ಬಾಂಗ್ಲಾದೇಶ
ಗಂಗಾ-ಬ್ರಹ್ಮಪುತ್ರ ಮುಖಜ ಭೂಮಿಯ ೨/೩ರಷ್ಟು ಭೂಭಾಗವನ್ನು ಬಾಂಗ್ಲಾದೇಶ ಒಳಗೊಂಡಿದೆ.
ಬಾಂಗ್ಲಾದೇಶವು ನದಿಗಳು ತಂದು ಹಾಕಿದ ಫಲವತ್ತಾದ ಮೆಕ್ಕಲು ಮಣ್ಣಿನಿಂದ ರೂಪುಗೊಂಡಿರುವ ತಗ್ಗು ಪ್ರದೇಶವಾಗಿದೆ.
ತಿಳಿದಿರಲಿ: ಶಾಶ್ವತವಾಗಿ ನೀರು ನಿಂತಿರುವ ಜಲಸಂಚಿತ ಪ್ರದೇಶವನ್ನು ಜೌಗು ಅಥವಾ ಜವುಳು ಎನ್ನುವರು
ಬಾಂಗ್ಲಾದೇಶದಲ್ಲಿ ಉಷ್ಣ ಪ್ರದೇಶದ ಮಳೆಗಾಲದ ವಾಯುಗುಣವಿರುತ್ತದೆ. ನೈಋತ್ಯ ವರ್ಷ ಮಾರುತಗಳು ಜೂನ್‍ನಿಂದ ಸೆಪ್ಟೆಂಬರ್‌ವರೆಗಿನ ಮಳೆಯನ್ನು ತರುತ್ತವೆ.
ಚಿತ್ತಗಾಂಗ್ ಮತ್ತು ಸಿಲ್ವೆಟ್ ಬೆಟ್ಟ ಪ್ರದೇಶದಲ್ಲಿ ಮಾನ್ಸೂನ್ ಕಾಡುಗಳಿವೆ.
ಮುಖ್ಯ ಮರ : ತೇಗ
ಸುಂದರಬನ್ಸ್ ಎಂಬ ಕಾಡಲ್ಲಿ ಸುಂದರಿ ಮರಗಳಿದ್ದು, ಹುಲಿಗಳು ಸಾಕಷ್ಟು ಸಂಖ್ಯೆಯಲ್ಲಿವೆ.
ಪ್ರಧಾನ ವೃತ್ತಿ : ವ್ಯವಸಾಯ
ಪ್ರಧಾನ ಬೆಳೆ / ಆಹಾರ - ಭತ್ತ
ಬಾಂಗ್ಲಾದೇಶವು ಸೆಣುಬು ಕೈಗಾರಿಕೆಗೆ ಪ್ರಸಿದ್ಧವಾಗಿದೆ.
ಬಾಂಗ್ಲಾದೇಶದ ರಾಜಧಾನಿ : ಢಾಕಾ
ಮುಖ್ಯ ಬಂದರು : ಚಿತ್ತಗಾಂಗ್
ಪ್ರಮುಖ ನಗರ : ಖುಲ್ನಾ
ಕರ್ಕಾಟಕ ಸಂಕ್ರಾಂತಿ ವೃತ್ತ ಬಾಂಗ್ಲಾದೇಶದ ಮೇಲೆ ಹಾಯ್ದು ಹೋಗಿದೆ.
No comments:
Post a Comment