(collection)
@ ಗಂಗಾ ನದಿ ಸೇರಿದಂತೆ ದೇಶದ ಅನೇಕ ನದಿಗಳು ಸ್ವಚ್ಛವಾಗಿರುತ್ತವೆ.
@ ದೆಹಲಿ ಸೇರಿದಂತೆ ಅನೇಕ ನಗರಗಳ ವಾಯುಮಾಲಿನ್ಯ ಇಳಿಮುಖವಾಗಿ ಗಾಳಿ ಶುದ್ಧವಾಗಿರುತ್ತದೆ. ಗಿಡಮರಗಳ ಆರೋಗ್ಯ ಸುಧಾರಿಸುತ್ತದೆ.
@ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಗಳ ಕಡಲ ಕಿನಾರೆಗಳು ಸುಧಾರಿಸಿರುತ್ತವೆ. ಜಲಚರಗಳು ಸ್ವಲ್ಪ ಉಸಿರಾಡಲು ಅವಕಾಶವಾಗುತ್ತದೆ.
@ ಜಲಪಾತಗಳೂ ಸೇರಿದಂತೆ ಪ್ರಕೃತಿಯ ಅನೇಕ ಸುಂದರ ಜಾಗಗಳು ಪ್ಲಾಸ್ಟಿಕ್ ಮುಕ್ತವಾಗಿ ನೀರು ಸರಾಗವಾಗಿ ಹರಿಯುತ್ತದೆ.
@ ಕಾಡಿನ ಪ್ರಾಣಿಗಳು ವಾಹನಗಳ ಪ್ರವೇಶವಿಲ್ಲದೇ ಪ್ರಥಮ ಬಾರಿಗೆ ನಿಜವಾದ ಕಾಡಿನ ದಿವ್ಯಮೌನದ ಸಾನಿಧ್ಯವನ್ನು ಅನುಭವಿಸುತ್ತವೆ.
@ ಮೃಗಾಲಯಗಳಲ್ಲಿ ಮನುಷ್ಯನ ಕಿರಿಕಿರಿಯಿಲ್ಲದೇ ಪ್ರಾಣಿ ಪಕ್ಷಿಗಳು ಆಡಿಕೊಂಡು ನೆಮ್ಮದಿಯಿಂದ ಇರುತ್ತವೆ.
@ ಮನುಷ್ಯನ ಭಯವಿಲ್ಲದೇ ಮನೆಯ ಮುಂದಿನ ಜಗಲಿಯವರೆಗೂ ಗುಬ್ಬಚ್ಚಿಯಂಥಾ ಪುಟ್ಟ ಪುಟ್ಟ ಪಕ್ಷಿಗಳು ಬಂದಿರುತ್ತವೆ.
@ ರೆಸಾರ್ಟ್ ಗಳ ಹೆಸರಿನಲ್ಲಿ ಬೆಟ್ಟ ಗುಡ್ಡಗಳಲ್ಲಿ ಮನುಷ್ಯ ಆಕ್ರಮಿಸಿಕೊಂಡಿದ್ದ ಜಾಗಗಳಲ್ಲಿ ಆ ಜಾಗದ ನಿಜವಾದ ಯಜಮಾನರಾದ ಮಂಗಗಳಂಥಾ ಪ್ರಾಣಿಗಳು ಮಾಲಿಕತ್ವದ ಆನಂದವನ್ನು ಅನುಭವಿಸುತ್ತವೆ.
@ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದ ನಾಯಿಗಳು, ಬೆಕ್ಕುಗಳು, ಮೊಲ, ಹಾವು ಇತ್ಯಾದಿ ಪ್ರಾಣಿಗಳು ಜೀವ ಉಳಿಸಿಕೊಳ್ಳುತ್ತವೆ.
@ ಅಷ್ಟರಲ್ಲಿ ಒಂದೆರಡು ಜೋರು ಮಳೆ ಬಂದಿದ್ದರೆ ಮನುಷ್ಯ ಎಲ್ಲೆಂದರಲ್ಲಿ ಉಗಿದಿದ್ದ ಪಾನ್ ಬೀಡಾ ಗುಟ್ಕಾದ ಕಲೆಗಳು ಅಳಿಸಿ ಹೋಗಿ ಭೂಮಿ ತಾಯಿಯ ಮುಖ ಹೊಳೆಯುತ್ತಿರುತ್ತದೆ.
@ ಕಸಾಯಿಖಾನೆಗಳಲ್ಲಿ ದಿನನಿತ್ಯ ಭೀಕರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಕುರಿ, ಕೋಳಿ, ಮೇಕೆ, ಹಂದಿ, ಹಸು, ಎಮ್ಮೆ, ಮೀನು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ದಿನಗಳ ಕಾಲ ಪ್ರಾಣಭಯದಿಂದ ದೂರವಿರುತ್ತವೆ.
@ ಕೀಟನಾಶಕಗಳ ಸಿಂಪಡಣೆಯಿಂದ, ರಾಸಾಯನಿಕ ರಸಗೊಬ್ಬರದ ಬಳಕೆಯಿಂದ ಭೂಮಿಯ ಒಳಗೆ ಮಾಯವಾಗಿದ್ದ ಎರೆಹುಳುಗಳಂಥಾ ನಿಸ್ವಾರ್ಥ ಜೀವಿಗಳು ಈಗ ಮತ್ತೊಮ್ಮೆ ಮರುಹುಟ್ಟು ಪಡೆದು ಕರ್ತವ್ಯವನ್ನಾರಂಭಿಸುತ್ತದೆ. ಪರಿಸರ ಸ್ನೇಹಿ ಸೂಕ್ಷ್ಮ ಜೀವಿಗಳು ಮರುಹುಟ್ಟು ಪಡೆದು ಭೂಮಿಯ ಆರೋಗ್ಯ ಸುಧಾರಿಸುತ್ತದೆ.
@ ದಿನಗಳಲ್ಲಿ ಹೀಗಾದ ಬದಲಾವಣೆಯನ್ನು ಮನುಷ್ಯ ಗಮನಿಸಿ ಗುರುತಿಸುವಷ್ಟು ಸೂಕ್ಷ್ಮನಾದರೆ ತನ್ನ ಮಿತಿಮೀರಿದ ಶೋಷಣೆಯಿಂದ ಭೂಮಿಯ ಇತರ ಜೀವರಾಶಿಗಳಿಗೆ ಸ್ವಲ್ಪ ದಿನಗಳ ಕಾಲ ಮುಕ್ತಿ ಕೊಡಿಸಲು ಪ್ರಕೃತಿಮಾತೆಯೇ ಈ ಕರೋನಾ ಭೀತಿ ಮೂಡಿಸಿದ್ದಳೇನೋ ಎಂದು ಮನುಷ್ಯನಿಗೆ ಸ್ವಲ್ಪ ಮಟ್ಟಿಗಾದರೂ ಅರಿವು ಬಂದಿರುತ್ತದೆ*.