Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 4 May 2013

ನಿಮ್ಮಲ್ಲೂ `ಸುಧಾ' ಇದ್ದಾಳೆ

ನಿಮ್ಮಲ್ಲೂ `ಸುಧಾ' ಇದ್ದಾಳೆ

ಮೂಲ ಲೇಖನ : ಶ್ರೀ ಎನ್.ಎಂ.ಬಿರಾದಾರ
                ಸಂಸ್ಥಾಪಕರು ಮತ್ತು ಮುಖ್ಯಸ್ಥರು
                ಚಾಣಕ್ಯ ಕರಿಯರ್ ಅಕಾಡೆಮಿ ಬಿಜಾಪುರ (ಕರ್ನಾಟಕ)
    ಜೀವನದ ಹೋರಾಟದಲ್ಲಿ ಅಪಮಾನ, ನಿಂದನೆ, ಹಿನ್ನಡೆ, ಸೋಲು ಹಾಗೂ ಜಿಗುಪ್ಸೆ ಇರುವವು. ಇವು ಇರದಿದ್ದರೆ, ಜೀವನ ನೀರಸವಾಗುತ್ತದೆ. ಇವುಗಳನ್ನು ನೀವು ಜೀವನದಲ್ಲಿ ನೀವು ಯಾವ ರೀತಿ ಸ್ವೀಕರಿಸುತ್ತಿರೋ ಎಂಬುವುದು ಮುಖ್ಯ. ಇವುಗಳಿಂದ ಕೆಲವರು ಮನ ನೊಂದುಕೊಂಡು, ಸ್ಪರ್ಧೆಯಿಂದ ಓಡಿ ಹೋಗುತ್ತಾರೆ. ಇನ್ನೂ ಕೆಲವರು ತಮ್ಮ ಸಾಮರ್ಥ್ಯವನು ಹಿಯಾಳಿಸಿದವರಿಗೆ ತೋರಿಸಿ ಕೊಡುವದಕ್ಕೆ ಇನ್ನಷ್ಟು ಶಕ್ತಿಯೊಂದಿಗೆ ಹೆಜ್ಜೆ ಹಾಕುತ್ತಾರೆ. ಇದಕ್ಕೆ ಉದಾಹರಣೆ `ಸುಧಾ' ಎಂಬ ಹುಡುಗಿಯ ಛಲದಿಂದ ಕೂಡಿದ ಜೀವನವನ್ನು ನಿಮಗೆ ಪರಿಚಯಿಸುತ್ತೇನೆ.

 `ಸುಧಾ' ಬೆಳಗಾವಿ ಜಿಲ್ಲೆಯ ಅಥಣಿಯ ತಾಲೂಕಿನ ಒಂದು ಸಣ್ಣ ಗ್ರಾಮದವಳು. ಇವಳು ೪ ನೇ ತರಗತಿಯಲ್ಲಿ ಇದ್ದಾಗಲೇ ಮಾವನೊಂದಿಗೆ ಹಿರಿಯರು ಹೆಸರು ಇಟ್ಟರು. ಅವನು ಆಗ ೮ನೇ ತರಗತಿಯಲ್ಲಿ ಓದುತ್ತಿದ್ದ. ಸುಧಾಳಿಗೆ ಅದರ ಅರಿವೆ ಇರಲಿಲ್ಲ. ಅದು ವಯಸ್ಸು ಕೂಡ ಅಲ್ಲ ಬಿಡಿ. ಶಾಲೆಯಲ್ಲಿ ಚುರುಕಾಗಿದ್ದ ಸುಧಾ ಹಂತ ಹಂತವಾಗಿ ಉತ್ತಮ ದರ್ಜೆಯಲ್ಲಿ ಪಾಸಾಗುತ್ತಾ ಪಿ.ಯು.ಸಿ ಮುಗಿಸಿದಳು. ಅವಳು ಹೈಸ್ಕೂಲಿಗೆ ಬಂದಾಗ ಮಾವನೊಂದಿಗೆ ಹೆಸರು ಕೇಳಿ ಎಲ್ಲಾ ಹುಡುಗಿಯರಂತೆ ನಾಚಿಕೆಯೊಂದಿಗೆ, ಮಾವನ ಬಗ್ಗೆ ತನ್ನದೆಯಾದ ಕನಸು ಕಂಡಳು. ಮನ್ಯಲ್ಲಿ ಯಾರು ಇಲ್ಲದಿದ್ದಾಗ, ಇಬ್ಬರೇ ಗಂಟೆಗಟ್ಟಲೇ  ಮಾತಾಡುತ್ತಿದ್ದರು. ತನ್ನದೆಯಾದ ಲೋಕದಲ್ಲಿ ವಿಹರಿಸುತ್ತಿದ್ದಳು. ಅವನು ಡಿಗ್ರಿ ಮುಗಿಸಿ ವ್ಯಾಪಾರ ಮಾಡಲು ಆರಂಭಿಸಿದನು. ಈ ಕಡೆ ಇವಳು ಬಿ.ಇಡಿ ಕಲಿಯಲು ತನ್ನ ಚಿಕ್ಕಮ್ಮನ ಮಗಳಾದ ಸವಿತಾಳೊಂದಿಗೆ ಹಾರೂಗೇರಿ ಕಾಲೇಜಿಗೆ ಸೇರಿದಳು. ಬಿ.ಇಡಿ. ಫಲಿತಾಂಶ ಬಂದಾಗ ಸುಧಳಿಗೆ ಆಘಾತವಾಗಿತ್ತು. ಅವಳು ಶೇಕಡಾ ೭೦ ಅಂಕಗಳೊಂದಿಗೆ ಪಾಸಾಗಿದ್ದರೆ, ಶೇಕಡಾ ೮೯ ಅಂಕಗಳೊಂದಿಗೆ ಸವಿತಾ ಕಾಲೇಜಿಗೆ ಪ್ರಥಮ ಬಂದಿದ್ದಳು. ಈ ಫಲಿತಾಂಶವು ಸುಧಾಳ ಜೀವನದಲ್ಲಿ ಬಿರುಗಾಳಿಯನು ಉಂಟು ಮಾಡಿತು. ಅವಳು ಯಾರೊಂದಿಗೆ ಮದುವೆ ಕನಸು ಕಂಡಿದ್ದಾಳೋ ಅವನು ಇವಳನ್ನು ನಿರಾಕರಿಸಲು ಆರಂಭಿಸಿದನು. ಇದಕ್ಕೆ ಕಾರಣ ಇವಳದು ಪರ್ಸೆಂಟೇಜ್ ಕಡಿಮೆಯಾಗಿದೆ. ನೌಕಾರಿ ಆಗುವುದಿಲ್ಲವೆಂಬ ಭಾವನೆ ಬೆಳೆಸಿಕೊಂಡನು. ಅವನು ಒಂದು ದಿನ ಸಂಬಂಧಿಕರೆಲ್ಲರನ್ನು ಕೂಡಿಸಿ ನಾನು ಮದುವೆಯಾಗುವುದಿದ್ದರೆ, ಸವಿತಾಳನ್ನು. ನೀವು ಇದಕ್ಕೆ ಒಪ್ಪದಿದ್ದರೆ ಹೊರಗಿನ ಹುಡುಗಿಯನ್ನು ಮದುವೆಯಾಗುತ್ತೇನೆಂದು ನಿರ್ಧಾರ ಹೇಳಿದನು. ಆಗ ಹಿರಿಯರು ತುಪ್ಪ ಎಲ್ಲಿ ಚೆಲ್ಲಿತು ಎಂದರೆ ಕಿಚಡಿಯಲ್ಲಿ ಎಂದು, ಅವನ ನಿರ್ಧಾರಕ್ಕೆ ಒಪ್ಪಿಗೆ ನೀಡದರು. ಆಗ ಹಿರಿಯರು ಸುಧಾಳಿಗೆ ಒಂದು ಮಾತು ಕೇಳಲಿಲ್ಲ. ಅವಳಿಗೆ ತುಂಬಾ ದುಃಖವಾಯಿತು. ಒಂದು ದಿನ ತಾಯಿಯನ್ನು ಕೇಳಿದಾಗ, ನಾವೇನು ಮಾಡಲು ಸಾಧ್ಯವಿದೆ. ನಿನಗೆ ಓದಿ ಹೆಚ್ಚಿನ ಫಲಿತಾಂಶ ಪಡೆಯಲು ಏನು ಕಷ್ಟವಾಗಿತ್ತು ಎಂದು ಹಿಯಾಳಿಸಿದರು. ಬಂಗಾರದಂಥ ಸಂಬಂಧ ನಿನ್ನಿಂದ ಬಿಡಬೇಕಾಯಿತು. ದರಿದ್ರಳಾದ ನಿನ್ನನ್ನು ಯಾರು ಮದುವೆಯಾಗುತ್ತಾರೊ, ಯಾರು ಜೋಡಿಯಾದಾರೂ ಆಘಾತವಾಗುತ್ತದೆ ಎಂದು ಅಸಹ್ಯ ಮಾತುಗಳನ್ನಾಡಿದರು.

        ಸುಧಾ ಹಾಗೂ ಸವಿತಾ ಇಬ್ಬರೂ ಕೂಡಿಕೊಂಡು ಕೋಚಿಂಗ್ ಬಂದರು. ಕೋಚಿಂಗ್‍ನಲ್ಲಿದ್ದಾಗಲೇ ಸವಿತಾಳ ಮದುವೆ ನಡೆಯಿತು. ಮದುವೆ ನಡೆದ ದಿನವೇ `ಸುಧಾ' ನನ್ನ ಹತ್ತಿರ ಬಂದಿದ್ದಳು. ಸರ್, ಇವತ್ತೂ ನಮ್ಮ ಚಿಕ್ಕಮ್ಮನ ಮಗಳ ಮದುವೆ ಇದೆ. ನಾನು ಹೋಗಲಿಲ್ಲ. ನನಗೆ ಧೈರ್ಯ ಹೇಳಿ ಎಂದಾಗ, ನಾನು ಯಾಕೆ ಹೋಗಲಿಲ್ಲ? ಎಂದಾಗ, ಮೇಲಿನ ತನ್ನ ವೃತ್ತಾಂತವನ್ನು ಹೇಳಿದಳು. ಆಯಿತು, ಈಗೇನು ಮಾಡಬೇಕು ಎಂದು ಮಾಡಿದ್ದೀ ಎಂದಾಗ, ಅವನು ನನ್ನದು ನೌಕರಿಯಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾನಲ್ಲ. ಅವನ ಎದುರಿಗೆ ನೌಕರಿ ಮಾಡಬೇಕು ಎಂದು ಅಳಲು ಪ್ರಾರಂಭಿಸಿದಳು. ನಂತರ ಸಾವರಿಸಿಕೊಂಡು ಸರ್, ನಿಮ್ಮ ವ್ಯಕ್ತಿತ್ವ ತರಗತಿ ನನ್ನ ಜೀವನಕ್ಕೆ ಹೊಸ ತಿರುವು ನೀಡಿತು. ನೀವು ಒಂದು ದಿನ ಹೇಳಿದ ಮಾತು ಇವತ್ತಿಗೂ ಕೂಡಾ ನನಗೆ ಸ್ಫೂರ್ತಿಯಾಗಿದೆ. ನಮಗೆ ಅಂಥವರಿಗೆ ನಿಂದನೆ ಮಾಡಿದವರಿಗೆ ನಮ್ಮ ಚಪ್ಪಲಿಯಿಂದ ಉತ್ತರಿಸಬಾರದು. ನಮ್ಮ ಸಾಧನೆಯ ಮೂಲಕ ಉತ್ತರಿಸಬೇಕು ಎಂಬ ಮಾತು ಬಹಳಷ್ಟು ಸ್ಫೂರ್ತಿ ನೀಡಿತು. ನನು ನೌಕರಿಯಾಗದೇ ಊರಿಗೆ ಹೋಗುವುದಿಲ್ಲ ಸರ್, ನನಗೆ ಸಹಾಯ ಮಾಡಿ ಎಂದಳೂ. ಕೋಚಿಂಗ್ ಮುಗಿದ ನಂತರ ಕೂಡಾ ಅವಳು ಬಿಜಾಪುರದಲ್ಲಿ ಇದ್ದು ಓದಲು ಆರಂಭಿಸಿದಳು. ಅವಳ ಪರೀಕ್ಷೆ ಮುಗಿಯುವವರೆಗೆ ಊಟದ ಹಾಗೂ ರೂಮ್ ವ್ಯವಸ್ಥೆ ಮಾಡಿಕೊಟ್ಟೆನು.

        ಮೊನ್ನೆ ಬಂದ ಹೈಸ್ಕೂಲ್ ಫಲಿತಾಂಶದಲ್ಲಿ ಸುಧಾ ಆಯ್ಕೆಯಾಗಿದ್ದಳು. ಸವಿತಾ ೨ ಅಂಕಗಳಿಂದ ಹೊರಗೆ ಉಳಿದಳು. ಸುಧಾ ಛಲ ನೋಡಿ ನನಗೆ ಖುಷಿಯಾಯಿತು. ಸುಧಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದರೆ ಅವರ ಚಿಂತೆ ಮಾಡುತಾ, ಅಳುತ್ತಾ, ಜಿಗುಪ್ಸೆ ಪಡುತ್ತಾ ಜೀವನ ಕಳೆಯುತ್ತಿದ್ದಳು. ಸುಧಾಳ ಮಾವನಿಗೆ ಯಾವ ರೀತಿಯಾಗಿರಬೇಕು ಎಂದು ನೀವೇ ಊಹಿಸಿ.

ಕೊನೆಯ ಮಾತು: ಜೀವನದಲ್ಲಿ ಏನೇ ಘಟಿಸಲಿ, ನಿಮ್ಮ ನಂಬಿಕೆ ಆತ್ಮವಿಶ್ವಾಸ ಹಾಗೂ ಛಲವನ್ನು  ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

No comments: