Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 19 January 2012

ಶತಮಾನೋತ್ಸವ ಆಚರಿಸಿಕೊಂಡ ರಾಷ್ಟ್ರಗೀತೆ



       ಭಾರತದ ರಾಷ್ಟ್ರೀಯತೆ, ಸಾರ್ವಭೌಮತೆ ಮತ್ತು ಐಕ್ಯತೆಯನ್ನು ಸಾರುವ ಭಾರತದ ರಾಷ್ಟ್ರಗೀತೆಯಾದ `ಜನಗಣಮನ'ವು ಡಿಸೆಂಬರ್ ೨೭, ೨೦೧೧ಕ್ಕೆ ೧೦೦ವರ್ಷ ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು.

       ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ರವರು ರಚಿಸಿದ ಜನಗಣಮನ ಗೀತೆಯನ್ನು ರಾಷ್ಟ್ರೀಯ ಕಾಂಗ್ರೆಸ್‍ನ ಕಲ್ಕತ್ತಾ ಅಧಿವೇಶನದಲ್ಲಿ ಡಿಸೆಂಬರ್ ೨೭, ೧೯೧೧ರಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಭಾರತ ದೇಶದ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಘೋಷಿಸಿ ಅಳವಡಿಸಿಕೊಳ್ಳಲಾಯಿತು. ದೇಶದ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ದೇಶದ ಹೆಮ್ಮೆಯ ಸಂಕೇತವಾದ ಜನಗಣಮನವನ್ನು ಹಾಡಲಾಗುತ್ತದೆ. ಬ್ರಿಟಿಷರು ಬ್ರಿಟನ್ ದೇಶದ ರಾಷ್ಟ್ರಗೀತೆಯಾದ `ದಿ ಗಾಡ್ ಸೇವ್ ದಿ ಕ್ವೀನ್' ಎಂಬ ಗೀತೆಯನ್ನು ಭಾರತದ ರಾಷ್ಟ್ರಗೀತೆಯನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದ್ದ ಕಾಲದಲ್ಲಿ ರವೀಂದ್ರನಾಥ ಟ್ಯಾಗೋರ್‌ರವರು ದೇಶದ ವೈವಿಧ್ಯತೆ, ಏಕತೆ ಮತ್ತು ಸಾರ್ವಭೌಮತೆಯನ್ನು ಪ್ರತಿನಿಧಿಸುವ ರಾಷ್ಟ್ರಗೀತೆಯನ್ನು ಪ್ರತಿನಿಧಿಸುವ ರಾಷ್ಟ್ರಗೀತೆಯನ್ನು ದೇಶಕ್ಕೆ ಅರ್ಪಿಸಿದರು.

          `ಗುರುದೇವ್' ಎಂದೇ ಖ್ಯಾತರಾದ ಬಂಗಾಳಿ ಕವಿ ರವೀಂದ್ರನಾಥ್ ಟ್ಯಾಗೋರ್‌ರವರು ಮೇ೭, ೧೮೬೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ದೇವೇಂದ್ರನಾಥ್ ಟ್ಯಾಗೋರ್ ಮತ್ತು ಶಾರದಾ ದೇವಿಯವರ ಪುತ್ರರಾಗಿ ಜನಿಸಿದರು. ೨೦೧೧ರಲ್ಲಿ ಇವರ ೧೫೦ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇವರು ಬರೆದ `ಗೀತಾಂಜಲಿ' ಕೃತಿಗೆ ೧೯೧೩ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಈ ಮೂಲಕ ಏಷ್ಯಾದಲ್ಲೇ ನೊಬೆಲ್ ಪ್ರಶಸ್ತಿ ಪಡೆದ ಮೊದಲಿಗರು ಎಂಬ ಖ್ಯಾತಿ ಹೊಂದಿದ್ದಾರೆ. ರವೀಂದ್ರನಾಥ್ ಟ್ಯಾಗೋರ್‌ರವರು ಗಾಂಧೀಜಿಯವರನ್ನು `ಮಹಾತ್ಮಾ' ಎಂದು ಕರೆದಿದ್ದರು. ಇಂದಿರಾ ಗಾಂಧಿಯವರನ್ನು ಪ್ರಿಯದರ್ಶಿನಿ ಎಂದು ಕರೆದಿದ್ದರು. ಪಶ್ಚಿಮ ಬಂಗಾಳದ ಶಾಂತಿ ನಿಕೇತನದಲ್ಲಿ `ವಿಶ್ವ ಭಾರತಿ'ಯನ್ನು ೧೮೬೩ರಲ್ಲಿ ಸ್ಥಾಪಿಸಿದರು. ಇವರು ಬಾಂಗ್ಲಾದೇಶದ ರಾಷ್ಟ್ರಗೀತೆಯಾದ `ಆಮಾರ್ ಸೋನಾರ್ ಬಂಗಾಳ..." ಎಂಬ ಪದ್ಯವನ್ನು ೧೯೦೫ರಲ್ಲಿ ಬಂಗಾಳದ ವಿಭಜನೆ ಸಂದರ್ಭದಲ್ಲಿ ಬರೆದರು. ಈ ಪದ್ಯದ ಮೊದಲ ಹತ್ತು ಸಾಲುಗಳನ್ನು ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನಾಗಿ ೧೯೭೨ರಲ್ಲಿ ಅಳವಡಿಸಿಕೊಳ್ಳಲಾಗಿದೆ. ರವೀಂದ್ರನಾಥ ಟ್ಯಾಗೋರ್‌ರವರು ಆ.೭,೧೯೪೧ರಲ್ಲಿ ನಿಧನರಾದರು. ಎಕ್ಲಾ ಚೋಲಾರೆ ಎಂಬುದು ರವೀಂದ್ರನಾಥ ಟ್ಯಾಗೋರ್ ಬರೆದ ದೇಶಭಕ್ತಿ ಗೀತೆಯಾಗಿದೆ.


    ಪ್ರಶ್ನೆಗಳು

೧. ರಾಷ್ಟ್ರಗೀತೆಯ ಮೂಲ ರಚನೆ ಯಾವ ಭಾಷೆಯಲ್ಲಿದೆ?
          ಸಂಸ್ಕೃತ ಮಿಶ್ರಿತ ಬಂಗಾಳಿ ಭಾಷೆಯಲ್ಲಿದೆ.

೨. ರಾಷ್ಟ್ರಗೀತೆಯನ್ನು ಆಯ್ಕೆ ಮಾಡಿರುವುದು ಎಲ್ಲಿಂದ?
   ಬ್ರಹ್ಮೋಮಂತ್ರದ ಮೊದಲ ಐದು ಪ್ಯಾರಾಗಳು

೩. ರಾಷ್ಟ್ರಗೀತೆಯ ಮೊದಲ ಹೆಸರು : ಭಾರತ ಭಾಗ್ಯ ವಿಧಾತ

ಭಾರತದ ರಾಷ್ಟ್ರಗೀತೆಯನ್ನು ಹಾಡುವ ಅವಧಿ ಎಷ್ಟು?
     ೫೨ ಸೆಕೆಂಡು

ರಾಷ್ಟ್ರಗೀತೆ ಜನಗಣಮನವನ್ನು ಮೊದಲ ಬಾರಿಗೆ ಪ್ರಕಟಿಸಿದ್ದು ಯಾವಾಗ?
    ರವೀಂದ್ರನಾಥ ಟ್ಯಾಗೋರ್‌ರವರ ತತ್ವಬೋಧ ಪ್ರಕಾಶಿಕ ಮತ್ತು ಬ್ರಹ್ಮ ಸಮಾಜ ಪತ್ರಿಕೆಯಲ್ಲಿ ೧೯೧೧ರಲ್ಲಿ ಪ್ರಕಟಿಸಲಾಗಿತ್ತು.

    ರಾಷ್ಟ್ರಗೀತೆಯನ್ನು ಇಂಗ್ಲೀಷ್‍ಗೆ ಭಾಷಾಂತರಿಸಿದ್ದು ಯಾವಾಗ?
   ಫೆ.೨೮,೧೯೧೯ರಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನ ಪಲ್ಲಿ ಬಳಿಯಲ್ಲಿನ ಬೆಸೆಂಟ್ ಥಿಯೋಸೋಫಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಐರಿಷ್ ಕವಿ ಜೇಮ್ಸ್ ಕುಸ್ಸಿನ್‍ರವರು ಆಹ್ವಾನದಂತೆ ಜನಗಣಮನವನ್ನು ಇಂಗ್ಲೀಷ್‍ಗೆ ಭಾಷಾಂತರಿಸಿ . `ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂಬ ಶೀರ್ಷಿಕೆ ನೀಡಿದರು.

ರಾಷ್ಟ್ರಗೀತೆಗೆ ರಾಗ ಸಂಯೋಜನೆ ಯಾವಾಗ ಮಾಡಲಾಯಿತು?
       ರವೀಂದ್ರನಾಥ ಟ್ಯಾಗೋರ್‌ರವರು ಪ್ರಸ್ತುತವಾಗಿ ಹಾಡುವ ರಾಷ್ಟ್ರಗೀತೆಯ ದಾಟಿಗೆ ರಾಗ ಸಂಯೋಜಿಸಿದರು. 
* ಕಸ್ಸಿನ್‍ರವರ ಪತ್ನಿ ಸಂಗೀತಜ್ಞೆ ಮಾರ್ಗರೇಟ್‍ರವರು `ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ' ಎಂಬ ಹೆಸರಿನ ಜನಗಣಮನಕ್ಕೆ ಸಂಗೀತ ಸಂಯೋಜನೆ ಮಾಡಿದರು.

 ರಾಷ್ಟ್ರಗೀತೆಯನ್ನು ಸಂಕ್ಷಿಪ್ತವಾಗಿ ಹಾಡುವ ಸಂದರ್ಭದಲ್ಲಿ ತೆಗೆದುಕೊಳ್ಳುವ ಕಾಲ: ರಾಷ್ಟ್ರಗೀತೆಯನ್ನು ಸಂಕ್ಷಿಪ್ತವಾಗಿ ಹಾಡುವಾಗ ಮೊದಲ ಮತ್ತು ಕೊನೆಯ ಸಾಲನ್ನು ೨೦ಸೆಕೆಂಡ್ ಅವಧಿಯಲ್ಲಿ ಹಾಡಲಾಗುತ್ತದೆ.

No comments: