Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday, 12 October 2015

FDA Exam - 2015 Key answers

FDA Exam - 2015 ಎಫ್‍ಡಿಎ ಪರೀಕ್ಷೆ

General Knowledge Paper

Series 'B'

ಪ್ರಿಯ ಓದುಗರ ಗಮನಕ್ಕೆ,
ಅಕ್ಟೋಬರ್ 3 ಮತ್ತು 4 ರಂದು ನಡೆದ ಎಫ್‍.ಡಿ.. ಪರೀಕ್ಷೆಯ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಕಂಪ್ಯೂಟರ್ ಸಾಕ್ಷರತೆ ಪತ್ರಿಕೆಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಕ್ಲಾಸಿಕ್ ಕೆ..ಎಸ್ & ..ಎಸ್ ಸ್ಟಡಿ ಸರ್ಕಲ್ ವಿಷಯ ಪರಿಣಿತರು ಸಿದ್ಧಪಡಿಸಿ ಕೊಟ್ಟಿದ್ದಾರೆ.
ಎಫ್‍.ಡಿ../ಎಸ್‍.ಡಿ.. ಪರೀಕ್ಷೆಗಾಗಿ ಕಳೆದ ಮೂರು ತಿಂಗಳುಗಳಿಂದ ಸ್ಪರ್ಧಾ ಸ್ಫೂರ್ತಿಯಲ್ಲಿ ನೀಡಲಾಗುತ್ತಿದ್ದ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ವಿಷಯಗಳ ವಿಶೇಷ ಅಧ್ಯಯನ ಸಾಮಗ್ರಿಯಲ್ಲಿ ಈದೀಗ ಮುಗಿದಿರುವ ಎಫ್.ಡಿ.. ಪರೀಕ್ಷೆಯಲ್ಲಿ ಕೇಳಲಾದ 50ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಲ್ಲಿ ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಬಿಸಿರೀಜ್ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ.
1. ರಾಷ್ಟ್ರೀಯ ಹೋರಾಟದ ಆರಂಭಿಕ ಹಂತದಲ್ಲಿ ಕೆಳಗಿನ ಯಾವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉದ್ದೇಶವಾಗಿರಲಿಲ್ಲ?
ಉತ್ತರ: 4) ಬ್ರಿಟಿಷ್ ಆಳ್ವಿಕೆಗೆ ಬಹಿರಂಗ ಪ್ರತಿಭಟನೆಯ ಸನ್ನಿವೇಶವನ್ನು ಸೃಷ್ಟಿಸುವುದು

2. ಮೊಂಟಾಗು-ಚೆಮ್ಸಫೊರ್ಡರ ವರದಿಯನ್ನಾಧರಿಸಿ ಬ್ರಿಟಿಷ ಸಂಸತ್ತಿನಲ್ಲಿ ಪಾಸಾದ ಮಸೂದೆಯನ್ನು ಹೀಗೆಂದು ಕರೆಯಲ್ಪಟ್ಟಿತು.
ಉತ್ತರ: 2) 1919 ಭಾರತ ಸರಕಾರದ ಕಾಯ್ದೆ

3. ಯಾವ ಬಗೆಯ ಮಣ್ಣು ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿದೆ.
ಉತ್ತರ: 4) ಜೇಡಿ ಮಣ್ಣು

4. ಕೈಗಾ ಅಣುಶಕ್ತಿ ಸ್ಥಾವರದ ಕಾರ್ಯಾಚರಣೆ ಮಾಡುವ ಸಂಸ್ಥೆ ಯಾವುದು?
ಉತ್ತರ: 3) NCPIL  ಭಾರತೀಯ ಅಣುಶಕ್ತಿ ನಿಗಮ

5. ಭಾರತದಲ್ಲಿ ಸಾಂಪ್ರದಾಯಿಕವಾಗಿ ಕಾಫಿ ಬೆಳೆಯುವ ರಾಜ್ಯಗಳಾವುವು?
ಉತ್ತರ: 2) ಕರ್ನಾಟಕ, ತಮಿಳುನಾಡು, ಕೇರಳ

6. ಕರ್ನಾಟಕದ ಅತ್ಯುನ್ನತ ಶಿಖರ ಯಾವುದು?
ಉತ್ತರ: 4) ಮುಳ್ಯಯ್ಯನ ಗಿರಿ

7. 2011ನೇ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆಯ ಪ್ರಮಾಣ ಶೇಕಡಾ 75.36. ಅದರಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣವೆಷ್ಟು?
ಉತ್ತರ: 2) 82.47%

8. 1976 ಕೃಷ್ಣಾ ಬಚಾವತ್ ಕಮೀಷನ್ ತೀರ್ಪಿನಂತೆ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ
ಉತ್ತರ: 3) 700 TMC

9. ಕರ್ನಾಟಕದ ಕರಾವಳಿಯಲ್ಲಿ ದೊರೆಯುವ ಮತ್ಸ್ಯದ ಮುಖ್ಯ ಪ್ರಭೇದವೆಂದರೆ
ಉತ್ತರ: 4) ಮ್ಯಾಕರಲ್

10. ಬಂಧಿ ಪ್ರತ್ಯಕ್ಷೀಕರಣ (ಹೇಬಿಯರ್ಸ್ ಕಾರ್ಪಸ್) ರಿಟ್ ಅರ್ಥ
ಉತ್ತರ: 3)ಬಂಧನಕ್ಕೆ ಒಳಪಟ್ಟ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಲಯ ಅಧಿಕಾರಗಳಿಗೆ ನೀಡುವ ಆಜ್ಞೆ

11. ಭಾರತದ ಸಂವಿಧಾನದ ಯಾವ ಅನುಚ್ಚೇದವು ತಿದ್ದುಪಡಿಗೆ ಸಂಬಂಧಿಸಿದಂತೆ ಉಪಬಂಧಗಳೊಂದಿಗೆ ವ್ಯವಹರಿಸುತ್ತದೆ?
ಉತ್ತರ: 2) 368ನೇ ಅನುಚ್ಛೇದ

12. ನಮ್ಮ ಸಂವಿಧಾನದ II ನೇ ಭಾಗದ 5 ರಿಂದ 11ನೇ ಅನುಚ್ಛೇದಗಳು ___ ಗೆ ಸಂಬಂಧಿಸಿವೆ.
ಉತ್ತರ: 2) ನಾಗರಿಕತ್ವಕ್ಕೆ ಸಂಬಂಧಿಸಿದ ತತ್ವಗಳು ಮತ್ತು ನಿಯಮಗಳು

13. ಕೆಳಗಿನ ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧ ವೆಂದು ಪರಿಗಣಿಸುತ್ತದೆ?
ಉತ್ತರ: 1) ಔದ್ಯೋಗಿಕ ಕಾಯ್ದೆ 

14. ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವ್ಯವಸ್ಥಾಪಕ ಮಂಡಲಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕೆಳಗಿನ ಯಾವುದರಲ್ಲಿ ಕಾಣಬಹುದು?
ಉತ್ತರ: 2) ನಿರ್ದೇಶಕ ತತ್ವಗಳು

15. ಹಣಕಾಸು ಮಸೂದೆ ಮಂಡನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
ಉತ್ತರ: 3) ಅದನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು.

16. ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ?
ಉತ್ತರ: 4) ರಾಜ್ಯಸಭೆ, ಲೋಕಸಭೆ ಮತ್ತು ವಿಧಾನಸಭಾ ಸದಸ್ಯರು

17. 1992 23ನೇ ಸಂವಿಧಾನ ತಿದ್ದುಪಡಿಯು ಕೆಳಗಿನ ಯಾವುದಕ್ಕೆ ಮಹತ್ವ ನೀಡುತ್ತದೆ?
ಉತ್ತರ: 1) ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆ ಯನ್ನು ಸಂಸಿದ್ಧತೆಗೊಳಿಸುವ ಸಲುವಾಗಿ ಪಂಚಾಯತ ವ್ಯವಸ್ಥೆಯನ್ನು ಪುನರ್ ಘಟಿಸುವುದು.

18. ಭಾರತದ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: 2) ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು 

19. ಕೇಂದ್ರದಲ್ಲಿ ಅಟಾರ್ನಿ ಜನರಲ್ರಿರುವಂತೆ ರಾಜ್ಯದಲ್ಲಿ ಯಾರಿರುತ್ತಾರೆ?
ಉತ್ತರ: 2) ಅಡ್ವೊಕೇಟ್ ಜನರಲ್

20. ಕೆಳಗೆ ಕೊಟ್ಟಿರುವ ದೇಶದ ಸಾಂಸ್ಕೃತಿಕ ವಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳ ಪಟ್ಟಿಯಲ್ಲಿ ಸರಿಯಾದವುಗಳನ್ನು ಗುರುತಿಸಿ.

               ವಲಯಗಳು          ಸಾಂಸ್ಕೃತಿಕ ಕೇಂದ್ರ

      I.     ಉತ್ತರ ವಲಯ           ಪೆಟಿಯಾಲ

     II.    ದಕ್ಷಿಣ ವಲಯ            ಬೆಂಗಳೂರು

    III.    ಈಶಾನ್ಯ ವಲಯ          ದಿಮಾಪುರ

    IV.    ಪೂರ್ವ ವಲಯ            ಚೆನ್ನೈ
ಉತ್ತರ: 2) I & III

21. ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆಯು ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು?
ಉತ್ತರ: 3) ಮದ್ರಾಸ (ಚೆನ್ನೈ) 1904

22. ಕೆಳಗಿನ ಹೋಲಿಕೆಗಳನ್ನು ಪೂರ್ಣಗೊಳಿಸಿ. ಯೆನ್ : ಕರೆನ್ಸಿ ::
ಉತ್ತರ: 4) ಕೇರಳ: ರಾಜ್ಯ

23. ಒಬ್ಬ ಹುಡುಗ ಈಗ ತನ್ನ ತಂದೆಗಿಂತ ಮೂರನೇ ಒಂದರಷ್ಟು ವಯಸ್ಸಿನವನಾಗಿದ್ದಾನೆ. ಹನ್ನೆರಡು ವರ್ಷಗಳ ನಂತರ ಆತನು ತನ್ನ ತಂದೆಯ ವಯಸ್ಸಿನ ಅರ್ಧದ ವಯಸ್ಸಿನವನಾಗಿರುತ್ತಾನೆ. ಹಾಗಾದರೆ ಹುಡುಗನ ಈಗಿನ ವಯಸ್ಸೆಷ್ಟು?
ಉತ್ತರ: 3) 12 ವರ್ಷಗಳು

24. ಕೆಳಗಿನವುಗಳಲ್ಲಿ ಯಾವುದು ಅನುವಂಶೀಯತೆಯ ಕಾಯಿಲೆಯಾಗಿದೆ?
ಉತ್ತರ: 3) ಬಣ್ಣ ಕುರುಡುತನ

25. ಚಂದ್ರನ ಮೇಲೆ ಕೆಲಸ ನಿರ್ವಹಿಸದ ಸಾಧನ ಯಾವುದು?
ಉತ್ತರ: 3) ಸೈಪನ್

26. ಗ್ರಹವು ಕಾಂತಕ್ಷೇತ್ರ ಹೊಂದಿರಲು ಇರುವ ಕಾರಣವೇನು?
ಉತ್ತರ: 4) ತನ್ನ ಅಕ್ಷದ ಮೇಲಿನ ಅದರ ಭ್ರಮಣೆ

27. ಒಂದು ಕಬ್ಬಿಣದ ವಸ್ತುವಿಗೆ ತುಕ್ಕು ಹಿಡಿದಾಗ, ಕಬ್ಬಿಣದ ಆಕ್ಸೈಡು
ಉತ್ತರ: 2) ವಸ್ತುವಿನ ತೂಕದಲ್ಲಿ ಇಳಿಕೆಯಾಗುವ ಮೂಲಕ ರೂಪುಗೊಳ್ಳುತ್ತದೆ.

28. ಕೆಳಗಿನ ಹೇಳಿಕೆಗಳಿಂದ ತಾರ್ಕಿಕವಾಗಿ ಬರಲಾದಂಥ ತೀರ್ಮಾನವನ್ನು ಗುರುತಿಸಿ.

ಹೇಳಿಕೆ: ಎಲ್ಲ ಸುಶಿಕ್ಷಿತ ಜನರು ಸುದ್ದಿಪತ್ರಿಕೆಗಳನ್ನು ಓದುತ್ತಾರೆ. ಕುಮಾರನ್ ಸುದ್ದಿ ಪತ್ರಿಕೆಗಳನ್ನು ಓದುವುದಿಲ್ಲ.

ತೀರ್ಮಾನ:

I. ಕುಮಾರನ್ ಸುಶಿಕ್ಷಿತನಲ್ಲ          II. ಸುದ್ದಿ ಪತ್ರಿಕೆಯನ್ನು ಓದುವುದು ಸುಶಿಕ್ಷಿತರಿಗೆ ಅಗತ್ಯವೇನೂ ಅಲ್ಲ
ಉತ್ತರ: 2) 1ನೇ ತೀರ್ಮಾನಕ್ಕೆ ಮಾತ್ರ ಬರಲಾಗಿದೆ.

29. ಕೆಳಗಿನವುಗಳಲ್ಲಿನ ಯಾವ ಆಯ್ಕೆಯು ತರ್ಕಬದ್ಧವಾಗಿದೆ?

                ಹೇಳಿಕೆ: ಪೊದೆಯಲ್ಲಿರುವ ಎರಡು ಪಕ್ಷಿಗಳಿಗಿಂತ ಒಂದು ಪಕ್ಷಿಯು ಬೆಲೆಬಾಳುತ್ತದೆ.

                ತೀರ್ಮಾನ:

I. ನಮ್ಮ ಬಳಿ ಏನಿದೆಯೋ ಅಷ್ಟಕ್ಕೆ ನಾವು ತೃಪ್ತಿಪಟ್ಟುಕೊಳ್ಳಬೇಕು. II. ನಮ್ಮ ಬಳಿ ಇರದಿರುವ ವಸ್ತುವಿಗೆ ನಾವು ಹಂಬಲಿಸಬಾರದು
ಉತ್ತರ: 4) 1 ಮತ್ತು 2 ಇವೆರಡೂ

30. ಮುಕಿಲನ್ ಹನ್ನೆರಡು ವರ್ಷ ವಯಸ್ಸಿನ ಹುಡುಗ. ಮೂರು ವರ್ಷ ಗಳಿಂದ ಆತನು ತನ್ನ ತಂದೆ ತಾಯಿಗೆ ಒಂದು ನಾಯಿಬೇಕೆಂದು ಕೇಳುತ್ತಿದ್ದಾನೆ. ಆತನ ತಂದೆ ತಾಯಿಯು ವಸತಿ ಸಂಕೀರ್ಣದಲ್ಲಿ (ಅಪಾರ್ಟಮೆಂಟ್) ನಾಯಿಯು ಸಮಾಧಾನದಿಂದ ಇರುವುದಿಲ್ಲ ವೆಂದು ತಾವು ಭಾವಿಸುವುದಾಗಿ ಆತನಿಗೆ ಹೇಳುತ್ತಿದ್ದಾರೆ. ಆದರೆ ಅವರು ಆತನಿಗೆ ಪಕ್ಷಿಯನ್ನು ಇಟ್ಟುಕೊಳ್ಳಲು ಅನುಮತಿ ನೀಡಿರುತ್ತಾರೆ. ಮುಕಿಲನ್ ಇದುವರೆಗೆ ತಾನು ಯಾವ ವಿಧದ ಪಕ್ಷಿಯನ್ನು ಇಷ್ಟಪಡಬಹುದು ಎಂಬುದನ್ನು ನಿರ್ಧರಿಸಿರುವುದಿಲ್ಲ. ಹಾಗಿದ್ದರೆ, ಕೆಳಗಿನ ಯಾವ ಹೇಳಿಕೆಯು ನಿಜವಾದುದು?
ಉತ್ತರ:   3) ಮುಕಿಲನ್ ತನ್ನ ತಂದೆ-ತಾಯಿಯೊಂದಿಗೆ ವಸತಿ ಸಂಕೀರ್ಣದಲ್ಲಿ (ಅಪಾರ್ಟಮೆಂಟ್) ವಾಸಿಸುತ್ತಾನೆ.

31. ಜಾಗತಿಕ ಸ್ಥಾನ ನಿರ್ಧರಣೆ ವ್ಯವಸ್ಥೆಯು ಕೆಳಗಿನ ಯಾವುದಕ್ಕೆ ಅವಕಾಶ ಕಲ್ಪಿಸುತ್ತದೆ?
ಉತ್ತರ: 3) ಸ್ಥಳ ಮತ್ತು ಸಮಯ

32. 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
ಉತ್ತರ: 2) 1.21 ಬಿಲಿಯನ್

33. ಭಾರತದಲ್ಲಿ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ?
ಉತ್ತರ: 4) ಉತ್ತರ ಪ್ರದೇಶ

34. ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು ಎಷ್ಟು?
ಉತ್ತರ: 3) 7

35. ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯವು ಭಾರತದಲ್ಲಿ ಅತ್ಯಂತ ಚಿಕ್ಕ ರಾಜ್ಯವಾಗಿದೆ?
ಉತ್ತರ: 3) ಗೋವಾ

36. ಜಿ-7 ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದುದಾಗಿರುತ್ತದೆ?
ಉತ್ತರ: 2) ವಿಶ್ವದ ಏಳು ಶ್ರೀಮಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು

37. .ಎಸ್..ಎಸ್. ಇದು ಕೆಳಗಿನವುಗಳಲ್ಲಿ ಯಾವುದರ ಪ್ರಥಮಾಕ್ಷರಗಳು?
ಉತ್ತರ: 2) ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ

38. ಪಟ್ಟಿ-1ರಲ್ಲಿ ಬಾಬುಗಳನ್ನು ಪಟ್ಟಿ-2ರೊಂದಿಗೆ ಹೊಂದಿಸಿ ಬರೆಯಿರಿ.

                ಪಟ್ಟಿ -1                    ಪಟ್ಟಿ -2

A)   ಭಾರತ                       I.  ಆಲ್ಪ್ಸ್ (ಆಲ್ಪೈನ್)

B)   ಸ್ವಿಡ್ಜರಲ್ಯಾಂಡ್           II.  ಆಲ್ಡ್ಯೆ

C)   ಸೈಬೀರಿಯ                III. ಆ್ಯಂಡಿಸ್

D)   ಚಿಲಿ                         IV.  ಅರಾವಳಿ
ಉತ್ತರ:   3) A - IV,  B - I,  C - II, D - III

39. ಕೆಳಗಿನವುಗಳಲ್ಲಿ ಯಾವುದು ಕೃಷ್ಣಾನದಿಯ ಉಪ-ನದಿಯಲ್ಲ?
ಉತ್ತರ: 4) ಭದ್ರಾ

40. ಭಾರತದಲ್ಲಿ ಪಟ್ಟಣವನ್ನು ಕೆಳಗಿನ ಯಾವುದರ ಆಧಾರದ ಮೇಲೆ ಪರಿಭಾಷಿಸಲಾಗುತ್ತದೆ?
ಉತ್ತರ: 4) ಮೇಲಿನ ಎಲ್ಲವೂ   

41. 2014 ಬ್ರಿಕ್ಸ್ (BRICS) ಶೃಂಗಸಭೆಗೆ ಕೆಳಗಿನ ಯಾವ ರಾಷ್ಟ್ರಗಳ ಮುಖ್ಯಸ್ಥರು ಹಾಜರಿದ್ದರು?
ಉತ್ತರ: 3) ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ

42. ಕೆಳಗಿನ ಯಾವ ದೇಶದಲ್ಲಿ ಫ್ಯುಜಿ ಪರ್ವತ ಇದೆ?
ಉತ್ತರ: 4) ಜಪಾನ್

43. ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ ಪರಿಕಲ್ಪನೆಯು ಪ್ರತಿಬಿಂಬಿತವಾಗುತ್ತದೆ?
ಉತ್ತರ: 2) ಅಶೋಕ ಮೌರ್ಯ

44. ಕೆಳಗಿನವರಲ್ಲಿ ಯಾರು ಗ್ರೀಕ್ ಇತಿಹಾಸಕಾರ?
ಉತ್ತರ: 4) ಹೆರೋಡಾಟಸ್

45. ಪಟ್ಟಿ-1ರಲ್ಲಿ ಬಾಬುಗಳನ್ನು ಪಟ್ಟಿ -2ರಲ್ಲಿರುವ ಬಾಬುಗಳೊಂದಿಗೆ ಹೊಂದಿಸಿ ಬರೆಯಿರಿ.

  ಪಟ್ಟಿ -1                          ಪಟ್ಟಿ -2

A) ಕೇರಳ                         I. ಲಾವಣಿ

B)  ಮಹಾರಾಷ್ಟ್ರ              II. ಭಾಂಗ್ರಾ

C)  ಪಂಜಾಬ್                   III. ಗರ್ಬಾ

D)  ಗುಜರಾತ್                  ತೆಯ್ಯಮ್
ಉತ್ತರ: 1)  A - IV,  B - I,  C - II,  D - III

46. ಕೆಳಗಿನವುಗಳಲ್ಲಿ ಯಾವುದನ್ನು ಸಾಧಿಸುವುದು ಕಾಗೋಡು ಸತ್ಯಾಗ್ರಹದ ಗುರಿಯಾಗಿತ್ತು?
ಉತ್ತರ: 1) ಕೃಷಿ ಚಳುವಳಿ

47. ಕೆಳಗಿನವರಲ್ಲಿ ಆಧುನಿಕ ಕರ್ನಾಟಕದ ಹಿಂದುಳಿದ ವರ್ಗಗಳ ನೇತಾರ ಯಾರು?
ಉತ್ತರ:  4) ಡಿ. ದೇವರಾಜ ಅರಸ್

48. _____ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು.
ಉತ್ತರ: 4) ನೀರಿನ ಮೇಲ್ಮೈ ಎಳೆತ

49. ___ ಎಂಬ ಘಟಕದಲ್ಲಿ ನ್ಯೂಕ್ಲಿಯರ್ ಅಳತೆಯನ್ನು ಅಭಿವ್ಯಕ್ತಿಸಲಾಗಿದೆ.
ಉತ್ತರ: 2) ಫರ್ಮಿ

50. ಆಪ್ಟಿಕಲ್ ಫೈಬರ್ ___ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ.
ಉತ್ತರ:  3) ಒಟ್ಟು ಆಂತರಿಕ ಪ್ರತಿಫಲನ

51. ಮಳೆಯ ದಿನದಂದು, ಸಣ್ಣ ಪ್ರಮಾಣದ ಎಣ್ಣೆ ಪದರಗಳು ನೀರಿನ ಮೇಲೆ ಹೊಳೆಯುವ ವರ್ಣಗಳನ್ನು ತೋರಿಸುತ್ತವೆ. ಇದಕ್ಕೆ ಕಾರಣ __
ಉತ್ತರ: 4) ವ್ಯತಿಕರಣ          

52. ಅರೆವಾಹಕಗಳಿಗೆ ಸೂಕ್ತ ಅಶುದ್ಧಗೊಳಿಸುವ ಪದಾರ್ಥಗಳನ್ನು ಸೇರಿಸುವುದರಿಂದ_
ಉತ್ತರ: 2) ತನ್ನ ವಿದ್ಯುತ್ ವಾಹಕತೆಯನ್ನು ಹೆಚ್ಚಿಸಿಕೊಳ್ಳುತ್ತದೆ.

53. ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತಿಸೂಕ್ಷ್ಮ ನ್ಯಾನೋ ಕಣ ಯಾವುದು?
ಉತ್ತರ: 4) ಇಂಗಾಲ ನ್ಯಾನೋಟ್ಯೂಬ್ಗಳು

54. ಲೂಯಿಸ್ ಪರಿಕಲ್ಪನೆ ಅನುಸಾರ ಕ್ಷಾರ ಎಂದರೆ
ಉತ್ತರ:  2) ಎಲೆಕ್ಟ್ರಾನ್ ಕೊಡುವುದು

55. ಕೆಳಗಿನವುಗಳಲ್ಲಿ ಯಾವುದು ಹಾಸ್ಯಪಾತ್ರ ಅನಿಲವಾಗಿದೆ (ಲಾಫಿಂಗ್ ಗ್ಯಾಸ್)?
ಉತ್ತರ: 3) ನೈಟ್ರಸ್ ಆಕ್ಸೈಡ್

56. ಡೆಕ್ಟ್ರೋಸ್ ____ ಆಗಿದೆ.
ಉತ್ತರ: 4) ಗ್ಲೂಕೋಸ್

57. ___ ರಾಜ್ಯದಲ್ಲಿ ತಾರಪುರ್ ನ್ಯೂಕ್ಲಿಯರ್ ಶಕ್ತಿ ಸ್ಥಾವರವನ್ನು ಸ್ಥಾಪಿಸಲಾಗಿದೆ.
ಉತ್ತರ: 2) ಮಹಾರಾಷ್ಟ್ರ

58. ಅನಿಮೋಫಿಲಿ ಎಂಬ ಪರಾಗಸ್ಪರ್ಶ ಯಾವುದರಿಂದ ಆಗುತ್ತದೆ?
ಉತ್ತರ:  4) ಗಾಳಿ

59. ದ್ಯುತಿಸಂಶ್ಲೇಷಣೆ ಪ್ರಕ್ರಿಯೆಗೆ ಅಗತ್ಯವಿರುವ ಅಂಶಗಳು ಯಾವುದು?
ಉತ್ತರ: 1) CO2 + H2O + ಬೆಳಕು

60. ಮೈಕಾಲಜಿಯ ಅಧ್ಯಯನ ಯಾವುದಕ್ಕೆ ಸಂಬಂಧಪಟ್ಟಿರುತ್ತದೆ.
ಉತ್ತರ: 2) ಫಂಗೈ (ಶಿಲೀಂಧ್ರಗಳು)

61. ಇರುವೆಗಳು ____ ಮೂಲಕ ಸಂವಹನ ನಡೆಸುತ್ತವೆ.
ಉತ್ತರ: 1) ಫೆರೊಮೋನ್ಗಳು

62. ಗ್ರೇಟ್ ಬ್ಯಾರಿಯರ್ ರೀಫ್_____ ಬಳಿ ಇದೆ.
ಉತ್ತರ: 1) ಆಸ್ಟ್ರೇಲಿಯಾ

63. ಪ್ರಬಲವಾದ ರಕ್ತಹೀನತೆಯು ಇದರ ಕಡಿಮೆಯಿಂದಾಗಿ ಆಗುತ್ತದೆ.
ಉತ್ತರ:  2) ವಿಟಮಿನ್ ಬಿ 12

64. ಉಸಿರಾಟದ ಸಮಯದಲ್ಲಿನ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.
ಉತ್ತರ:  2) ಟೈಡಲ್ ಗಾತ್ರ

65. ಪ್ರಸ್ತುತ C.S.O. ರಾಷ್ಟ್ರೀಯ ದೇಶೀಯ ಉತ್ಪನ್ನವನ್ನು ಯಾವ ____ ಮೂಲ ಬೆಲೆಗೆ ಮಾಪನ ಮಾಡುತ್ತದೆ.
ಉತ್ತರ: 2) 2011-12

66. 14ನೆಯ ಹಣಕಾಸು ಆಯೋಗವು ಕೆಳಗಿನ ಯಾವ ಮಾನದಂಡ ಗಳ ಆಧಾರದ ಮೇಲೆ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿತರಿಸುತ್ತದೆ.
ಉತ್ತರ: 2) ಜನಸಂಖ್ಯೆ ಮೂಲಸೌಕರ್ಯ ವಿತ್ತೀಯ ಶಿಸ್ತು ಮತ್ತು ಪ್ರದೇಶ

67. ಕೆಳಗಿನ ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ.
ಉತ್ತರ: 4) ಜಮ್ಮು ಮತ್ತು ಕಾಶ್ಮೀರ

68. ಶಾಂತಾಕುಮಾರ ನೇತೃತ್ವದ ಅಧಿಕ ಶಕ್ತಿಯ ಸಮಿತಿಯು ಕೆಳಗಿನದಕ್ಕೆ ಸಂಬಂಧಿಸಿದೆ.
ಉತ್ತರ: 3) ಭಾರತೀಯ ಆಹಾರ ನಿಗಮದ ಮರುಸ್ಥಾಪನೆ

69. ವಾರ್ಷಿಕ ಉದ್ದಿಮೆಗಳ ಸರ್ವೆಯ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದಲ್ಲಿ ಒಟ್ಟು ನೋಂದಣೀಕೃತ ಫ್ಯಾಕ್ಟ್ರಿಗಳ ಪ್ರತಿಶತ.
ಉತ್ತರ: 2) 05.27%

70. ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು?
ಉತ್ತರ: 1) 2007-08

71. ಅಕ್ಕಿ ತಂತ್ರಜ್ಞಾನ ಪಾರ್ಕ ಎಲ್ಲಿ ಸ್ಥಾಪನೆಯಾಗಿದೆ?
ಉತ್ತರ: 2) ಕಾರಟಗಿ

72. ಪ್ರಾದೇಶಿಕ ಅಸಮತೋಲನದ ವಾರು ಪರಿಷ್ಕರಣೆಯ (2000-2002) ಅಧಿಕ ಶಕ್ತಿಯ ಸಮಿತಿಯ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳ ಒಟ್ಟು ಸಂಖ್ಯೆ?
ಉತ್ತರ: 3) 39

73. ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಉತ್ತರ: 1) ಏಷ್ಯನ್ ಬ್ಯಾಂಕಿನ ಸಾಧಕ ಪ್ರಶಸ್ತಿ 2015

74. ಕೆಳಗಿನವುಗಳಲ್ಲಿ ಯಾವುದನ್ನು ಇತ್ತೀಚೆಗೆ ತೆಗೆದುಹಾಕಲಾಗಿದೆ.
ಉತ್ತರ: 4) ಸಂಪತ್ತು ತೆರಿಗೆ

75. ____ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ ಪ್ಯಾನ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ.
ಉತ್ತರ: 4) 1,00,000 ರೂಪಾಯಿಗಳು

76. ನೀತಿ (NITI) ಆಯೋಗದ ಪೂರ್ಣ ರೂಪ ಇವುಗಳಲ್ಲಿ ಯಾವುದಾಗಿದೆ.
ಉತ್ತರ: 1) ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸಫಾರಮಿಂಗ್ ಇಂಡಿಯಾ

77. ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಾಚಾರ ಮಾಡುತ್ತದೆ?
ಉತ್ತರ: 4) ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ

78. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ__ದೇಶವು ಶಾಶ್ವತವಲ್ಲದ ಸದಸ್ಯ ದೇಶವಾಗಿದೆ.
ಉತ್ತರ: 3) ಜಪಾನ್ 

79. ಮುಂದಿನ ಸಾರ್ಕ್ ಸಭೆಯು____ ದಲ್ಲಿ ನಡೆಯುತ್ತದೆ.
ಉತ್ತರ: 4) ಪಾಕಿಸ್ತಾನ

80. ಕೆಳಗೆ ಕೊಟ್ಟಿರುವ ಯಾವ ಅಂತರರಾಷ್ಟ್ರೀಯ ಆಹಾರ ಸಂಸ್ಥೆಯು ಇತ್ತೀಚೆಗೆ ಭಾರತೀಯ ರೈಲ್ವೆ ಮತ್ತು ಉಪಹಾರ ಮತ್ತು ಪ್ರವಾಸೋದ್ಯಮದೊಂದಿಗೆ ರೈಲಿನಲ್ಲಿ ಆಹಾರ ಸೇವೆಯನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.
ಉತ್ತರ: 2) ಕೆ.ಎಫ್.ಸಿ.

81. ರಾಷ್ಟ್ರೀಯ ಉದ್ಯೋಗ ಸಲಹಾ ಜಾಲತಾಣವನ್ನು ಕೇಂದ್ರ ಸರ್ಕಾರದ ಯಾವ ಮಂತ್ರಾಲಯದ ಅಡಿಯಲ್ಲಿ ಸೇರಿಸಲಾಗಿದೆ?
ಉತ್ತರ: 2) ಕೌಶಲ್ಯ ಅಭಿವೃದ್ಧಿ ಮತ್ತು ಔದ್ಯೋಗಿಕ ಮಂತ್ರಾಲಯ

82. ಕಡಲ ಸಹಕಾರಕ್ಕಾಗಿ ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಪಿಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ.
ಉತ್ತರ: 4) ಸಿಂಗಾಪುರ

83. ಇಂಡೇವ್ ವಿಮಾನ ಹೇರು ನಿಲ್ದಾಣ ಕಂಪನಿಯು ಸ್ಥಾಪಿಸಿರುವ ದೇಶದ ಮೊದಲ ಖಾಸಗಿ ವಿಮಾನ ಹೇರು ನಿಲ್ದಾಣದ ಸೇವೆಯನ್ನು ಆಗಸ್ಟ್ 1 ರಿಂದ ಯಾವ ನಗರದಲ್ಲಿ ಸ್ಥಾಪಿಸಲು ಘೋಷಿಸಿದೆ.
ಉತ್ತರ: 2) ಚೆನ್ನೈ

84. ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿ ಯಲ್ಲಿ ಪುನಃ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಅನುಮೋದಿಸಿದೆ?
ಉತ್ತರ: 1) 400

85. ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಿದ ಭಾರತದ ಪ್ರಥಮ ರಾಜ್ಯ ಯಾವುದು?
ಉತ್ತರ: 3) ರಾಜಸ್ತಾನ

86. ಮಾರಾಟ ಬೆಲೆ 500/- ರೂಪಾಯಿಗಳಿದ್ದಾಗ, ನಿವ್ವಳ ಲಾಭವು 25 ಪ್ರತಿಶತವಿದ್ದಾಗ, ಕೊಂಡ ಬೆಲೆಯನ್ನು ಕಂಡುಹಿಡಿಯಿರಿ.
ಉತ್ತರ: 4) ರೂ. 400/-

87. ಸ್ಟಾಕ್ ಮಾರ್ಕೆಟ್ ಸಂಬಂಧದಲ್ಲಿ SEBI ಎಂದರೆ
ಉತ್ತರ:  3) ಸ್ಟಾಕ್ ಎಕ್ಸಚೇಂಜ್ ಬೋರ್ಡ್ ಆಫ್ ಇಂಡಿಯಾ

88. ಕೆಳಗಿನ ಯಾವ ಹೇಳಿಕೆಗಳು ಸರಿ ಇದೆ/ಇವೆ?
ಉತ್ತರ: 4) I, II ಹಾಗೂ III

89. ಸ್ಥಿತ್ಯಂತರ ಸೂಕ್ಷ್ಮಶಿಲಾಯುಗವು ಯಾವ ಸಂಸ್ಕøತಿಯಿಂದ ಯಾವ ಸಂಸ್ಕøತಿಗೆ ಬದಲಾವಣೆಯನ್ನು ಸೂಚಿಸುತ್ತದೆ?
ಉತ್ತರ: 1) ಆದಿ ಹಳೆಶಿಲಾಯುಗದಿಂದ ಮಧ್ಯ ಹಳೇಶಿಲಾಯುಗಕ್ಕೆ

90. ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿ ಇದೆ/ಇವೆ?
ಉತ್ತರ: 4) I, II ಹಾಗೂ III

91. ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿ ಇದೆ/ಇವೆ?
ಉತ್ತರ:  4) I, II ಹಾಗೂ III

92. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ಉತ್ತರ: 3) ಮೌರ್ಯ ಸಾಮ್ರಾಜ್ಯದ ವಿಸ್ತø ಪ್ರದೇಶದಲ್ಲಿ ಅಶೋಕನ ಶಾಸನಗಳು ಬ್ರಾಹ್ಮಿಲಿಪಿಯಲ್ಲಿಯೂ ಭಾರತದ ವಾಯುವ್ಯ ಭಾಗದಲ್ಲಿ ಖರೋಷ್ಠಿ ಲಿಪಿಯಲ್ಲಿಯೂ ಬರೆಯಲ್ಪಟ್ಟಿದ್ದವು.

93. ಮೌರ್ಯರ ಕಾಲದಲ್ಲಿ ಕೆಳಗಿನ ಯಾರು ಉನ್ನತಾಧಿಕಾರಿಗಳಾಗಿದ್ದರು?
ಉತ್ತರ: 4) I, II, III ಹಾಗೂ Iಗಿ

94. ಕೆಳಗಿನ ಯಾವ ಹೇಳಿಕೆ/ಗಳು ಸರಿ?
ಉತ್ತರ: 3) II ಹಾಗೂ III ಮಾತ್ರ

95. ರಾಬರ್ಟ್ ಕ್ಲೈವ್ ಬಂಗಾಲ, ಬಿಹಾರ್ ಮತ್ತು ಒಡಿಶಾಗಳ ದಿವಾನಿ ಹಕ್ಕುಗಳನ್ನು ಪಡೆದುಕೊಂಡದ್ದು ಕೆಳಗಿನ ಪರಿಣಾಮಕ್ಕೆ/ ಪರಿಣಾಮಗಳಿಗೆ ಕಾರಣವಾಯಿತು.
ಉತ್ತರ: 1) I  ಮಾತ್ರ

96. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ಉತ್ತರ: 3) ಇಂಗ್ಲಿಷರೊಂದಿಗೆ ಹೈದರನ ಸಂಬಂಧಗಳು ಕ್ರಿ. . 1767 ವರೆಗೆ ಬಹುಮಟ್ಟಿಗೆ ಮೈತ್ರಿಯುತವಾಗಿದ್ದವು.

97. 1784 ಮಂಗಳೂರು ಒಪ್ಪಂದದ ನಂತರ ಕೆಳಕಂಡ ಕಾರಣಕ್ಕಾಗಿ ಟಿಪ್ಪು ಸುಲ್ತಾನನು ಬ್ರಿಟಿಷರನ್ನು ಸಂಪೂರ್ಣವಾಗಿ ಸದೆಬಡಿಯುವ ನಿರ್ಧಾರಕ್ಕೆ ಬಂದನು.
ಉತ್ತರ: 4) ಟಿಪ್ಪುವಿನ ವಿರುದ್ಧ ಕೊಡಗು ಮತ್ತು ಮಲಬಾರನಲ್ಲಿ ಅವರು ಬಂಡಾಯಗಳನ್ನು ಪ್ರಚೋದಿಸುತ್ತಿದ್ದರು.

98. ಟಿಪ್ಪುವಿನ ಪತನಾನಂತರ ಮೈಸೂರಿನ ಪ್ರದೇಶವನ್ನು ವಿಭಜಿಸುವ ಮತ್ತು ತಮ್ಮ ಪ್ರದೇಶಗಳಿಗೆ ಸೇರ್ಪಡೆಗೊಳಿಸಿಕೊಳ್ಳುವ ಯೋಜನೆಯಲ್ಲಿ ಭಾಗಿಯಾಗಿದ್ದ ಶಕ್ತಿಗಳಲ್ಲಿ ಕೆಳಗಿನ ಯಾರು ಸೇರಿರಲಿಲ್ಲ?
ಉತ್ತರ: 1) ಅರ್ಕಾಟಿನ ನವಾಬ

99. ಕೋಲಾರ ಚಿನ್ನದ ಗಣಿಗೆ ನೀರು ಮತ್ತು ವಿದ್ಯುಚ್ಛಕ್ತಿಯ ಪೂರೈಕೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಇವು ಕೆಳಗಿನ ಯಾವ ದೊರೆಯ ಆಳ್ವಿಕೆ ಕಾಲದ ಸಾಧನೆಗಳಾಗಿದ್ದವು?
ಉತ್ತರ: 3) ನಾಲ್ವಡಿ ಕೃಷ್ಣರಾಜ ಒಡೆಯರ್

100. ದೆಹಲಿ ಕೈವಶವಾದ ಒಂದು ತಿಂಗಳೊಳಗೆ 1857 ಬಂಡಾಯವು ಕೆಳಕಂಡ ಯಾವ ಪ್ರದೇಶಗಳಿಗೆ ಹರಡಿತು?
ಉತ್ತರ: 3) I ಮತ್ತು III ಮಾತ್ರ
😇😇😇😇😇😇😇😇😇😇
[08/10 4:53 pm] Mahendra Badiger: FDA KANNADA KEY ANS

ಸೂಚನೆ : ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆಸಂಖ್ಯೆ 1-6) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ

1. 1) ಸಸಿ  2) ಮರ  3) ಗಿಡ  4) ಬಳ್ಳಿ
ಉತ್ತರ: 4) ಬಳ್ಳಿ

2. 1) ವಿಶ್ವೇಶ್ವರಯ್ಯ  2) ಅಬ್ದುಲ್ ಕಲಾಂ  3) ಸಿ.ಎನ್. ಆರ್. ರಾವ  4) ಎಸ್.ಎಲ್. ಭೈರಪ್ಪ
ಉತ್ತರ: 4) ಎಸ್.ಎಲ್ ಭೈರಪ್ಪ

3. 1) ಆರೋಪ  2) ಪ್ರತ್ಯಾರೋಪ  3) ವಿಧಾನ 4) ದೂರು
ಉತ್ತರ: 3) ವಿಧಾನ

4. 1) ಲಾರಿ  2) ಬಸ್ಸು   3) ಕಾರು  4) ರೈಲು
ಉತ್ತರ: 4) ರೈಲು

5. 1) ಕುವೆಂಪು  2) ಬೇಂದ್ರೆ  3) ಮಾಸ್ತಿ  4) ಲಂಕೇಶ
ಉತ್ತರ: 4) ಲಂಕೇಶ

6. 1) ಆಂದೋಲನ  2) ಅನುಭಾವ  3) ಕ್ರಾಂತಿ  4) ಸುಧಾರಣೆ
ಉತ್ತರ: 2) ಅನುಭಾವ

ಸೂಚನೆ: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ, ತಪ್ಪಿಲ್ಲದಿದ್ದರೆ `ತಪ್ಪಿಲ್ಲ' ಎಂಬ (4)ನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 7-13)

7. ವಿಶ್ವಮಾನವ ಸಂದೇಶದ ಪ್ರಚಾರ ಮತ್ತು ಪ್ರಸಾರ ಅತ್ಯಂತ ತುರ್ತಾಗಿ ಆಗಬೇಕಿದೆ.
ಉತ್ತರ: 4 (ತಪ್ಪಿಲ್ಲ)

8. ಅಧಿಕಾರದಲ್ಲಿರುವವರಿಗೆ ಯೋಜನೆಗಳನ್ನು ಘೋಶಣೆ ಮಾಡುವುದು ಒಂದು ಹವ್ಯಾಸವಾಗಿದೆ.
ಉತ್ತರ: 2 (ಘೋಷಣೆ)

9. ವಿದ್ಯಾರ್ಥಿಗಳಿಗೆ ಚಿತ್ತೇಕಾಗ್ರತೆ ತುಂಬಾ ಮುಖ್ಯ
ಉತ್ತರ: 1 (ಚಿತ್ತೈಕಾಗ್ರತೆ)

10. ಸಂಸ್ಕೃತಿಯು ಪ್ರತಿಯೊಂದು ಆಚರಣೆಯನ್ನು ತರ್ಕಬದ್ಧ ವ್ಯವಸ್ಥಿತ ಅಧ್ಯಯನಕ್ಕೊಳಪಡಿಸುತ್ತದೆ.
ಉತ್ತರ: 4) (ತಪ್ಪಿಲ್ಲ)

11. ಆಡಳಿತದ ಮಾದರಿಗಳಲ್ಲಿ ಪ್ರಜಾಧಿಪತ್ಯವೇ ಆದರ್ಶವಾದುದು
ಉತ್ತರ: 4) (ತಪ್ಪಿಲ್ಲ)

12. ಪ್ರತಿಯೊಬ್ಬ ವ್ಯಕ್ತಿಯೂ ಸಹ ವಸ್ತುಸ್ತಿತಿ ಯನ್ನರಿತು ಮಾತನಾಡಬೇಕು.
ಉತ್ತರ : 1) (ವಸ್ತುಸ್ಥಿತಿ)

13. ಭಾರತೀಯ ಸಂಸ್ಕೃತಿ ತುಂಬಾ ವೈವಿಧ್ಯತೆ ಯಿಂದ ಕೂಡಿದೆ.
ಉತ್ತರ : 4) (ತಪ್ಪಿಲ್ಲ)

ಸೂಚನೆ: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. (ಪ್ರಶ್ನೆಸಂಖ್ಯೆ 14-38)

14. ಭಾಷೆಯಅತ್ಯಂತ ಚಿಕ್ಕ ಘಟಕವೆಂದರೆ -----
ಉತ್ತರ: 4) (ದ್ವನಿ)

15. ದ್ರಾವಿಡ ಭಾಷೆಗಳಲ್ಲಿ ಅತಿ ಪ್ರಾಚೀನವಾದ ಭಾಷೆ
ಉತ್ತರ: 3) (ತಮಿಳು)

16. `ಹೊರಡು' ಎಂಬುದು ----
ಉತ್ತರ: 3) (ಕ್ರಿಯಾಪ್ರಕೃತಿ)

17. ಮರದ ಮೇಲೆ ಒಂದು ಹಕ್ಕಿ ಕುಳಿತಿದೆ ಎಂಬುದುವಾಕ್ಯ
ಉತ್ತರ : 3) (ಪ್ರಸ್ತಾವನಾ ವಾಕ್ಯ)

18. ಬಲಶಾಲಿಯಾದ ಭೀಮನು ದುರ್ಯೋಧನನನ್ನು ಕೊಂದನು ಇಲ್ಲಿ `ಭೀಮನು' ಎಂಬುದು ----
ಉತ್ತರ : 2) (ವಿಶೇಷ್ಯ)

19. `ಹಣದಾಸೆಗೆ' ಎಂಬ ಪದದಲ್ಲಿ ----- ಸಂಧಿಯಿದೆ.
ಉತ್ತರ : 1/3) 1) ಸವರ್ಣ ದೀರ್ಘ / 3) ಲೋಪ

20. `ಮಗುವಿಗೆ' ಎಂಬ ಪದದಲ್ಲಿ--- ಸಂಧಿಯಿದೆ.
ಉತ್ತರ: 2) (ಆಗಮ)

21. `ಹುಲ್ಲುಗಾವಲು' ಎಂಬ ಪದದಲ್ಲಿ ---- ಸಂಧಿಯಿದೆ
ಉತ್ತರ: 4) (ಆದೇಶ)

22. `ತಾನು' ಎಂಬುದು - - -ಸರ್ವನಾಮ
ಉತ್ತರ : 4) (ಆತ್ಮಾರ್ಥಕ)

23. `ದೊಡ್ಡವರು' ಎಂಬುದು ---- ವಚನ
ಉತ್ತರ:  2) (ಬಹುವಚನ)

24. `ಮಾಡಿರಿ' ಎಂಬುದು ---- ಪದ
ಉತ್ತರ: 1) (ವಿದ್ಯರ್ಥಕ)

25. `ನೆನಯರು' ಎಂಬುದು ---- ಪದ
ಉತ್ತರ:  2) (ನಿಷೇದಾರ್ಥಕ)

26. `ಇದ್ದಾನು' ಎಂಬುದು---- ಪದ
ಉತ್ತರ : 4) (ಸಂಭಾವನಾರ್ಥಕ)

27. `ನಕ್ಕವನು' ಎಂಬುದು - - -ಪದ
ಉತ್ತರ : 1) (ಕೃದಂತನಾಮ)

28. `ಚಾಡಿಕೋರ' ಎಂಬುದು  ---- ನಾಮ
ಉತ್ತರ: 1) (ತದ್ಧಿತಾಂತ)

29. ಹಗಲು ಕನಸು ಎಂಬುದು ---- ಸಮಾಸ
ಉತ್ತರ : 3) (ತತ್ಪುರುಷ)

30. `ಸಿಡಿಮದ್ದು' ಎಂಬುದುಸಮಾಸ
ಉತ್ತರ : *

31. `ಕೆಳದುಟಿ' ಎಂಬುದುಸಮಾಸ                                                   
ಉತ್ತರ :  1) (ಅಂಶಿ)

32. `ಕಥೆಹೇಳು' ಎಂಬುದುಸಮಾಸ
ಉತ್ತರ : 4) (ಕ್ರಿಯಾ)

33. ----- ಎಂಬುದು ಅವಧಾರಣೆಯಿಂದ ಕೂಡಿದ ಪದ
ಉತ್ತರ : 3) (ನಾನೇ)

34. ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೇ ಹಿಂತಿರುಗಿದೆನು. ಇಲ್ಲಿ ಕೂಡಲೇ ಎಂಬುದು
ಉತ್ತರ: 2) (ಸಾಮಾನ್ಯಾವ್ಯಯ)

35. ಆಹಾ, ನೀರು ಅಮೃತದಂತಿದೆ. ಇಲ್ಲಿ ಆಹಾ ಎಂಬುದು---
ಉತ್ತರ: 4) (ಭಾವಸೂಚಕಾವ್ಯಯ)

36. ಮಗು ಕುಣಿಯುತ್ತಾ ಬೀದಿಗೆ ಹೋಯಿತು ಇಲ್ಲಿ ಕುಣಿಯುತ್ತಾ --- ಪದ
ಉತ್ತರ : 3) (ಸಾಪೇಕ್ಷ ಕ್ರಿಯಾಪದ)

37. ನೀವು ಬುದ್ಧಿವಂತರಾಗಿ ಬಾಳಿ ಇಲ್ಲಿ `ಬುದ್ಧಿವಂತರಾಗಿ' ಎಂಬುದು                                
ಉತ್ತರ : 4) (ಭಾವನಾಮ)

38. `ಅಂಥದು' ಎಂಬ ಪದ ---- ವಾಚಕ              
ಉತ್ತರ : 3) (ಪ್ರಕಾರ ವಾಚಕ)

ಸೂಚನೆ: ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆಸಂಖ್ಯೆ 39-42) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.

39. 1) ಮನೆ  2) ಹೊಲ  3) ಗದ್ದೆ  4) ನದಿ
ಉತ್ತರ: 4 (ನದಿ)

40. 1) ಹೀರು  2) ಬೀದಿ  3) ಸಾರು  4) ಕಾರು
ಉತ್ತರ: 4 (ಕಾರು)

41. 1) ಕದ  2) ಕಾಗದ  3) ಹೊಲಿ  4) ನೆಲ
ಉತ್ತರ: 2 (ಕಾಗದ)

42. 1) ಮೆಲ್ಲಗೆ  2) ಸುಮ್ಮನೆ  3) ಬದಲು  4) ಕಲ್ಲು
ಉತ್ತರ: 4 (ಕಲ್ಲು)

ಸೂಚನೆ: ಕೆಳಗಿನ ವಾಕ್ಯಗಳಲ್ಲಿನ (ಪ್ರಶ್ನೆಸಂಖ್ಯೆ 43-45) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರುತಿಸಿ ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ ಆಗ (4)ನ್ನು ಗುರುತಿಸಿ

43. ಹುಡುಗರು ನಾಯಿಗೆ ಅಟ್ಟಿದರು
ಉತ್ತರ: 3) (ನಾಯಿಯನ್ನು)

44. ಗುಡಿ ಕೈಗಾರಿಕೆಗಳು ಕಚ್ಚಾಪದಾರ್ಥಗಳ ಕೊರತೆಯಿಂದ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು.
ಉತ್ತರ: 4) (ಸುಧಾರಣೆ ಬೇಕಿಲ್ಲ)

45. ಒಟ್ಟಿನಲ್ಲಿ ಇತ್ಯರ್ಥವನ್ನು ಹೀಗೆ ವಿವರಿಸಬಹುದು
ಉತ್ತರ: 1) (ಇತ್ಯರ್ಥ)

ಸೂಚನೆ: ಕೆಳಗಿನವುಗಳಲ್ಲಿ (ಪ್ರಶ್ನೆಸಂಖ್ಯೆ 46-50) ಗೆರೆ ಹಾಕಿದ ಭಾಗ ಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.

46. ಕನ್ನಡದ ಮೊಟ್ಟಮೊದಲ ತ್ರಿಪದಿರೂಪ ಜಿನವಲ್ಲಭನ ಶಾಸನದಲ್ಲಿ ಸಿಗುತ್ತದೆ.
ಉತ್ತರ : 2) (ಬಾದಾಮಿ ಶಾಸನ)

47. ಹಲ್ಮಿಡಿ ಶಾಸನ ಹಳಗನ್ನಡ ಭಾಷಾ ರೂಪದಲ್ಲಿದೆ      
ಉತ್ತರ:  3) (ಪೂರ್ವದ
ಳೆಗನ್ನಡ)

48. ಕನ್ನಡದಲ್ಲಿ ಮೊಟ್ಟಮೊದಲು ಸರಸ್ವತಿ ಸನ್ಮಾನ್ ಪಡೆದ ಸಾಹಿತಿ ಕುವೆಂಪು
ಉತ್ತರ : 3) (ಎಸ್.ಎಲ್. ಭೈರಪ್ಪ)

49. ಉರಿಯ ನಾಲಿಗೆ ಇದು ಹಾ.ಮಾ. ರವರ ಕೃತಿ
ಉತ್ತರ: 4) (ಕೀರ್ತಿನಾಥ ಕುರ್ತುಕೋಟಿ)

50. ಹಗಲುಗನಸುಗಳು ಕೃತಿಯ ಕರ್ತೃ ಚಂದ್ರಶೇಖರ ಕಂಬಾರ
ಉತ್ತರ: 3) (.ಎನ್. ಮೂರ್ತಿರಾವ್)

ಸೂಚನೆ: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆಸಂಖ್ಯೆ 51-58) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ ಅವುಗಳ ಅನುಕ್ರಮವನ್ನು ಗುರುತಿಸಿ.

51. ಸಾಮೂಹಿಕ ಶಿಸ್ತು (P)ಏಕರೂಪದ ಆಚರಣೆಯಲ್ಲ(Q) ಎಂದರೆ(R) ವಿವೇಚನಾರಹಿತ(S)
ಉತ್ತರ : 3) (PRSQ)

52. ಜೀವನ (P) ಸಂಸ್ಕೃತಿವಂತ (Q) ನಡೆಯುತ್ತದೆ (R) ಗುರಿಯರಿತು(S)
ಉತ್ತರ : 1) (QPSR)

53. ಪ್ರಸ್ತುತ ಸಂದರ್ಭದ (P) ಕನ್ನಡದಲ್ಲಿ (Q) ಚಿಂತಕರಲ್ಲೊಬ್ಬರು(R) ಮಹತ್ವದ(S)
ಉತ್ತರ: 2) (QPSR)

54. ಎಂತಹ ಭಯಂಕರ(P)  ಕಾದಿದೆಯೊ ನಿಮಗೆ(Q) ಹೋರಾಟ(R) ಕಾಲ ಪುರುಷನೇ ಬಲ್ಲ(S)
ಉತ್ತರ : 4) (PRQS)

55. ಮಾಡಬೇಕು(P) ವಿದ್ಯೆ (Q)ವಿಚಾರವಂತರನ್ನಾಗಿ(R) ಮನುಷ್ಯನನ್ನು(S)
ಉತ್ತರ : 2) (QSRP)

56. ಪ್ರಸಿದ್ಧವಾಗಿದೆ(P) ದಕ್ಷಿಣಕಾಶಿ(Q) ಎಂದು(R) ನಂಜನಗೂಡು(S)
ಉತ್ತರ : 2) (SQRP)

57. ಅಕ್ಷರಸ್ತರಾಗುತ್ತಿದ್ದಾರೆ(P) ವಿದ್ಯಾವಂತರು(Q) ಕೇವಲ(R) ಇತ್ತೀಚಿನ ದಿನಗಳಲ್ಲಿ(S)
ಉತ್ತರ : 4) (QSRP)

58. ಸಂಸ್ಕೃತಿವಂತ ರಾಷ್ಟ್ರಜೀವನ (P) ಸಾಧಿಸುವುದಾಗಿರಬೇಕು(Q) ಮಾನವ ಕುಲದ(R) ಗುರಿಯನ್ನು(S)
ಉತ್ತರ : 2) (PRSQ)

ಸೂಚನೆ: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 59-64) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷ ವಿದ್ದರೆ ಭಾಗವನ್ನು ಗುರುತಿಸಿ. ಯಾವ ಭಾಗದಲ್ಲೂ ದೋಷ ವಿಲ್ಲದಿದ್ದರೆ `ತಪ್ಪಿಲ್ಲ' ಎಂಬ (4)ನೇ ಭಾಗವನ್ನು ಗುರುತಿಸಿ.

59. ವಚನಗಳು(1)   ಕನ್ನಡ(2)   ಉಪನಿಷತ್ತುಗಳು(3)   ತಪ್ಪಿಲ್ಲ(4)
ಉತ್ತರ: 2 (ಕನ್ನಡ)

60. ಅಬ್ದುಲ್ ಕಲಾಂರವರು(1)  ನಮ್ಮ ದೇಶ(2) ಕ್ಷಿಪಣಿ ಪಿತಾಮಹರು(3) ತಪ್ಪಿಲ(4)
ಉತ್ತರ: 2 (ನಮ್ಮ ದೇಶ)

61. ಪಂಪನು ಕನ್ನಡ ಸಾಹಿತ್ಯ (1) ಪರಂಪರೆಯ(2)  ನಿರ್ಮಾಪಕ(3) ತಪ್ಪಿಲ್ಲ (4)
ಉತ್ತರ : 4 (ತಪ್ಪಿಲ್ಲ)

62. ಅದ್ಯಾಪಕರು(1)  ವಿದ್ಯಾರ್ಥಿಗಳಿಗೆ(2) ಮಾದರಿಯಾಗಿರಬೇಕು(3) ತಪ್ಪಿಲ್ಲ (4)
ಉತ್ತರ: 1 (ಅದ್ಯಾಪಕರು)

63. ಮೈಸೂರಿನ (1) ಅರಮಣೆ(2)   ಜಗತ್ಪ್ರಸಿದ್ಧವಾದುದು(3)  ತಪ್ಪಿಲ್ಲ (4)
ಉತ್ತರ: 2 (ಅರಮಣೆ)

64. ಗಾಯಕ(1) ಹಾಡನ್ನು ಹೇಳಲು(2) ತೊಡಗಿಸಿದ(3)  ತಪ್ಪಿಲ್ಲ(4)
ಉತ್ತರ: 3 (ತೊಡಗಿಸಿದ)

ಸೂಚನೆ: ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆಸಂಖ್ಯೆ 65-70) ಗೆರೆ ಎಳೆದ ಭಾಗ ದಲ್ಲಿ ಕೊಡಲಾದ ಇಂಗ್ಲಿಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.

65. ಹಾಡಿನ ಕಾಂಪೋಝಿಶನ್ ತುಂಬಾ ಚೆನ್ನಾಗಿದೆ
ಉತ್ತರ: 2) (ಸಂಯೋಜನೆ)

66. ಯಾವುದೇ ಚಲನಚಿತ್ರದ ಯಶಸ್ಸು ಚಿತ್ರದ ಡೈರೆಕ್ಷನ್ ಮೇಲೆ ನಿಂತಿರುತ್ತದೆ
ಉತ್ತರ 4) (ನಿರ್ದೇಶನ)

67. ವ್ಯಾಪಾರಿಗಳು ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಮೇಲೆ ಡಿಸ್ಕೌಂಟ್ನ್ನು ಕೊಡುವುದು ಸಾಮಾನ್ಯ ವಿಷಯ
ಉತ್ತರ 2) (ರಿಯಾಯಿತಿ)

68. ದೇಶದ ಆರ್ಥಿಕತೆಯ ಮೇಲೆ ಭ್ರಷ್ಟಾಚಾರದಿಂದಾಗುವ ಪರಿಣಾಮ ವನ್ನು ಇಮ್ಯಾಜಿನ್ ಮಾಡಿಕೊಳ್ಳಲು ಸಾಧ್ಯವಿಲ್ಲ
ಉತ್ತರ: 2) (ಊಹಿಸು)

69. ಚಾನ್ಸಲರ್ರವರು ಒಂದು ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ರುತ್ತಾರೆ.
ಉತ್ತರ : 3) (ಕುಲಪತಿ)

70. ಪಾಶ್ಚಾತ್ಯೀಕರಣದ ಪ್ರಭಾವದಿಂದ ರಿಲೇಶನ್ನಗಳು ತುಂಬಾ ಯಾಂತ್ರಿಕವಾಗುತ್ತಿವೆ.
ಉತ್ತರ : 4) (ಸಂಬಂಧ)

ಸೂಚನೆ: ಕೆಳಗೆ (ಪ್ರಶ್ನೆಸಂಖ್ಯೆ 71-73) PQRS ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.

71. P. ಆದರೆ ಖಂಡಿತವಾಗಿಯೂ ಅದು ತಪ್ಪು ಅರ್ಥ

Q. ಒಂದು ರಾಜ್ಯಶಾಸ್ತ್ರದ ಪುಸ್ತಕ ಸುಮ್ಮನೆ ಪ್ರಸ್ತಾಪಿಸಿ ಅದರ ಅಧಿಕಾರಗಳು ರಾಜನ ಮೂಲಕ ಬರುತ್ತವೆ ಎಂದು ಹೇಳುತ್ತದೆ.

R.  ಹೆಚ್ಚಿನ ರಾಜ್ಯಗಳಲ್ಲಿ ಅದನ್ನು ಸರಕಾರಿ ಯಂತ್ರದ ಭಾಗವೆಂದು ಪರಿಗಣಿಸಿರಲಿಲ್ಲ.

S.  ಹಳ್ಳಿಯ ಪರಿಷತ್ತು ಖಂಡಿತವಾಗಿ ಭಾರತದ ಎಲ್ಲಾ ಕಡೆಗೆ ಇದ್ದಿತಾದರೂ ಅದರ ಉಲ್ಲೇಖ ಕಡಿಮೆ.
ಉತ್ತರ: 3) SRQP

72. P. ತಪ್ಪು ದಾರಿ ಹಿಡಿದ ಹೆಂಡತಿ ತನ್ನ ಅಧಿಕಾರಗಳನ್ನು ಕಳೆದುಕೊಳ್ಳುತ್ತಿದ್ದಳು

Q.ಧರ್ಮಶಾಸ್ತ್ರದ ದೃಷ್ಠಿಯಿಂದ ಮದುವೆಯಲ್ಲಿ ಒಂದು ಸಲ ಸಪ್ತಪದಿಯನ್ನು ಜೊತೆಯಾಗಿ ತುಳಿದ ಮೇಲೆ ಬೇರ್ಪಡಿಸಲಾಗುತ್ತಿರಲಿಲ್ಲ.

R. ವಿಚ್ಛೇದನ ತೀರ ಅಸಂಭವವಾಗಿತ್ತು.

S.  ನಿಷೇಧವಾಗಿರದಿದ್ದರೂ ಅದನ್ನು ರದ್ದುಪಡಿಸಲಾಗುತ್ತಿರಲಿಲ್ಲ.
ಉತ್ತರ : 3) PRQS

73. P.  ದಶರಥನ ಕೀರ್ತಿಯಂತೆ ಬಿಳಿಯ ಭಸ್ಮರಾಶಿ ಶೋಭಿಸಿತು. ಎಲ್ಲರೂ ಚಿತೆಯನ್ನು ಪ್ರದಕ್ಷಿಣೆ ಮಾಡಿ ಸರಯೂ ನದಿಯ ತೀರಕ್ಕೆ ಬಂದರು.

Q.  ಅಲ್ಲಿ ಜಲ ತರ್ಪಣವನ್ನು ನೀಡಿ ದುಃಖದಿಂದ ಶೂನ್ಯವನ್ನು ಪ್ರವೇಶಿಸುವ ಛಾಯೆಗಳಂತೆ ರಾಜಧಾನಿಯನ್ನು ಹೊಕ್ಕರು.

R.  ಋತ್ವಿಜರು ದೊರೆಯ ದೇಹವನ್ನು ಸೂಡಿನ ಮೇಲಿಟ್ಟರು. ಗುರುವಿನ ಸನ್ನೆಯಂತೆ ಭರತ ಉರಿಯಿಕ್ಕಿದನು.

S.  ರಾಣಿಯರ ರೋಧನ ಮತ್ತು ಋತ್ವಿಜರ ಸಾಮಗಾನದ ನಡುವೆ ಅಗ್ನಿ ಆಕಾಶದವರೆಗೂ ಹಬ್ಬಿತು.
ಉತ್ತರ : 4) SRQP

ಸೂಚನೆಗಳು: ಕೆಳಗಿನ ಪದಗಳಿಗೆ (ಪ್ರಶ್ನೆಸಂಖ್ಯೆ 74-82) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥ ಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರುತಿಸಿ.

74. "ಪರುವ" ಎಂದರೆ
ಉತ್ತರ : 1) (ಉತ್ಸವ)

75. "ಪರುಮೆ" ಎಂದರೆ
ಉತ್ತರ : 2) (ದುಂಬಿ)

76. "ನವನೀತ" ಎಂದರೆ
ಉತ್ತರ : 4) (ಬೆಣ್ಣೆ)

77. "ಜಗಜಗಿಸು"ಎಂದರೆ
ಉತ್ತರ: 2) (ಪ್ರಕಾಶಿಸು)

78. "ಮುನ್ನೀರು" ಎಂದರೆ
ಉತ್ತರ:  3) (ಸಮುದ್ರ)

79. "ಮೂರ್ತ" ಎಂದರೆ
ಉತ್ತರ: 2) (ಆಕಾರವಿರುವ)

80. "ಮೃಷೆ" ಎಂದರೆ
ಉತ್ತರ:  1) (ಸುಳ್ಳು)

81. "ವಜ್ರ
ಧರ" ಎಂದರೆ
ಉತ್ತರ: 4) (ಇಂದ್ರ)

82. "ಶಿಬಿಕೆ"ಎಂದರೆ
ಉತ್ತರ : 2) (ಚಟ್ಟ)

ಸೂಚನೆ: ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆಸಂಖ್ಯೆ 83-90) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರುತಿಸಿ.

83. ಯೋಚನೆ
ಉತ್ತರ: 3) (ನಿರ್ಯೋಚನೆ)

84. ರವ
ಉತ್ತರ : 2) (ನೀರವ)

85. ಗರತಿ
ಉತ್ತರ : 3) (ಗಯ್ಯಾಳಿ)

86. ಊರ್ಜಿತ
ಉತ್ತರ : 2) (ಅನೂರ್ಜಿತ)

87. ಸ್ಥಾಪಕ
ಉತ್ತರ :  3) (ಭಂಜಕ)

88. ಆಕಸ್ಮಿಕ 
ಉತ್ತರ : 4) (ನಿರೀಕ್ಷಿತ)

89. ಸ್ವಾತಂತ್ರ್ಯ
ಉತ್ತರ : 3) (ಪಾರತಂತ್ರ್ಯ)

90. ನೇರ
ಉತ್ತರ : 4) (ವಕ್ರ)

ಸೂಚನೆ: ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆಸಂಖ್ಯೆ 91-100) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.

91. ಅರ್ಧಚಂದ್ರ ಪ್ರಯೋಗ
ಉತ್ತರ : 4) (ಕುತ್ತಿಗೆ ಹಿಡಿದು ನೂಕುವುದು)

92. "ಕಣ್ಣಲ್ಲಿ ಜೀವವಿಟ್ಟುಕೊಂಡು"
ಉತ್ತರ  3) (ತುಂಬಾ ಆಸೆಯಿಟ್ಟುಕೊಂಡು)

93. "ಮೈಯೆಲ್ಲಾ ಕಣ್ಣಾಗು" ಎಂದರೆ
ಉತ್ತರ : 3) (ತುಂಬಾ ಜಾಗರೂಕನಾಗಿರು)

94."ಏಳು ಕೆರೆ ನೀರು ಕುಡಿಸು"
ಉತ್ತರ : 3) (ಬಹಳ ಕಷ್ಟ ಕೊಡು)

95. "ಕೂಪ ಮಂಡೂಕ"
ಉತ್ತರ: 2) (ಸಂಕುಚಿತ ಮನಸ್ಸಿನವ)

96. ಗಳಸ್ಯ-ಕಂಠಸ್ಯ
ಉತ್ತರ : 4) (ಅತಿ ಆತ್ಮೀಯತೆ)

97. ಉಷ: ಕಾಲ ಎಂದರೆ
ಉತ್ತರ : 1) (ಮುಂಜಾನೆಯ ಸಮಯ)

98. ಕಣ್ಮಣಿ
ಉತ್ತರ : 1) (ಅಚ್ಚುಮೆಚ್ಚಿನ)

99. "ಅಜಗಜಾಂತರ" ವೆಂದರೆ
ಉತ್ತರ : 4) (ಆಡು-ಆನೆಯಷ್ಟು ವ್ಯತ್ಯಾಸ)

100. ಉತ್ಸವ ಮೂರ್ತಿ

ಉತ್ತರ : 3) (ಸದಾ ತಿರುಗಾಡುತ್ತಾ ಮೆರೆಯುವ ಸ್ವಭಾವದವ)