"ಜನನ" ಎಂಬ ಮೂರಕ್ಷರಗಳಿಂದ ಉದಯಿಸಿ "ಬಾಲಕ" ಎಂಬ ಮೂರಕ್ಷರದವನಾಗಿ ಶಾಲೆಯನ್ನು ಕಲೆತು "ವಿದ್ಯಾರ್ಥಿ" ಎಂಬ ಮೂರಕ್ಷರದವನಾಗುತ್ತಾನೆ. ನಂತರ "ತರುಣ" ಎಂಬ ಮೂರಕ್ಷರಕ್ಕೆ ಬಂದು "ಪದವಿ" ಎಂಬ ಮೂರಕ್ಷರಗಳನ್ನು "ಪರೀಕ್ಷೆ" ಎಂಬ ಮೂರಕ್ಷರಕ್ಕೆ ಕುಳಿತು ಪಡೆಯುತ್ತಾನೆ.
ನಂತರ ಈ ಪದವಿ ಪಡೆದ ಮಾನವನು "ಯೌವನ" ಎಂಬ ಮೂರಕ್ಷರಕ್ಕೆ ಬಂದು "ಜೀವನ" ಎಂಬ ಮೂರಕ್ಷರದಲ್ಲಿ "ಸುಂದರಿ"ಗೆ ಅಥವಾ "ಸುಂದರ"ನಿಗೆ ಮೋಹಿತನಾಗಿ "ವಿವಾಹ" ಎಂಬ ಮೂರಕ್ಷರದ ಗಂಟನ್ನು ನೆರವೇರಿಸಿಕೊಂಡು "ದಾಂಪತ್ಯ" ಎಂಬ ಮೂರಕ್ಷರದಲ್ಲಿ ನಿರತನಾಗುತ್ತಾನೆ. ಮುಂದೆ, ಮೂರಕ್ಷರಗಳ "ಮಕ್ಕಳು" ಪಡೆದು ಜೀವನದಲ್ಲಿ ಮೂರಕ್ಷರಗಳ "ನಗುವು" ಅಥವಾ "ಅಳವು" ಕಾಣುತ್ತಾನೆ.
ನಂತರ "ಪ್ರಪಂಚ" ಎಂಬ ಮೂರಕ್ಷರಗಳ ಜೀವನದಲ್ಲಿ "ವೃದ್ಧಾಪ್ಯ" ಅನ್ನುವ ಮೂರಕ್ಷರಕ್ಕೆ ಬರುತ್ತಾನೆ. ಕೊನೆಗೆ "ದೇವರು" ಎಂಬ ಮೂರಕ್ಷರಕ್ಕೆ ಸೇರುತ್ತಾನೆ. ಮಾನವ "ಜೀವನ" ಎಂಬ ಮೂರಕ್ಷರದ ಸುಂದರ ಜೀವನವನ್ನು ಕಳೆದು "ಮರಣ" ಎಂಬ ಮೂರಕ್ಷರಕ್ಕೆ ತುತ್ತಾಗುತ್ತಾನೆ.
No comments:
Post a Comment