ಆರಾಧಯಾಮಿ ಮಣಿಸನ್ನಿಭವಾತ್ಮಲಿಂಗಂ
ಮಾಯಾಪುರಿ ಹೃದಯ ಪಂಕಜ ಸನ್ನಿವಿಷ್ಟಂ
ಶ್ರದ್ಧಾನಜೀವಿಮಲಚಿತ್ತಜಲಾಭಿಷೇಕೈ
ನಿತ್ಯಂ ಸಮಾಧಿ ಕುಸುಮೈರ್ನ ಪುನರ್ಭವಾಯ |೨|
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ |೨|
ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ |೨|
ಜನನ ಮರಣ ರಹಿತ ಜಂಗಮಗೆ ಬೆಳಗಿರಿ
|| ಪಲ್ಲವಿ ||
ನಾನಿನೆಂಬುದ ಬಿಡಿರಿ ಸದ್ಗುರು ಪ್ರಾಪ್ತಿ
ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೇ ಕೈ ಸೇರುವುದು
ಅನುಭವಿಸಿ ಲಿಂಗಕ್ಕೆ ಮನವಿಟ್ಟು ಬೆಳಗಿರಿ
|| ಪಲ್ಲವಿ||
ನಾನಾಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿನಲಿ
ಹೀನ ವಿಷಯದಾಸೆ ಹಿಂದುಳಿದು ಗುರುವಿನ
ಜ್ಞಾನವೇ ಗತಿಯೆಂದು ಮನವಿಟ್ಟು ಬೆಳಗಿರಿ
|| ಪಲ್ಲವಿ ||
ಅಷ್ಟಾವರಣದ ಸ್ಥೂಲಭ
ಮಾನವ ಜನ್ಮ ಹುಟ್ಟಿ ಬರುವುದೇ ದುರ್ಲಭ
ಕೊಟ್ಟಾನೇ ಗುರು ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗ ಮಡಿವಾಳ ಮಾಚಿದೇವನೆಂದು ಬೆಳಗಿರಿ
|| ಪಲ್ಲವಿ ||
song link below
https://www.youtube.com/watch?v=GXqwtmbtcUE
No comments:
Post a Comment