Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday, 2 September 2011

ದೇವಸ್ಥಾನದಲ್ಲಿ ಘಂಟೆ ಏಕೆ ಕಟ್ಟಿರುತ್ತಾರೆ?


                  ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳು ಈಗಿನಂತೆ ಊರಿನಲ್ಲಿ ಇರಲಿಲ್ಲ. ದಟ್ಟ ಅರಣ್ಯದಲ್ಲಿ ಇರುತ್ತಿದ್ದವು. ಅರಣ್ಯವೆಂದ ಮೇಲೆ ಅಲ್ಲಿ ಕ್ರೂರ ಪ್ರಾಣಿಗಳ, ವಿಷ ಜಂತುಗಳು ಇದ್ದೇ ಇರುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರು ಅನ್ನ ಪ್ರಸಾದಗಳನ್ನು ಗರ್ಭಗುಡಿಯಲ್ಲಿನ ದೇವರಿಗೆ ನೇವೈದ್ಯ ನೀಡಿ ಹೋಗುತ್ತಿದ್ದರು. ಆ ಆಹಾರ ತಿನ್ನಲು ಮತ್ತು ಕೆಲವೊಮ್ಮೆ ಮಳೆ ಚಳಿ ಗಾಳಿಯಿಂದ ರಕ್ಷಿಸಿಕೊಳ್ಳಲು ಅರಣ್ಯ ಜೀವಿಗಳು ಆಶ್ರಯಕ್ಕಾಗಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ದೇವರ ದರ್ಶನಕ್ಕೆಂದು ಬರುವ ಭಕ್ತರಿಗೆ ಹೆದರಿ ಅವರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇರುತ್ತಿತ್ತು. ಹೀಗಾಗಿ ಅವುಗಳಿಗೆ ಭೀತಿ ಉಂಟು ಮಾಡಲು ಹಾಗೂ ಗರ್ಭಗುಡಿಯಿಂದ ಓಡಿಸಲು ಘಂಟೆಯನ್ನು ತೂಗಿಬಿಡಲಾಗುತ್ತಿತ್ತು. ಘಂಟೆ ಬಾರಿಸಿದ ತಕ್ಷಣ ಅವು ಹೆದರಿ ಹೊರಗೆ ಓಡಿ ಬರುತ್ತಿದ್ದವು. ಇಲ್ಲವೇ ಮುದುರಿ ಅಲ್ಲೇ ಎಲ್ಲೋ ಒಂದು ಕಡೆ ಕೂರುತ್ತಿದ್ದವು.

                  ಇಂದು ನಾವು ಅದೇ ಘಂಟೆಯನ್ನು ದೇವಸ್ಥಾನದಲ್ಲಿ ತೂಗಿಬಿಡುತ್ತಿದ್ದೇವೆ ಮತ್ತು ಮಲಗಿರುವ ದೇವರು ಎಚ್ಚರವಾಗಲಿ ಎಂದು ಘಂಟೆ ಬಾರಿಸುತ್ತಿದ್ದೇವೆ...! ಹೇಗಿದೆ ನೋಡಿ ನಮ್ಮ ಮೂಢಾಚಾರ.....?

No comments: