Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday, 13 June 2011

Thoughts

ನಿನ್ನ ಸಾಮರ್ಥ್ಯದಲ್ಲಿ ನಿನಗಿರುವ ನಂಬಿಕೆಯನ್ನು
ಎಂದಿಗೂ ಕಳೆದುಕೊಳ್ಳದಿರು!
ಈ ಜಗತ್ತಿನಲ್ಲಿ ನೀನು
ಏನು ಬೇಕಾದರೂ ಸಾಧಿಸಬಲ್ಲೆ
ಎಂಬುದನ್ನು ತಿಳಿದಿರು!
ಸಕಲ ಶಕ್ತಿಯೂ ನಿನ್ನಲ್ಲೇ ಇರುವದರಿಂದ
ಎಂದೆಂದಿಗೂ ನಿನ್ನನ್ನು ನೀನು
ದುರ್ಬಲನೆಂದುಕೊಳ್ಳದಿರು!
                    -swami vivekananda

ಮನುಷ್ಯನ ಯಶಸ್ಸಿಗೆ ನೆರವಾಗುವ ಅನೇಕ ಅಂಶಗಳಲ್ಲಿ ಪ್ರಮುಖವಾದ ಒಂದು ಅಂಶ- `ಇತ್ಯಾತ್ಮಕ ಚಿಂತನೆ'. ನಾನು ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಬಲ್ಲೆ, ಅದಕ್ಕೋಸ್ಕರ ಶ್ರಮಿಸಬಲ್ಲೆ, ಶ್ರಮಿಸಿ ಯಶಸ್ಸು ಸಾಧಿಸಬಲ್ಲೆ ಎನ್ನುವ ಆಲೋಚನಾ ಧೋರಣೆ ನಿಮ್ಮದಾಗಲಿ.


ಯಶಸ್ಸಿನ ಪ್ರಥಮ ಶತ್ರುವೆಂದರೆ- `ನೇತ್ಯಾತ್ಮಕ ಚಿಂತನೆ'. ಮೊದಲು ಅದನ್ನು ನಿಮ್ಮ ಮನಸ್ಸಿನಿಂದ ದೂರ ಓಡಿಸಿ. ನಿಮಗೆದುರಾಗುವ ಒಂದೊಂದು ಸೋಲು ಒಂದೊಂದು ಅನುಭವ ಎಂದು ತಿಳಿಯಿರಿ.


ಮನುಷ್ಯನ ಪ್ರಗತಿಯ ಇನ್ನೊಂದು ಕಂಟಕ- `ನಿರಾಶಾವಾದ'. "ನಾನು ಯಾವುದಕ್ಕೂ ಪ್ರಯೋಜನವಿಲ್ಲ, ನನ್ನಿಂದ ಏನೂ ಮಾಡಲಾಗದು". ಇವು ನಿರಾಶಾವಾದಿಯ ಗಾಯತ್ರಿ ಮಂತ್ರಗಳು. ನಿಮ್ಮಂಥವರಿಗಲ್ಲ. ಮೊದಲು ನಿರಾಶಾವಾದದಿಂದ ಹೊರಬನ್ನಿ. ನನ್ನಿಂದ ಏನಾದರೂ ಮಾಡಲು ಸಾಧ್ಯವೆಂದು ದೃಢವಾಗಿ ನಿಶ್ಚಯಿಸಿಕೊಳ್ಳಿ.


ಸತತ ಜ್ಞಾನ ಸಂಪಾದನೆಯು ನಮ್ಮನ್ನು ಉತ್ತಮರನ್ನಾಗಿ ರೂಪಿಸುವದು, ಅಹಂನ್ನು ತೊಲಗಿಸುವದು. ವಿನಯ ವಿವೇಕವನ್ನು ತೊಲಗಿಸುವದು.

No comments: