Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Monday, 3 September 2012
ಗೆಲುವಿನ ಹಿಂದೆ ಏನಿದೆ?
೧೮೩೧ರಲ್ಲಿ ಆತ ವ್ಯಾಪಾರದಲ್ಲಿ ಸೋತ. ೧೮೩೨ರಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಸೋತ. ೧೮೩೩ರಲ್ಲಿ ಮತ್ತೆ ವ್ಯಾಪಾರದಲ್ಲಿ ಸೋತ. ೧೮೩೪ರಲ್ಲಿ ವಿಧಾನಸಭೆಗೆ ಆಯ್ಕೆಯಾದ. ೧೮೩೮ರಲ್ಲಿ ಆತ ವಿಧಾಸಭಾಧ್ಯಕ್ಷನ ಸ್ಥಾನದ ಆಯ್ಕೆಯಲ್ಲಿ ಸೋತ. ೧೮೪೬ರಲ್ಲಿ ಕಾಂಗ್ರೆಸ್‍ಗೆ ಆಯ್ಕೆಯಾದ. ೧೮೫೫ರಲ್ಲಿ ಸೆನೆಟ್‍ಗೆ ಸೋತ. ೧೮೫೬ರಲ್ಲಿ ಉಪಾಧ್ಯಕ್ಷ ಹುದ್ದೆಗೆ ಸೋತ. ೧೮೫೮ರಲ್ಲಿ ಮತ್ತೆ ಸೆನೆಟ್‍ಗೆ ಸೋತ. ೧೮೬೦ರಲ್ಲಿ ಅಮೆರಿಕಾದ ಅಧ್ಯಕ್ಷನಾದ.
ಆತನ ಹೆಸರು? ಇಷ್ಟೆಲ್ಲಾ ಸೋಲುಗಳನ್ನು ಅನುಭವಿಸಿಯೂ ಛಲ ಬಿಡದೆ ಹೋರಾಡಿದ ಆ ಧೀಮಂತ ಮತ್ತಾರೂ ಅಲ್ಲ, ಅಬ್ರಹಾಂ ಲಿಂಕನ್. ಸಿವಿಲ್ ಯುದ್ಧವಾದ ಆ ದುರಂತದ ದಿನಗಳಲ್ಲಿ ಆತನ ಕ್ಯಾಬಿನೆಟ್‍ನ ಅರ್ಧಕ್ಕೂ ಮಿಕ್ಕಿದ ಸದಸ್ಯರು ಇದಕ್ಕೆ ವಿರುದ್ಧವಾಗಿ ನಿಂತರು. ಆಗ ನೀವೇಕೆ ಅವರ ಮೇಲೆ ಸಿಟ್ಟಾಗಲಿಲ್ಲ? ಎಂದು ಲಿಂಕನ್‍ರನ್ನು ಕೇಳಿದ್ದಕ್ಕೆ "ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಶತ್ರುಗಳನ್ನು ಗೆಲ್ಲಲಿಲ್ಲವೇ?" ಎಂದು ಮಾರ್ಮಿಕವಾಗಿ ಉತ್ತರಿಸಿದರು. ಲಿಂಕನ್ ನಿಧನರಾದಾಗ ಅವರೆಲ್ಲರೂ ಇದ್ದು ಹೃದಯ ತುಂಬಿ ಅನಂದಿಸಿದರು. ನಾನಾ ರೀತಿಯಲ್ಲಿ ಅಮೆರಿಕದ ಅಭಿವೃದ್ಧಿಗೆ ಕಾರಣರಾದ ಲಿಂಕನ್ ದಾಸ್ಯತ್ವವನ್ನು ಹೊಡೆದೋಡಿಸಿದ ಖ್ಯಾತಿಗೆ ಪಾತ್ರರಾದರು. ಬಾಲ್ಯದಲ್ಲೇ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು, ನಿರಂತರ ಪ್ರಯತ್ನದಿಂದ ಗೆಲ್ಲುವುದನ್ನು ಲಿಂಕನ್ ಕಲಿತರು. ಜೀವನದ ಎಲ್ಲ ಕಷ್ಟ - ಕಾರ್ಪಣ್ಯಗಳಿಗೂ ನಾವು ಹೇಗೆ ತಿರುಗೇಟು ಹೊಡೆಯುತ್ತೇವೆ ಎಂಬುದು ಮುಖ್ಯ. ಎಡೆಬಿಡದ ಪ್ರಯತ್ನ ಅದ್ಭುತ ಸಾಧನೆಗಳನ್ನು ಮಾಡಿಸುತ್ತದೆ.
ನಮ್ಮ ಮನಸ್ಸಿನ ಸುಪ್ತಾವಸ್ಥೆ ಎಂದೂ ವಾದಿಸುವುದಿಲ್ಲ. ಅದು ಆದೇಶಗಳನ್ನು ತೆಗೆದುಕೊಂಡು ಪಾಲಿಸುತ್ತದೆ. ಹೀಗಾಗಿ ಜಾಗೃತಾವಸ್ಥೆ ನಿರಂತರವಾಗಿ ಒಳ್ಳೆಯ ಆಲೋಚನೆಗಳನ್ನು, ಆದೇಶಗಳನ್ನು ಸುಪ್ತಾವಸ್ಥೆಗೆ ನೀಡಿ, ಉತ್ತಮ ಫಲಿತಾಂಶ ಪಡೆಯಬೇಕು. ಈ ಬಗೆಯ ಅಭ್ಯಾಸವನ್ನು ನಿಯೋಜಿತವಾಗಿ ನಾವು ಪ್ರಯತ್ನಿಸಬೇಕು. ಮನುಷ್ಯ ಹೃದಯದಲ್ಲಿ ಏನು ಯೋಚಿಸುತ್ತಾನೋ ಅದೇ ಆಗುತ್ತಾನೆ. ನಾವು ಯಾವುದನ್ನು ಎಡೆಬಿಡದೆ ಯೋಚಿಸುತ್ತೆವೆಯೋ, ಪ್ರಯತ್ನಿಸುತ್ತೆವೆಯೋ ಅದು ತನ್ನದೆ ದಾರಿ ಮಾಡಿಕೊಂಡು ನಮ್ಮ ಶಕ್ತಿಯನ್ನೆಲ್ಲಾ ಬಳಸಿಕೊಂಡು ಬಯಸಿದ ಫಲಿತಾಂಶ ನೀಡುತ್ತದೆ.
ಅಧ್ಯಯನವೊಂದರ ಪ್ರಕಾರ ಶೇ.೮೦ರಷ್ಟು ವ್ಯಾಪಾರಗಳು ಕುದುರುವುದೇ ಐದನೆಯ ಫೋನ್ ಕಾಲ್ ನಂತರ. ಶೇ. ೪೮ರಷ್ಟು ಸೇಲ್ಸ್‍ಮನ್ ಮೊದಲ ಫೋನ್ ಕಾಲ್ ನಂತರ ಮಾರಾಟವನ್ನು ನಿಲ್ಲಿಸುತ್ತಾರೆ. ಶೇ.೨೫ರಷ್ಟು ಸೇಲ್ಸಮನ್ ಎರಡನೇ ಫೋನ್ ಕಾಲ್ ನಂತರ ಬಿಡುತ್ತಾರೆ. ಶೇ.೧೨ರಷ್ಟು ಸೇಲ್ಸ್‍ಮನ್ ಮೂರನೇ ಫೋನ್ ಕಾಲ್ ನಂತರ ಬಿಡುತ್ತಾರೆ. ಶೇ.೧೦ರಷ್ಟು ಸೇಲ್ಸ್‍ಮನ್ ಮಾತ್ರ ಎಡೆಬಿಡದ ಪ್ರಯತ್ನದಿಂದ ಫೋನ್ ಮಾಡುತ್ತಾ ಶೇ.೮೦ರಷ್ಟು ವ್ಯಾಪಾರಗಳನ್ನು ಗಿಟ್ಟಿಸುತ್ತಾರೆ. ನಿರಂತರ ಪ್ರಯತ್ನಕ್ಕೆ ಬೆಲೆಯಿದೆ. ನಿರಂತರ ಪ್ರಯತ್ನ ಶಕ್ತಿಯನ್ನು ಕೊಡುತ್ತದೆ. ಎರಡು ಅಥವಾ ಮೂರನೇ ಬಾರಿ ಕೇಳಿದೊಡನೆ ಬಹಳಷ್ಟು ಬೇಸರಗೊಳ್ಳುತ್ತಾರೆ ಎಂಬ ಅರಿವು ನಿಮಗಿದೆಯೇ? ನಾವು ಹೇಗೆ ಕಲಿಯುತ್ತೇವೆ? ಅಭ್ಯಾಸದಿಂದ, ಪುನರಾವರ್ತನೆಯಿಂದ, ಜಾಹೀರಾತಿನ ಹಿಂದಿನ ನಿಯಮವೇನು? ಅದೇ ಕತೆಯನ್ನೆ ಮತ್ತೆ ಮತ್ತೆ ಹೇಳುವುದು. ಉದಾ: ರೈಲು ಅಪಘಾತದಲ್ಲಿ ೧೧೪ ಮಂದಿ ಸತ್ತರು ಎಂಬುದನ್ನೇ ಪತ್ರಿಕೆಗಳಲ್ಲಿ ಪದೇ ಪದೇ ಹಾಕುತ್ತಾ, ರೇಡಿಯೋ, ಟಿ.ವಿ.ಗಳಲ್ಲಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಸತ್ತರವರು ೩೦೦ರ ಮೇಲಿರಬೇಕು ಎಂಬ ಗುಮಾನಿ ಹುಟ್ಟುತ್ತದೆ. ಅಂದರೆ ಮನಸ್ಸಿನಲ್ಲಿ ನಿಂತುಬಿಡುತ್ತದೆ. ಪುನರಾವರ್ತನೆಯಿಂದ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಎಡೆಬಿಡದೆ ಪ್ರಯತ್ನಿಸಿ, ಫಲಿತಾಂಶ ಪಡೆಯಬೇಕು.
ಡೇವಿಡ್‍ಸನ್ ತಮ್ಮ ಪುಸ್ತಕ `ಹೌ ಐ ಡಿಸ್ಕವರ್ಡ್ ದಿ ಸೀಕ್ರೆಟ್ ಆಫ್ ಸಕ್ಸೆಸ್ ಇನ್ ದಿ ಬೈಬಲ್'ನಲ್ಲಿ ಹೇಳುತ್ತಾರೆ. "ನಮ್ಮ ಮನಸ್ಸು ಅರ್ಥವಾಗದ್ದರ ಮೇಲೆ ಕೆಲಸ ಮಾಡುವುದಿಲ್ಲ. ಪದೇ ಪದೇ ಒಂದನ್ನೇ ಕೇಳುವುದರಿಂದ, ಮಾಡುವುದರಿಂದ ಮನಸ್ಸಿಗೆ ನಾಟುತ್ತದೆ. ಅಲ್ಲದೆ ಈ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯಗಳು, ವಿರೋಧಗಳು ಎದುರಾದಾಗ ಅದನ್ನು ವಿರೋಧಿಸುವ, ನಡೆಯುತ್ತಿರುವ ಹಾದಿ ಸರಿಯಾಗಿದೆ ಎಂಬ ನಂಬಿಕೆಯನ್ನು ಗಟ್ಟಿಗೊಳಿಸುವ ಶಕ್ತಿ ಪುನರಾವರ್ತನೆ, ನಿರಂತರ ಪ್ರಯತ್ನಕ್ಕಿದೆ." ನಿರಂತರ ಪ್ರಯತ್ನಕ್ಕಿಂತ ಹಿರಿದಾದ, ಪ್ರಭಾವಕಾರಿಯಾದ ಭಾವನೆ, ಶಕ್ತಿ ಯಾವುದು ಇಲ್ಲ. ದಿನದಿಂದ ದಿನಕ್ಕೆ ನಾನು ಗುರಿಯತ್ತ ಹತ್ತಿರವಾಗುತ್ತಿದ್ದೇನೆ ಎಂದು ನೀವು ಎಡೆಬಿಡದೆ ಪ್ರಯತ್ನಿಸಿದರೆ ಗುರಿಯನ್ನು ಸಾಧಿಸಿಯೇ ತೀರುತ್ತಿರಿ.
ನಿರಂತರ ಪ್ರಯತ್ನದಿಂದ ಶಾಂತಿ ಮತ್ತು ತೃಪ್ತಿ ನಮ್ಮಲ್ಲಿ ಮೂಡುತ್ತದೆ. ನಾವು ಯಾವಾಗ ನಮ್ಮ ಸಾಮರ್ಥ್ಯವನ್ನು, ಶಕ್ತಿಯನ್ನು ದೇವರು ನೀಡಿದ ಪ್ರತಿಭೆಗಳನ್ನು ಒಂದು ಒಳ್ಳೆಯ ಗುರಿಯಾಗಿ ನಿರಂತರ ಪ್ರಯತ್ನಿಸುತ್ತೆವೆಯೋ ಆಗ ನಿಜವಾದ ಶಾಂತಿ ದೊರಕುತ್ತದೆ. ನಾವು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಹೆಚ್ಚು ದುಡಿದಷ್ಟು ನಾವು ಸಂತೋಷಪಡುತ್ತೇವೆ. ನಾವು .ದೂರವಾಗುತ್ತವೆ. ಬಹಳಷ್ಟು ಜನರಿಗೆ ಕೆಲಸಕ್ಕೆ ಹೋಗಲು ಇಷ್ಟವಿರುವುದಿಲ್ಲ. ಆದರೆ ಕೆಲಸಕ್ಕೆ ಹೋಗುವ ಬದಲು ಏನು ಮಾಡುತ್ತಾರೆ ಎಂಬುದಕ್ಕೆ ಅವರಲ್ಲಿ ನಿಶ್ಚಿತ ಉತ್ತರವಿಲ್ಲ. ನಮಗೇನು ಬೇಕು ಎಂದು ತಿಳಿಯದಿದ್ದಾಗ, ಅದರಲ್ಲಿ ಸಂತೋಷವಾಗಲೀ, ಶಾಂತಿಯಾಗಲೀ, ಪ್ರಯತ್ನವಾಗಲೀ ಇರುವುದಿಲ್ಲ. ಬದುಕಿಗೊಂದು ಗುರಿ ಬೇಕು ಅದಕ್ಕಾಗಿ ನಮ್ಮೆಲ್ಲಾ ಪ್ರಯತ್ನಗಳೂ, ಪ್ರತಿಭೆಗಳು, ಸಾಮರ್ಥ್ಯ, ಮನೋಶಕ್ತಿ, ವ್ಯಕ್ತಿತ್ವ ಎಲ್ಲವನ್ನೂ ಧಾರೆಯೆರೆದು ನಿರಂತರವಾಗಿ ದುಡಿದರೆ ಬದುಕಿನಲ್ಲಿ ಸಾರ್ಥಕತೆ ಮೂಡುತ್ತದೆ.
by- Dr.K.Jayalaxmi
Subscribe to:
Posts (Atom)