ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈಗಾಗಲೇ ೪-೫ ಕಂಪ್ಯೂಟರ್‌ಗಳನ್ನು ಕೊಡಲಾಗಿದೆ. ಆದರೆ ಈ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಹೇಳುವವರು ಯಾರೊಬ್ಬರೂ ಶಿಕ್ಷಕರಿಲ್ಲ. ಇದರಿಂದ ಹಳ್ಳಿಯ ಮಕ್ಕಳಿಗೆ ಇನ್ನೂ ಕಂಪ್ಯೂಟರ್ ಜ್ಞಾನವು ಏನೆಂಬುದು ಗೊತ್ತೇ ಇಲ್ಲ. ದಯಮಾಡಿ ಸಂಬಂಧಪಟ್ಟ ಮುಖ್ಯೋಪಾಧ್ಯಾಯರು, ಸಿ.ಆರ್.ಪಿ.ಗಳು, ಅಲ್ಲಿರುವ ಗ್ರಾಮ ಪಂಚಾಯಿತಿ, ತಾಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಂ.ಎಲ್.ಎ ಹಾಗೂ ಎಂ.ಪಿ. ಇದನ್ನು ತತಕ್ಷಣ ಗಣನೆಗೆ ತೆಗೆದುಕೊಂಡು ಪ್ರತಿ ಶಾಲೆಗಳೀಗೆ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಕೊಡುವುದರಿಂದ ಮುಂದೆ ಅವರಿಗೆ ಈ ಕಂಪ್ಯೂಟರ್ ಜ್ಞಾನವು ಉಪಯೋಗವಾಗುತ್ತದೆ. ಇದರಿಂದ ತಂತ್ರಜ್ಞಾನದ ಕ್ಷೇತ್ರದಲ್ಲಿ ಹಳ್ಳಿಯ ಮಕ್ಕಳಿಂದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಏಕೆಂದರೆ, ಇದು ಕಂಪ್ಯೂಟರ್ ಯುಗ. ದಯಮಾಡಿ ಮುಗ್ಧ ಮಕ್ಕಳಿಗೆ ಮೋಸ ಮಾಡಬೇಡಿ. ಇದೇ ಮಕ್ಕಳೇ ನಮ್ಮ ಪಾಲಿನ ದೇವರು. ಮುಂದಿನ ದೇಶದ ನಾಗರಿಕರು. ಇಂಥ ಮಕ್ಕಳಿಗೆ ಒಳ್ಳೆಯ ಗಣಿತ, ಒಳ್ಳೆಯ ವಿಜ್ಞಾನ, ಒಳ್ಳೆಯ ಕಂಪ್ಯೂಟರ್ ಜ್ಞಾನ ಮತ್ತು ಒಳ್ಳೆಯ ಇಂಗ್ಲೀಷ ವಿಷಯದ ಜ್ಞಾನ ಹಾಗೂ ಇತರೆ ವಿಷಯದ ಜ್ಞಾನವನ್ನು ಮಕ್ಕಳಿಗೆ ಕೊಡುವುದರಿಂದ ಮುಂದೆ ಅವರು ವಿಜ್ಞಾನಿಗಳಾಗಬಹುದು. ದೊಡ್ಡ ವೈದ್ಯರಾಗಬಹುದು, ಒಳ್ಳೆಯ ನರೇಂದ್ರ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭ್‍ಭಾಯ್ ಪಟೇಲ್, ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳಾಗಬಹುದು. ಒಂದು ವೇಳೆ ಈ ಮಕ್ಕಳಿಗೆ ಒಳ್ಳೆಯ ಜ್ಞಾನವನ್ನು ಕೊಡದೇ ಇದ್ದರೆ ನಮ್ಮ ದೇಶಕ್ಕೆ ನಷ್ಟವಾಗುತ್ತದೆ. ದಯಮಾಡಿ ಮಕ್ಕಳನ್ನು ಗಣನೆಗೆ ತೆಗೆದುಕೊಂಡು ಒಳ್ಳೆಯ ಜ್ಞಾನವನ್ನು ಕೊಡಲು ಪ್ರಯತ್ನಿಸಿ. ಎಲ್ಲ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ.
ಕಂಪ್ಯೂಟರ್ ಶಿಕ್ಷಕರಾಗಿ ಅರೆಕಾಲಿಕ ಸೇವೆ ಸಲ್ಲಿಸಲು ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಅಂಥ ವಿದ್ಯಾರ್ಥಿಶಿಕ್ಷಕರನ್ನು ಗುರುತಿಸಿ ಅವರಿಗೆ ಕಂಪ್ಯೂಟರ್ ಶಿಕ್ಷಕರಾಗಿ ನೇಮಿಸಿ.