ಒಬ್ಬ ಸಂತ ಒಂದು ಊರಿನ ಬಹಳ ದೊಡ ವೃದ್ಧ ಶ್ರೀಮಂತನ ಆಹ್ವಾನದ ಮೇರೆಗೆ ಆತನ ಮನೆಗೆ ಹೋಗಿದ್ದ. ಆ ಶ್ರೀಮಂತ ೬೦-೭೦ರ ಆಸುಪಾಸಿನವ. ದುಡಿದು ದುಡಿದು ಅಷ್ಟು ದೊಡ್ಡ ಆಸ್ತಿ ಮಾಅಡಿ ಹಣ್ಣುಹಣ್ಣಾದವ. ಆ ಶ್ರೀಮಂತನಿಗೆ ಒಬ್ಬನೇ ಮಗ. ವಯಸ್ಸು ಸುಮಾರು ೨೦ರಿಂದ ೨೫ ಇರಬಹುದು. ಕೈಗೊಂದು, ಕಾಲಿಗೊಂದು ಆಳು. ಮುಂದಿನ ಏಳು ತಲೆಮಾರಿನವರು ಕುಳಿತು ತಿಂದರೂ ಮುಗಿಯಲಾರದಷ್ಟು ಆಸ್ತಿ ಮಾಡಿಟ್ಟಿದ್ದ ಮುದುಕ. ಸಂತ ಮನೆಗೆ ಹೋಗಿ ಸೋಫಾ ಮೇಲೆ ಕುಳಿತು ಶ್ರೀಮಂತ ಮುದುಕನೊಂದಿಗೆ ಉಭಯಕುಶಲೋಪರಿ ವಿಚಾರಿಸಿದ ನಂತರ, ಅಲ್ಲೇ ನಿಂತಿದ್ದ ಅವನ ಮಗನಿಗೆ ಒಂದು ಲೋಟ ಸ್ವಚ್ಚ ನೀಋ ತರಲಿಕ್ಕೆ ಹೇಳಿದ. ಆ ಹುಡುಗ ಒಂದು ಸ್ವಚ್ಚ ಬೆಳ್ಳಿ ಲೋಟದಲ್ಲಿ ಬಿಸ್ಲೆರಿಯಂಥ ನಿಸರ್ಗದ ನೀರು ತುಂಬಿಕೊಂಡು ತಂದು ಸಂತನಿಗೆ ಕೊಟ್ಟ. ಸಂತ ಹೇಳಿದ, "ಇದರಿಂದ ಕೆಟ್ಟ ವಾಸನೆ ಬರಲಿಕತ್ತದ." ಹುಡುಗನಿಗೆ ಆಶ್ಚರ್ಯವಾಯಿತು. ಆದರೂ ಮತ್ತೊಮ್ಮೆ ಹೋಗಿ ಲೋಟ ಸ್ವಚ್ಚಗ ತೊಳೆದು ಸ್ವಚ್ಚ ನೀರು ತುಂಬಿಕೊಂಡು ತಂದು ಸಂತನಿಗೆ ಕೊಟ್ಟ. ಆಗಲೂ ಸಂತ "ಕೆಟ್ಟ ವಾಸನೆ ಬರಲಿಕತ್ತದ." ಅಂದ. ಅದಕ್ಕ ಹುಡುಗ - "ಅಲ್ಲ, ಇಂಥ ಭಾರೀ ಕಿಮ್ಮತ್ತಿನ ಬೆಳ್ಳಿ ಲೋಟದಾಗ ಸ್ವಚ್ಚನ ನೀರ ತಗಂಡ ಬಂದ್ರ ಕೆಟ್ಟ ವಾಸನಿ ಬರ್ತದ ಅಂತೀರಲ್ಲ ಅದು ಹೆಂಗ?" ಅಂದ. ಅದಕ್ಕೆ ಸಂತ - "ನೀರು ಹೊಲಸಾಗಿಲ್ಲ, ಲೋಟ ಹೊಲಸಾಗಿಲ್ಲ, ಬದಲಿಗೆ ನಿನ್ನ ಕೈ ಹೊಲಸಾಗ್ಯದ, ಅಪ್ಪ ಗಳಿಸಿಟ್ಟಿದ್ದ ಆಸ್ತಿ ತಿನ್ನಕೋತ, ಏನೂ ದುಡಿಲಾರದನ, ನಿನ್ನ ಕೈ ಹೊಲಸಾಗ್ಯದ." ಅಂದ ಸಂತ. ಹುಡುಗನಿಗೆ ಬುದ್ಧಿ ಬಂತು. "ಇನ್ನ ಮ್ಯಾಲ ದುಡಿದ ತಿಂತೀನಿ"ಅಂತ ಭಾಷೆ ಕೊಟ್ಟ.
ಈಗ ನಾವು ನಮ್ಮ ಕೈ ಹೇಗಿದೆಯೋ ಅಂತ ನೋಡಿಕೊಳ್ಳಬೇಕಾಗಿದೆ.
ಈ ಸಂಗತಿಯನ್ನು ಬಿಜಾಪೂರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ಹೇಳಿದ್ದು... ಅವರಿಗೆ ಕೃತಜ್ಞತೆಗಳು.
No comments:
Post a Comment