( Books list for K.A.S. Exam ) ಪ್ರಿಯ ಓದುಗರೇ, ಈಗಾಗಲೇ ಕೆ.ಎ.ಎಸ್.ಪರೀಕ್ಷೆಗೆ ಸಂಬಂಧಪಟ್ಟಂ ತೆ ಅವಶ್ಯವಾಗಿ ಓದಲೇಬೇಕಾದ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸಿದ್ದೆ. ಇದೀಗ ಪರಿಷ್ಕೃತ ಪುಸ್ತಕಗಳ ಪಟ್ಟಿಯನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ. ಇದನ್ನು ನಮ್ಮ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ಎನ್.ಎಂ.ಬಿರಾದಾರ ಗುರುಗಳು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ. ನಿಮಗೆ ನನ್ನ ಈ ಪುಟ್ಟ ಪ್ರಯತ್ನ ಇಷ್ಟವಾಗಬಹುದು ಎಂದು ಭಾವಿಸುತ್ತೇನೆ.
ಇತಿಹಾಸ ವಿಷಯದ ಪುಸ್ತಕಗಳು
೧. ಸಮಗ್ರ ಭಾರತದ ಇತಿಹಾಸ ಭಾಗ -1 ಲೇ. ಕೆ.ಎನ್.ಎ
೨. ಸಮಗ್ರ ಭಾರತ ಇತಿಹಾಸ ಭಾಗ -2 ಲೇ. ಕೆ.ಎನ್.ಎ
೩. ಕರ್ನಾಟಕ ಇತಿಹಾಸ ಲೇ. ಕೆ.ಎನ್.ಎ
೪. ಪ್ರಾಚೀನ ಇತಿಹಾಸ ಲೇ. ಡಾ|| ಕೆ.ಸದಾಶಿವ
೫. ಮಧ್ಯಕಾಲೀನ ಇತಿಹಾಸ ಲೇ. ಡಾ|| ಕೆ. ಸದಾಶಿವ
೬. ಆಧುನಿಕ ಭಾರತದ ಇತಿಹಾಸ ಲೇ. ಡಾ|| ಕೆ. ಸದಾಶಿವ
೭. ಸಮಗ್ರ ಕರ್ನಾಟಕ ಇತಿಹಾಸ ಲೇ. ಪಾಲಾಕ್ಷ
೮. ಇತಿಹಾಸ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ
೯. Indian History - Agni Hotri
೧೦. ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್
೧೧. ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್
೧೨. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರ್‌ರಾವ್
ಭೂಗೋಳಶಾಸ್ತ್ರ
೧. ಪ್ರಾಕೃತಿಕ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೨. ಭಾರತದ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೩. ಕರ್ನಾಟಕ ಭೂಗೋಳ - ಡಾ|| ರಂಗನಾಥ
೪. Atlas Book - E.T.K. Publication
೫. Geography - Majeed Hussain
ಭಾರತದ ಸಂವಿಧಾನ
೧. ಭಾರತದ ಸಂವಿಧಾನ ಮತ್ತು ರಾಜಕೀಯ - ಪಿ.ಎಸ್. ಗಂಗಾಧರ
೨. ಭಾರತದ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ
೩. Indian Polity - Dr. T.P. Devegowda
೪. ಭಾರತ ಸಂವಿಧಾನ - ಒಂದು ಪರಿಚಯ (ಮೆರುಗು ಪ್ರಕಾಶನ)
೫. Introduction to the constitution of India - D.D.Basu
ಅರ್ಥಶಾಸ್ತ್ರ
೧. ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ ( ಪದವಿ ಮಟ್ಟದ್ದು)
೨. ಆಧುನಿಕ ಭಾರತದ ಆರ್ಥಿಕ ಶಾಸ್ತ್ರ - ಡಾ|| ನೇ.ತಿ. ಸೋಮಶೇಖರ
೩. ಕರ್ನಾಟಕ ಆರ್ಥಿಕತೆ - ಎಚ್ಚಾರ್ಕೆ
೪. ಕರ್ನಾಟಕ ಆರ್ಥಿಕತೆ - ಡಾ|| ನೇ.ತಿ. ಸೋಮಶೇಖರ
೫. ಕರ್ನಾಟಕ ಆರ್ಥಿಕ ಸಮೀಕ್ಷೆ ( ಗವರ್ನಮೆಂಟ್ ಪಬ್ಲಿಕೇಷನ್)
೬. Indian Economy Survey - ( Indian Government publication )
೭. Indian Economy - Sundaram
ವಿಜ್ಞಾನ
೧. 8, 9, 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
೨. ಜೀವಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೩. ರಸಾಯನಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೪. ಕೆ.ಎ.ಎಸ್. ನೋಟ್ಸ್ - ಮಾಲಿ ಮುದ್ದಣ್ಣ
೫. ಸಾಮಾನ್ಯ ವಿಜ್ಞಾನ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ
೬. ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ
೭. ವಿಜ್ಞಾನ ಕಲಿಯೋಣ ಭಾಗ ೧, ೨, ೩ - ಇಂದುಮತಿ ರಾವ್
೮. ವಿಜ್ಞಾನ - ತಂತ್ರಜ್ಞಾನ - ಸ್ವಪ್ನ ಪ್ರಕಾಶನ
೯. General science - Spectrum Notes
೧೦. ವಿಜ್ಞಾನ - ತಂತ್ರಜ್ಞಾನ - ಪ್ರಶ್ನೆಕೋಶ ( ಚಾಣಕ್ಯ ಪ್ರಕಾಶನ)
ಗಣಿತ ಮತ್ತು ಮೆಂಟಲ್ ಎಬಿಲಿಟಿ
1. All about Reasoning - Anjali Gupta
2. Verbal and Non-verbal Reasoning - R.S.Agarwal
೩. ಮೆಂಟಲ್ ಎಬಿಲಿಟಿ ( ಚಾಣಕ್ಯ ಪ್ರಕಾಶನ)
೪. ಅಮೂಲ್ಯ ಗಣಿತ - ಸಿದ್ಧೇಶ್ವರ ಪ್ರಕಾಶನ
೫. General Mental ability - P.S.Agarwal
General Knowledge
೧. 8, 9, 10 D.S.E.R.T. Text books
೨. N.C.E.R.T Text books
೩. Manorama Year Book
೪. ಕ್ಲಾಸಿಕ್ ಇಯರ್ ಬುಕ್
೫. ವಾಸನ್ ಇಯರ್ ಬುಕ್
೬. India 2013
೭. ಕರ್ನಾಟಕ ಕೈಪಿಡಿ
೮. ಕರ್ನಾಟಕ ವಿಶ್ವಕೋಶ ಭಾಗ-೧ ( ಮೈಸೂರು ವಿಶ್ವವಿದ್ಯಾಲಯ)
೯. ಕರ್ನಾಟಕ ವಿಶ್ವಕೋಶ ಭಾಗ -೨ ( ಮೈಸೂರು ವಿಶ್ವವಿದ್ಯಾಲಯ)
೧೦. ಸಮಕಾಲೀನ ಜಗತ್ತು - ಎಲ್. ಎನ್. ಶಿವರುದ್ರಸ್ವಾಮಿ
೧೧. ಭಾರತೀಯ ಪ್ರವಾಸೋದ್ಯಮ - ಎಚ್.ಎಸ್. ಶಿವರುದ್ರಸ್ವಾಮಿ
೧೨. ಕರ್ನಾಟಕ ಪ್ರವಾಸಿ ತಾಣಗಳು - ಶೇಶುನಾಥನ್
ಪತ್ರಿಕೆಗಳು
೧. The Hindu
೨. ವಿಜಯವಾಣಿ - ೬,೭ ಪುಟಗಳು
೩. ಕನ್ನಡ ಪ್ರಭ
೪. ಪ್ರಜಾವಾಣಿ
೫. Indian Express
೬. Wizard or Chronical
೭. ಸ್ಪರ್ಧಾ ಚಾಣಕ್ಯ/ ದಿಕ್ಸೂಚಿ
ಇಂಗ್ಲೀಷ್
೧. ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ
೨. Veta ನೋಟ್ಸ್
೩. ಭಾಷಾಂತರ ಪಾಠಮಾಲೆ ೧, ೨, ೩ (ಬೆಳಗಾವಿ ಪ್ರಕಾಶನ)
೪. ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ
೫. ಕ್ವಿಕ್ ಮ್ಯಾಥೆಮೆಟಿಕ್ಸ್ - ಕಿರಣ ಪಬ್ಲಿಕೇಷನ್
೬. Practical English Grammar - Gupta
೭. Applied English Grammar - R.L.Bhatia
ಪ್ರಬಂಧ
ಭಾರತದ ಸಾಮಾಜಿಕ ಸಮಸ್ಯೆಗಳು - ಚ.ನ. ಶಂಕರರಾವ್ ಅಥವಾ ಕೆ. ಭೈರಪ್ಪ
ಪರಿಸರ ಅಧ್ಯಯನ (ಸ್ವಪ್ನ ಪ್ರಕಾಶನ)
ಕನ್ನಡ ವ್ಯಾಕರಣ - ಅರಳಿಗುಪ್ಪಿ
ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ
From Guruprasad S Hattigoudar
Jnanamukhi
Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Wednesday, 10 July 2013
Saturday, 4 May 2013
ನಿಮ್ಮಲ್ಲೂ `ಸುಧಾ' ಇದ್ದಾಳೆ
ನಿಮ್ಮಲ್ಲೂ `ಸುಧಾ' ಇದ್ದಾಳೆ
ಮೂಲ ಲೇಖನ : ಶ್ರೀ ಎನ್.ಎಂ.ಬಿರಾದಾರ
ಸಂಸ್ಥಾಪಕರು ಮತ್ತು ಮುಖ್ಯಸ್ಥರು
ಚಾಣಕ್ಯ ಕರಿಯರ್ ಅಕಾಡೆಮಿ ಬಿಜಾಪುರ (ಕರ್ನಾಟಕ)
ಜೀವನದ ಹೋರಾಟದಲ್ಲಿ ಅಪಮಾನ, ನಿಂದನೆ, ಹಿನ್ನಡೆ, ಸೋಲು ಹಾಗೂ ಜಿಗುಪ್ಸೆ ಇರುವವು. ಇವು ಇರದಿದ್ದರೆ, ಜೀವನ ನೀರಸವಾಗುತ್ತದೆ. ಇವುಗಳನ್ನು ನೀವು ಜೀವನದಲ್ಲಿ ನೀವು ಯಾವ ರೀತಿ ಸ್ವೀಕರಿಸುತ್ತಿರೋ ಎಂಬುವುದು ಮುಖ್ಯ. ಇವುಗಳಿಂದ ಕೆಲವರು ಮನ ನೊಂದುಕೊಂಡು, ಸ್ಪರ್ಧೆಯಿಂದ ಓಡಿ ಹೋಗುತ್ತಾರೆ. ಇನ್ನೂ ಕೆಲವರು ತಮ್ಮ ಸಾಮರ್ಥ್ಯವನು ಹಿಯಾಳಿಸಿದವರಿಗೆ ತೋರಿಸಿ ಕೊಡುವದಕ್ಕೆ ಇನ್ನಷ್ಟು ಶಕ್ತಿಯೊಂದಿಗೆ ಹೆಜ್ಜೆ ಹಾಕುತ್ತಾರೆ. ಇದಕ್ಕೆ ಉದಾಹರಣೆ `ಸುಧಾ' ಎಂಬ ಹುಡುಗಿಯ ಛಲದಿಂದ ಕೂಡಿದ ಜೀವನವನ್ನು ನಿಮಗೆ ಪರಿಚಯಿಸುತ್ತೇನೆ.
`ಸುಧಾ' ಬೆಳಗಾವಿ ಜಿಲ್ಲೆಯ ಅಥಣಿಯ ತಾಲೂಕಿನ ಒಂದು ಸಣ್ಣ ಗ್ರಾಮದವಳು. ಇವಳು ೪ ನೇ ತರಗತಿಯಲ್ಲಿ ಇದ್ದಾಗಲೇ ಮಾವನೊಂದಿಗೆ ಹಿರಿಯರು ಹೆಸರು ಇಟ್ಟರು. ಅವನು ಆಗ ೮ನೇ ತರಗತಿಯಲ್ಲಿ ಓದುತ್ತಿದ್ದ. ಸುಧಾಳಿಗೆ ಅದರ ಅರಿವೆ ಇರಲಿಲ್ಲ. ಅದು ವಯಸ್ಸು ಕೂಡ ಅಲ್ಲ ಬಿಡಿ. ಶಾಲೆಯಲ್ಲಿ ಚುರುಕಾಗಿದ್ದ ಸುಧಾ ಹಂತ ಹಂತವಾಗಿ ಉತ್ತಮ ದರ್ಜೆಯಲ್ಲಿ ಪಾಸಾಗುತ್ತಾ ಪಿ.ಯು.ಸಿ ಮುಗಿಸಿದಳು. ಅವಳು ಹೈಸ್ಕೂಲಿಗೆ ಬಂದಾಗ ಮಾವನೊಂದಿಗೆ ಹೆಸರು ಕೇಳಿ ಎಲ್ಲಾ ಹುಡುಗಿಯರಂತೆ ನಾಚಿಕೆಯೊಂದಿಗೆ, ಮಾವನ ಬಗ್ಗೆ ತನ್ನದೆಯಾದ ಕನಸು ಕಂಡಳು. ಮನ್ಯಲ್ಲಿ ಯಾರು ಇಲ್ಲದಿದ್ದಾಗ, ಇಬ್ಬರೇ ಗಂಟೆಗಟ್ಟಲೇ ಮಾತಾಡುತ್ತಿದ್ದರು. ತನ್ನದೆಯಾದ ಲೋಕದಲ್ಲಿ ವಿಹರಿಸುತ್ತಿದ್ದಳು. ಅವನು ಡಿಗ್ರಿ ಮುಗಿಸಿ ವ್ಯಾಪಾರ ಮಾಡಲು ಆರಂಭಿಸಿದನು. ಈ ಕಡೆ ಇವಳು ಬಿ.ಇಡಿ ಕಲಿಯಲು ತನ್ನ ಚಿಕ್ಕಮ್ಮನ ಮಗಳಾದ ಸವಿತಾಳೊಂದಿಗೆ ಹಾರೂಗೇರಿ ಕಾಲೇಜಿಗೆ ಸೇರಿದಳು. ಬಿ.ಇಡಿ. ಫಲಿತಾಂಶ ಬಂದಾಗ ಸುಧಳಿಗೆ ಆಘಾತವಾಗಿತ್ತು. ಅವಳು ಶೇಕಡಾ ೭೦ ಅಂಕಗಳೊಂದಿಗೆ ಪಾಸಾಗಿದ್ದರೆ, ಶೇಕಡಾ ೮೯ ಅಂಕಗಳೊಂದಿಗೆ ಸವಿತಾ ಕಾಲೇಜಿಗೆ ಪ್ರಥಮ ಬಂದಿದ್ದಳು. ಈ ಫಲಿತಾಂಶವು ಸುಧಾಳ ಜೀವನದಲ್ಲಿ ಬಿರುಗಾಳಿಯನು ಉಂಟು ಮಾಡಿತು. ಅವಳು ಯಾರೊಂದಿಗೆ ಮದುವೆ ಕನಸು ಕಂಡಿದ್ದಾಳೋ ಅವನು ಇವಳನ್ನು ನಿರಾಕರಿಸಲು ಆರಂಭಿಸಿದನು. ಇದಕ್ಕೆ ಕಾರಣ ಇವಳದು ಪರ್ಸೆಂಟೇಜ್ ಕಡಿಮೆಯಾಗಿದೆ. ನೌಕಾರಿ ಆಗುವುದಿಲ್ಲವೆಂಬ ಭಾವನೆ ಬೆಳೆಸಿಕೊಂಡನು. ಅವನು ಒಂದು ದಿನ ಸಂಬಂಧಿಕರೆಲ್ಲರನ್ನು ಕೂಡಿಸಿ ನಾನು ಮದುವೆಯಾಗುವುದಿದ್ದರೆ, ಸವಿತಾಳನ್ನು. ನೀವು ಇದಕ್ಕೆ ಒಪ್ಪದಿದ್ದರೆ ಹೊರಗಿನ ಹುಡುಗಿಯನ್ನು ಮದುವೆಯಾಗುತ್ತೇನೆಂದು ನಿರ್ಧಾರ ಹೇಳಿದನು. ಆಗ ಹಿರಿಯರು ತುಪ್ಪ ಎಲ್ಲಿ ಚೆಲ್ಲಿತು ಎಂದರೆ ಕಿಚಡಿಯಲ್ಲಿ ಎಂದು, ಅವನ ನಿರ್ಧಾರಕ್ಕೆ ಒಪ್ಪಿಗೆ ನೀಡದರು. ಆಗ ಹಿರಿಯರು ಸುಧಾಳಿಗೆ ಒಂದು ಮಾತು ಕೇಳಲಿಲ್ಲ. ಅವಳಿಗೆ ತುಂಬಾ ದುಃಖವಾಯಿತು. ಒಂದು ದಿನ ತಾಯಿಯನ್ನು ಕೇಳಿದಾಗ, ನಾವೇನು ಮಾಡಲು ಸಾಧ್ಯವಿದೆ. ನಿನಗೆ ಓದಿ ಹೆಚ್ಚಿನ ಫಲಿತಾಂಶ ಪಡೆಯಲು ಏನು ಕಷ್ಟವಾಗಿತ್ತು ಎಂದು ಹಿಯಾಳಿಸಿದರು. ಬಂಗಾರದಂಥ ಸಂಬಂಧ ನಿನ್ನಿಂದ ಬಿಡಬೇಕಾಯಿತು. ದರಿದ್ರಳಾದ ನಿನ್ನನ್ನು ಯಾರು ಮದುವೆಯಾಗುತ್ತಾರೊ, ಯಾರು ಜೋಡಿಯಾದಾರೂ ಆಘಾತವಾಗುತ್ತದೆ ಎಂದು ಅಸಹ್ಯ ಮಾತುಗಳನ್ನಾಡಿದರು.
ಸುಧಾ ಹಾಗೂ ಸವಿತಾ ಇಬ್ಬರೂ ಕೂಡಿಕೊಂಡು ಕೋಚಿಂಗ್ ಬಂದರು. ಕೋಚಿಂಗ್‍ನಲ್ಲಿದ್ದಾಗಲೇ ಸವಿತಾಳ ಮದುವೆ ನಡೆಯಿತು. ಮದುವೆ ನಡೆದ ದಿನವೇ `ಸುಧಾ' ನನ್ನ ಹತ್ತಿರ ಬಂದಿದ್ದಳು. ಸರ್, ಇವತ್ತೂ ನಮ್ಮ ಚಿಕ್ಕಮ್ಮನ ಮಗಳ ಮದುವೆ ಇದೆ. ನಾನು ಹೋಗಲಿಲ್ಲ. ನನಗೆ ಧೈರ್ಯ ಹೇಳಿ ಎಂದಾಗ, ನಾನು ಯಾಕೆ ಹೋಗಲಿಲ್ಲ? ಎಂದಾಗ, ಮೇಲಿನ ತನ್ನ ವೃತ್ತಾಂತವನ್ನು ಹೇಳಿದಳು. ಆಯಿತು, ಈಗೇನು ಮಾಡಬೇಕು ಎಂದು ಮಾಡಿದ್ದೀ ಎಂದಾಗ, ಅವನು ನನ್ನದು ನೌಕರಿಯಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾನಲ್ಲ. ಅವನ ಎದುರಿಗೆ ನೌಕರಿ ಮಾಡಬೇಕು ಎಂದು ಅಳಲು ಪ್ರಾರಂಭಿಸಿದಳು. ನಂತರ ಸಾವರಿಸಿಕೊಂಡು ಸರ್, ನಿಮ್ಮ ವ್ಯಕ್ತಿತ್ವ ತರಗತಿ ನನ್ನ ಜೀವನಕ್ಕೆ ಹೊಸ ತಿರುವು ನೀಡಿತು. ನೀವು ಒಂದು ದಿನ ಹೇಳಿದ ಮಾತು ಇವತ್ತಿಗೂ ಕೂಡಾ ನನಗೆ ಸ್ಫೂರ್ತಿಯಾಗಿದೆ. ನಮಗೆ ಅಂಥವರಿಗೆ ನಿಂದನೆ ಮಾಡಿದವರಿಗೆ ನಮ್ಮ ಚಪ್ಪಲಿಯಿಂದ ಉತ್ತರಿಸಬಾರದು. ನಮ್ಮ ಸಾಧನೆಯ ಮೂಲಕ ಉತ್ತರಿಸಬೇಕು ಎಂಬ ಮಾತು ಬಹಳಷ್ಟು ಸ್ಫೂರ್ತಿ ನೀಡಿತು. ನನು ನೌಕರಿಯಾಗದೇ ಊರಿಗೆ ಹೋಗುವುದಿಲ್ಲ ಸರ್, ನನಗೆ ಸಹಾಯ ಮಾಡಿ ಎಂದಳೂ. ಕೋಚಿಂಗ್ ಮುಗಿದ ನಂತರ ಕೂಡಾ ಅವಳು ಬಿಜಾಪುರದಲ್ಲಿ ಇದ್ದು ಓದಲು ಆರಂಭಿಸಿದಳು. ಅವಳ ಪರೀಕ್ಷೆ ಮುಗಿಯುವವರೆಗೆ ಊಟದ ಹಾಗೂ ರೂಮ್ ವ್ಯವಸ್ಥೆ ಮಾಡಿಕೊಟ್ಟೆನು.
ಮೊನ್ನೆ ಬಂದ ಹೈಸ್ಕೂಲ್ ಫಲಿತಾಂಶದಲ್ಲಿ ಸುಧಾ ಆಯ್ಕೆಯಾಗಿದ್ದಳು. ಸವಿತಾ ೨ ಅಂಕಗಳಿಂದ ಹೊರಗೆ ಉಳಿದಳು. ಸುಧಾ ಛಲ ನೋಡಿ ನನಗೆ ಖುಷಿಯಾಯಿತು. ಸುಧಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದರೆ ಅವರ ಚಿಂತೆ ಮಾಡುತಾ, ಅಳುತ್ತಾ, ಜಿಗುಪ್ಸೆ ಪಡುತ್ತಾ ಜೀವನ ಕಳೆಯುತ್ತಿದ್ದಳು. ಸುಧಾಳ ಮಾವನಿಗೆ ಯಾವ ರೀತಿಯಾಗಿರಬೇಕು ಎಂದು ನೀವೇ ಊಹಿಸಿ.
ಕೊನೆಯ ಮಾತು: ಜೀವನದಲ್ಲಿ ಏನೇ ಘಟಿಸಲಿ, ನಿಮ್ಮ ನಂಬಿಕೆ ಆತ್ಮವಿಶ್ವಾಸ ಹಾಗೂ ಛಲವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ 2013 ಸಿದ್ಧತಾ ಮಾಹಿತಿ
ಕರ್ನಾಟಕ ಲೋಕ ಸೇವಾ ಆಯೋಗ (ಕೆ.ಪಿ.ಎಸ್.ಸಿ.)ಯು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗುತ್ತಿದೆ. ಪದವಿ ಹೊಂದಿದ ಅಭ್ಯರ್ಥಿಗಳು ಕೆ.ಎ.ಎಸ್. ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕೆ.ಎ.ಎಸ್. ಕುರಿತಾಗಿ ಹಲವಾರು ಜನರು ನನಗೆ ಆಗಾಗ ಇ-ಮೇಲ್ ಮೂಲಕ, ಎಸ್.ಎಂ.ಎಸ್. ಮೂಲಕ ಮಾಹಿತಿ ಕೇಳುತ್ತಿರುತ್ತಾರೆ. ಅವರಿಗೆಲ್ಲ ಉಪಯುಕ್ತವಾಗಲೆಂದು ಕೆ.ಎ.ಎಸ್. ಪರೀಕ್ಷೆ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಇಲ್ಲಿ ನೀಡಲು ಪ್ರಯತ್ನಿಸುತ್ತಿದ್ದೇನೆ.
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ 2013 ಸಿದ್ಧತಾ ಮಾಹಿತಿ
ಕೆ.ಎ.ಎಸ್. ಪರೀಕ್ಷೆಗೆ ಅರ್ಹತೆ :
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಭಾರತೀಯ ನಾಗರಿಕತ್ವವನ್ನು ಪಡೆದಿರಬೇಕು.
ಪರೀಕ್ಷೆಯ ಹಂತಗಳು :
ಕೆ.ಎ.ಎಸ್. ನೇಮಕಾತಿ ಪರೀಕ್ಷೆಯು ಮೂರು ಹಂತದಲ್ಲಿ ನಡೆಯುತ್ತದೆ.
೧. ಪೂರ್ವಭಾವಿ ಪರೀಕ್ಷೆ
೨. ಮುಖ್ಯ ಪರೀಕ್ಷೆ
೩. ಸಂದರ್ಶನ
ಪೂರ್ವಭಾವಿ ಪರೀಕ್ಷೆ : -
* ಪೂರ್ವಭಾವಿ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
* ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ.
* ಪ್ರಶ್ನೆಗಳು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಇರುತ್ತವೆ.
* ತಲಾ ಪತ್ರಿಕೆಗಳು ೧೦೦ ಪ್ರಶ್ನೆಗಳನ್ನು ಹೊಂದಿರುತ್ತವೆ. ಪ್ರತಿ ಪ್ರಶ್ನೆಗೆ ೨ ಅಂಕಗಳಿರುತ್ತವೆ.
ಪೇಪರ್ -1
ವಿಷಯ ಪ್ರಶ್ನೆಗಳು ಅಂಕಗಳು
ರಾಷ್ಟ್ರೀಯ ಹಾಗೂ
ಅಂತರ್‌ರಾಷ್ಟ್ರೀಯ ಪ್ರಾಮುಖ್ಯತೆ 40 80
ಮಾನವಿಕ ಶಾಸ್ತ್ರ 60 120
ಒಟ್ಟು 100 200
ಪೇಪರ್ -2
ರಾಜ್ಯದ ಪ್ರಾಮುಖ್ಯತೆ 40 80
ವಿಜ್ಞಾನ ತಂತ್ರಜ್ಞಾನದ ಪರಿಸರ
ಮತ್ತು ಪರಿಸರ ಶಾಸ್ತ್ರ 30 60
ಸಾಮಾನ್ಯ ಮಾನಸಿಕ ಸಾಮರ್ಥ್ಯ 30 60
ಒಟ್ಟು 100 200
ಪೇಪರ್ 1 ಪಠ್ಯಕ್ರಮ
ಪ್ರಥಮ ಪತ್ರಿಕೆ ಸಾಮಾನ್ಯ ಪದವೀಧರರಿಗೆ ಅನುಕೂಲವಾಗುವ ರೀತಿಯಲ್ಲಿ ಪಠ್ಯ ಇರುವುದು. ಇಲ್ಲಿಯ ವಿಷಯಗಳು ಹೆಚ್ಚು ವಿಸ್ತಾರವಾಗಿದ್ದು ಮತ್ತು ಅಳತೆಯಿಂದ ಕೂಡಿದೆ. ಇದು ಎರಡು ಭಾಗಗಳಿಂದ ಕೂಡಿದೆ.
ಭಾಗ - ಎ) ಈ ಭಾಗದಲ್ಲಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಘಟನೆಗಳು ಇರುವುವು.
೧. ರಾಷ್ಟ್ರದಲ್ಲಿ ನಡೆದ ಪ್ರಮುಖ ರಾಜಕೀಯ ಘಟನೆಗಳು
೨. ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು
೩. ಪ್ರಸಿದ್ಧಿ ಪಡೆದ ಸ್ಥಳಗಳು
೪. ಪ್ರಸಿದ್ಧವಾದ ಪ್ರಶಸ್ತಿಗಳು ಮತ್ತು ವ್ಯಕ್ತಿಗಳ ವಿವರಗಳು
೫. ವೈದ್ಯಕೀಯ ಆರೋಗ್ಯ ಹಾಗೂ ಪರಿಸರ ಸಂಬಂಧಪಟ್ಟ ವಿಚಾರಗಳು
೬. ಕ್ರ್‍ಈಡೆಗಳಿಗೆ ಸಂಬಂಧಪಟ್ಟ ವಿಚಾರಗಳು
೭. ದ್ವಿಪಕ್ಷೀಯ ಒಪ್ಪಂದಗಳು
೮. ಜಾಗತಿಕ ಸಂಘಟನೆಗಳು, ಸಮ್ಮೇಳನಗಳು, ಒಪ್ಪಂದಗಳು
೯. ರಾಷ್ಟ್ರ ರಾಷ್ಟ್ರಗಳ ಮಧ್ಯೆ ನಡೆಯುವ ರಾಜಕೀಯ ವಿಚಾರಗಳು
೧೦. ಜಾಗತಿಕ, ಆರ್ಥಿಕ, ಪರಿಸರ ಹಾಗೂ ಜೈವಿಕ ವಿಷಯಗಳು
೧೧. ರಾಷ್ಟ್ರದ ಪ್ರಮುಖ ನೇಮಕಗಳು
೧೨. ಸುಪ್ರೀಂ ಕೋರ್ಟಿನ ಪ್ರಮುಖ ತೀರ್ಪುಗಳು
ಭಾಗ - ಬಿ
ಇದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಪಟ್ಟಿದೆ. ಬಹಳಷ್ಟು ವಿದ್ಯಾರ್ಥಿಗಳು ಇದು ಮನೋವಿಜ್ಞಾನಕ್ಕೆ ಸಂಬಂಧಪಟ್ಟಿದೆ ಎಂದು ತಿಳಿದುಕೊಂಡಿರುತ್ತಾರೆ. ಈ ಭಾಗದಲ್ಲಿ ಈ ಕೆಳಗಿನ ವಿಷಯಗಳು ಒಳಗೊಂಡಿವೆ.
೧) ಪ್ರಾಚೀನ ಭಾರತದ ಇತಿಹಾಸ
೨) ಮಧ್ಯಕಾಲೀನ ಭಾರತದ ಇತಿಹಾಸ
೩) ಆಧುನಿಕ ಭಾರತದ ಇತಿಹಾಸ
೪) ಕರ್ನಾಟಕ ಇತಿಹಾಸ, ಭಾರತದ ಸಂವಿಧಾನ ಮತ್ತು ರಾಜಕೀಯ
೫) ಭಾರತದ ಆರ್ಥಿಕಾಭಿವೃದ್ಧಿ
೬) ಭಾರತ ಭೂಗೋಳ
೭) ಪ್ರಾಕೃತಿಕ ಭೂಗೋಳ
೮) ಪ್ರಪಂಚದ ಭೂಗೋಳ
೯) ಕರ್ನಾಟಕ ಅರ್ಥಶಾಸ್ತ್ರ
೧೦) ಕರ್ನಾಟಕ ಭೂಗೋಳ
೧೧) ಕರ್ನಾಟಕ ರಾಜಕೀಯ
ಪೇಪರ್ -2
ಭಾಗ -ಎ)
ರಾಜ್ಯದ ಪ್ರಚಲಿತ ಘಟನೆಗಳು ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಇರುವುವು. ಕೆಳಗಿನ ವಿಷಯಗಳಿಗೆ ಹೆಚ್ಚು ಗಮನ ನೀಡಬೇಕು.
೧) ರಾಜ್ಯದಲ್ಲಿರುವ ಪ್ರಚಲಿತ ಘಟನೆಗಳು
೨) ರಾಜ್ಯದಲ್ಲಿನ ಪ್ರಚಲಿತ ಸ್ಥಳಗಳು
೩) ರಾಜ್ಯದಲ್ಲಿನ ಪ್ರಸಿದ್ಧವಾದ ಪ್ರಶಸ್ತಿಗಳು ಮತ್ತು ಅದರ ವಿವರಗಳು
೪) ರಾಜ್ಯದಲ್ಲಿ ಇಲ್ಲಿಯವರೆಗೆ ಜಾರಿಗೆ ಬಂದಿರುವ ಸಾಮಾಜಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳ ವಿವರಣೆ ಗೊತ್ತಿರಬೇಕು.
೫) ರಾಜ್ಯಕ್ಕೆ ಸಂಬಂಧಪಟ್ಟ ಪ್ರಮುಖ ನೇಮಕಗಳು
೬) ರಾಜ್ಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳು
೭) ಕನ್ನಡಿಗರ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಸಾಧನೆ
ಭಾಗ - ಬಿ ) ಇದರಲ್ಲಿ ಸಾಮಾನ್ಯ ವಿಜ್ಞಾನ ಹಾಗೂ ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇರುವುವು.
೧) ಭೌತಶಾಸ್ತ್ರ
೨) ರಸಾಯನಶಾಸ್ತ್ರ
೩) ಜೀವಶಾಸ್ತ್ರ
೪) ಕಂಪ್ಯೂಟರ್
೫) ತಂತ್ರಜ್ಞಾನ
ಭಾಗ -೩
೧) General Mental Ability :
ಲಾಭ ಮತ್ತು ನಷ್ಟ ಬಡ್ಡಿ ಪಾಲುಗಾರಿಕೆ, ಕೆಲಸ ಮತ್ತು ಸಮಯ, ಸಮಯ ಮತ್ತು ರೂ, ರೈಲ್ವೆ ಸಮಸ್ಯೆಗಳು, ಕ್ಯಾಲೆಂಡರ್ ಪ್ರೊಬಬಿಲಿಟಿ ಕ್ಯೂಲ್, ಚಿತ್ರಗಳು)
೨) Analytic Ability :
ಸರಣಿ, ಸಂಬಂಧಿಕಗಳು, ವರ್ಗೀಕರಣ, ಕೋಡಿಂಗ್-ಡಿ-ಕೋಡಿಂಗ್, ರಕ್ತ ಸಂಬಂಧಗಳು, ದಿಕ್ಕುಗಳು, ಸ್ಥಾನಗಳು, ಹೊಂದಾಣಿಕೆ, ರ್‍ಯಾಂಕ್, ಅಕ್ಷರಮಾಲೆ ಸಮಸ್ಯೆಗಳು, ವೆನ್ ನಕ್ಷೆಗಳು, ಪಜಲ್ ಪರೀಕ್ಷೆ, ಹೇಳಿಕೆಗಳು ಮತ್ತು ಕಾರಣಗಳು)
೩. Basic Numeracy :
( ಸಂಖ್ಯಾ ಪದ್ಧತಿ, ಲ.ಸಾ.ಅ., ಮ.ಸಾ.ಅ, ಸರಳೀಕರಣ, ಪ್ರತಿಶತ ಕಂಡು ಹಿಡಿಯುವುದು, ಅನುಪಾತ, ಸರಾಸರಿ )
೪. Logical Reasoning :
ಹೇಳೀಕೆಗಳು ಮತ್ತು ನಿರ್ಣಯಗಳು, ಹೇಳಿಕೆಗಳು ಮತ್ತು ವಾದಗಳು, ಹೇಳಿಕೆಗಳು ಮತ್ತು ಊಹೆಗಳು, ಹೇಳಿಕೆಗಳು ಮತ್ತು ಕ್ರಿಯೆಗಳು, ಕಾರಣಗಳು ಮತ್ತು ಪರಿಣಾಮಗಳು, ಪರಿಸ್ಥಿತಿಯ ವಿಶ್ಲೇಷಣೆ)
೫. Data Interpretation :
(ಟೇಬಲ್ ಚಾರ್ಟ್, ಬಾರ್ ಚಾರ್ಟ್ / ಗ್ರಾಫ್ಸ್, ಪೈ ಚಾರ್ಟ್, ಮಾಹಿತಿ ಅರ್ಥೈಸುವಿಕೆ )
ಈ ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು.
* ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು.
* ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.
* ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.
* ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ ಭಾವಲೋಕದಲ್ಲಿ ಓದುತ್ತಾ ಇರುವುವರು ಅವರು ಎಷ್ಟೇ ಗಂಟೆ ಓದಿದರೂ ಕೂಡಾ, ತಾವು ಯಾವುದು ಓದಿದ್ದು ಎಂಬುದು ಗೊತ್ತಿರುವುದಿಲ್ಲ.
* ಈ ಪರೀಕ್ಷೆಗೆ ಏಷ್ಟು ಗಂಟೆ ತಯಾರಿ ನಡೆಸಬೇಕು ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ನನ್ನ ಪ್ರಕಾರ ಕನಿಷ್ಠ ೧೨ ರಿಂದ ೧೪ ತಾಸು ಓದಬೇಕು. ಕೆಲವರಿಗೆ ಗಾಬರಿಯಾಗಬಹುದು. ಇದಕ್ಕಿಂತ ಕಡಿಮೆ ಅವಧಿಯನ್ನು ತೆಗೆದುಕೊಂಡರೆ, ವಿಷಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆನೋ ಎಂದು ಕೆಲವರು ಹೇಳುವ ಪ್ರಕಾರ ಎಷ್ಟು ಗಂಟೆ ಓದುವುದು ಮುಖ್ಯವಲ್ಲ ಎಷ್ಟು ವಿಷಯ ತಿಳಿದುಕೊಂಡೆವು ಎಂಬುವುದು ಮುಖ್ಯವಾಗುತ್ತದೆ. ಆದರೆ, ಅಧ್ಯಯನಕ್ಕೆ ಕೂಡುವ ಅವಧಿ ಹೆಚ್ಚಿದಂತೆ, ಸಹಜವಾಗಿ ಏಕಾಗ್ರತೆ ಹಾಗೂ ಅರ್ಥ ಮಾಡಿಕೊಳ್ಳುವುದು.
* ಸಾಮಾನ್ಯವಾಗಿ ಯಾವ ಸಮಯದಲ್ಲಿ ಓದಬೇಕು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಓದುತ್ತೇನೆ ಎಂಬುದು ಮುಖ್ಯವಲ್ಲ. ಯಾವುದೇ ಸಮಯದಲ್ಲಿ ಓದಿ ಆದರೆ, ಮನಸ್ಸು ಕೊಟ್ಟು ಅಧ್ಯಯನ ಮಾಡಿ. ಸಾಮಾನ್ಯವಾಗಿ ಇಂಥ ಪರೀಕ್ಷೆಗೆ ತಯಾರಿ ನಡೆಸುವವರು ರಾತ್ರಿಯೇ ಹೆಚ್ಚು ಅಧ್ಯಯನ ಮಾಡುತ್ತಾರೆ.
* ಈ ಪರೀಕ್ಷೆಗೆ ವಿಶೇಷ ತಯಾರಿ ಹಾಗೂ ಪರಿಶ್ರಮ ಬೇಕಾಗುವುದು. ಅದಕ್ಕಾಗಿ ಸಹನೆ ಇರಬೇಕು. ನಿರಂತರ ಓದುತ್ತಾ ಇದ್ದಾಗ, ಅದನ್ನು ಬಿಟ್ಟು ಓಡಿಹೋಗೋಣ ಎಂಬ ಮನಸ್ಸು ಬರುತ್ತದೆ. ಕೆಲವರು ೧೧ನೇ ಹೆಜ್ಜೆವರೆಗೆ ಬಂದಿರುತ್ತಾರೆ. ಇನ್ನೊಂದು ಹೆಜ್ಜೆ ಇಟ್ಟರೆ, ಗುರಿ ಮುಟ್ಟಲು ಸಾಧ್ಯವಿರುತ್ತದೆ. ಅದನ್ನು ಗುರ್ತಿಸದೆ, ಸಹನೆ ಕಳೆದುಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ. ಓಡಿ ಹೋಗುತ್ತಾರೆ.
* ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ತಯಾರಿ ಮಾಡುವಾಗ ನಮ್ಮ ಓದು ಎಷ್ಟು ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯ ನಮಗೆ ಪ್ರೇರಣೆ ಹಾಗೂ ಸ್ಫೂರ್ತಿ. ಅದಕ್ಕಾಗಿ ಈಗಾಗಲೇ ಯಶಸ್ವಿಯಾದವರ ಸಂದರ್ಶನ ಓದಿ ಹಾಗೂ ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮನಸ್ಸು ಗಟ್ಟಿಯಾಗುತ್ತದೆ. ನಮ್ಮ ಸ್ಪರ್ಧಾ ಚಾಣಕ್ಯ ಪತ್ರಿಕೆಯಲ್ಲಿ ಪ್ರತಿ ತಿಂಗಳು ಸಾಧಕರ ಬಗ್ಗೆ ಪ್ರಕಟಿಸಿದ್ದೇವೆ. ಒಮ್ಮೆ ಓದಿ ನೋಡಿ. ಸಾಧಿಸಲು ಅವರು ತೆಗೆದುಕೊಂಡ ಸಮಯ, ಯಶಸ್ಸಿಗಾಗಿ ಪಟ್ಟ ಪರಿಶ್ರಮ ಎಲ್ಲವೂ ಗೊತ್ತಾಗುತ್ತದೆ.
* ಓದುವಾಗ ಯಾವುದೇ ವಿಷಯ ತಿಳಿಯದಿದ್ದಾಗ ಗಾಬರಿಯಾಬೇಡಿ. ಎಲ್ಲರಿಗೂ ಎಲ್ಲಾ ವಿಷಯ ಗೊತ್ತಿರುವುದಿಲ್ಲ. ಯಾಕೆಂದರೆ ಯಾರೂ ಇಲ್ಲಿಯವರೆಗೆ ೧೦೦ಕ್ಕೆ ೧೦೦ ಅಂಕಗಳನ್ನು ತೆಗೆದುಕೊಂಡ ಉದಾಹರಣೆ ಇಲ್ಲ. ಕೆಲವರು ಒಂದೂ ಪ್ರಶ್ನೆ ಬರದಿದ್ದಾಗ ನಾನು ದಡ್ಡನೆಂಬ ಭಾವನೆ ಬೆಳೆಸಿಕೊಂಡು ಉತ್ಸಾಹ ಕಳೆದುಕೊಳ್ಳುತ್ತಾರೆ.
* ಕೆಲವರಿಗೆ ಈ ಪರೀಕ್ಷೆ ಎಂದರೆ ಪುಸ್ತಕಗಳನ್ನು ಸಂಗ್ರಹಿಸುವುದು ಎಂದು ತಿಳಿದುಕೊಂಡು ಎಲ್ಲಾ ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ, ಯವುದನ್ನು ಪೂರ್ಣವಾಗಿ ಓದುವುದಿಲ್ಲ. ಉತ್ತಮ ಪುಸ್ತಕಗಳು ಇದ್ದರೆ ಸಾಕು. ಮುಂದಿನ ಸಂಚಿಕೆಯಲ್ಲಿ ಕೆ.ಎ.ಎಸ್. ಪರೀಕ್ಷೆ ತಯಾರಿಗೆ ಇರುವ ಉತ್ತಮ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ.
* ಉನ್ನತ ಪರೀಕ್ಷೆ ಬರೆಯಬೇಕಾದರೆ ಅಧ್ಯಯನದ ಕೊಠಡಿಯು ಕೂಡ ಅಷ್ಟೇ ಉತ್ತಮವಾಗಿರಬೇಕು. ಅಲ್ಲಿಯ ವಾತಾವರಣ ಬಹಳ ಚೆನ್ನಾಗಿರಬೇಕು. ಒಂದು ವೇಳೆ ನೀವು ಇರುವ ರೂಮಿನಲ್ಲಿ ಎಲ್ಲರೂ ಕೆ.ಎ.ಎಸ್. ಆಕಾಂಕ್ಷಿಗಳು ಇದ್ದರೆ ಚೆಂದ. ಬೇರೆ ಪರೀಕ್ಷೆಗೆ ತಯರಾಗುವವರ ಜೊತೆ ಇರಬಾರದು. ಯಾಕೆಂದರೆ, ನಿಮ್ಮದೇ ಕೆ.ಎ.ಎಸ್. ವಾತಾವರಣ ಇರುವುದಿಲ್ಲ. ಹಾಗೂ ಸ್ಫೂರ್ತಿ ಉಂಟಾಗುವುದಿಲ್ಲ.
* ಬೇರೆಯವರು ಓದುವುದನ್ನು ನೋಡಿ, ಅವರ ಪುಸ್ತಕಗಳ ಸಂಗ್ರಹ ನೋಡಿ, ಅವರ ಚರ್ಚೆಯನ್ನು ನೋಡಿ ನೀವು ಗಾಬರಿಯಾಗಬೇಡಿ. ಯಾವತ್ತೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಓದುವಾಗ ನಿಮ್ಮದೇ ಶೈಲಿ ರೂಢಿಸಿಕೊಂಡು ಓದಬೇಕು.
* ಓದುವಾಗ ಮುಖ್ಯವಾದ ವಿಷಯಗಳನ್ನು ಕುರಿತು ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳುವುದು ಉತ್ತಮ. ಸಮಯ ಇರದಿದ್ದಾಗ ಮಾತ್ರ ಪುಸ್ತಕದಲ್ಲಿ ಅಂಡರಲೈನ್ ಮಾಡಿಕೊಳ್ಳಿ. ಇದರಿಂದ ವೇಗವಾಗಿ ಪುನರ್ ಅಧ್ಯಯನ ಮಾಡಲು ಹಾಗೂ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.
* ಇದಕ್ಕಾಗಿ ಗೆಳೆಯರ ಗುಂಪು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಏಕಾಂಗಿ ಓದಬೇಡಿ. ಗುಂಪು ಚರ್ಚೆ ಮಾಡುವಾಗ ಹೊಸ ಹೊಸ ವಿಷಯ ತಿಳಿಯುವುದು ಅಲ್ಲದೆ ಚರ್ಚೆ ಮಾಡಿದ ವಿಷಯವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
* ಚರ್ಚೆ ಹರಟೆಯಾಗಬಾರದು. ಓದು ಆಯಾಸವಾಗಬಾರದು ಹಾಗೂ ನಿರಂತರ ಉತ್ಸಾಹ ನಿಮ್ಮಲ್ಲಿ ಇರಬೇಕಾದರೆ, ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಯಾದರೂ ಧ್ಯಾನ, ಪ್ರಾಣಾಯಾಮ ಹಾಗೂ ಯೋಗಾಸನ ಮಾಡಬೇಕು. ಇದರಿಂದ ನಮ್ಮ ದೇಹಕ್ಕೆ ಶುದ್ಧವಾದ ಆಮ್ಲಜನಕ ಪೂರೈಕೆಯಾಗುವುದಲ್ಲದೆ, ರಕ್ತ ಪರಿಚಲನೆ ನಿಯಮಿತಗೊಳ್ಳುವುದು. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ. ಪ್ರಾಮಾಣಿಕವಾಗಿ ನಿಮ್ಮನ್ನು ಪರೀಕ್ಷೆಯಲ್ಲಿ ತೊಡಗಿಸಿಕೊಂಡರೆ, ನಿಮ್ಮ ತಯಾರಿ ಉತ್ತಮವಾಗಿರುತ್ತದೆ. ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳದೆ, ಒಂದೇ ಮನಸ್ಸಿನಿಂದ ತಯಾರಿಯಲ್ಲಿ ತೊಡಗಿಸಿಕೊಳ್ಳಿ. ನಿಲ್ಲಬೇಡಿ, ಮುನ್ನುಗ್ಗಿರಿ, ಯಶಸ್ಸು ಸಿಗಲಿ.
* ನಿಮ್ಮದೇ ಆದ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಪ್ರಾರಂಭದಲ್ಲಿ ಟೈಮ್ ಟೇಬಲ್ ಪಾಲನೆ ಮಾಡದೇ ಹೋಗಬಹುದು. ಆದರೆ, ನೀವು ನಿರಂತರವಾಗಿ ಪಾಲನೆ ಮಾಡಿದಂತೆ ರೂಢಿಯಾಗುತ್ತದೆ. ಟೈಮ್ ಟೇಬಲ್ ಇಲ್ಲದಿದ್ದರೆ, ಒಂದು ವಿಷಯ ಹೆಚ್ಚು ಓದುತ್ತೀರಿ, ಇನ್ನೊಂದು ವಿಷಯ ಕಡಿಮೆ ಓದುತ್ತೀರಿ. ನಾನು ಮಾಡೇ ಮಾಡ್ತೀನಿ ಎಂಬ ವಿಶ್ವಾಸ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.

Thursday, 25 April 2013
ಸಮಯದ ವಲಯಗಳ ಪರಿಚಯ
AST = Atlantic Standard Time
AHD =
Alaska-Hawaii Daylight
AHS = Alaska
– Hawaii Standard
BLT =
Baghdad Local Time
BST =
British Summer Time
CAT =
Central Alaska Time
CCT = China
Coast Time
CDT =
Central Daylight Time
CET =
Central European Time
CST =
Central Standard Time
EAD = East
Australian Daylight
EDT =
Eastern Daylight Time
EAS = East
Australian Standard
EET =
Eastern European Time
EMT = East
Mediterranean
EST =
Eastern Standard Time
GMT =
Greenwich Mean Time
HST = Hawaii
Standard Time
IST = Indian
Standard Time
JST =
Japanese Standard Time
MDT =
Mountain Daylight Time
MET = Middle
European Time
MST =
Mountain Standard Time
MTS = Moscow
Time Standard
MTD = Moscow
Time Daylight
NZT = New
Zealand Time
PST =
Pakistan Standard Time
WAS = West
Australian Standard
WAT = West
Africa Time
ಅತ್ಯಾಚಾರಿಗಳೇ...! ನಶಿಸಿ ಹೋಗಿ.
ದಿಲ್ಲಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ನಡೆದಿರುವ ಘೋರ ಅತ್ಯಾಚಾರ ಪ್ರಕರಣ ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೈಶಾಚಿಕ ಕೃತ್ಯದಿಂದ ವಿಚಲಿತಗೊಂಡ ಜನರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳಬೇಕಾದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ದೂರು ಬಂದ ತಕ್ಷಣ ಪೊಲೀಸರು ಬಾಲಕಿಯ ಪತ್ತೆಗೆ ಪ್ರಯತ್ನಿಸುವುದಿರಲಿ, ಪ್ರಕರಣವನ್ನು ಮುಚ್ಚಿ ಹಾಕಲು ಆ ಮಗುವಿನ ತಂದೆ ತಾಯಿಯರಿಗೆ ಲಂಚ ಕೊಡಲು ಹೊರಟಿದ್ದು ನಾಚಿಕೆಗೇಡು. ನಾಲ್ಕು ತಿಂಗಳ ಹಿಂದೆ ಯುವತಿಯೊಬ್ಬಳ ಮೇಲೆ ಇದೇ ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಜಾರಿಗೆ ಬಂದ ಹೊಸ ಕಾನೂನು ಮುಂತಾದ ಬೆಳವಣಿಗೆಗಳಿಂದ ಪೊಲೀಸರು ಏನೇನೂ ಬದಲಾಗಿಲ್ಲದಿರುವುದನು ಇದು ಬಹಿರಂಗಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ, ಅದರಲ್ಲಿಯೂ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಪುಟ್ಟ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪುರಷರ ಲೈಂಗಿಕ ವಿಕೃತಿಯ ರಾಕ್ಷಸ ರೂಪ.
ಭಾರತದಲ್ಲಿ ಪುರುಷರು ಹೆಣ್ಣನ್ನು ಭೋಗವಸ್ತುವಿನಂತೆಯೇ ನೋಡುತ್ತ ಬಂದಿದ್ದಾರೆ. ಪುರುಷರ ಈ ಪೈಶಾಚಿಕ ಮನಸ್ಸು ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದಿದೆ. ಆಧುನಿಕ ಚಿಂತನೆಗಳಿಂದ ಮಹಿಳೆಯರ ಬಗೆಗಿನ ಪುರುಷರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ನಿಜ. ಆದರೆ ಚಿಂತನೆಯ ಜತೆಯೇ ಈ ಶತಮಾನದಲ್ಲಿಯ್ ತಂತ್ರಜ್ಞಾನದ ಮೂಲಕ ಪಾಶ್ಚಾತ್ಯ ದೇಶಗಳಿಂದ ಹರಿದು ಬಂದ ಮುಕ್ತ ಲೈಂಗಿಕತೆ ಪುರುಷರ ಮೇಲೆ ಬೀರಿದ ಕೆಟ್ಟಾ ಪರಿಣಾಮವೇ ಹೆಚ್ಚು. ವಿಕೃತ ಕಾಮ ಮಾರುವ ದುಷ್ಟರಿಂದಾಗಿ ಭಾರತದ ಪುರುಷರು ಲೈಂಗಿಕ ಪಿಶಾಚಿಗಳಾಗಲು ಅವಕಾಶ ಮಾಡಿಕೊಟ್ಟಿದೆ. ಯೋನಿಯಲ್ಲಿ ಬಾಟಲಿ, ಗೋಲಿ ಮತ್ತಿತರ ವಸ್ತುಗಳನ್ನು ತೂರಿಸಿ ತೆಗೆಯುವ ವಿಕೃತಿ ಇಂಟರ್‌ನೆಟ್‍ನಲ್ಲಿ ಸಿಗುವ ನೀಲಿ ಚಿತ್ರಗಳಲ್ಲಿ ಕಂಡುಬರುವಂಥ ಕೃತ್ಯಗಳೇ ಆಗಿವೆ. ಲೈಂಗಿಕ ಚಟುವಟಿಕೆಯನ್ನು ಈ ಚಿತ್ರಗಳು ವಿಜೃಂಭಿಸಿ ಪ್ರಚೋದಿಸುತ್ತವೆ. ತಮ ಪೈಶಾಚಿಕ ಕೃತ್ಯ ಎಸಗಲು ವಿಕೃತ ಪುರುಷರಿಗೆ ಸುಲಭವಾಗಿ ಸಿಗುವವರು ಅಮಾಯಕ ಪುಟ್ಟ ಬಾಲಕಿಯರು. ಹೀಗಾಗಿಯೇ ಮಕ್ಕಳ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತಿರುವುದರಿಂದ ಅಂಥ ನೀಲಿ ಚಿತ್ರಗಳ ತಾಣಗಳನ್ನು ನಿಷೇಧಿಸುವ ಕೆಲಸ ಮೊದಲು ಆಗಬೇಕು. ಅತ್ಯಾಚಾರ ಮಾಡಿದವರಿಗೆ ಅದರಲ್ಲಿಯೂ ನಿರ್ಧಿಷ್ಟವಾಗಿ ಪುಟ್ಟ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರನ್ನು ಗಲ್ಲಿಗೇರಿಸಬೇಕೆಂಬ ಒತ್ತಾಯ ಪ್ರತಿಭಟನಾಕಾರರಿಂದ ಕೇಲಿಬರುತ್ತಿದೆ. ಕಠಿಣವಾದ ಕಾನೂನುಗಳು ಜಾರಿಗೊಳಿಸಬೇಕಾದುದು ಅಗತ್ಯ ಎನ್ನುವದರಲ್ಲಿ ಅನುಮಾನವಿಲ್ಲ. ಆದರೆ ಕಾನೂನಿಗಳಿಂದ ಮಾತ್ರ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸು ವ್ಯವಸ್ಥೆಯಲ್ಲಿ ಪುರುಷರೇ ಹೆಚ್ಚು. ಪೊಲೀಸರಾಗಿರುವ ಆ ಪುರುಷರು ಹೆಣ್ಣನ್ನು ಭೋಗವಸ್ತುವೆಂದು ಭಾವಿಸಿದವರು. ಹೀಗಾಗಿ ಹೆಣ್ಣನ್ನು ಅವರು ರಕ್ಷಿಸುವ ಸಾಧ್ಯತೆ ಇಲ್ಲ. ಮೂಲಭೂತ ಸಮಸ್ಯೆ ಇರುವುದು ಇಲ್ಲಿಯೇ. ಹೆಣ್ಣಿನ ಬಗ್ಗೆ ಪುರುಷರ ಮನೋಭಾವ, ದೃಷ್ಟಿ ಬದಲಾಗದೆ ಪರಿಸ್ಥಿತಿ ಸುಧಾರಿಸದು. ಹೀಗಾಗಿ ರಾಷ್ಟ್ರದಾದ್ಯಂತ ಜನಜಾಗೃತಿ ಆಂದೋಲನ ಇಂದಿನ ಅಗತ್ಯ. ಮನೆ ಮನೆಯಲ್ಲಿ ಈ ಆಂದೋಲನ ನಡೆಯಬೇಕು. ಶಾಲಾ ಶಿಕ್ಷಣ, ಪ್ರಚಾರ ಮಾಧ್ಯಮವೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ಸರಕಾರ ಬಳಸಿಕೊಳ್ಳಬೇಕು. ಜನರು ಸಂಘಟಿತರಾಗಿ ಮುಂದೆ ಹೆಜ್ಜೆ ಇಟ್ಟರೆ ಅವರಿಗೆ ಅಸಾಧ್ಯವಾದುದು ಏನೂ ಇಲ್ಲ. ಇಂಥ ಒಂದು ಆಂದೋಲನ ಇಂದೇ ಆರಂಭವಾಗಲಿ.
ಸಂಪಾದಕೀಯ

Sunday, 17 March 2013
ಹೀಗೊಂದು ವಿಭಿನ್ನ, ವಿಶೇಷ ಪತ್ರಿಕೆ `ಸ್ಪರ್ಧಾ ಚಾಣಕ್ಯ'
ಪ್ರಿಯ ಸ್ಪರ್ಧಾರ್ಥಿಗಳೇ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದಾ ಸಿದ್ಧತೆ ನಡೆಸುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಸ್ತತ ಹಲವಾರು ಪತ್ರಿಕೆಗಳು ನಿರತವಾಗಿರುವುದು ತಮಗೆಲ್ಲ ತಿಳಿದಿರುವ ಸಂಗತಿ. ಅವುಗಳಲ್ಲಿ ವಿಶಿಷ್ಟವಾದುದ್ದು ಹಾಗೂ ವಿನೂತನ ಪ್ರಯೋಗಗಳಿಗೆ ಹೆಸರಾಗಿರುವ `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ತಮಗೆ ಪರಿಚಯಿಸಬೇಕೆಂಬುದು ನನ್ನ ಉದ್ದೇಶ. `ಸ್ಪರ್ಧಾ ಚಾಣಕ್ಯ' ಪತ್ರಿಕೆಯನ್ನು ವಿಜಾಪುರ (ವಿಜಯಪುರ)ದ ಹೆಮ್ಮೆಯ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ `ಚಾಣಕ್ಯ ಕರಿಯರ್ ಅಕಾಡೆಮಿ' ಪ್ರತಿ ಪಾಕ್ಷಿಕಗೊಮ್ಮೆ ಪ್ರಕಟಿಸುತ್ತಿದೆ. ಪ್ರಚಲಿತ ಘಟನೆಗಳು, ಸಾಮಾನ್ಯ ಜ್ಞಾನ ವಿಭಾಗ, ಸಂಸ್ಥೆಯ ಸ್ಥಾಪಕ ಮುಖ್ಯಸ್ಥರಾದ ಹಾಗೂ ಪ್ರಧಾನ ಸಂಪಾದಕರಾದ ಶ್ರೀ ಎನ್.ಎಂ.ಬಿರಾದಾರ ಅವರು ಬರೆಯುವ `ಸಮಾಧಾನ ಅಂಕಣ' ಎಷ್ಟೋ ನೊಂದ, ದಾರಿಕಾಣದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ, ದಾರಿದೀಪವಾಗಿದೆ. ನಡೆದಾಡುವ ದೇವರೆಂದೆ ಜನಪ್ರಿಯರಾದ, ಅಸಂಖ್ಯಾತ ಜನರ ಆರಾಧ್ಯ ದೈವವಾದ ವಿಜಾಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ `ದಿವ್ಯ ಸಂದೇಶ' ಮತ್ತು ಖ್ಯಾತ ಶಿಕ್ಷಣ ತಜ್ಞರು ಮತ್ತು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶ್ರೀ ಡಾ. ಗುರುರಾಜ ಕರಜಗಿಯವರ `ವ್ಯಕ್ತಿತ್ವ ವಿಕಸನ' ಅಂಕಣ ಪ್ರಕಟವಾಗುತ್ತಿವೆ. ಇವಲ್ಲದೇ ತಾನಾಜಿ ಇಂಗಳೆ ಅವರ ಪ್ರಬಂಧ ಲೇಖನ, ಚಾಣಕ್ಯ ಕರಿಯರ್ ಅಕಾಡೆಮೆ ಉಪನ್ಯಾಸಕರಾದ ಶ್ರೀ ಬಿ.ಡಿ.ಪಾಟೀಲ ಅವರಿಂದ ಕನ್ನಡ ವಿಷಯದ ಮಾಹಿತಿ ಹಾಗೂ ಮತ್ತೋರ್ವ ಉಪನ್ಯಾಸಕರಾದ ಶ್ರೀ ಸಂತೋಷ್ ಕುಲಕರ್ಣಿ ಅವರಿಂದ ಗಣಿತ ವಿಷಯದ ಸಮಸ್ಯೆಗಳ ಬಿಡಿಸುವಿಕೆಯ ಲೇಖನ, ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಲೇಖನಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಹೀಗೆ ಹಲವಾರು ವೈವಿಧ್ಯಮಯ ವಿಷಯಗಳನ್ನು ಹೊತ್ತು ಪ್ರತಿ ಪಾಕ್ಷಕಕ್ಕೊಮ್ಮೆ ರಾಜ್ಯದ ಎಲ್ಲ ಭಾಗಗಳ ಪುಸ್ತಕ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ತಾವು ಕೂಡ ಖರೀದಿಸಿ ಒಮ್ಮೆ ಓದಿ ತಮ್ಮ ಅಮೂಲ್ಯ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ತಿಳಿಸಿ.
- ಜ್ಞಾನಮುಖಿ
(ಗುರುಪ್ರಸಾದ್ ಎಸ್. ಹತ್ತಿಗೌಡರ)
ಪತ್ರಿಕೆಯ ವಿಳಾಸ
ಸ್ಪರ್ಧಾ ಚಾಣಕ್ಯ ಪಾಕ್ಷಿಕ ಪತ್ರಿಕಾಲಯ
ಮಲಘಾಣ ಬಿಲ್ಡಿಂಗ್, 3ನೇ ಮಹಡಿ, ಮೀನಾಕ್ಷಿ ಚೌಕ
ಬಿಜಾಪುರ - 586101 ದೂರವಾಣಿ: 08352-240197
ಕಾರ್ಯಾಲಯ 9900056218
ಪ್ರಸರಣ: 9538038531
ಮಿಂಚಂಚೆ: - spardha_chanakya@yahoo.com
Thursday, 14 March 2013
ಶಿಶುಮನೋವಿಜ್ಞಾನ ಮತ್ತು ವಿಕಸನ ಪಠ್ಯಕ್ರಮ
ಪ್ರಿಯ ಸ್ಪರ್ಧಾರ್ಥಿಗಳೇ,
ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪಠ್ಯಕ್ರಮದಲ್ಲಿ ಶಿಶು ಮನೋವಿಜ್ಞಾನ ಪಠ್ಯಕ್ರಮ ಅಳವಡಿಸಿರುವುದು ತಮಗೆಲ್ಲ ತಿಳಿದ ಸಂಗತಿ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಿದ್ಧವಾಗುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಲೆಂದು ಪಠ್ಯಕ್ರಮವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಶಿಶುಮನೋವಿಜ್ಞಾನ ಮತ್ತು ವಿಕಸನ ಪಠ್ಯಕ್ರಮ
ಮವಿನ ವಿಕಾಸ ಮತ್ತು ಕಲಿಕೆ
ಮಗುವಿನ ವರ್ತನೆಯನ್ನು ಅಧ್ಯಯನ ಮಾಡುವ ವಿಧಾನಗಳು
೧. ಅವಲೋಕನ
೨. ಸಂದರ್ಶನ
೩. ಮನೋವಿಜ್ಞಾನ ಪರೀಕ್ಷಣೆಗಳು
೨. ಮನೋವಿಕಾಸದಲ್ಲಿ ಅನುವಂಶೀಯತೆ ಮತ್ತು ಪರಿಸರದ ಪಾತ್ರ
೩. ಕಲಿಕಾ ಪರಿಕಲ್ಪನೆ
೪. ಕಲಿಕೆಯ ಮೂಲ ಸಿದ್ಧಾಂತಗಳು
ಎ) ಅನುಬಂಧನಾ ಕಲಿಕೆ
ಬ) ಒಲನೋಟ ಕಲಿಕೆ
ಕ) ಜ್ಞಾನಾತ್ಮಕ ಕಲಿಕೆ (ಪಿಯಾಜೆ, ಬ್ರೂನರ್, ವೈಗೋಟಸ್ಕಿ)
೫. ಕಲಿಕೆ ಮತ್ತು ವಿಕಾಸಗಳ ಸಂಬಂಧಗಳು
ಕಲಿಕಾರ್ಥಿಯ ಸಿದ್ಧತಾ ಪರಿಪಕ್ವತೆ
೬. ಫಿಯಾಜೆ, ಕೋಹ್ಲರ್, ವೈಗೋಟಸ್ಕಿ (ಸಂರಚನಾತ್ಮಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನ)
೭. ಮಗುವಿನ ಪರಿಕಲ್ಪನೆ ಅಭಿವೃದ್ಧಿಯಾತ್ಮಕ ಮತ್ತು ಮಗು ಕೇಂದ್ರಿತ ಶಿಕ್ಷಣ
ಅ) ಚಟುವಟಿಕೆ ಆಧಾರಿತ ಬೋಧನಾ ಮತ್ತು ಕಲಿಕಾ ಪದ್ಧತಿಗಳು.
ಬ್) ಸಮಸ್ಯೆ ಆಧಾರಿತ ಕಲಿಕೆ
೮. ಬುದ್ಧಿಶಕ್ತಿ ಸಂರಚನೆಯ ವಿಮರ್ಶಾತ್ಮಕ ದೃಷ್ಟಿಕೋನ (ಸ್ಫಿಯರ್‌ಮನ್, ಗಿಲ್ಫೋರ್ಡ್, ಥರ್‌ಸ್ಟನ್, ಗಾರ್ಡ್‍ನರ್ ಮರ್ಫಿ)
೯. ಭಾಷೆ ಮತ್ತು ಚಿಂತನೆ
ಫಿಯಾಜೆ, ಜೋಮಸ್ಕಿ ಮತ್ತು ವೈಗೋಟಸ್ಕಿಯವರ ಮೂಲ ದೃಷ್ಟಿಕೋನಗಳು
೧೦. ಸಾಮಾಜಿಕ ಸಂರಚನೆಯಾಗಿ ಲಿಂಗಭಿನ್ನತೆ
ಲೈಂಗಿಕ ಭಿನ್ನತೆಗಳ ಪಾತ್ರ, ಲಿಂಗ ಪಕ್ಷಪಾತದ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು
೧೧. ಕಲಿಕಾರ್ಥಿಗಳಲ್ಲಿ ವೈಯುಕ್ತಿಕ ಭಿನ್ನತೆಗಳು, ಸಮುದಾಯ, ಧರ್ಮ, ಜಾತಿ, ಭಾಷೆ, ಲಿಂಗ ಇವುಗಳ ಹಿನ್ನೆಲೆಯಲಿ ಕಲಿಕಾರ್ಥಿಗಳಲ್ಲಿ ಇರುವ ವ್ಯತ್ಯಾಸಗಳು
೧೨. ಕಲಿಕಾ ದತ್ತಕಾರ್ಯ ಮತ್ತು ಕಲಿಕಾ ಮೌಲ್ಯಮಾಪನ ಇವುಗಲ ಭಿನ್ನತೆಗಳು- ಶಾಲಾಧಾರಿತ ಮೌಲ್ಯಮಾಪನ
೧೩. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ
ಮುಂಗಾಣಿಕೆಗಳು ಮತ್ತು ಅಭ್ಯಾಸಗಳು
೧೪. ಕಲಿಕಾರ್ಥಿಯ ಸಾಧನೆಯ ಮೌಲ್ಯಮಾಪನ
ಶ್ರೇಣಿ ಕೂಡುವಿಕೆ
೧೫. ವ್ಯಕ್ತಿತ್ವ ವಿಕಸನ
ವ್ಯಕ್ತಿತ್ವದ ಪರಿಕಲ್ಪನೆ ಮತ್ತು ಮೂಲ ಉಪಗಮಗಳು ( ಮನೋವಿಶ್ಲೇಷಣೆ ಮತ್ತು ಗುಣ ಸಿದ್ಧಾಂತ) ಸಮಾಯೋಜನಾ ತಂತ್ರಗಳು)
ಕಲಿಕೆ ಮತ್ತು ಕಲಿಕಾ ತಂತ್ರಗಳು
೧. ಮಕ್ಕಳು ಹೇಗೆ ಕಲಿಯುತ್ತಾರೆ ಮತ್ತು ಯೋಚಿಸುತ್ತಾರೆ.
ಶಾಲಾ ಸಾಧನೆಯಲ್ಲಿ ಮಕ್ಕಳು ಹೇಗೆ ಮತ್ತು ಏಕೆ ಅಪಯಶಸ್ಸು ಹೊಂದುತ್ತಾರೆ?
೨. ಕಲಿಕೆ ಮತ್ತು ಸಾಧನೆಯಲ್ಲಿ ವಿವಿಧ ಕಾರಕಾಂಶಗಳ ಪ್ರಭಾವಗಳು
೩. ಬೋಧನಾ ಮತ್ತು ಕಲಿಕೆಗಳ ಮೂಲ ಪ್ರಕ್ರಿಯೆಗಳು
ಎ) ಮಕ್ಕಳ ಕಲಿಕಾ ತಂತ್ರಗಳು
ಬಿ) ಸಾಮಾಜಿಕ ಚಟುವಟಿಕೆಯಾಗಿ ಕಲಿಕೆ
ಸಿ) ಸಾಮಾಜಿಕ ಸಂಬಂಧಗಳ ಕಲಿಕೆ
೪. ವೈಜ್ಞಾನಿಕ ಅನ್ವೇಷಕನಾಗಿ ಮತ್ತು ಸಮಸ್ಯಾ ಪರಿಹಾರಕನಾಗಿ ಮಗು ( ಫಿಯಾಜೆ, ಬ್ರೂನರ್ ಮತ್ತು ವೈಗೋಟಸ್ಕಿಯವರ ದೃಷ್ಟಿಕೋನಗಳು)
೫. ಮಗುವಿನಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಇರುವ ಪರ್ಯಾಯ ಪರಿಕಲ್ಪನೆಗಳು
ಕಲಿಕಾ ಪ್ರಕ್ರಿಯೆಯಲ್ಲಿ ಕಲಿಕಾರ್ಥಿಯ ದೋಷಗಳನ್ನು ಗುರುತಿಸುವ ಮಹತ್ವ (ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮಗುವಿನ ಸ್ವಯಂ ಲಕ್ಷಣಗಳು)
೬. ಜ್ಞಾನಾತ್ಮಕ ಮತ್ತು ಸಂವೇಗಾತ್ಮಕ ಲಕ್ಷಣಗಳು
ಸಂವೇಗಗಳು
ಮೂಲ ಸಂವೇಗಗಳು
ಬಾಲ್ಯಾವಸ್ಥೆಯ ಸಂವೇಗಗಳ ಲಕ್ಷಣಗಳು
ಸಂವೇಗಗಳ ವಿಕಾಸ (ಬ್ರಿಡ್ಜ್‍ರವರ ಪ್ರಕಾರ) ಜ್ಞಾನಾತ್ಮಕ (ಚಿಂತನೆ, ತರ್ಕ, ಸಮಸ್ಯೆ ಪರಿಹಾರ ಮತ್ತು ಅನ್ವೇಷಣೆ)
೭. ಅಭಿಪ್ರೇರಣೆ ಮತ್ತು ಕಲಿಕೆ
ಎ) ಕಲಿಕೆಯ ಮೇಲೆ ಅಭಿಪ್ರೇರಣೆಯ ಪ್ರಭಾವ
ಬಿ) ಮಾಸ್ಲೋರವರ ಅಭಿಪ್ರೇರಣಾ ಶ್ರೇಣಿ
೮. ಕಲಿಕೆಗೆ ಕೊಡುಗೆಯಾಗಿ ವಿವಿಧ ಕಾರಕಾಂಶಗಳು
ವೈಯುಕ್ತಿಕ ಮತ್ತು ಪರಿಸರ
ಕೃಪೆ : ಸ್ಪರ್ಧಾ ಚಾಣಕ್ಯ ಪಾಕ್ಷಿಕ ಪತ್ರಿಕೆ

Wednesday, 6 March 2013
ಪ್ರಕೃತಿ ಚಿಕಿತ್ಸೆ
ಈ ಸಮಕಾಲೀನ ಸಂದರ್ಭದಲ್ಲಿ ಆಸ್ಪತ್ರೆಗಳು, ರೋಗಿಯು ತನ್ನ ದೇವರನ್ನು ಕಾಣುವ ಆಲಯಗಳಾಗಿ ಉಳಿದಿಲ್ಲ. ಹಾಗೊಂದು ವೇಳೆ ಇರುವುದಾದರೆ ಅವನು ಅತ್ಯಂತ ದುಬಾರಿಯಾದ ವೈಭವೋಪೇತ ವೈದ್ಯಕೀಯ ಚಿಕಿತ್ಸೆಯ ವೆಚ್ಚವನು ಭರಿಸಲು ಸಮರ್ಥನಾಗುವುದಾದರೆ ಮಾತ್ರ. ಭಾರತದ ಬಹುಪಾಲು ಜನತೆಯು ಈ ದುಬಾರಿ ಚಿಕಿತ್ಸೆಯ ಅವಕಾಶದಿಂದ ವಂಚಿತವಾಗಿದೆ. ಭಾರತದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾದ ಆಯುರ್ವೇದವೂ ಸಹ ಅತಿ ವೆಚ್ಚದ ಪ್ಯಾಕೇಜುಗಳಲ್ಲಿ ಬರುತ್ತಿದ್ದು ಸಾಮಾನ್ಯ ಜನತೆಯಿಂದ ದೂರವಾಗುವ ಸೂಚನೆಗಳು ಕಂಡುಬರುತ್ತಿವೆ. ಭಾರತವು ತನ್ನ ಯಾವ ಪ್ರಾಕೃತಿಕ ಚಿಕಿತ್ಸಾ ವಿಧಾನದಿಂದ ಪ್ರಸಿದ್ಧಿಯನ್ನು ಪಡೆದಿತ್ತೋ ಅಂತಹ ಎಲ್ಲ ಸಂಬಂಧವನ್ನು ಇಂದಿನ ಆಧುನಿಕ ವಿಜ್ಞಾನವು ಕಡಿದು ಹಾಕುತ್ತಿರುವ ಸಂದರ್ಭದಲ್ಲಿಯೂ ಸಹ ಪ್ರಸ್ತುತ ಜಾರ್ಖಂಡದ ಬುಡಕಟ್ಟು ಜನರು ತಮ್ಮ ಪ್ರಾಚೀನ ಪರಂಪರೆಯಿಂದ ಬಂದಿರುವ ವೈದ್ಯಕೀಯ ತಿಳಿವಳಿಕೆಯನ್ನು ರೋಗಗಳೊಂದಿಗೆ ಹೋರಾಡಲು ಅತ್ಯಂತ ಸಹಜ ರೀತಿಯ ಹೆಚ್ಚು ವೆಚ್ಚವಿಲ್ಲದ ವಿಧಾನಗಳನ್ನು ಉಪಯೋಗಿಸುವುದನ್ನು ಮುಂದುವರೆಸಿದ್ದಾರೆ.
ಹೊಡೊಪತಿಯು ಒಂದು ವಿಶಿಷ್ಟ ಪ್ರಕಾರದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಜಾರ್ಖಂಡ ರಾಜ್ಯದ ಬುಡಕಟ್ಟು ಜನಾಂಗದವರಿಗೆ ಸೇರಿದ್ದಾಗಿದೆ. ಇದು ಅನೇಕ ಪ್ರಾಕೃತಿಕ ಗಿಡಮೂಲಿಕೆಗಳನ್ನು ಹಿಂಡಿ ತೆಗೆದ ರಸಮೂಲಿಕೆಗಳಿಂದ ತಯಾರಿಸಲ್ಪಟ್ಟು, ರೊಗಿಯ ಆರೋಗ್ಯದ ಮೇಳೆ ಯಾವುದೇ ಅಡ್ಡ ಪರಿಣಾಮಗಳನ್ನುಂಟು ಮಾಡದೆ, ಹಲವಾರು ರೋಗಗಳನ್ನು ಗುಣಪಡಿಸುವುದೆಂದು ನಂಬಲಾಗಿದೆ. ಈ ವಿಶಿಷ್ಟ ಪ್ರಾಚೀನ ವೈದ್ಯಕೀಯ ಜ್ಞಾನದ ವೈದ್ಯರಾದ ಡಾ|| ಪಿ.ಪಿ. ಹೆಮ್ ಬ್ರಾಮ್‍ರವರ ಅಭಿಪ್ರಾಯದಂತೆ, "ಮೂಲನಿವಾಸಿಗಳಲ್ಲಿ ಇರುವ ಜನ್ಮ ಸಹಜವಾದ ಗುಣವು ಔಷಧೀಯ ಗಿಡಮೂಲಿಕೆಗಳನ್ನು ಗುರುತಿಸಲು ಅವಕಾಶ ಮಾಡಿಕೊಡುತ್ತದೆ. ಜಾರ್ಖಂಡ ರಾಜ್ಯವು ಸುಮಾರು ಸಾವಿರದ ಇನ್ನೂರು ಪ್ರಕಾರದ, ಸಸ್ಯ ಸಂಬಂಧಿತವದ ವಸ್ತಿ ದ್ರವವನ್ನು ಹೊಂದಿರುವ ಏಕೈಕ ರಾಜ್ಯವಾಗಿ ಮೆರೆದಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳು ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿವೆ. ಮಲೇರಿಯಾ ರೋಗದಿಂದ ಕಾಲಾ ಅಝಾರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ. " ಡಾ|| ಹೆಮ್ ಬ್ರಾಮ್‌ರವರು ಹೊಡೊಪತಿಯೂ ಸಹ ತೀವ್ರತರ ರೋಗಗಳಾದ ಕ್ಯಾನ್ಸರ್ ಮತ್ತು ಏಡ್ಸ್‍ನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಪಡಿಸುವುದೆಂದು ನಂಬುತ್ತಾರೆ. ಅವರು ಸ್ವತಃ ಕ್ಷಯ, ಮಲೇರಿಯಾ, ಅನೀಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಚರ್ಮರೋಗ ಮತ್ತು ಗಂಟುಗಳಿಂದ ತೀವ್ರವಾಗಿ ಬಳಲುತ್ತಿದ್ದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಿದರು.
ಡಾ|| ಹೆಮ್ ಬ್ರಾಮ್‍ರವರು ತಮ್ಮ ಒಂದು ಉಪನ್ಯಾಸದಲ್ಲಿ ತಾವು ಔಷಧಗಳಲ್ಲಿ ಉಪಯೋಗಿಸುವ ವಸ್ತುಗಳ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೌಹಾಚಾಲ್ ಬಾರ್ ಮತ್ತು ಗುಲ್ಲಾರ್ ವೃಕ್ಷಗಳ ತೊಗಟೆಗಳನ್ನು ಹಿಂದಿ ತೆಗೆದ ರಸದಿಂದ ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತಾರೆ. ಕ್ಷಯರೋಗಕ್ಕಾಗಿ ಅವರು ಮೊಟ್ಟೆಯ ಹಳದಿಭಾಗ, ಹಲಸಿನ ಹಣ್ಣು ಮತ್ತು ಮಾಲ್ ಕಂಗಿನಿ ಬಳ್ಳಿಯ ಎರಡು ಹನಿಗಳನ್ನು ಸೇರಿಸಿ ತಯಾರಿಸಿದ ಔಷಧವನ್ನು ಬಳಸುತ್ತಾರೆ ಮತ್ತು ಕಾಲಾ ಅಝಾರ್ ರೋಗವನ್ನು ಪುನಾರ್ಣವ ಬೇರುಗಳು ಮತ್ತು ಚಾರೈಗೊಡ ಚಕ್ಕೆಯ ರಸಗಳಿಂದ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.
ಜಾರ್ಖಂಡದಲ್ಲಿರುವ ಅತ್ಯಂತ ದಟ್ಟವಾದ ಸಸ್ಯವರ್ಗವು ಶ್ರೇಷ್ಠವಾದ ಔಷಧೀಯ ಗುಣಗಳಿಂದ ಕೂಡಿದೆ. ಮೂಲನಿವಾಸಿ ಜನಾಂಗವು ದೇಸಿಯ ಆಯುರ್ವೇದ ಪದ್ಧತಿಯಿಂದ ರೋಗಗಳಿಗೆ ಚಿಕಿತ್ಸೆ ನೀಡುವ ಕ್ರಮವನ್ನು ತಮ್ಮ ಪೂರ್ವಜರಿಂದ ಪಡೆದದ್ದಾಗಿದೆ. ಕಾಲಕ್ರಮೇಣ ಜನರು ತಮ್ಮ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ತೊರೆದು, ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ಪದ್ಧತಿಯು ತನ್ನ ಹಿಂದಿನ ಗರಿಮೆಯನ್ನು ಕಳೆದುಕೊಳ್ಳುತ್ತಿದೆ. ಡಾ|| ಹೆಮ್ ಬ್ರಾಮ್‍ರವರು ಈ ಪ್ರಾಚೀನ ಪದ್ಧತಿಯನ್ನು ನವೀನಗೊಳಿಸಿ, ಸ್ಥಳೀಯ ಲಾಭರಹಿತ ಸಂಸ್ಥೆಗಳಾದ 'ಹೊಡೂಪತಿ ಸಾಂಸ್ಕೃತಿಕ ಔಷಧ ಸಂಶೋಧನಾ ಮತ್ತು ವಿಕಾಸ ಕೇಂದ್ರ' ಹಾಗೂ `ಫುಲಿನ್ ಮಹಿಳಾ ಚೇತನ ವಿಕಾಸ ಕೇಂದ್ರಗಳ ಮೂಲಕ ಹೊಡೊಪತಿ ಜನಾಂಗದ ಮಹಿಳೆಯರಿಗೆ ತರಬೇತಿಯನ್ನು ಕೊಡುವುದರ ಮೂಲಕ ಗ್ರಾಮೀಣ ಜನರಿಗೆ ಮತ್ತೆ ಪರಿಚಯಿಸಿದರು.
ಉಗ್ರವಾದ ಮತ್ತು ಭಾರತದ ಭದ್ರತಾ ವ್ಯವಸ್ಥೆ
"ಹಿಂಸಾತ್ಮಕ ಮಾರ್ಗದ ಮೂಲಕ ಗುರಿ ಈಡೇರಿಸಿಕೊಳ್ಳುಇವ ಯತ್ನವನು ಉಗ್ರವಾದ" ಎನ್ನಬಹುದು. ಇಂಥ ಯತ್ನಗಳು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ನಡೆಯುತ್ತವೆ. ಇದು ಭಾರತದ ತುಂಬಾ ಹರಡಿ ಅಮಾಯಕ ಜನರ ಜೀವ ಮತ್ತು ಆಸ್ತಿ-ಪಾಸ್ತಿಗಳ ಮಾರಣ ಹೋಮ ಮಾಡುತ್ತಿರುವುದು ತುಂಬಾ ಶೋಚನೀಯ ಸ್ಥಿತಿ ತಲುಪಿದೆ. ಇಂಥ ಯತ್ನಗಳ ಹಿಂದೆ ಧರ್ಮ, ರಾಜಕೀಯ, ಹಣ, ಪ್ರತೀಕಾರ, ಕೋಮು ದ್ವೇಷ ಹೆಚ್ಚಿಸುವ, ಅಧಿಕಾರ ಗಿಟ್ಟಿಸಿಕೊಳ್ಳುವ ಉದ್ದೇಶಗಳನ್ನು ಗುರುತಿಸಬಹುದು.
"ಕೊಲ್ಲು ಅಥವಾ ಕೊಲ್ಲಲ್ಪಡು" ಎಂಬ ತತ್ವಕ್ಕೆ ಪ್ರಾಧಾನ್ಯತೆ ನೀಡುವ ಉಗ್ರವಾದ ತನ್ನ ದೈತ್ಯ ಹಿಡಿತದ ಮೂಲಕ ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವಂತಹ ದುಷ್ಕೃತ್ಯಗಳನ್ನು ಎಸಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂಥ ಉಗ್ರರ ದಾಳಿಗಆಳು ಕೇವಲ ಯಾವುದೇ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೇಶದಲ್ಲಿರುವ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸರಣಿಯೋಒಪಾದೇಯಲ್ಲಿ ನಡೆಯುತ್ತಿರುವುದು ದೇಶದ ಜನತೆಗೆ ಆತಂಕ ಸೃಷ್ಟಿಸಿದೆ.
ಉಗ್ರವಾದ ಎಂಬುವುದು ಮಾನವ ಕುಲಕ್ಕೆ ಅಂಟಿದ ಶಾಪ. ನಾಗರಿಕ ಸಮಾಜ ನೆಮ್ಮಂದಿಯಿಂದಿರಲು ಬಿಡದ ಒಂದು ಬಹುರೂಪಿ. ಜನರ ಮಾರಣಹೋಮ ಮಾಡುವಂಥ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಇಂತಹ ಉಗ್ರವಾದ ದುಷ್ಕೃತ್ಯಗಳು ಇಂದು ಬಹುತೇಕ ಜನದಟ್ಟಣೆ ನಗರಗಳಲ್ಲೇ ಸಂಭವಿಸುತ್ತಿವೆ. ದೆಹಲಿ, ಮುಂಬಯಿ, ಜೈಪುರ, ಅಹಮದಾಬಾದ್, ಬೆಂಗಳೂರು, ಪುಣೆ, ಹೈದ್ರಾಬಾದ್ ಇತ್ಯಾದಿ ಓಡಾಡುವ ಸ್ಥಳಗಳಲ್ಲಿ ಅಂದರೆ ಸರ್ಕಾರಿ ಕಚೇರಿಗಳು, ಹೊಟೇಲಗಳು, ಕೋರ್ಟ್ ಆವರಣ, ದೇವಾಲಯ ಆವರಣ, ವಾಣಿಜ್ಯ ಕಟ್ಟಡಗಳ ಪ್ರದೇಶಗಳಲ್ಲಿ ನಡೆದು ಸಾವಿರಾರು ಜನರ ಮಾರಣಹೋಮ ಮಾಡಿ,ಕ್ ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿವೆ.
ಉಗ್ರರ ದಾಳಿ ಹೆಚ್ಚುವುದಕ್ಕೆ ಕಾರಣಗಳು:
೧. ಭಯೋತಾದನೆ ಕೃತ್ಯಗಳ ತನಿಖೆಯಲ್ಲಿ ನಿಧಾನಗತಿ.
೨. ಭಯೋತ್ಪಾದನಾ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ನೀತಿ.
೩. ಉಗ್ರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡದೇ ಇರುವುದು.
ಭಾರತದಲ್ಲಿ ನಡೆದ ಪ್ರಮುಖ ಉಗ್ರವಾದ ಅಟ್ಟಹಾಸಗಳುಲ್:
* ಮಾರ್ಚ್ ೧೩, ೧೯೯೩ - ಮುಂಬೈನಲ್ಲಿ ಬಾಂಬ್ ಸ್ಫೋಟ್. ೨೫೦ ಜನರ ಸಾವು.
* ಡಿಸೆಂಬರ್ ೧೩, ೨೦೦೧ - ಸಂಸತ್ ಮೇಲೆ ಉಗ್ರರ ದಾಳಿ. ೧೧ ಜನರ ಸಾವು.
* ಮೇ ೧೩, ೨೦೦೮ - ರಾಜಸ್ಥಾನದ ಜೈಪುರದಲ್ಲಿ ಬಾಂಬ್ ಸ್ಫೋಟ್. ೬೮ ಜನರ ಸಾವು.
* ಜುಲೈ ೨೬, ೨೦೦೮ - ಗುಜರಾತ್ ಅಹಮದಾಬಾದ್‍ನಲ್ಲಿ ಬಾಂಬ್ ಸ್ಫೋಟ. ೫೭ ಜನರ ಸಾವು.
* ನವೆಂಬರ್ ೨೬, ೨೦೦೮ - ಮುಂಬೈನ ತಾಜ್ ಮತ್ತು ಓಬೆರಾಯ್ ಹೊಟೆಲ್‍ಗಳ ಮೇಲೆ ಉಗ್ರರ ದಾಳಿ. ೧೬೬ ಜನರ ಸಾವು.
* ಜುಲೈ ೧೩, ೨೦೧೧ - ಮುಂಬೈನ ದಾದರ್ ಮತ್ತು ಜವೇರಿ ಬಜಾರ್‌ಗಳಲ್ಲಿ ಸರಣಿಬಾಂಬ್ ಸೊಫೋಟ. ೨೧ ಜನರ ಸಾವು.
* ಇತ್ತೀಚೆಗೆ ಫೆಬ್ರವರಿ ೨೧, ೨೦೧೩ - ಹೈದರಾಬಾದ್‍ನ ದಿಲ್‍ಸುಖ್ ನಗರದಲ್ಲಿ ಸರಣಿ ಬಾಂಬ್ ಸ್ಫೋಟ. ೧೬ ಜನರ ಸಾವು.
ಇವೆಲ್ಲ ಉಗ್ರರು ನಡೆಸಿದ ಬಾಂಬ್ ಸ್ಫೋಟ ಕೃತ್ಯಗಳನ್ನು ಗಮನಿಸಿದರೆ ಭಾರತದಲ್ಲಿನ ಭದ್ರತೆ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಇವೇ ಸಾಕ್ಷಿ ಎಂದು ಹೇಳಬಹುದು. ಏಕೆಂದರೆ ಇವತ್ತಿನ ದಿನಮಾನಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಪಾಕಿಸ್ತಾನದದಂತಹ ನೆರೆ ರಾಷ್ಟ್ರಗಳು ಕುಮ್ಮಕ್ಕು ನೀಡುತ್ತಿರುವ ಸಂಗತಿ ತಿಳಿದುಬರುತ್ತದೆ. ಜಗತ್ತಿನ ದೊಡ್ಡಣ್ಣವೆಂದೇ ಖ್ಯಾತವಾದ ಅಮೇರಿಕ ದೇಶಕ್ಕೆ ಬೇಕಾಗಿರುವ ಪಾಕಿಸ್ತಾನದಲ್ಲಿ ನೆಲೆಸಿರುವ ಹಫೀಜ್ ಮಹ್ಮದ್ ಸಯೀದ್. ಈ ಉಗ್ರರನ್ನು ಹುಡುಕಿ ಕೊಟ್ಟವರಿಗೆ ಆ ದೇಶ ಸುಮಾರು ೫೦ ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಆದರೂ ಆ ಉಗ್ರ ಇನ್ನು ಕೈಗೆ ಸಿಗುತ್ತಿಲ್ಲ. ಇದು ಅಮೇರಿಕಾಕ್ಕೆ ತಲೆ ನೋವಾಗಿದೆ.
ಉಗ್ರ ನಿಗ್ರಹಕ್ಕೆ ಕಾನೂನು:
ಉಗ್ರವಾದ ನಿಗ್ರಹ ಕುರಿತು ಇನ್ನೂ ಸಮಗ್ರವಾದ ಕಾನೂನು ಜಾರಿ ಸಾಧ್ಯವಾಗಿಲ್ಲ. ಟಾಡಾ, ಪೋಟಾದಂತಹ ಕಾನೂನು ಜಾರಿಯಾದರೂ ಅದು ಸದ್ಬಳಕೆ ಆಗಿದ್ದಕ್ಕಿಂತ ದುರ್ಬಳಕೆಯಾಗಿದ್ದೇ ಹೆಚ್ಚು ಎಂಬ ಆರೋಪ ಕೇಳಿಬರುತ್ತಿದೆ. ಇದೀಗ ಕೇಂದ್ರ ಸರ್ಕಾರ ಎನ್.ಸಿ.ಟಿ.ಸಿ. ಜಾರಿಗೆ ಮುಂದಾದರೂ, ಅದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಉಗ್ರ ಚಟುವಟಿಕೆ ತಡೆಗಟ್ಟುವ ಸಾಹಸವನ್ನು ಅಧಿಕಾರ ರೂಢ ಸರ್ಕರಗಳು, ಆಲೋಚನವಂತಹ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ ಮೆಟ್ಟಿ ನಿಂತು ಕಾರ್ಯ ನಿರ್ವಹಿಸಬೇಕು. ಆಗ ಉಗ್ರವಾದಿಗಳ ಬೇರು ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟಗಳು ಕಠಿಣ ಕಾನೂನು ಜಾರಿಗೆ ಅಡ್ಡಿಯಾಗಿವೆ. ಇನ್ನೂ ಯ್ ಆವುದೇ ಪ್ರಕರಣಗಲಲ್ಲಿ ಆರೋಪ ಪಟ್ಟಿ ಸಲ್ಲಿಸಲು ಕಾಲ ಮಿತಿ ನಿಗದಿ ಮಾಡಲಾಗಿದೆ. ಆದರೆ ವಿಚಾರ ನಡೆಸಲು ನ್ಯಾಯಾಲಯಗಳಿಗೆ ಯಾವುದೇ ಕಾಲ ಮಿತಿಯಿಲ್ಲ. ಹೀಗಾಗಿ ಕಾನೂನಿನಲ್ಲಿ ಇರುವ ಲೋಪಗಳೇ ಕಾನೂನಿನ ಸಮರ್ಪಕ ಜಾರಿಗೆ ಅಡ್ದಿಯಾಗಿವೆ ಎನ್ನಲಾಗಿದೆ.
ಒಟ್ಟಾರೆಯಾಗಿ ಭಾರತದಲ್ಲಿ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪಾಕ್ ಉಗ್ರ ಅಜ್ಮಲ್ ಕಸಬ್ ಮತ್ತು ಸಂಸತ್ ದಾಳಿ ನಡೆಸಿದ ಅಫ್ಜಲ್‍ಗುರು ತರನಾಗಿ ಗಲ್ಲಿಗೇರಿಸಿದರೆ ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ತಡೆ ತರಬಹುದಾಗಿದೆ. ಇದು ದೇಶವನ್ನಾಳುವ ಸರ್ಕಾರ ಗಮನಿಸಬೇಕು. ಆಗ ಮಾತ್ರ ಭಾರತದಲ್ಲಿ ಉಗ್ರ ಚಟುವಟಿಕೆಗಳು ನಿಲ್ಲಬಹುದು.
- ತಾನಾಜಿ ಇಂಗಳೆ
ಸ್ಪರ್ಧಾ ಚಾಣಕ್ಯ
ಬೆರಳಚ್ಚಿಸಿದವರು : ಜಿ.ಎಸ್.ಹತ್ತಿಗೌಡರ
Subscribe to:
Posts (Atom)