Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday 17 March 2013

ಹೀಗೊಂದು ವಿಭಿನ್ನ, ವಿಶೇಷ ಪತ್ರಿಕೆ `ಸ್ಪರ್ಧಾ ಚಾಣಕ್ಯ'


ಪ್ರಿಯ ಸ್ಪರ್ಧಾರ್ಥಿಗಳೇ,
          ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದಾ ಸಿದ್ಧತೆ ನಡೆಸುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಸ್ತತ ಹಲವಾರು ಪತ್ರಿಕೆಗಳು ನಿರತವಾಗಿರುವುದು ತಮಗೆಲ್ಲ ತಿಳಿದಿರುವ ಸಂಗತಿ. ಅವುಗಳಲ್ಲಿ ವಿಶಿಷ್ಟವಾದುದ್ದು ಹಾಗೂ ವಿನೂತನ ಪ್ರಯೋಗಗಳಿಗೆ ಹೆಸರಾಗಿರುವ `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ತಮಗೆ ಪರಿಚಯಿಸಬೇಕೆಂಬುದು ನನ್ನ ಉದ್ದೇಶ. `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ವಿಜಾಪುರ (ವಿಜಯಪುರ)ದ ಹೆಮ್ಮೆಯ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ `ಚಾಣಕ್ಯ ಕರಿಯರ್ ಅಕಾಡೆಮಿ' ಪ್ರತಿ ಪಾಕ್ಷಿಕಗೊಮ್ಮೆ ಪ್ರಕಟಿಸುತ್ತಿದೆ. ಪ್ರಚಲಿತ ಘಟನೆಗಳು, ಸಾಮಾನ್ಯ ಜ್ಞಾನ ವಿಭಾಗ, ಸಂಸ್ಥೆಯ ಸ್ಥಾಪಕ ಮುಖ್ಯಸ್ಥರಾದ ಹಾಗೂ ಪ್ರಧಾನ ಸಂಪಾದಕರಾದ ಶ್ರೀ ಎನ್.ಎಂ.ಬಿರಾದಾರ ಅವರು ಬರೆಯುವ `ಸಮಾಧಾನ ಅಂಕಣ' ಎಷ್ಟೋ ನೊಂದ, ದಾರಿಕಾಣದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ, ದಾರಿದೀಪವಾಗಿದೆ. ನಡೆದಾಡುವ ದೇವರೆಂದೆ ಜನಪ್ರಿಯರಾದ, ಅಸಂಖ್ಯಾತ ಜನರ ಆರಾಧ್ಯ ದೈವವಾದ ವಿಜಾಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ `ದಿವ್ಯ ಸಂದೇಶ' ಮತ್ತು ಖ್ಯಾತ ಶಿಕ್ಷಣ ತಜ್ಞರು ಮತ್ತು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶ್ರೀ ಡಾ. ಗುರುರಾಜ ಕರಜಗಿಯವರ `ವ್ಯಕ್ತಿತ್ವ ವಿಕಸನ' ಅಂಕಣ ಪ್ರಕಟವಾಗುತ್ತಿವೆ. ಇವಲ್ಲದೇ ತಾನಾಜಿ ಇಂಗಳೆ ಅವರ ಪ್ರಬಂಧ ಲೇಖನ, ಚಾಣಕ್ಯ ಕರಿಯರ್ ಅಕಾಡೆಮೆ ಉಪನ್ಯಾಸಕರಾದ ಶ್ರೀ ಬಿ.ಡಿ.ಪಾಟೀಲ ಅವರಿಂದ ಕನ್ನಡ ವಿಷಯದ ಮಾಹಿತಿ ಹಾಗೂ ಮತ್ತೋರ್ವ ಉಪನ್ಯಾಸಕರಾದ ಶ್ರೀ ಸಂತೋಷ್ ಕುಲಕರ್ಣಿ ಅವರಿಂದ ಗಣಿತ ವಿಷಯದ ಸಮಸ್ಯೆಗಳ ಬಿಡಿಸುವಿಕೆಯ ಲೇಖನ, ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಲೇಖನಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಹೀಗೆ ಹಲವಾರು ವೈವಿಧ್ಯಮಯ ವಿಷಯಗಳನ್ನು ಹೊತ್ತು ಪ್ರತಿ ಪಾಕ್ಷಕಕ್ಕೊಮ್ಮೆ ರಾಜ್ಯದ ಎಲ್ಲ ಭಾಗಗಳ ಪುಸ್ತಕ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ತಾವು ಕೂಡ ಖರೀದಿಸಿ ಒಮ್ಮೆ ಓದಿ ತಮ್ಮ ಅಮೂಲ್ಯ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ತಿಳಿಸಿ.
                                           - ಜ್ಞಾನಮುಖಿ
                                  (ಗುರುಪ್ರಸಾದ್ ಎಸ್. ಹತ್ತಿಗೌಡರ)
     ಪತ್ರಿಕೆಯ ವಿಳಾಸ
   ಸ್ಪರ್ಧಾ ಚಾಣಕ್ಯ ಪಾಕ್ಷಿಕ ಪತ್ರಿಕಾಲಯ
    ಮಲಘಾಣ ಬಿಲ್ಡಿಂಗ್, 3ನೇ ಮಹಡಿ, ಮೀನಾಕ್ಷಿ ಚೌಕ
     ಬಿಜಾಪುರ - 586101   ದೂರವಾಣಿ: 08352-240197

             ಕಾರ್ಯಾಲಯ 9900056218
 ಪ್ರಸರಣ: 9538038531
ಮಿಂಚಂಚೆ: - spardha_chanakya@yahoo.com

No comments: