Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday, 25 April 2013

ಸಮಯದ ವಲಯಗಳ ಪರಿಚಯ


 AST = Atlantic Standard Time

AHD = Alaska-Hawaii  Daylight

AHS = Alaska – Hawaii Standard

BLT = Baghdad Local Time

BST = British Summer Time

CAT = Central Alaska Time

CCT = China Coast Time

CDT = Central Daylight Time

CET = Central European Time

CST = Central Standard Time

EAD = East Australian Daylight

EDT = Eastern Daylight Time

EAS = East Australian Standard

EET = Eastern European Time

EMT = East Mediterranean

EST = Eastern Standard Time

GMT = Greenwich Mean Time

HST = Hawaii Standard Time

IST = Indian Standard Time

JST = Japanese Standard Time

MDT = Mountain Daylight Time

MET = Middle European Time

MST = Mountain Standard Time

MTS = Moscow Time Standard

MTD = Moscow Time Daylight

NZT = New Zealand Time

PST = Pakistan Standard Time

WAS = West Australian Standard

WAT = West Africa Time
 

ಅತ್ಯಾಚಾರಿಗಳೇ...! ನಶಿಸಿ ಹೋಗಿ.

ದಿಲ್ಲಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ನಡೆದಿರುವ ಘೋರ ಅತ್ಯಾಚಾರ ಪ್ರಕರಣ ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೈಶಾಚಿಕ ಕೃತ್ಯದಿಂದ ವಿಚಲಿತಗೊಂಡ ಜನರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳಬೇಕಾದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ದೂರು ಬಂದ ತಕ್ಷಣ ಪೊಲೀಸರು ಬಾಲಕಿಯ ಪತ್ತೆಗೆ ಪ್ರಯತ್ನಿಸುವುದಿರಲಿ, ಪ್ರಕರಣವನ್ನು ಮುಚ್ಚಿ ಹಾಕಲು ಆ ಮಗುವಿನ ತಂದೆ ತಾಯಿಯರಿಗೆ ಲಂಚ ಕೊಡಲು ಹೊರಟಿದ್ದು ನಾಚಿಕೆಗೇಡು. ನಾಲ್ಕು ತಿಂಗಳ ಹಿಂದೆ ಯುವತಿಯೊಬ್ಬಳ ಮೇಲೆ ಇದೇ ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ  ಹಿನ್ನೆಲೆಯಲ್ಲಿ ಜಾರಿಗೆ ಬಂದ ಹೊಸ ಕಾನೂನು ಮುಂತಾದ ಬೆಳವಣಿಗೆಗಳಿಂದ ಪೊಲೀಸರು ಏನೇನೂ ಬದಲಾಗಿಲ್ಲದಿರುವುದನು ಇದು ಬಹಿರಂಗಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ, ಅದರಲ್ಲಿಯೂ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಪುಟ್ಟ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪುರಷರ ಲೈಂಗಿಕ ವಿಕೃತಿಯ ರಾಕ್ಷಸ ರೂಪ.

       ಭಾರತದಲ್ಲಿ ಪುರುಷರು ಹೆಣ್ಣನ್ನು ಭೋಗವಸ್ತುವಿನಂತೆಯೇ ನೋಡುತ್ತ ಬಂದಿದ್ದಾರೆ. ಪುರುಷರ ಈ ಪೈಶಾಚಿಕ ಮನಸ್ಸು ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದಿದೆ. ಆಧುನಿಕ ಚಿಂತನೆಗಳಿಂದ ಮಹಿಳೆಯರ ಬಗೆಗಿನ ಪುರುಷರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ನಿಜ. ಆದರೆ ಚಿಂತನೆಯ ಜತೆಯೇ ಈ ಶತಮಾನದಲ್ಲಿಯ್ ತಂತ್ರಜ್ಞಾನದ ಮೂಲಕ ಪಾಶ್ಚಾತ್ಯ ದೇಶಗಳಿಂದ ಹರಿದು ಬಂದ ಮುಕ್ತ ಲೈಂಗಿಕತೆ ಪುರುಷರ ಮೇಲೆ ಬೀರಿದ ಕೆಟ್ಟಾ ಪರಿಣಾಮವೇ ಹೆಚ್ಚು. ವಿಕೃತ ಕಾಮ ಮಾರುವ ದುಷ್ಟರಿಂದಾಗಿ ಭಾರತದ ಪುರುಷರು ಲೈಂಗಿಕ ಪಿಶಾಚಿಗಳಾಗಲು ಅವಕಾಶ ಮಾಡಿಕೊಟ್ಟಿದೆ. ಯೋನಿಯಲ್ಲಿ ಬಾಟಲಿ, ಗೋಲಿ ಮತ್ತಿತರ ವಸ್ತುಗಳನ್ನು ತೂರಿಸಿ ತೆಗೆಯುವ ವಿಕೃತಿ ಇಂಟರ್‌ನೆಟ್‍ನಲ್ಲಿ ಸಿಗುವ ನೀಲಿ ಚಿತ್ರಗಳಲ್ಲಿ ಕಂಡುಬರುವಂಥ ಕೃತ್ಯಗಳೇ ಆಗಿವೆ. ಲೈಂಗಿಕ ಚಟುವಟಿಕೆಯನ್ನು ಈ ಚಿತ್ರಗಳು ವಿಜೃಂಭಿಸಿ ಪ್ರಚೋದಿಸುತ್ತವೆ. ತಮ ಪೈಶಾಚಿಕ ಕೃತ್ಯ ಎಸಗಲು ವಿಕೃತ ಪುರುಷರಿಗೆ ಸುಲಭವಾಗಿ ಸಿಗುವವರು ಅಮಾಯಕ ಪುಟ್ಟ ಬಾಲಕಿಯರು. ಹೀಗಾಗಿಯೇ ಮಕ್ಕಳ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತಿರುವುದರಿಂದ ಅಂಥ ನೀಲಿ ಚಿತ್ರಗಳ ತಾಣಗಳನ್ನು ನಿಷೇಧಿಸುವ ಕೆಲಸ ಮೊದಲು ಆಗಬೇಕು. ಅತ್ಯಾಚಾರ ಮಾಡಿದವರಿಗೆ ಅದರಲ್ಲಿಯೂ ನಿರ್ಧಿಷ್ಟವಾಗಿ ಪುಟ್ಟ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರನ್ನು ಗಲ್ಲಿಗೇರಿಸಬೇಕೆಂಬ ಒತ್ತಾಯ ಪ್ರತಿಭಟನಾಕಾರರಿಂದ ಕೇಲಿಬರುತ್ತಿದೆ. ಕಠಿಣವಾದ ಕಾನೂನುಗಳು ಜಾರಿಗೊಳಿಸಬೇಕಾದುದು ಅಗತ್ಯ ಎನ್ನುವದರಲ್ಲಿ ಅನುಮಾನವಿಲ್ಲ. ಆದರೆ ಕಾನೂನಿಗಳಿಂದ ಮಾತ್ರ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸು ವ್ಯವಸ್ಥೆಯಲ್ಲಿ ಪುರುಷರೇ ಹೆಚ್ಚು. ಪೊಲೀಸರಾಗಿರುವ ಆ ಪುರುಷರು ಹೆಣ್ಣನ್ನು ಭೋಗವಸ್ತುವೆಂದು ಭಾವಿಸಿದವರು. ಹೀಗಾಗಿ ಹೆಣ್ಣನ್ನು ಅವರು ರಕ್ಷಿಸುವ ಸಾಧ್ಯತೆ ಇಲ್ಲ. ಮೂಲಭೂತ ಸಮಸ್ಯೆ ಇರುವುದು ಇಲ್ಲಿಯೇ. ಹೆಣ್ಣಿನ ಬಗ್ಗೆ ಪುರುಷರ ಮನೋಭಾವ, ದೃಷ್ಟಿ ಬದಲಾಗದೆ ಪರಿಸ್ಥಿತಿ ಸುಧಾರಿಸದು. ಹೀಗಾಗಿ ರಾಷ್ಟ್ರದಾದ್ಯಂತ ಜನಜಾಗೃತಿ ಆಂದೋಲನ ಇಂದಿನ ಅಗತ್ಯ. ಮನೆ ಮನೆಯಲ್ಲಿ ಈ ಆಂದೋಲನ ನಡೆಯಬೇಕು. ಶಾಲಾ ಶಿಕ್ಷಣ, ಪ್ರಚಾರ ಮಾಧ್ಯಮವೂ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ಸರಕಾರ ಬಳಸಿಕೊಳ್ಳಬೇಕು. ಜನರು ಸಂಘಟಿತರಾಗಿ ಮುಂದೆ ಹೆಜ್ಜೆ ಇಟ್ಟರೆ ಅವರಿಗೆ ಅಸಾಧ್ಯವಾದುದು ಏನೂ ಇಲ್ಲ. ಇಂಥ ಒಂದು ಆಂದೋಲನ ಇಂದೇ ಆರಂಭವಾಗಲಿ.

ಸಂಪಾದಕೀಯ