Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 28 November 2011

ಎರಡು ತಲೆಮಾರು


    ಎರಡು ತಲೆಮಾರು ಇದೊಂದು ವಿಶಿಷ್ಟ ಕೃತಿ. ನಾಡಿನ ಹೆಸರಾಂತ ಗಣ್ಯವ್ಯಕ್ತಿಗಳು, ಸಾಹಿತಿಗಳು, ಪತ್ರಕರ್ತರು, ಸಮಾಜಿಕ ಕಾರ್ಯಕರ್ತರು ಹೀಗೆ ಹಲವಾರು ಕ್ಷೇತ್ರದ ಜನರೆಲ್ಲರು ತಮ್ಮ ಬಾಲ್ಯ, ಬೆಳೆದು ಬಂದ ಬಗೆ, ತಮ್ಮ ಮೇಲೆ ಪ್ರಭಾವ ಬೀರಿದವರು, ಅದರಲ್ಲೂ ತಮ್ಮ ಜೀವನ ರೂಪಿಸುವಲ್ಲಿ ತಮ್ಮ ತಂದೆ-ತಾಯಿಗಳು ನೀಡಿದ ಸಂಸ್ಕಾರ ಇತ್ಯಾದಿಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ತೀರಿಕೊಂಡ ತಮ್ಮ ತಂದೆಯ ನೆನಪಿಗಾಗಿ ಅರವಿಂದ ಚೊಕ್ಕಾಡಿ ಸಂಕಲಿಸಿರುವ ಈ ಪುಸ್ತಕ ವಿಶಿಷ್ಟ ಬಗೆಯದು.
           ಬಿಜಾಪುರದ ಚಾಣಕ್ಯ ಕರಿಯರ್ ಅಕಾಡೆಮಿಯು ತನ್ನ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿತು. ಡಾ.ಯು.ಆರ್.ಅನಂತಮೂರ್ತಿ, ಡಾ.ಅರವಿಂದ್ ಮಾಲಗತ್ತಿ, ಡಾ.ಚೆನ್ನವೀರ ಕಣವಿ, ಎಚ್.ಡುಂಡಿರಾಜ್, ಗೌರಿ ಲಂಕೇಶ್, ಪ್ರೊ.ಡಿ.ಜವರೇಗೌಡ, ಡಾ.ಕಮಲಾ ಹಂಪನಾ, ನಾ.ಡಿಸೋಜಾ, ನೇಮಿಚಂದ್ರ, ಎನ್.ಎಂ.ಬಿರಾದಾರ, ಡಾ.ರಹಮತ್ ತರೀಕೆರೆ, ಅರವಿಂದ್ ಚೊಕ್ಕಾಡಿ, ಸಚಿವರಾದ ಎಸ್.ಸುರೇಶಕುಮಾರ್, ಕುಂ.ವೀರಭದ್ರಪ್ಪ, ವೈ.ಎಸ್.ವಿ.ದತ್ತ, ವೆಂಕಟೇಶ ಮಾಚಕನೂರ ಹೀಗೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ತಮ್ಮ ಬಾಲ್ಯ, ಇತಿಹಾಸವನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ಈ ಹಿಂದೆ ನಾನು ಪ್ರಕಟಿಸಿದ್ದ ಈ ಶತಮಾನದ ಚಾಣಕ್ಯ ಶ್ರೀ ಎನ್.ಎಂ.ಬಿರಾದಾರ' (ಬಾಳು ಅರಳಿಸಿದ ಕಲೆಗಾರರು) ಎಂಬ ಲೇಖನ ಈ ಪುಸ್ತಕದಿಂದಲೇ ಆರಿಸಿದ್ದು..

      ಇದು ಎರಡು ತಲೆಮಾರುಗಳ ವಿಶಿಷ್ಟ ಸಂಗಮ. ಪ್ರತಿಯೊಂದು ತಲೆಮಾರು ಕೂಡ ತನ್ನ ಹಿಂದಿನ ತಲೆಮಾರಿನೊಂದಿಗೆ ಸಾಮ್ಯತೆಯನ್ನು, ಭಿನ್ನತೆಯನ್ನು ಹೊಂದಿರುತ್ತದೆ. ಅಂತಹ ಎರಡು ತಲೆಮಾರುಗಳನ್ನು ಬೆಸೆಯುವ ಕೊಂಡಿ ಇದಾಗಿದೆ. ಆಸಕ್ತರು ಒಮ್ಮೆ ಈ ಪುಸ್ತಕವನ್ನು ಓದಿ ನೋಡಬಹುದು.


ಕೃತಿ : ಎರಡು ತಲೆಮಾರು (Eradu talemaru)
ಸಂಪಾದಕ : ಅರವಿಂದ್ ಚೊಕ್ಕಾಡಿ
ಪುಟಗಳು :400
ಬೆಲೆ : 250=00/-
ಪ್ರಕಾಶನ: ಚಾಣಕ್ಯ ಪ್ರಕಾಶನ
ಮಲಘಾಣ ಬಿಲ್ಡಿಂಗ್,
ಮೀನಾಕ್ಷಿ ಚೌಕ
ಬಿಜಾಪುರ -586101
ಮೊ: 9880957562

No comments: