Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday 16 November 2011

ಭೂಗೋಳಶಾಸ್ತ್ರ ಭಾಗ-7 ಆಫ್ರಿಕಾ

                                                                             ಆಫ್ರಿಕಾ
                                       
                   ಜಗತ್ತಿನ ಎರಡನೇ ಅತಿ ದೊಡ್ಡ ಖಂಡ ವಾಯುವ್ಯ ಭಾಗದಲ್ಲಿ ಅಟ್ಲಾಸ್ ಪರ್ವತಗಳಿವೆ.

ಕಿಲಿಮಂಜಾರೋ ಅತ್ಯಂತ ಎತ್ತರದ ಶಿಖರವಾಗಿವೆ. ಆಗ್ನೇಯ ಭಾಗದಲ್ಲಿ ಡ್ರೇಕನ್ಸ್ ಬರ್ಗ್ ಪರ್ವತಗಳಿವೆ.

ದಕ್ಷಿಣ ಮತ್ತು ಪೂರ್ವ ಭಾಗಗಳು ಪ್ರಸ್ಥಭೂಮಿಗಳಾಗಿವೆ.

ಸೀಳು ಕಣಿವೆಗಳು ಪೂರ್ವಭಾಗದಲ್ಲಿದ್ದು, ಅಗ್ನಿ ಪರ್ವತ ಮತ್ತು ಭೂ ಕುಸಿತಗಳ ಪ್ರಭಾವದಿಂದ ಉಂಟಾಗಿವೆ.

ಪ್ರಪಂಚದಲ್ಲೆ ಅತ್ಯಂತ ದೊಡ್ಡದಾದ ಸಹರಾ ಮರಭೂಮಿಯು ಉತ್ತರ ದಿಕ್ಕಿಗಿದೆ.
                                    
                                                                   ಸಹರಾ ಮರಭೂಮಿ

ಪ್ರಪಂಚದಲ್ಲೇ ಅತ್ಯಂತ ಉದ್ದವಾದ (?) ನದಿಯಾದ ನೈಲ್ ನದಿಯು ಇಲ್ಲಿದೆ. ಇದು ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ನೈಲ್ ನದಿಯನ್ನು `ಈಜಿಪ್ಟನ ವರಪ್ರಸಾದ' ಎಂದು ಕರೆಯುತ್ತಾರೆ.

ಆಫ್ರಿಕ ಖಂಡದಲ್ಲಿ ಸಮಭಾಜಕ ವೃತ್ತವು ಖಂಡದ ಮಧ್ಯಭಾಗದಲ್ಲಿ ಹಾದು ಹೋಗುವುದರಿಂದ ಉಷ್ಣ ಮತ್ತು ಅರೆಉಷ್ಣ ವಾಯುಗುಣವಿದೆ. ಆದರೆ ಸಮಭಾಜಕ ವೃತ್ತದ ಎರಡೂ ಕಡೆಗಳಲ್ಲಿಯೂ ಒಂದೇ ವಿಧವಾದ ವಾಯುಗುಣವಿದೆ.

ಉತ್ತರ ಭಾಗ :- ಮಾರ್ಚ್‍ನಿಂದ ಸೆಪ್ಟೆಂಬರ್‌ವರೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ. ಬಿಸಿಲು ಹೆಚ್ಚಿರುತ್ತದೆ. ದಕ್ಷಿಣದಲ್ಲಿ ಚಳಿಯಿರುತ್ತದೆ. ಈಶಾನ್ಯ ಮಾರುತಗಳಿಂದಾಗಿ ಇಲ್ಲಿ ಮಳೆಯಾಗುವದಿಲ್ಲ.

ದಕ್ಷಿಣ ಭಾಗ : - ಸೆಪ್ಟೆಂಬರ್‌ನಿಂದ ಮಾರ್ಚ್‍ವರೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ. ಬಿಸಿಲು ಹೆಚ್ಚಿದ್ದು ಉತ್ತರದಲ್ಲಿ ಚಳಿಯಿರುತ್ತದೆ.
                                          
                                                                  ಅಟ್ಲಾಸ್ ಪರ್ವತ




                      ಸಸ್ಯಸಂಪತ್ತು ಮತ್ತು ವನ್ಯಜೀವಿಗಳು


 ಸಮಭಾಜಕ ವೃತ್ತದ ಎರಡು ಭಾಗಗಳಲ್ಲಿ ದಟ್ಟವಾದ ಅರಣ್ಯಗಳಿದ್ದು, ಹುಲ್ಲುಗಾವಲುಗಳು ಇವೆ. ಇಲ್ಲಿನ ಅರಣ್ಯಗಳನ್ನು `ಸೂರ್ಯ ಕಿರಣ ನೆಲಮುಟ್ಟದ ಕಾಡು'ಗಳೆಂದು ಕರೆಯುತ್ತಾರೆ.

ಮಹೋಗನಿ ಮರಗಳು ಹೆಚ್ಚು ಕಂಡು ಬರುತ್ತವೆ.

ಇಲ್ಲಿನ ಹುಲ್ಲುಗಾವಲುಗಳನ್ನು ಸವನ್ನ ಎಂದು ಕರೆಯುತ್ತಾರೆ. ಇವು ಸಮಭಾಜಕ ವೃತ್ತದ ಎರಡೂ ಕಡೆಗಳಲ್ಲಿ ಹರಡಿದ್ದು ದಟ್ಟಾವಾಗಿ ಉದ್ದಕ್ಕೆ ಬೆಳೆಯುತ್ತವೆ.

    ವೆಲ್ಡ್ ಹುಲ್ಲುಗಾವಲುಗಳು ಸಮಶೀತೋಷ್ಣವಲಯದ ಹುಲ್ಲುಗಾವಲುಗಳಾಗಿದ್ದು ಕಿರಿದಾಗಿ ಬೆಳೆಯುತ್ತವೆ. ಕುರಿಸಾಕಾಣಿಕೆ ಇಲ್ಲಿನ ಜನರ ಮುಖ್ಯ ವೃತ್ತಿ.

ಮೆಡಿಟರೇನಿಯನ್ ಸಸ್ಯವರ್ಗ ಎಲ್ಲೋ ಒಂದು ಕಡೆ ಕಂಡು ಬರುವುದಿಲ್ಲ. ಆಫ್ರಿಕದ ವಾಯುವ್ಯ ಭಾಗ, ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಮತ್ತು ನೈಋತ್ಯ ಭಾಗದಲ್ಲಿ ಈ ಬಗೆಯ ಸಸ್ಯವರ್ಗ ಕಾಣಸಿಗುವುದು ಲಾರೆಲ್ ಮತ್ತು ಓಕ್ ಮರಗಳು ಇಲ್ಲಿವೆ.

ಆಫ್ರಿಕದ ಈಶಾನ್ಯ ಭಾಗದಲ್ಲಿ ಇಥಿಯೋಪಿಯಾದ ಬೆಟ್ಟಾ ಪ್ರದೇಶದಲ್ಲಿ ಪರ್ವತ ಪ್ರದೇಶದ ಕಾಡುಗಳು ಕಂಡು ಬರುತ್ತವೆ.


ನೈಜೀರಿಯಾ, ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾಗಳು ಈ ಖಂಡದ ಪ್ರಮುಖ ದೇಶಗಳಾಗಿದ್ದು, ಅವುಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.

No comments: