Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday, 11 June 2016

ಐಎಎಸ್ ಮಾಡಲು ಸಲಹೆಗಳು

This articel about Civis Services Exam (IAS IPS IFS etc..) information. some suggestions and guidelines are here. I hope it will give use to you. I got this by WhatsApp

Yours
Guruprasad S Hattigoudar
Mob: 9945479292

ಐಎಎಸ್ ( IAS) ಗೆ ಸಿದ್ಧತೆ ಮಾಡಿಕೊಳ್ಳಲು ನಮ್ಮ ಸಲಹೆಗಳು
ಐ ಎ ಎಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ಅಥವಾ ಮಾಡಬೇಕು ಎಂದು ಕೊಂಡುರುವಿರಾ? ಹಾಗಾದರೆ ಹೇಗೆ ಸಿದ್ಧತೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿದ್ದೀರಾ? ಹಾಗಾದರೆ ನಿಮಗೆ ನಮ್ಮ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ ತೆಗೆದುಕೊಳ್ಳಿ.

ಮೊದಲಿಗೆ IAS ಎಂಬುದು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂಬುದು ತಿಳಿದಿರಲಿ. ಇದ್ದರೆ ಇರಲಿ ಬಿಡಿ. ಅದು ಹಾಗೆ ಕಠಿಣವಾಗಿರುವುದಕ್ಕೆ ತಾನೇ ನೀವು ಅದನ್ನು ಎದುರಿಸಲು ಸಿದ್ಧವಾಗಿರುವುದು!. ಕ್ಷಮಿಸಿ ಸಿದ್ಧವಾಗಲು ಎದ್ದಿರುವುದು. ಈಗ ವಿಚಾರಕ್ಕೆ ಬರೋಣ. ಹೇಗೆ ಸಿದ್ಧವಾಗುವುದು.
1. ಮೊದಲು ದೃಢ ನಿರ್ಧಾರ ಮಾಡಿ.
IAS ಆಗಲೇ ಬೇಕು ಎಂಬ ದೃಢ ನಿರ್ಧಾರವನ್ನು ಮೊದಲು ಮಾಡಿ. ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ. ಏಕೆಂದರೆ ಈ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಹಿಂದಕ್ಕೆ ತಳುತ್ತವೆ ಎಂಬುದನ್ನು ಮರೆಯಬೇಡಿ. ಒಂದು ಮಾತು ತಿಳಿಯಿರಿ. “ ನಾವೇನಾದರು ಮಾಡಬೇಕೆಂದು ನಮ್ಮ ಹೃದಯಾಂತರಾಳದಿಂದ ಬಯಸಿದಾಗ, ಅದನ್ನು ನೆರವೇರಿಸಲು ನಮಗೆ ಇಡೀ ಬ್ರಹ್ಮಾಂಡವೇ ನೆರವಾಗುತ್ತದೆ” ಎಂದು ಪ್ರಸಿದ್ಧ ಪುಸ್ತಕ ’ದಿ ಆಲ್ಕೆಮಿಸ್ಟ್” ಹೇಳುತ್ತದೆ.
2 . ನಿಮ್ಮ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.
ಸರಿಯಾದ ಆರಂಭ ಯಶಸ್ಸಿಗೆ ಸೋಫಾನ ಎಂಬುದನ್ನು ಮರೆಯಬೇಡಿ. ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಗೆ ಯಾವ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮೊದಲೇ ನಿರ್ಧರಿಸಿ. ಆದಷ್ಟು ನಿಮಗೆ ತಿಳುವಳಿಕೆಯಿರುವ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳಿ. ಆಯ್ಕೆಗೆ ಮೊದಲು ಒಮ್ಮೆ ಅವುಗಳ ಪರಾಮರ್ಶನ ಗ್ರಂಥಗಳ ಲಭ್ಯತೆಯ ಬಗ್ಗೆ ಅರಿತುಕೊಳ್ಳಿ. ಇತರರ ಅಭಿಪ್ರಾಯಕ್ಕಿಂತ ನಿಮ್ಮ ಅಂತರಾಳದ ಅಭಿಪ್ರಾಯಕ್ಕೆ ಬೆಲೆಕೊಡಿ.
3.ನಿರಂತರವಾಗಿ ಅಭ್ಯಾಸ ಮಾಡಿ
ಯಾವುದೇ ಕಾರಣಕ್ಕು ನಿಮ್ಮ ಅಭ್ಯಾಸವನ್ನು ಅರ್ಧದಲ್ಲಿಯೇ ಬಿಡಬೇಡಿ. ನಿರಂತರವಾಗಿ ಅಭ್ಯಾಸ ಮಾಡಿ. ಪರೀಕ್ಷೆ ಮುಗಿಯುವವರೆಗು ಬೇರೆಲ್ಲ ಕೆಲಸಗಳನ್ನು ಮತ್ತು ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಿ.
4. ಓದಿ, ಓದಿ, ಬರೆಯಿರಿ ಮತ್ತು ಓದಿ.
ಹೌದು ನಿರಂತರ ಓದು, ಸ್ವಯಂ ರಚಿಸಿದ ಟಿಪ್ಪಣಿಗಳು ನಿಮ್ಮನ್ನು ಯಶಸ್ವಿಗಳನ್ನಾಗಿಸುತ್ತದೆ. ಬೆಳಗ್ಗಿನಿಂದ ರಾತ್ರಿಯವರೆಗೆ ಓದಿ. ಮತ್ತು ರಾತ್ರಿಯಿಂದ ಬೆಳಗಿನವರೆಗೆ ಓದಿ. ಇದು ಹತ್ತನೆಯ ತರಗತಿಯ ಪರೀಕ್ಷೆ ಅಲ್ಲ. ಚೆನ್ನಾಗಿ ನಿದ್ದೆ ಮಾಡಿ, ಪಠ್ಯಕ್ರಮ ಏನಿದೆಯೊ ಅದನ್ನು ಓದಲು. IASನಲ್ಲಿ ಸೂರ್ಯನ ಕೆಳಗೆ ಇರುವ ಯಾವುದೇ ವಿಚಾರವನ್ನಾದರು ಅವರು ಪ್ರಶ್ನೆಯ ರೂಪದಲ್ಲಿ ಕೇಳಬಹುದು. ಅದಕ್ಕಾಗಿ ನಿರಂತರವಾಗಿ ಓದಿದರೆ ಮಾತ್ರ ಸಾಧ್ಯ. ಅದನ್ನು ವ್ಯವಸ್ಥಿತವಾಗಿ ಓದಿ. ವೇಳಾಪಟ್ಟಿಯಿದ್ದರೆ ನಿಮ್ಮ ಓದು ಸುಲಭವಾಗಿ ಸಾಗುತ್ತದೆ. HINDU, TELL ME WHY, ENCYCLOPAEDIA’S, ಪ್ರಜಾವಾಣಿ. ವಿಜಯ ಕರ್ನಾಟಕ, TIMES ಹೀಗೆ ಎಲ್ಲಾ ಬಗೆಯ ಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದಿ. ತಪ್ಪದೆ ಟಿಪ್ಪಣಿ ಮಾಡಿಕೊಳ್ಳಿ.
5. ಸಾಮಾನ್ಯ ಙ್ಞಾನವನ್ನು ಹೆಚ್ಚಿಸಿಕೊಳ್ಳಿ.
ಓದುವಾಗ ಪ್ರಚಲಿತ ಸಂಗತಿಗಳನ್ನು ಸಹ ಟಿಪ್ಪಣಿ ಮಾಡಿಕೊಳ್ಳಿ. ಮಾಹಿತಿಗಾಗಿ ಸುದ್ದಿ ವಾಹಿನಿಗಳನ್ನು ಮಿತವಾಗಿ ನೋಡಿ. ಆದರೆ ಟಿ.ವಿ ಅಥವಾ ಅಂತರ್ ಜಾಲಕ್ಕೆ ಅಂಟಿಕೊಳ್ಳಬೇಡಿ.\


6. ಚರ್ಚಾ ಕೂಟವನ್ನು ರಚಿಸಿಕೊಳ್ಳಿ.
ಸಾಧ್ಯವಾದರೆ ನಿಮ್ಮದೇ ಆದ ಗೆಳೆಯರ ಅಥವಾ ಸಮಾನ ಮನಸ್ಕರ ಚರ್ಚಾ ಕೂಟವನ್ನು ರಚಿಸಿಕೊಳ್ಳಿ. ಅಲ್ಲಿ ನಿಮ್ಮ ಸಂಶಯಗಳನ್ನು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಿ. ಮರಕ್ಕಿಂತ ಮರ ದೊಡ್ಡದು ಎಂಬ ಗಾದೆಯಂತೆ ಓದಿರುವ ನಿಮ್ಮ ಸ್ನೇಹಿತರು ಅವರ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದು.
7. ನಿರಾಶರಾಗ ಬೇಡಿ
ಯಶಸ್ಸು ಒಂದೇ ಸಲ ಸಿಕ್ಕರು , ಮೊದಲ ಬಾರಿಗೆ ಸಿಗುವುದಿಲ್ಲ. ಯಾವುದೇ ಕಾರಣಕ್ಕು ನಿರಾಶರಾಗ ಬೇಡಿ. ನಿಮ್ಮ ಗುರಿಯನ್ನು ತಲುಪುವವರೆಗು ಅದರ ಬಗ್ಗೆ ಯೋಚಿಸಬೇಡಿ. ಇಂದು ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಸಹ ಹಿಂದೆ ಅನುತ್ತೀರ್ಣನಾಗಿದ್ದನೆಂದು ಮರೆಯಬೇಡಿ.
8. ಗ್ರಂಥಾಲಯಗಳಿಗೆ ಭೇಟಿಕೊಡುತ್ತಿರಿ.
ನಿಮಗೆ ಬೇಕಾದ ಆಧಾರ ಗ್ರಂಥಗಳ ಜೊತೆಗೆ ನಿಮಗೆ ಉಪಯುಕ್ತವಾಗಬಹುದಾದ ಹಲವು ಗ್ರಂಥಗಳು ದೊರೆಯುವ ಸ್ಥಳ ಗ್ರಂಥಾಲಯ ತಪ್ಪದೇ ಭೇಟಿ ಕೊಡುತ್ತಿರಿ. ಯಾರಿಗೆ ಗೊತ್ತು ಯಾವ ವಿಚಾರ ಎಲ್ಲಿ ಉಪಯೋಗಕ್ಕೆ ಬರುತ್ತದೆಯೋ?

9. ತಪ್ಪದೇ ವ್ಯಾಯಾಮ/ ಧ್ಯಾನ ಮಾಡಿ.
ನಿಮ್ಮ ಪರೀಕ್ಷಾ ಸಿದ್ಧತೆಗೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡವಾಗಿರಬೇಕೆಂಬುದನ್ನು ಮರೆಯಬೇಡಿ. ವ್ಯಾಯಾಮ ಮತ್ತು ಧ್ಯಾನಗಳು ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸಿತವನ್ನಾಗಿ ಇಡುತ್ತವೆ.
10. ಏಕಾಂತದಲ್ಲಿ ಕನಸು ಕಾಣಿ
ಇದೊಂದು ರೀತಿ visualization ತಂತ್ರ ಹಗಲುಗನಸು ಕಾಣಿ. ಆದರೆ ಅದು ವಾಸ್ತವವಾಗುವಂತಿರಲಿ. ಇದೇ ಹಗಲು ಗನಸುಗಳು ನಿಮ್ಮನ್ನು ಪ್ರೇರಣೆ ಮಾಡುತ್ತವೆ ಎಂಬುದನ್ನು ಮರೆಯಬೇಡಿ.
ಇನ್ನೇಕೆ ತಡ ಸಲಹೆ ಓದಿದಿರಲ್ಲ. ಮತ್ತೇ ಶುರು ಹಚ್ಚಿಕೊಳ್ಳಿ. ALL THE BEST FOR FUTURE IAS!!!!!!!!!!

No comments: