ಏಷ್ಯಾ ಖಂಡವು 10 ಡಿಗ್ರಿ ದಕ್ಷಿಣ ಅಕ್ಷಾಂಶದಿಂದ 80 ಡಿಗ್ರಿ ಉತ್ತರ ಅಕ್ಷಾಂಶದವರೆಗೆ ೨೫ ಡಿಗ್ರಿ ಪೂರ್ವ ರೇಖಾಂಶದದಿಂದ 180 ಡಿಗ್ರಿ ಪಶ್ಚಿಮ ರೇಖಾಂಶದವರೆಗೂ ವಿಸ್ತರಿಸಿದೆ.
ಏಷ್ಯಾ ಖಂಡವು ಮೂರು ಕಡೆ ಸಮುದ್ರಗಳಿಂದ ಒಳಗೊಂಡಿದೆ. ಅವು
ಉತ್ತರಕ್ಕೆ - ಆರ್ಕಟಿಕ್ ಸಾಗರ
ಪೂರ್ವಕ್ಕೆ ಫೆಸಿಫಿಕ್ ಸಾಗರ
ದಕ್ಷಿಣಕ್ಕೆ - ಹಿಂದೂ ಮಹಾಸಾಗರ
ಬೇರ್ಪಡುವಿಕೆಗಳು
* ಏಷ್ಯಾ ಯುರೋಪ್‍ಗಳು ಬೇರ್ಪಟ್ತಿದ್ದು - ಯೂರಲ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಕೂಡಿದೆ.
* ಏಷ್ಯಾ - ಆಫ್ರಿಕಾ ಬೇರ್ಪಟ್ಟಿದ್ದು - ಸೂಯೆಜ್ ಕಾಲುವೆಯಿಂದ
* ಏಷ್ಯಾ - ಉತ್ತರ ಅಮೆರಿಕಾ - ಬೇರಿಂಗ್ ಜಲಸಂಧಿ
ಸೂಯೆಜ್ ಕಾಲುವೆ
ಮೇಲ್ಮೈ ಲಕ್ಷಣಗಳು
ಏಷ್ಯಾದ ಉತ್ತರ ಭಾಗದ ತಗ್ಗು ಪ್ರದೇಶವು ಜಗತ್ತಿನ ಅತ್ಯಂತ ವಿಸ್ತಾರವಾದ ಪ್ರದೇಶವಾಗಿದೆ. ಈ ಪ್ರದೇಶವನ್ನು `ಮಹಾಸೈಬೇರಿಯನ್ ಮೈದಾನ' ಎಂದು ಕರೆಯುತ್ತಾರೆ.
ಉತ್ತರದಲ್ಲಿ ದಕ್ಷಿಣ ಭಾಗಕ್ಕೆ ಪರ್ವತ ಶ್ರೇಣಿ, ಪರ್ವತ ಗ್ರಂಥಿ ಮತ್ತು ಪ್ರಸ್ಥಭೂಮಿಗಳಿವೆ.
ತಿಳಿದಿರಲಿ : ಎರಡು ಅಥವಾ ಹೆಚ್ಚು ಪರ್ವತ ಶ್ರೇಣಿಗಳು ಸಂಧಿಸುವ ಸ್ಥಳವನ್ನು ಗ್ರಂಥಿ ಎನ್ನುತ್ತೇವೆ.
ಪ್ರಮುಖ ಪರ್ವತ ಗ್ರಂಥಿಗಳು = ಪಾಮಿರ್ ಮತ್ತು ಆರ್ಮಿನೀಯ
ಪ್ರಪಂಚದ ಅತ್ಯಂತ ಶಿಖರ : ಮೌಂಟ್ ಎವೆರೆಸ್ಟ್ (8,848ಮೀ)
ಪ್ರಪಂಚದ ಎರಡನೇ ಎತ್ತರದ ಶಿಖರ - ಮೌಂಟ್ ಆಸ್ಪಿನ್ ಗಾಡ್ವಿನ್ (8,611ಮೀ.)
ಇತರ ಪ್ರಮುಖ ಶಿಖರಗಳು
ಕಾಂಚನಗಂಗಾ, ಧವಳಗಿರಿ, ಅನ್ನಪೂರ್ಣ, ನಂಗಾ ಪರ್ವತ, ಮಕಾಲು
ಜಗತ್ತಿನ ಅತ್ಯಂತ ಎತ್ತರವಾದ ಟಿಬೇಟ್ ಪ್ರಸ್ಥಭೂಮಿಯು ಹಿಮಾಲಯ ಮತ್ತು ಕುನ್‍ಲುನ್ ಪರ್ವತಗಳ ನಡುವೆ ಇದ್ದು ಸಮುದ್ರಮಟ್ಟದಿಂದ 4,600 ಮೀ. ಎತ್ತರವಿದೆ. ಆದ್ದರಿಂದಲೇ ಈ ಪ್ರಸ್ಥಭೂಮಿಯು `ಜಗತ್ತಿನ ಮೇಲ್ಛಾವಣಿ' ಎಂದು ಕರೆಯುತ್ತೇವೆ.
ಗೋಬಿ ಮರಭೂಮಿ - ಅಲ್ಟಾಯ್ ಶ್ರೇಣಿಯ ಈಶಾನ್ಯಕ್ಕೆ ಇದೆ.
ಇರಾನ್ ಪ್ರಸ್ಥಭೂಮಿ - ಪಾಮಿರ್ ಗ್ರಂಥಿಯ ಪಶ್ಚಿಮ, ಉತ್ತರದ ಮತ್ತು ದಕ್ಷಿಣ ದಿಕ್ಕಿಗಿದೆ.
ಏಷ್ಯಾ ಮೈನರ್ ಪ್ರಸ್ಥಭೂಮಿ - ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಇದೆ.
4 ಪ್ರಮುಖ ಮಹಾನದಿ ಬಯಲುಗಳು
೧. ಯುಫ್ರಿಟಿಸ್ - ಟೈಗ್ರಿಸ್ ಬಯಲು
೨. ಸಿಂಧೂ - ಗಂಗಾ ಬ್ರಹ್ಮಪುತ್ರ ಬಯಲು
೩. ಇರಾವದಿ - ಮೆಕಾಂಗ್ ಬಯಲು
೪. ಹ್ವಾಂಗ್-ಹೋ ಮತ್ತು ಯಾಂಗ್ ಟ್ಸೆಕಿಯಾಂಗ್ ಬಯಲು
ತಿಳಿದಿರಲಿ : ದ್ವೀಪಗಳ ಸರಮಾಲೆಯನ್ನು ದ್ವೀಪಸ್ಥೋಮ ಎನ್ನುತ್ತಾರೆ.
ಪ್ರಮುಖ ದ್ವೀಪಸ್ಥೋಮಗಳು -
ಇಂಡೋನೇಷ್ಯಾ, ಫಿಲಿಫೈನ್ಸ್, ಜಪಾನ್ ಮತ್ತು ಅಂಡಮಾನ್-ನಿಕೋಬಾರ್.
ಏಷ್ಯಾ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು
೧. ವಿಶಾಲವಾದ ವಿಸ್ತಾರ
೨. ಪರ್ವತ ಶ್ರೇಣಿಗಳ ಎತ್ತರ ಮತ್ತು ದಿಕ್ಕು
೩. ಕಾಲಕಾಲಕ್ಕೆ ಬೀಸುವ ಮಾರುತಗಳ ದಿಕ್ಕು ಬದಲಾವಣೆ
ಕೆಲಭಾಗಗಳನ್ನು ಹೊರತುಪಡಿಸಿದರೆ, ಇಡೀ ಏಷ್ಯಾ ಖಂಡವು ಉತ್ತರ ಗೋಳಾರ್ಧದಲ್ಲಿದೆ.
ಏಷ್ಯಾದಲ್ಲಿ ಸರಾಸರಿ 30 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸೆಖೆ ಇರುತ್ತದೆ. ಕಾರಣವೆಂದರೆ, ಕರ್ಕಾಟಕ ಸಂಕ್ರಾಂತಿ ವೃತ್ತ ಬೇಸಿಗೆಯಲ್ಲಿ ಸೂರ್ಯ ಕಿರಣಗಳು ನೇರವಾಗಿ (ಲಂಬವಾಗಿ) ಬೀಳುತ್ತವೆ.
ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಮಕರ ಸಂಕ್ರಾಂತಿ ವೃತ್ತದ ಮೇಲೆ ನೇರವಾಗಿ ಬಿದ್ದು ಕರ್ಕಾಟಕದ ಮೇಲೆ ಬಾಗುತ್ತವೆ. ಇದರಿಂದ ಮಧ್ಯ ಏಷ್ಯಾ ಬಹಳ ಚಳಿಯಿಂದ ಕೂಡಿರುತ್ತದೆ.
* ಏಷ್ಯಾದಲ್ಲಿ ಜನಸಾಂದ್ರತೆ ಪ್ರತಿ ಒಂದು ಕಿ.ಮೀ.ಗೆ 1000 ದಷ್ಟು ಇರುತ್ತದೆ.
* ಏಷ್ಯಾ ಜನರ ಪ್ರಧಾನ ವೃತ್ತಿ - ವ್ಯವಸಾಯ
* ಏಷ್ಯಾ ಜನರ ಪ್ರಮುಖ ಬೆಳೆ - ಭತ್ತ
ಭತ್ತ ಬೆಳೆಯುವ ಪ್ರಮುಖ ದೇಶಗಳು - ಚೀನಾ, ಭಾರತ, ಜಪಾನ, ಬಾಂಗ್ಲಾದೇಶ, ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ
ಏಷ್ಯಾದ ಪ್ರಮುಖ ಖನಿಜಗಳು - ಕಬ್ಬಿಣದ ಅದಿರು, ಕಲ್ಲಿದ್ದಲು, ಪೆಟ್ರೋಲಿಯಂ, ಬಾಕ್ಸೈಟ್, ಅಭ್ರಕ ಮತ್ತು ತವರ
* ಸೂಯೆಜ್ ಕಾಲುವೆಯು ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಕೂಡಿಸುತ್ತದೆ.
No comments:
Post a Comment