Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 11 June 2016

ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ

This article about how to face KAS ( KPSC ) interview. I got this article by WhatsApp.
 by - Guruprasad Hattigoudar
         Jnanamukhi
         Mob: 9945479292

(KPSC (KAS) Interview Preparation Guidelines, suggestions)

* ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೆಷನರ್ಸ್‌ಗಳ ನೇಮಕಕ್ಕೆ ಸಂಬಂಧಿಸಿದಂತೆ ಸದ್ಯವೇ ಸಂದರ್ಶನ ನಡೆಸುವುದಾಗಿ ಪ್ರಕಟಿಸಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಸಂದರ್ಶನದಲ್ಲಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸೇರಿಸಿ ಮೆರಿಟ್‌ ಲಿಸ್ಟ್‌ ಪ್ರಕಟಿಸಲಾಗುತ್ತದೆ. ಹೀಗಾಗಿ ಸಂದರ್ಶನಕ್ಕೆ ಸಾಕಷ್ಟು ಸಿದ್ಧತೆ ನಡೆಸಿಯೇ ಹೋಗಬೇಕು. ಕಳೆದ ವಾರ ಯಶಸ್ವಿ ಸಂದರ್ಶನಗಳು ಏನೇನು, ಸಂದರ್ಶನದಲ್ಲಿ ಯಾವೆಲ್ಲಾ ಸಾಮರ್ಥ್ಯ‌ವನ್ನು ಅಳೆಯಲಾಗುತ್ತದೆ, ಸಂದರ್ಶನದ ದಿನ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಸಂದರ್ಶನ ಕೊಠಡಿಯಲ್ಲಿ ನಿಮ್ಮ ವರ್ತನೆ ಹೇಗಿರಬೇಕೆಂಬುದನ್ನು ತಿಳಿದುಕೊಂಡಿದ್ದೀರಿ, ಇಂದು ಸಂದರ್ಶನದ ಇನ್ನಷ್ಟು ವಿಷಗಳನ್ನು ತಿಳಿದುಕೊಳ್ಳೋಣ.


ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸುವಾಗ ವಹಿಸಬೇಕಾದ ಎಚ್ಚರಿಕೆಗಳು :
━━━━━━━━━━━━━━━━━━━━━━━━━━━

•►ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ಸ್ಪಷ್ಟವಾಗಿ ಕೇಳಿಸಿಕೊಳ್ಳದಿದ್ದಾಗ, ನಮ್ಮ ಉತ್ತರಗಳು ತಪ್ಪಾಗಿರುತ್ತವೆ.

•►ಸಂದರ್ಶಕರು ಕೇಳಿದ ಪ್ರಶ್ನೆ ನಮಗೆ ಸರಿಯಾಗಿ ಅರ್ಥವಾಗದಿದ್ದರೆ. ಇನ್ನೊಮ್ಮೆ ಕೇಳಬೇಕೆಂದು ವಿನಂತಿಮಾಡಿಕೊಳ್ಳಿ.

•►ಒರಟಾಗಿ ಉತ್ತರಿಸಬಾರದು. ಅನಾವಶ್ಯಕವಾಗಿ ನಗು ಇರಬಾರದು.

•►ಯಾವ ಸಂದರ್ಶಕರು ಪ್ರಶ್ನೆ ಕೇಳುತ್ತಾರೋ ಅವರ ಕಡೆಗೆ ಮುಖಮಾಡಿ ಉತ್ತರಿಸಿ.

•►ಉತ್ತರ ನೀಡುವಾಗ, ನೆಲ ನೋಡುತ್ತಾ, ಕಿಡಕಿ ನೋಡುತ್ತಾ, ಫ್ಯಾನ್‌ ನೋಡುತ್ತಾ, ಉತ್ತರಿಸಬಾರದು.

•►ನಮ್ಮ ತಪ್ಪುಗಳನ್ನು ಸಂದರ್ಶಕರು ಎತ್ತಿ ತೋರಿಸಿದಾಗ, ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬಿಡಿ.

•►ವಿಚಾರ ಮಾಡಿ ಉತ್ತರ ನೀಡಿ. ಅವಸರದಲ್ಲಿ ತಪ್ಪು ಉತ್ತರ ನೀಡಿ. ನಂತರ ಕ್ಷಮೆ ಕೇಳುವುದು ಸೂಕ್ತವಲ್ಲ. ಅವರ ಕೇಳಿದ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರದಿದ್ದರೆ, ಕ್ಷಮಿಸಿ ನನಗೆ ಗೊತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ಉತ್ತರ ಗೊತ್ತಿರದಿದ್ದಾಗ, ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೇಯದಲ್ಲ.

•►ಸಂದರ್ಶಕರರ ಬಗೆಗೆ ಗೌರವ ಇರಲಿ. ಇವರಿಗೇನು ಗೊತ್ತು ಎಂದು ತಪ್ಪು ಉತ್ತರ ನೀಡುವದರ ಮೂಲಕ ಅವರನ್ನು ಮೋಸಗೊಳಿಸುವ ಪ್ರಯತ್ನ ಮಾಡಬೇಡಿ.

•►ಉತ್ತರ ಹೇಳುವಾಗ ಅಹಂ ಪ್ರದರ್ಶನ ಮಾಡಬೇಡಿ. ಸರಳತೆ ಇರಲಿ.

•►ಉತ್ತರಿಸುವಾಗ ಸ್ಪಷ್ಟತೆ ಇರಲಿ, ಬಾಯಿಯಲ್ಲಿ ಗೊಣಗಬೇಡಿ.

•►ಕೆಲವೊಮ್ಮೆ ಸಂದರ್ಶಕರು ಉದ್ದೇಶಪೂರ್ವಕವಾಗಿ ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬೇಡಿ.

•►ನಿಮ್ಮ ಉಚ್ಛಾರಣೆ ಅತೀ ದೊಡ್ಡದಿರಬಾರದು/ಚಿಕ್ಕದಾಗಿಯೂ ಇರಬಾರದು.

•►ನೀವು ಉತ್ತರ ನೀಡುವಾಗ ಜಾತಿ, ಧರ್ಮ, ಪ್ರದೇಶ, ವೈಯಕ್ತಿಕ ಮಟ್ಟದ ಟೀಕೆ ಇರಬಾರದು.

•►ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತನ ಇರಲಿ ಹಾಗೂ ದೈಹಿಕ ಅಂಗಾಂಗಗಳ ಚಲನೆ ನಿಯಂತ್ರಣದಲ್ಲಿರಲಿ. ಸಂದರ್ಶಕರ ಕಡೆ ಕೈಮಾಡಿ ಉತ್ತರಿಸುವುದು ಸೂಕ್ತವಲ್ಲ.

•►ಸಂದರ್ಶಕರ ಎದುರಿನಲ್ಲಿ ಕಣ್ಣೀರು ಹಾಕುವುದು, ನಾಟಕೀಯ ವರ್ತನೆ ಮಾಡುವುದು ಹಾಗೂ ನಿಮ್ಮ ಅಸಹಾಯಕತೆಯನ್ನು ಪ್ರದರ್ಶನ ಮಾಡುವುದು ಬೇಡ.

•►ಗಮನಿಸಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಬೇಕೆಂಬ ಹುಚ್ಚು ಕಲ್ಪನೆ ಬೇಡ. ಒಂದೇ ಪ್ರಶ್ನೆಯಾದರೂ ಸಮರ್ಪಕವಾಗಿ ಹಾಗೂ ಆತ್ಮವಿಶ್ವಾಸದಿಂದ ಉತ್ತರಿಸಿರಿ.

•►ಸಂದರ್ಶನ ಮುಗಿಸಿ ಹೊರಗೆ ಬರುವಾಗ, ಎಲ್ಲರಿಗೂ ನಗು ಮುಖದಿಂದ ಧನ್ಯವಾದಗಳನ್ನು ಹೇಳಿ ಹೊರಗೆ ಬನ್ನಿ.


●.ಸಂದರ್ಶನದಲ್ಲಿ ಆಯ್ಕೆಯಾಗದಿರಲು ಕಾರಣಗಳು :

•► ಸರಿಯಾದ ವ್ಯಕ್ತಿತ್ವ ಪ್ರದರ್ಶನ ಮಾಡುವದರಲ್ಲಿ ವಿಫಲ.
•► ನಕಾರಾತ್ಮಕ ವರ್ತನೆಗಳ ಪ್ರದರ್ಶನ.
•► ಆಸಕ್ತಿ ಹಾಗೂ ಉತ್ಸಾಹದ ಕೊರತೆ.
•► ಹುದ್ದೆಗೆ ಸಂಬಂಧಪಟ್ಟಂತೆ ಸರಿಯಾದ ಪೂರ್ವ ತಯಾರಿ ಇಲ್ಲದ್ದು.
•► ಸಾಮಾನ್ಯ ಜ್ಞಾನದ ಬಗೆಗೆ ಮಾಹಿತಿ ಕೊರತೆ.
•► ಸಂದರ್ಶಕರ ಮೇಲೆ ಹಣ, ವಸ್ತು, ಅಧಿಕಾರ ಪ್ರಭಾವ ಬಳಸಿದ್ದು.


ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು :


ರಾಜ್ಯದಲ್ಲಿ ಇದುವರೆಗೆ ನಡೆದಿರುವ ಕೆಎಎಸ್‌ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಈ ಕೆಳಗಿನ ವಿಷಯಗಳಗೆ ಸಂಬಂಧಪಟ್ಟವಾಗಿವೆ.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
2) ಅಭ್ಯರ್ಥಿಯ ಜಿಲ್ಲೆಗೆ ಸಂಬಂಧಪಟ್ಟಿರುವ ವಿಷಯದ ಬಗ್ಗೆ.
3) ಶೈಕ್ಷಣಿಕ ಬಗೆಗೆ ಹಾಗೂ ವಿಷಯಗಳ ಬಗೆಗೆ.
4) ನೇಮಕಗೊಳ್ಳುವ ಇಲಾಖೆಗೆ ಸಂಬಂಧಪಟ್ಟಂತೆ.
5) ಪ್ರಚಲಿತ ವಿಷಯಗಳು.
6) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು.
7) ತಾರ್ಕಿಕ ಪ್ರಶ್ನೆಗಳು
8) ಇತರ ವಿಷಯಗಳು.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು

1) ನಿಮ್ಮ ಹೆಸರಿನ ಮಹತ್ವ
2) ನಿಮ್ಮ ಹುಟ್ಟಿದ ದಿನಾಂಕದ ವಿಶೇಷತೆ
3) ನಿಮ್ಮ ತಂದೆ-ತಾಯಿಯ ಬಗ್ಗೆ.
4) ಹವ್ಯಾಸಗಳ ಬಗ್ಗೆ.
5) ನಿಮ್ಮ ಮೆಚ್ಚಿನ ನಾಯಕ.
6) ನಿನಗೆ ಇಷ್ಟವಿರುವ ಸ್ಥಳ.
7) ನೀವು ಯಾವ ದಿನಪತ್ರಿಕೆ ಓದುತ್ತೀರಿ.


2) ಜಿಲ್ಲಾ ವಿಶೇಷತೆ ಪ್ರಶ್ನೆಗಳು: (ಯಾವ ಜಿಲ್ಲೆಗೆ ಸೇರಿದವರಾಗಿರುತ್ತಾರೋ ಆ ಜಿಲ್ಲೆ ಬಗ್ಗೆ)


1) ಜಿಲ್ಲೆಯ ರಾಜಕೀಯ ನಾಯಕರು.
2) ಖನಿಜ ಸಂಪನ್ಮೂಲ, ಸ್ಥಾನ, ಬೆಳೆ, ಕೈಗಾರಿಕೆ, ನೀರಾವರಿ.
3) ಜಿಲ್ಲೆಯ ಧಾರ್ಮಿಕ ಸ್ಥಳಗಳ ಮಹತ್ವ ಹಾಗೂ ಸ್ಮಾರಕಗಳ ಬಗೆಗಿನ ಮಾಹಿತಿ.
4) ಜಿಲ್ಲೆಯ ಇತಿಹಾಸ, ಪ್ರಸಿದ್ಧ ಅರಸರು, ನಾಯಕರು, ಚಳುವಳಿಕಾರರು, ರಾಜಮನೆತನಗಳು.
5) ಜಿಲ್ಲಾ ಪ್ರಚಲಿತ ವಿಷಯಗಳು.
6) ಜಿಲ್ಲಾ ಸಾಹಿತಿಗಳು, ಅವರ ಕೃತಿಗಳು.
7) ಜಿಲ್ಲೆಯ ಪ್ರಮುಖರು ನಾಯಕರು ಮತ್ತು ಅವರ ಸಾಧನೆ.
8) ಶಿಕ್ಷಣ ಹಾಗೂ ಆರ್ಥಿಕ ಅಂಶಗಳು.


3) ವಿದ್ಯಾರ್ಹತೆ ಮತ್ತು ಶೈಕ್ಷಣಿಕ.


1) ಓದಿದ ಶಾಲೆ ಹಾಗೂ ಕಾಲೇಜಿನ ಮಾಹಿತಿ.
2) ನೀವು ಮಾಡಿದ ಕೋರ್ಸ್‌ಗಳ ಬಗ್ಗೆ,
3) ಇಷ್ಟವಾದ ವಿಷಯಗಳು ಯಾವವು.
4) ನೀನು ಇಷ್ಟಪಡುವ ವಿಷಯದಲ್ಲಿನ ಜ್ಞಾನವನ್ನು ಪರೀಕ್ಷಿಸುವುದು.


4) ಪ್ರಚಲಿತ ವಿಷಯಗಳು :ಕಳೆದ ಮೂರು ನಾಲ್ಕು ತಿಂಗಳಲ್ಲಿ ಮಾಹಿತಿ.


1) ರಾಜ್ಯದಲ್ಲಿನ ಪ್ರಚಲಿತ ವಿಷಯಗಳು
2) ರಾಷ್ಟ್ರದಲ್ಲಿನ ಪ್ರಚಲಿತ ವಿಷಯಗಳು
3) ಅಂತರರಾಷ್ಟ್ರೀಯ ಪ್ರಚಲಿತವನ್ನು ನೋಡಿಕೊಳ್ಳಬೇಕು.


5) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು


1) ಭಾರತೀಯ ಇತಿಹಾಸ
2) ಭಾರತ ಭೂಗೋಳ
3) ವಿಜ್ಞಾನ ತಂತ್ರಜ್ಞಾನ
4) ಕರ್ನಾಟಕ ಇತಿಹಾಸ
5) ಕರ್ನಾಟಕ ಭೂಗೋಳ
6) ಸಂವಿಧಾನ ಮತ್ತು ರಾಜಕೀಯ
7) ಪರಿಸರ ಮತ್ತು ಜೈವಿಕ ವೈವಿಧ್ಯತೆ


6) ತಾರ್ಕಿಕ ಪ್ರಶ್ನೆಗಳು :


1) ನಿನಗೆ ಲಂಚಕ್ಕೆ ಒತ್ತಾಯ ಮಾಡಿದಾಗ ನೀನು ಏನು ಮಾಡುತ್ತಿಯಾ?
2) ನೀನು ಮಾಡದ ತಪ್ಪಿಗೆ, ನಿನ್ನನ್ನು ಗುರಿಯಾಗಿಸಿದಾಗ, ನೀನು ಏನು ಮಾಡುತ್ತೀಯಾ?
3) ರಾಜಕೀಯ ಹಸ್ತಕ್ಷೇಪ ಪದೇ ಪದೇ ನಡೆದಾಗ ನೀನು ಏನು ಮಾಡುತ್ತಿ ?
4) ತಪ್ಪು ನಿರ್ಧಾರ ಕೈಗೊಂಡಾಗ, ಆಗ ನಿನ್ನ ಪ್ರತಿಕ್ರಿಯೆ ?
5) ನಿನ್ನ ಕೈ ಕೆಳಗಿನ ಅಧಿಕಾರಿಗಳು ನಿನ್ನ ವರ್ಗಾವಣೆಗೆ ಮುಷ್ಕರ ಮಾಡಿದಾಗ ?
6) ನಿನ್ನ ಆಡಳಿತದ ವೈಫಲ್ಯದ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ?


7) ಇತರ ವಿಷಯಗಳು :
1) ನೀವು ಈ ಹುದ್ದೆಗೆ ಬರಲು ಕಾರಣವೇನು?
2) ಈ ಮುಂಚಿನ ಹುದ್ದೆಯನ್ನು ಬಿಟ್ಟು ಈ ಹುದ್ದೆಗೆ ಬರಲು ಕಾರಣವೇನು?
3) ಸಂಬಳಕ್ಕಾಗಿ ಸೇರುತ್ತೀರೋ? ಸೇವೆಗಾಗಿ ಸೇರುತ್ತೀರೋ?
4) ಮುಖ್ಯ ಪರೀಕ್ಷೆಯಲ್ಲಿ ಈ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ?
5) ಈ ಹುದ್ದೆಗೆ ನೀನು ಎಷ್ಟು ಅರ್ಹನು ನಿನ್ನನ್ನು ನಿರೂಪಿಸು.
6) ಡಿಗ್ರಿ ಮುಗಿಸಿ ಇಷ್ಟು ವರ್ಷ ಗ್ಯಾಪ್‌ ಆಗಲು ಕಾರಣವೇನು ?
7) ನಿನ್ನ ಮುಖ್ಯ ಪರೀಕ್ಷೆಯ ರೋಲ್‌ ನಂ. ಯಾವುದು ?
8) ಇಲ್ಲಿ ಬರುವಾಗ ಯಾವ ರೀತಿ ಪ್ರಯಾಣ ಮಾಡಿ ಬಂದಿರುವೆ ?

No comments: