಾ|| ಹೆಮ್ ಬ್ರಾಮ್‌ರವರು ಹೊಡೊಪತಿಯೂ ಸಹ ತೀವ್ರತರ ರೋಗಗಳಾದ ಕ್ಯಾನ್ಸರ್ ಮತ್ತು ಏಡ್ಸ್‍ನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಪಡಿಸುವುದೆಂದು ನಂಬುತ್ತಾರೆ. ಅವರು ಸ್ವತಃ ಕ್ಷಯ, ಮಲೇರಿಯಾ, ಅನೀಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಚರ್ಮರೋಗ ಮತ್ತು ಗಂಟುಗಳಿಂದ ತೀವ್ರವಾಗಿ ಬಳಲುತ್ತಿದ್ದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಿದರು.
ಡಾ|| ಹೆಮ್ ಬ್ರಾಮ್‍ರವರು ತಮ್ಮ ಒಂದು ಉಪನ್ಯಾಸದಲ್ಲಿ ತಾವು ಔಷಧಗಳಲ್ಲಿ ಉಪಯೋಗಿಸುವ ವಸ್ತುಗಳ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೌಹಾಚಾಲ್ ಬಾರ್ ಮತ್ತು ಗುಲ್ಲಾರ್ ವೃಕ್ಷಗಳ ತೊಗಟೆಗಳನ್ನು ಹಿಂದಿ ತೆಗೆದ ರಸದಿಂದ ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತಾರೆ. ಕ್ಷಯರೋಗಕ್ಕಾಗಿ ಅವರು ಮೊಟ್ಟೆಯ ಹಳದಿಭಾಗ, ಹಲಸಿನ ಹಣ್ಣು ಮತ್ತು ಮಾಲ್ ಕಂಗಿನಿ ಬಳ್ಳಿಯ ಎರಡು ಹನಿಗಳನ್ನು ಸೇರಿಸಿ ತಯಾರಿಸಿದ ಔಷಧವನ್ನು ಬಳಸುತ್ತಾರೆ ಮತ್ತು ಕಾಲಾ ಅಝಾರ್ ರೋಗವನ್ನು ಪುನಾರ್ಣವ ಬೇರುಗಳು ಮತ್ತು ಚಾರೈಗೊಡ ಚಕ್ಕೆಯ ರಸಗಳಿಂದ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.
ಜಾರ್ಖಂಡದಲ್ಲಿರುವ ಅತ್ಯಂತ ದಟ್ಟವಾದ ಸಸ್ಯವರ್ಗವು ಶ್ರೇಷ್ಠವಾದ ಔಷಧೀಯ ಗುಣಗಳಿಂದ ಕೂಡಿದೆ. ಮೂಲನಿವಾಸಿ ಜನಾಂಗವು ದೇಸಿಯ ಆಯುರ್ವೇದ ಪದ್ಧತಿಯಿಂದ ರೋಗಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ತಮ್ಮ ಪೂರ್ವಜರಿಂದ ಪಡೆದದ್ದಾಗಿದೆ. ಕಾಲಕ್ರಮೇಣ ಜನರು ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ತೊರೆದು, ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ಪದ್ಧತಿಯು ತನ್ನ ಹಿಂದಿನ ಗರಿಮೆಯನ್ನು ಕಳೆದುಕೊಳ್ಳುತ್ತಿದೆ. ಡಾ|| ಹೆಮ್ ಬ್ರಾಮ್‍ರವರು ಈ ಪ್ರಾಚೀನ ಪದ್ಧತಿಯನ್ನು ನವೀನಗೊಳಿಸಿ, ಸ್ಥಳೀಯ ಲಾಭರಹಿತ ಸಂಸ್ಥೆಗಳಾದ 'ಹೊಡೂಪತಿ ಸಾಂಸ್ಕೃತಿಕ ಔಷಧ ಸಂಶೋಧನಾ ಮತ್ತು ವಿಕಾಸ ಕೇಂದ್ರ' ಹಾಗೂ `ಫುಲಿನ್ ಮಹಿಳಾ ಚೇತನ ವಿಕಾಸ ಕೇಂದ್ರಗಳ ಮೂಲಕ ಹೊಡೊಪತಿ ಜನಾಂಗದ ಮಹಿಳೆಯರಿಗೆ ತರಬೇತಿಯನ್ನು ಕೊಡುವುದರ ಮೂಲಕ ಗ್ರಾಮೀಣ ಜನರಿಗೆ ಮತ್ತೆ ಪರಿಚಯಿಸಿದರು.
Subscribe to:
Post Comments (Atom)
No comments:
Post a Comment