Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 21 May 2011

ಅಲಕ್ಷ ಪ್ರಭು

     ಲಕ್ಷ್ಯ ಭೇದಿಸಲು ನೆರವಾದ ಪಾರ್ಥಂಗೆ
     ಅಕ್ಷಯಾಂಬರದಿ ತಂಗಿಯ ಮಾನವಂ ಕಾದ
     ಅಕ್ಷಯ ಪಾತ್ರೆಯಿತ್ತು ಧರ್ಮಜಂ ಪೊರೆದ
     ಅಕ್ಷೌಹಿಣಿ ಸೈನ್ಯವಂ ತರಿದ ಭೀಮನಂ ಮೆರೆದ
     ಅಕ್ಷಿಯಿಂದೀಕ್ಷಿಸಿ ಪರೀಕ್ಷಿತಂಗೆ ಪ್ರಾಣವಂ ತುಂಬಿದ
     ಲಕ್ಷ್ಯ ಬರಲಿಲ್ಲವಂಗೆ ಬೇಡನ ಶರ ತನ್ನನ್ನೇ ಸೆಳೆದೊಯ್ಯಲು.

No comments: