Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 2 September 2011

ದಡ್ಡರಿಗಾಗಿ ಮಾತ್ರ


 ನಾವು ದಡ್ಡರು. ನಮ್ಮಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಬುದ್ಧಿಶಕ್ತಿ ಕಡಿಮೆ ಇದೆ. ನಮ್ಮ ಹಣೆಬರಹ ಸರಿಯಿಲ್ಲ. ಎಲ್ಲರಿಂದಲೂ ತಿರಸ್ಕೃತಗೊಳಗಾಗಿದ್ದೇವೆ. ನಮ್ಮಲ್ಲಿ ಆಶಾಭಾವನೆಯೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ನಾವು ದಡ್ಡರಲ್ಲೇ ದಡ್ಡರು. ಅಲ್ಲವೇ? ಹಾಗಾದರೆ, ಈ ಕೆಳಗಿನದನ್ನು ಓದಿ:

ಆಲ್ಬರ್ಟ್ ಐನಸ್ಟೀನ್ ಬಾಲಕನಾಗಿದ್ದಾಗ ಶಾಲೆಯಲ್ಲಿ `ದಡ್ಡ' ಎನಿಸಿಕೊಂಡಿದ್ದ! ಜೀವನದಲ್ಲಿ ಇವನೆಂದೂ ಏನನ್ನೂ ಸಾಧಿಸಲಾರ' ಎಂದು ಅವನ ಶಿಕ್ಷಕರು `ಭವಿಷ್ಯ' ನುಡಿದಿದ್ದರು! ಮುಂದೆ ಐನಸ್ಟೀನ್ ಅತಿ ಹೆಚ್ಚು ಐಕ್ಯೂ ಇರುವ ವ್ಯಕ್ತಿ ಎನಿಸಿಕೊಂಡ! ನೊಬೆಲ್ ಪುರಸ್ಕಾರ ಪಡೆದರು. ನೊಬೆಲ್ ಪಡೆದ ವಿಜ್ಞಾನಿಗಳ ಸಾಲಿನಲ್ಲಿ ಮಹಾವಿಜ್ಞಾನಿ ಎನಿಸಿಕೊಂಡ.


ಟ್ರಾನ್ಸಿಸ್ಟರ್‌ನ್ನು ಆವಿಷ್ಕರಿಸಿ ೧೯೫೬ರಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಪಡೆದ ವಿಲಿಯಂ ಶಾಕ್ಲಿ ಬಾಲಕನಾಗಿದ್ದಾಗ ಬುದ್ಧಿಶಕ್ತಿಯ ಪರೀಕ್ಷೆಯಲ್ಲಿ ಸಮಾಧಾನಕರ ಅಂಕ ಪಡೆಯದೇ ಸೋತಿದ್ದ!


ಮಕ್ಕಳು ಬೆಳೆದಂತೆಲ್ಲ ಅವರ ಬುದ್ಧಿಶಕ್ತಿ ಹೇಗೆ ಬೆಳವಣಿಗೆಯಾಗುತ್ತದೆ ಎಂಬುದನ್ನು ತಿಳಿಯಲು ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಈ ಯೋಜನೆಗಾಗಿ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿಯ ಹೆಸರು ಲೂಯಿಸ್ ಆಲ್ವರೆಜ್. ಆತನೂ ಸಮಾಧಾನಕರ ಅಂಕಗಳನ್ನು ಪಡೆಯದೇ `ಫೇಲ್' ಆದ. ಮುಂದೆ ಇದೇ ಲೂಯಿಸ್ ಆಲ್ವರೇಜ್ ಎಲಿಮೆಂಟರಿ ಪಾರ್ಟಿಕಲ್‍ಗಳ ಬಗ್ಗೆ ನಡೆಸಿದ ಸಂಶೋಧನೆಗಾಗಿ ೧೯೬೮ರ ಸಾಲಿನ ನೊಬೆಲ್ ಪುರಸ್ಕಾರ ಪಡೆದ!

ನಮ್ಮನ್ನು ನಾವು ದಡ್ಡರು ಅಂತ ತಿಳಿದುಕೊಂಡರೆ ಎಲ್ಲ ಕಾಲದಲ್ಲಿಯೂ ದಡ್ಡರೇ ಆಗಿರುತ್ತೇವೆ. ಒಮ್ಮೆ ಮೈ ಕೊಡವಿ ಎದ್ದು ನಿಂತರೆ...

No comments: