
Viswanathan anand
ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ ಇದ್ದಾರಲ್ಲ, ಅವರು ನಿಜಕ್ಕೂ ಕಂಪ್ಯೂಟರಿಗಿಂತ ಹೆಚ್ಚು ಬುದ್ಧಿವಂತರಾ? ೧೦-೧೫ ವರ್ಷಗಳ ಹಿಂದೆ ಈ ಪ್ರಶ್ನೆ ಹಲವರನ್ನು ಕಾಡಿತ್ತು. ಆ ದಿನಗಳಲ್ಲಿ ವಿಶ್ವನಾಥನ್ ಆನಂದ ಆಡಿದ ಪ್ರತಿಯೊಂದು ಚೆಸ್ ಪಂದ್ಯ ಗೆದ್ದು ಮನೆಮಾತಾಗಿದ್ದರು. ಸವಾಲು ಒಡ್ಡಿದವರನ್ನು ಕೇವಲ ಒಂದೆರಡೇ ನಿಮಿಷಗಳಲ್ಲಿ ಸೋಲಿಸಿ ಗೆಲುವಿನ ನಗೆ ಬೀರುತ್ತಿದ್ದರು. ಅರೆ, ಈ ವಿಶ್ವನಾಥನ ಆನಂದ್ ನಿಜವಾಗಿಯೂ ಕಂಪ್ಯೂಟರಿಗಿಂತ ಬುದ್ಧಿವಂತರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಆವಾಗಲೇ. ಚೆಸ್ ಲೋಕದ ಪಂಡಿತರು ಯಾಕೆ ಹಾಗೆ ಯೋಚಿಸಿದರು ಅಂದರೆ, ಯಾವುದೇ ವಿಷಯವನ್ನಾಗಲೀ ಯೋಚಿಸಬೇಕೆಂದರೆ ನಮ್ಮ ಮೆದುಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅದೇ ಕಂಪ್ಯೂಟರ್ ಆದರೆ, ಎಂಥ ಕಠಿಣ ಸಮಸ್ಯೆಗೂ ಕೇವಲ ಒಂದೆರಡು ನಿಮಿಷದಲ್ಲಿ ಉತ್ತರ ಹೇಳಿ ಬಿಡುತ್ತದೆ.
ಈಗ ಬರೀ ೧೫ ವರ್ಷಗಳ ಹಿಂದೆ ಹೀಗೆ ಯೋಚಿಸಿದ ಅದೆಷ್ಟೊ ಮಂದಿ ಗ್ರ್ಯಾಂಡ್ ಮಾಸ್ಟರ್‌ಗಳು ಒಂದು ಹೊಸ ಸಾಫ್ಟವೇರ್ ಸೃಷ್ಟಿಸಿದರು. ಹತ್ತು ಜನ ತಮ್ಮ ಐಡಿಯಾಗಳನ್ನು ಒಂದಾಗಿಸಿ ಅದನ್ನು ಕಂಪ್ಯೂಟರ್‌ಗೆ ಫೀಡ್ ಮಾಡಿದರು. ನೋಡನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ಕೊಡುವ ವೇಗದಲ್ಲಿ ಚೆಸ್ ಆಡುವದನ್ನು ಕಲಿತೇಬಿಟ್ಟಿತು. "ಆನಂದ್ ಚಾಲೆಂಜ್ ಹಾಕ್ತಾ ಇದೀವಿ, ಈ ಕಂಪ್ಯೂಟರ್ ಜೊತೆ ಆಡ್ತೀಯ, ಇದನ್ನ ಸೋಲಿಸ್ತೀಯಾ?" ಎಂದು ಎದುರಿಗಿದ್ದವರು ಪಂಥಾಹ್ವಾನ ಒಡ್ಡಿದರು. ವಿಶ್ವನಾಥನ್ ಆನಂದ್ ಒಲ್ಲೆ ಎನ್ನಲಿಲ್ಲ. ದೊಡ್ಡ ಆತ್ಮವಿಶ್ವಾಸದೊಂದಿಗೆ ಆಡಲು ಕುಳಿತರು. ಮೂರೆ ನಿಮಿಷದಲ್ಲಿ ಕಂಪ್ಯೂಟರ್ ಸೋತು ಹೋಯಿತು...! ಕಂಪ್ಯೂಟರ್‌ಗಿಂತ ಮನುಷ್ಯನ ಮೆದುಳೇ ತೀಕ್ಷ್ಣ ಎಂದು ಸಾಬೀತಾಯಿತು.
ಅಂದಹಾಗೆ, ನಮ್ಮ ಮೆದುಳು ಹೇಗಿದೆ? ಅದರ ತೂಕ ಎಷ್ಟು? ಅದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ವಿವರಗಳನ್ನು ತಿಳಿಯುವಾಸೆಯೇ? ಹಾಗಾದರೆ, ಓದುತ್ತಾ ಹೋಗಿ
* ನಮ್ಮ ದೇಹದ ಶೇ.೨ರಷ್ಟು ತೂಕ ನಮ್ಮ ಮೆದುಳಿನದಾಗಿದೆ ಹಾಗೂ ದೇಹದ ಒಟ್ಟು ಶಕ್ತಿಯ ಪೈಕಿ ಶೇ.೨೫-೩೦ರಷ್ಟನ್ನು ಅದು ಬಳಸಿಕೊಳ್ಳುತ್ತದೆ.
* ಮೆದುಳಿನಲ್ಲಿ ಸುಮಾರು ೧೦೦ ಕೋಟಿ ನರಕೋಶಗಳಿವೆ. ಇಷ್ಟೆಲ್ಲ ನರಕೋಶಗಳಿದ್ದರೂ ಮೆದುಳಿನಲ್ಲಿ ಒಂದೇ ಒಂದು ಮಾಂಸಖಂಡ ಇರುವದಿಲ್ಲ. ಸಿಂಪಲ್ಲಾಗಿ ಹೇಳುವದಾದರೆ ನಮ್ಮ ಮೆದುಳು ಥೇಟ್ ಬನ್ (ತಿನ್ನುವ ಬನ್) ತರಹ ಇರುತ್ತದೆ.
No comments:
Post a Comment