Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday, 15 August 2011

Independence day song


ಇಂದು ೬೪ನೇ ಸ್ವಾತಂತ್ರ್ಯ ದಿನಾಚರಣೆ. ಭಾರತ ಮಾತೆಯು ಬ್ರಿಟಿಷರ ಸಂಕೋಲೆಗಳಿಂದ ಮುಕ್ತಳಾದ ದಿನ. ಅವಳ ಜನ್ಮ ದಿನ. ತನ್ನಿಮಿತ್ಯ ಕನ್ನಡದ ಪ್ರಸಿದ್ಧ ಚಲನಚಿತ್ರ ‘ವೀರಪ್ಪನಾಯಕ’ದಿಂದ ಈ ಹಾಡು ನಿಮಗಾಗಿ.

Wednesday, 10 August 2011

ಹುತಾತ್ಮ ಬಾಲಕ ನಾರಾಯಣ ಮಹಾದೇವ ದೋಣಿ

DUÀ¸ïÖ 9, ¨sÁgÀvÀzÀ EwºÁ¸ÀzÀ°è `Qémï EAr0iÀiÁ ¢£ÀªÁV ¥Àæ¹¢Þ ¥ÀqÉ¢zÉ. vÀ¤ß«ÄvÀå D ¢£ÀUÀ¼À°è dgÀÄVzÀ ºÀÈzÀ0iÀĸÀà²ð WÀl£É0iÉÆAzÀ£ÀÄß E°è ¤ÃqÀ¯ÁVzÉ.

ªÀĺÁvÁä UÁA¢ü0iÀĪÀgÀÄ ©ænµÀjUÉ ¨sÁgÀvÀ ©lÄÖ vÉÆ®V J£ÀÄߪÀ JZÀÑjPÉ0iÀÄ£ÀÄß 9 £Éà DUÀ¸ïÖ 1942gÀAzÀÄ ¤ÃrzÀgÀÄ. ºÁUÁV 15£Éà DUÀ¸ïÖ 1942gÀAzÀÄ ºÀħâ½î0iÀÄ zÀÄUÀðzÀ ¨Éʯï£À°è ¸ÁévÀAvÀæ÷å 0iÉÆÃzsÀgÀ zÉÆqÀØ ¸ÀªÀiÁªÉñÀ ¸ÉÃjvÀÄÛ.

ºÀħâ½î0iÀÄ ¯Áå«ÄAUÀÖ£ï ±Á¯É0iÀÄ°è C¨sÁå¸À ªÀiÁqÀÄwÛzÀÝ ºÀ¢ªÀÄÆgÀÄ ªÀµÀðzÀ ¨Á®PÀ, PÀmÁÖ gÁµÀÖç¥ÉæÃ«Ä £ÁgÁ0iÀÄt ªÀĺÁzÉêÀ zÉÆÃtÂ0iÀÄÄ vÁ£ÀÆ ZÀ¼ÀĪÀ½0iÀÄ°è ¨sÁUÀªÀ»¸À¨ÉÃPÉAzÀÄ ¤zsÀðj¹zÀ. CAzÀÄ DUÀ¸ïÖ 15gÀAzÀÄ ¨É½UÉÎ ¨ÉÃUÀ£É JzÀÝ £ÁgÁ0iÀÄt£ÀÄ ¸ÁߣÀ PÀªÀiÁð¢UÀ¼À£ÀÄß ªÀÄÄV¹ dĨÁâ zsÀj¹zÀ. ªÀÄ£É0iÀÄ°è ªÀÄƯÉ0iÀÄ°è ©¢ÝzÀÝ ©¢j£À PÉÆïÉÆAzÀ£ÀÄß vÉUÉzÀÄPÉÆAqÀÄ CzÀPÉÌ ¨sÁgÀvÀzÀ zsÀédªÀ£ÀÄß ¹Q̹zÀ. FvÀ vÀ0iÀiÁgÁUÀÄwÛzÀÄÝzÀ£ÀÄß PÀAqÀ vÁ¬Ä PÉýzÀ¼ÀÄ: J°èUÉ ºÉÆÃUÀÄwÛgÀÄªÉ ªÀÄUÀ£ÉÃ?

CªÀiÁä, £Á£ÀÄ ¸ÁévÀAvÀæ÷å ZÀ¼ÀĪÀ½0iÀÄ°è ¸ÉÃgÀ¨ÉÃPÀÄ, zÀÄUÀðzÀ ¨ÉÊ°£À°è EAzÀÄ ©ænµÀgÀ «gÀÄzÀÞ ªÉÄgÀªÀtÂUÉ EzÉ. CzÀPÉÌ ºÉÆÃUÀÄwÛzÉÝãÉ.

DzÀgÉ ªÀÄUÀ£ÉÃ, ¤Ã¤£ÀÄß aPÀ̪À£ÀÄ, CzɯÁè zÉÆqÀتÀgÀÄ ªÀiÁqÀĪÀ PÉ®¸ÀªÀ¥Áà.

MAzÀÄ PÀët CªÀÄä£À PÀtÚ¯Éèà PÀtÂÚlÄÖ £ÉÆÃrzÀ ºÀÄqÀÄUÀ ºÉýzÀ: CªÀiÁä, ¨sÁgÀvÀ ªÀiÁvÉ0iÀÄÄ vÀ£Àß ªÀÄPÀ̼À°è zÉÆqÀتÀgÀÄ ¸ÀtÚªÀgÀÄ JA§ ¨ÉÃzsÀ ¨sÁªÀ ªÀiÁqÀĪÀ¢®è. £ÁªÉ®è CªÀ¼À ªÀÄPÀ̼ÀÄ. ¨sÁgÀvÀ ªÀiÁvÉ0iÀÄ ¸ÉêÉ0iÉÄà £ÀªÀÄUÉ ªÀÄÄRå.

vÁ¬Ä0iÀÄÄ vÀ£Àß ªÀÄUÀ£À C¥ÀæwªÀÄ, ¥Àæ§ÄzÀÞ ªÀiÁvÀÄUÀ¼À£ÀÄß PÉý ªÀÄÆPÀ«¹ävÀ¼ÁzÀ¼ÀÄ. ªÀÄgÀÄPÀëtªÉà ªÀÄUÀ£À£ÀÄß ¨Áa vÀ©âPÉÆAqÀÄ PÀtÂÚÃgÀÄ ¸ÀÄj¸ÀÄvÁÛ, ºÉÆÃUÀÄ ªÀÄUÀ£ÉÃ, ¤£ÀßAxÀ ªÀÄUÀ£À£ÀÄß ºÉvÀÛ £À£ÀVAvÀ ¨sÁgÀvÀ ªÀiÁvÉ0iÉÄà ºÉZÀÄÑ ¥ÀÅtåªÀAvÀ¼ÀÄ. ºÉÆÃUÀÄ ªÀÄUÀ£ÉÃ. ZÀ¼ÀĪÀ½0iÀÄ°è d0iÀıÁ°0iÀiÁUÀÄ. JAzÀÄ ªÀÄUÀ£À£ÀÄß ©Ã¼ÉÆÌlÖ¼ÀÄ.

EvÀÛ ©ænµÀgÀ «gÀÄzÀÞ WÉÆõÀuÉUÀ¼À£ÀÄß PÀÆUÀÄvÁÛ §¸ÀªÀ£À ºÀļÀÄ«£ÀAvÉ ºÉÆgÀnzÀÝ ªÉÄgÀªÀtÂUÉ0iÀÄ°è £ÁgÁ0iÀÄt£ÀÄ ºÉÆÃV ¸ÉÃjPÉÆAqÀÄ ©ænµÀgÀ «gÀÄzÀÞ ¨sÁgÀvÀ ©lÄÖ vÉÆ®V, ©ænµÀgÉà vÉÆ®V... JAzÀÄ WÉÆõÀuÉUÀ¼À£ÀÄß PÀÆUÀvÉÆqÀVzÀ. EªÀ£À zÉñÀ¨sÀQÛ, GvÁìºÀ PÀAqÀ »j0iÀÄ ZÀ¼ÀĪÀ½UÁgÀgÀÄ EªÀ£À£ÀÄß vÀªÀÄä ªÉÄgÀªÀtÂUÉ0iÀÄ ªÀÄÄAzÉ ¤°è¹zÀgÀÄ. ªÀÄ£É0iÀÄ°è ªÀÄÄzÀÄj PÀĽwzÀÝ C£ÉÃPÀ ¨sÁgÀwÃ0iÀÄgÀÄ F ºÀÄqÀÄUÀ£À gÁµÀÖç¥ÉæêÀÄ PÀAqÀÄ vÀªÀÄä ºÉÃrvÀ£ÀPÉÌ £Áa ªÀģɬÄAzÀ JzÀÄÝ ºÉÆgÀ§AzÀÄ ªÉÄgÀªÀtÂUÉ0iÀÄ°è PÀÆrPÉÆAqÀgÀÄ.

UÁA¢ü mÉƦàUÉ zsÀj¹ WÉÆõÀuÉ PÀÆUÀÄwÛzÀÝ £ÁgÁ0iÀÄt£À ªÉÄgÀªÀtÂUÉ UÀÄA¥ÀÅ ¥Éǰøï PÀbÉÃj §½ §gÀÄwÛvÀÄÛ. F ªÉÄgÀªÀtÂUÉ PÀAzÀÄ ¥Éǰøï C¢üPÁjUÀ¼À gÀPÀÛ PÀÄ¢¬ÄvÀÄ. EzÀÝQÌzÀÝAvÉ CqÁØ¢rØ0iÀiÁV §AzÀÆQ¤AzÀ d£ÀgÉqÉUÉ UÀÄAqÀÄ ºÁj¸À¯ÁgÀA©ü¹zÀgÀÄ. CAfPɬÄAzï d£À CwÛvÀÛ NqÁqÀ¯ÁgÀA©ü¹zÀgÀÄ. DzÀgÉ ¨Á®PÀ £ÁgÁ0iÀÄt WÉÆõÀuÉà PÀÆUÀÄvÀÛ¯Éà EzÀÝ. ©ænµÀgÉà ¨sÁgÀvÀ ©lÄÖ vÉÆ®V, ¨sÁgÀvÀ ©lÄÖ vÉÆ®.....WÉÆõÀuÉ E£ÀÆß ¥ÀÇwð0iÀiÁVgÀ°®è, CµÀÖgÀ¯Éèà UÀÄAqÉÆAzÀÄ £ÁgÁ0iÀÄt£À JzÉ0iÀÄ£ÀÄß ¹Ã½vÀÄÛ. gÀPÀÛzÀ ªÀÄqÀÄ«£À°è DvÀ£À zÉúÀ ©¢ÝvÀÄ. vÀPÀët CªÀ£À£ÀÄß JwÛ D¸ÀàvÉæUÉ ¸ÁV¸À¯Á¬ÄvÀÄ. D¸ÀàvÉæ0iÀÄ°è fêÀ£ÀägÀtzÀ ªÀÄzsÉå ºÉÆÃgÁqÀÄwÛzÀÝ DvÀ£À §½ ¥Éǰøï C¢üPÁjUÀ¼ÀÄ, »j0iÀÄ ¸ÁévÀAvÀæ÷å 0iÉÆÃzsÀgÀÄ, ªÉÊzÀågÀÄ §AzÀgÀÄ. DvÀ PÉýzÀ qÁPÀÖgÉÃ, £Á£ÀAvÀÆ ¸Á0iÉÆÃzÀÄ ¸Á¬ÄÛä, CzÀPÉÌ £À£ÀUÉ aAvɬĮè. DzÀgÉ UÀÄAqÀÄ JzÉUÉ §rÃvÉÆÃ, E¯Áè ¨É¤ßUÉà §rÃvÉÆÃ? JAzÀÄ PÉýÃzÀ. CzÀPÉÌ qÁPÀÖgÀÄ JAzÀgÀÄ ºÁUÉÃPÉ PÉýÛÃ0iÀiÁ? K¤¯Áè, UÀÄAqÀÄ ¨É¤ßUÉ §r¢vÀÄÛ CAzÀgÉ £Á ºÉÃr0iÀiÁVÛzÉÝ...

qÁPÀÖgï C©üªÀiÁ£À¢AzÀ PÉ0iÉÄwÛ £ÀªÀĸÀÌj¹zÀgÀÄ. ¥Éǰøï C¢üPÁj PÉýzÀgÀÄ ¤£Àß PÉÆ£É0iÀÄ D¸É K£ÀÄ? CzÀPÉÌ D ¨Á®PÀ ºÉýzÀ - ¸ÀégÁdå... ªÀÄgÀÄPÀëtªÉà DvÀ PÀvÀÄÛ ZÉ°èzÀ. G¹gÀÄ ¤AvÀĺÉÆÃVvÀÄÛ. ¨sÁgÀvÀ ªÀiÁvÉ0iÀÄ ºÉªÉÄä0iÀÄ ¥ÀÅvÀæ DPÉ0iÀÄ ZÀgÀtzÀ°è °Ã£ÀªÁV ºÉÆÃVzÀÝ.

¦æ0iÀÄ ¸ÉßûvÀgÉÃ, D £ÁgÁ0iÀÄt£ÀÄ zÉñÀzÉÆæû0iÀiÁVgÀ°®è, PÀ¼ÀîvÀ£À ªÀiÁrgÀ°®è, zÀgÉÆÃqÉ ªÀiÁrgÀ°®è. DzÀgÀÆ DvÀ¤UÉ UÀÄAr£ÉÃn£À ²PÉë PÉÆqÀ¯Á¬ÄvÀÄ. ºÉÃVzÉ £ÉÆÃr ©ænµÀgÀ ¤Ãw?

Thursday, 4 August 2011

ರಾಮ್ ಸುರೇಶ್ ಕರುತರ



ಈ ಕಥೆಯ ಹೀರೋ-ರಾಮ್ ನರೇಶ್ ಕರುತರ. ಈತ, ಆಂಧ್ರಪ್ರದೇಶದ ಗೋದಾವರಿ ನದೀ ತೀರದಲ್ಲಿರುವ ತೀಪಾರು ಎಂಬ ಹಳ್ಳಿಯವನು. ಈ ರಾಮ್‌ನರೇಶನ ಅಕ್ಕನ ಹೆಸರು ಸಿರೀಶಾ. ಇವನ ತಂದೆ ಒಬ್ಬ ಲಾರಿ ಡ್ರೈವರ್. ತಾಯಿ ಹೌಸ್‌ವೈಫ್.

ರಾಮ್‌ನರೇಶನ ತಂದೆ-ತಾಯಿಗೆ ಅಕ್ಷರದ ಗಂಧವೇ ಇಲ್ಲ. ಈ ದಂಪತಿಗೆ ಅದೇ ಒಂದು ದೊಡ್ಡ ಕೊರಗಾಗಿತ್ತು. ಅದನ್ನು ಮತ್ತೆ ಮತ್ತೆ ಮಕ್ಕಳೆದುರು ಹೇಳಿಕೊಳ್ಳುತ್ತಾ- ‘ನಾವಂತೂ ಓದಲಿಲ್ಲ. ನೀವು ಚೆನ್ನಾಗಿ ಓದಬೇಕು” ಎನ್ನುತ್ತಿದ್ದರು. ಅಷ್ಟೇ ಅಲ್ಲ, ಎಂಥ ಸಂಕಟದ ಸಂದರ್ಭದಲ್ಲೂ ಎದೆಗುಂದಬಾರದು ಎಂಬ ಕಿವಿಮಾತು ಹೇಳಿಕೊಟ್ಟಿದ್ದರು. ರಾಮ್‌ನರೇಶ್‌ನ ತಂದೆಯಂತೂ ಯಾವುದೇ ಸಮಸ್ಯೆ ಎದುರಾದರೂ ‘ದೇವ್ರಿದಾನೆ ಬಿಡಪ್ಪಾ, ಎಲ್ಲ ಸರಿ ಹೋಗುತ್ತೆ” ಎಂದು ಬಿಡುತ್ತಿದ್ದ. ತಮಾಷೆಯೆಂದರೆ, ಬಾಲ್ಯದಲ್ಲಿ ಅರ್ಥವಾಗದ ಗಣಿತದ ಲೆಕ್ಕಗಳೊಂದಿಗೆ ಮಗ ಎದುರು ನಿಂತಾಗ ಕೂಡ ಈ ಲಾರಿ ಡ್ರೈವರ್ರು ‘ದೇವ್ರಿದಾನೆ ಬಿಡಪ್ಪಾ, ಎಲ್ಲಾ ಸಮಸ್ಯೆ ಮುಗಿದು ಹೋಗುತ್ತೆ” ಎಂದು ಉತ್ತರ ಕೊಡುತ್ತಿದ್ದ!

ರಾಮ್‌ನರೇಶ್‌ನ ಬಾಲ್ಯ ಕೂಡ ಉಳಿದ ಎಲ್ಲ ಮಕ್ಕಳ ಥರಾನೇ ಇತ್ತು. ಆತ ಓದಿನಲ್ಲಿ ಮುಂದಿದ್ದ ನಿಜ. ಆದರೆ ಅದಕ್ಕಿಂತ ಹೆಚ್ಚಿನ ತುಂಟತನವನ್ನು ಮೈಗೂಡಿಸಿಕೊಂಡಿದ್ದ. ಬೇರೆಯವರ ತೋಪಿಗೆ ನುಗ್ಗಿ ಮಾವಿನ ಹಣ್ಣು ಕೀಳುವುದು, ಮಾಲೀಕರು ಬರುವುದು ಕಂಡ ಕೂಡಲೇ ಛಂಗನೆ ಜಿಗಿದು ಓಡುವುದರಲ್ಲಿ ಅವನಿಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಆದರೆ, ಹುಡುಗ ತುಂಬ ಬುದ್ಧಿವಂತ ಅನ್ನಿಸಿಕೊಂಡಿದ್ದನಲ್ಲ? ಆ ಕಾರಣಕ್ಕೆ ಈ ತುಂಟತನವನ್ನು ಎಲ್ಲರೂ ಮಾಫಿ ಮಾಡಿದ್ದರು.

ಅದು 1993ರ ಜನವರಿ ತಿಂಗಳು. ಸಂಕ್ರಾಂತಿ ನೆಪದಲ್ಲಿ ಶಾಲೆಗೆ ಐದು ದಿನಗಳ ರಜೆ ಇತ್ತು. ಈ ಅವಧಿಯಲ್ಲಿ ತಾಯಿ ಮತ್ತು ಅಕ್ಕನೊಂದಿಗೆ ಅಜ್ಜಿ ಊರಿಗೆ ಹೋದ ರಾಮ್ ನರೇಶ್ ರಜೆ ಮುಗಿಯಲು ಒಂದು ದಿನ ಬಾಕಿ ಅನ್ನುವಾಗಲೇ ತಮ್ಮೂರಿಗೆ ಹೊರಟು ನಿಂತ. ಇವರು ಬಸ್ ನಿಲ್ದಾಣಕ್ಕೆ ಬಂದು ಐದು ನಿಮಿಷ ಕಳೆದಿರಲಿಲ್ಲ. ಅಷ್ಟರಲ್ಲಿ, ಅದೇ ಮಾರ್ಗವಾಗಿ ರಾಮ್‌ನರೇಶನ ತಂದೆಯ ಸ್ನೇಹಿತ ಲಾರಿ ಓಡಿಸಿಕೊಂಡು ಬಂದ. ಇವರನ್ನು ಕಂಡವನೇ- ‘ಊರಿಗೆ ಬಿಡ್ತೀನಿ. ಹತ್ಕೊಳ್ಳಿ” ಅಂದ. ವಯೋಸಹಜ ಕುತೂಹಲ ನೋಡಿ, ಈ ರಾಮ್‌ನರೇಶ್-ಡ್ರೈವರ್‌ನ ಪಕ್ಕದಲ್ಲೇ ಕೂತು ಏನೇನೋ ಮಾತಾಡುತ್ತಲೇ ಇದ್ದ.

ಹೀಗೆ ಸಾಗುತ್ತಿದ್ದಾಗಲೇ ಅನಾಹುತ ನಡೆದೇ ಹೋಯಿತು. ಹೇಳಿ ಕೇಳಿ ಅದು ಕಬ್ಬಿಣದ ಉತ್ಪನ್ನಗಳನ್ನೂ ಸಾಗಿಸುತ್ತಿದ್ದ ಹಳೆಯ ಲಾರಿ. ಅದರ ನಟ್ಟು-ಬೋಲ್ಟುಗಳೆಲ್ಲಾ ಸಡಿಲಾಗಿದ್ದವು. ಇದೇನೂ ಗೊತ್ತಿಲ್ಲದ ರಾಮ್‌ನರೇಶ್, ಡ್ರೈವರ್‌ನ ಬಲಭಾಗದಲ್ಲಿದ್ದ ಒಂದಿಷ್ಟು ಜಾಗದಲ್ಲೇ ಕುಕ್ಕರುಗಾಲಿನಲ್ಲಿ ಕುಳಿತಿದ್ದ. ವೇಗವಾಗಿ ಹೋಗುತ್ತಿದ್ದ ಲಾರಿ ಅದೊಮ್ಮೆ ದಿಢೀರನೆ ಜೆರ್ಕ್ ಪಡೆದುಕೊಂಡಾಗ ಡ್ರೈವರ್ ಕ್ಯಾಬಿನ್‌ನ ಬಾಗಿಲು ಇದ್ದಕ್ಕಿದ್ದಂತೆಯೇ ತೆರೆದುಕೊಂಡಿತು. ಈ ರಾಮ್‌ನರೇಶ್ ರಸ್ತೆಗೆ ಬಿದ್ದ. ಹಿಂದೆಯೇ ಲಾರಿಯಲ್ಲಿದ್ದ ಒಂದೆರಡು ಕಬ್ಬಿಣದ ತುಂಡುಗಳೂ ಅವನ ಕಾಲಿನ ಮೇಲೆ ಬಿದ್ದವು. ಅಪಘಾತ ನಡೆದ ಜಾಗದಲ್ಲೇ ಒಂದೇ ನರ್ಸಿಂಗ್ ಹೋಂ ಇತ್ತು. ಲಾರಿಯಲ್ಲಿದ್ದ ಜನರೆಲ್ಲ ಈ ಹುಡುನನ್ನು ಅಲ್ಲಿಗೆ ಕೊಂಡೊಯ್ದರೆ, ಅಲ್ಲಿನ ವೈದ್ಯರು- ‘ಇದು ಆಕ್ಸಿಡೆಂಟ್ ಕೇಸು ತಾನೆ? ಸೀದಾ ಸರಕಾರಿ ಆಸ್ಪತ್ರೆಗೆ ತಗೊಂಡು ಹೋಗಿ. ಯಾಕಂದ್ರೆ ಇದೆಲ್ಲಾ ಕೇಸ್ ಆಗುತ್ತೆ. ಆಮೇಲೆ ಯಾವನಿಗ್ರೀ ಬೇಕು ತಲೆನೋವು?” ಅಂದವರೇ, ಕನಿಷ್ಠ ಪ್ರಥಮ ಚಿಕಿತ್ಸೆ ಕೊಡುವುದಕ್ಕೂ ನಿರಾಕರಿಸಿದರು.

ಈ ವೇಳೆಗೆ ರಾಮ್‌ನರೇಶ್‌ನ ತಂದೆಯೂ ಅಲ್ಲಿಗೆ ಬಂದ. ಮಗನ ಸ್ಥಿತಿ ಕಂಡು ಅವನಿಗೆ ಗಂಟಲುಬ್ಬಿ ಬಂತು ನಿಜ. ಆದರೆ ಎಲ್ಲರ ಮುಂದೆ ತಾನೇ ಅತ್ತರೆ ಇದ್ದದ್ದೂ ಆತಂಕ ಶುರುವಾದೀತು ಅಂದುಕೊಂಡು ‘ದೇವ್ರಿದಾನೆ ಬಿಡಪ್ಪಾ…” ಎಂದು ಮೌನವಾದ. ನಂತರ ರಾಮ್‌ನರೇಶನ ಊರಿಗೆ ಹತ್ತಿರವೇ ಇದ್ದ ಸರಕಾರಿ ಆಸ್ಪತ್ರೆಯ ವೈದ್ಯರು ಕಾಲಿಗೆ ಬ್ಯಾಂಡೇಜ್ ಸುತ್ತಿ ‘ಏನೂ ಆಗಿಲ್ಲ ಹೋಗ್ರಿ. ಒಂದು ವಾರದೊಳಗೆ ಎಲ್ಲಾ ಸರಿಯಾಗುತ್ತೆ” ಎಂದು ಉಡಾಫೆಯ ಮಾತಾಡಿದರು.

ಹಾಂ, ಹೂಂ ಅನ್ನುವುದರೊಳಗೆ ವಾರ ಕಳೆದೇ ಹೋಯಿತು. ಉಹುಂ, ಗಾಯ ವಾಸಿಯಾಗಲಿಲ್ಲ. ಮಾಗಲಿಲ್ಲ. ಬದಲಿಗೆ ಕೀವು ತುಂಬಿಕೊಂಡಿತು. ಮನೆ ತುಂಬಾ ದುರ್ವಾಸನೆ. ಇದರಿಂದ ಗಾಬರಿಬಿದ್ದ ರಾಮ್‌ನರೇಶನ ತಂದೆ-ತಾಯಿ, ಮಗನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ತುಂಬ ತಡವಾಗಿತ್ತು. ಅವನನ್ನು ಪರೀಕ್ಷಿಸಿದ ವೈದ್ಯರು- ‘ಈಗಾಗಲೇ ಗ್ಯಾಂಗ್ರಿನ್ ತೊಡೆಯತನಕ ವ್ಯಾಪಿಸಿದೆ. ಇಷ್ಟು ದಿನ ಕತ್ತೆ ಮೇಯಿಸ್ತಾ ಇದ್ರೇನ್ರೀ” ಎಂದು ರೇಗಿದರು. ನಂತರ-ನಿಮ್ಮ ಮಗನ ಜೀವ ಉಳಿಯಬೇಕು ಅನ್ನೋದಾದ್ರೆ ‘ತೊಡೆಯ ತನಕ ಎರಡೂ ಕಾಲುಗಳನ್ನು ಕತ್ತರಿಸಬೇಕು, ಅದು ಬಿಟ್ರೆ ಬೇರೆ ದಾರಿಯೇ ಇಲ್ಲ” ಅಂದರು. ಈ ಸುದ್ದಿ ಕೇಳಿದ ನಂತರ ರಾಮ್‌ನರೇಶ್‌ನ ಅಪ್ಪ ಗೋಡೆಗೆ ಹಣೆಚಚ್ಚಿಕೊಂಡು ಗೋಳಾಡಿದನಂತೆ. ನಂತರ ಮನಸ್ಸು ಗಟ್ಟಿ ಮಾಡಿಕೊಂಡು ‘ನನ್ನ ಮಗನ ಜೀವ ಉಳಿಸಿ ಡಾಕ್ಟ್ರೇ, ಕಾಲು ಇಲ್ಲದಿದ್ರೆ ಪರವಾಗಿಲ್ಲ. ಅವನನ್ನ ನಾನು ನೋಡ್ಕೋತೀನಿ” ಅಂದನಂತೆ.

ಮುಂದೆ, ರಾಮ್‌ನರೇಶ್‌ಗೆ ಪ್ರಜ್ಞೆ ಬಂದದ್ದು ನಾಲ್ಕು ದಿನಗಳ ನಂತರ. ಕಣ್ಣು ಬಿಟ್ಟರೆ ವಿಪರೀತ ನೋವು. ಅರೆ, ಏನಾಯ್ತು ನನಗೆ ಅಂದುಕೊಂಡು ಸುಮ್ಮನೇ ಕಾಲು ಜಾಡಿಸಲು ನೋಡಿದರೆ, ಅರೆ-ಕಾಲುಗಳೇ ಇಲ್ಲ! ತಕ್ಷಣವೇ ಶಾಕ್‌ಗೆ ಒಳಗಾದ ರಾಮ್‌ನರೇಶ್ ‘ಅಪ್ಪಾ, ಅಮ್ಮಾ, ನನ್ನ ಕಾಲು ಎಲ್ಲಿ? ಏನಾಗಿದೆ ನಂಗೆ?” ಅಂದನಂತೆ. ತಕ್ಷಣವೇ ಅವನ ತಾಯಿ ಗೋಳೋ ಎನ್ನಲು ಶುರು ಮಾಡಿದರೆ ರಾಮ್‌ನರೇಶ್‌ನ ತಂದೆ ಮಾತ್ರ ‘ಜೀವನದ ಜತೆ ಇವತ್ತಿಂದ ನೀನು ಕ್ಷಣ ಕ್ಷಣವೂ ಕುಸ್ತಿ ಮಾಡಬೇಕು ಮಗನೇ. ದೇವ್ರಿದಾನೆ ಬಿಡಪ್ಪಾ, ಹೆದರಬೇಡ” ಎಂದನಂತೆ.

***
ಹೀಗೆ, ಅಂಗವೈಕಲ್ಯದೊಂದಿಗೆ ಹೋರಾಟ ಶುರು ಮಾಡಿದಾಗ ರಾಮ್‌ನರೇಶ್ ಇನ್ನೂ ಎಂಟನೇ ತರಗತಿಯ ವಿದ್ಯಾರ್ಥಿ. ಅವನನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿಕೊಂಡು ಸ್ಕೂಲಿಗೆ ಕರೆದೊಯ್ಯುವುದೇ ಕಷ್ಟವಾಗುತ್ತದೆ ಅನ್ನಿಸಿದಾಗ, ಸ್ಕೂಲ್‌ನಿಂದ ನಾಲ್ಕೇ ಹೆಜ್ಜೆ ದೂರದಲ್ಲಿ ಬಾಡಿಗೆಗೆ ಮನೆ ಹಿಡಿದರಂತೆ ರಾಮ್ ನರೇಶ್‌ನ ತಂದೆ. ನಂತರ, ಶಾಲೆಯಲ್ಲಿ ಅಕಸ್ಮಾತ್ ದಿಢೀರನೆ ಶೌಚಾಲಯಕ್ಕೆ ಹೋಗಬೇಕು ಅನ್ನಿಸಿದರೆ; ಹಾಗೆ ಒಂದೇ ಕಡೆ ಕೂತು ಬೇಸರವಾಗಿ ಸುಮ್ಮನೇ ಒಮ್ಮೆ ಮಿಸುಕಾಡಿ ಮೈ ಹಗುರ ಮಾಡಿಕೊಳ್ಳಬೇಕೆಂದರೆ ಯಾರಾದರೂ ಮಗನ ಜತೆಗಿರಬೇಕು ಅನ್ನಿಸಿದಾಗ- ರಾಮ್‌ನರೇಶನಿಗಿಂತ ಎರಡು ತರಗತಿ ಮುಂದಿದ್ದ ತಮ್ಮ ಮಗಳನ್ನೇ ಕರೆದು- ನಿನ್ನ ತಮ್ಮನ ಜೀವ ಉಳಿಸಲಿಕ್ಕಾಗಿ, ಅವನ ತರಗತಿಯಲ್ಲೇ ಓದು ಮಗಳೇ. ಅಂದರೆ, ಇವತ್ತಿಂದ ಮತ್ತೆ ನೀನು ಎಂಟನೇ ತರಗತೀಲಿ ಓದಬೇಕು ಅಂದರಂತೆ. ಆಕೆ ಅದೆಂಥ ತಾಯ್ತನದ ಹೆಣ್ಣು ಮಗಳು ಅಂದರೆ- ಎರಡನೇ ಮಾತೇ ಇಲ್ಲದೆ, ಅಪ್ಪನ ಮಾತಿಗೆ ಒಪ್ಪಿಕೊಂಡಳು. ತಮ್ಮನನ್ನು ಅಮ್ಮನಿಗಿಂತ ಹೆಚ್ಚಾಗಿ, ದೇವರಿಗಿಂತ ಮಿಗಿಲಾಗಿ ನೋಡಿಕೊಂಡಳು. ಮನೆ ಮಂದಿ ತನಗಾಗಿ ಪಡುತ್ತಿರುವ ಕಷ್ಟವನ್ನು ರಾಮ್‌ನರೇಶ್ ಕೂಡ ಅರ್ಥಮಾಡಿಕೊಂಡ. ‘ನನಗೆ ಕಾಲಿಲ್ಲ” ಎಂದು ಆತ ಕನಸಲ್ಲೂ ಯೋಚಿಸಲಿಲ್ಲ. ಬದಲಿಗೆ, ಅಪ್ಪ ಪದೇ ಪದೆ ಹೇಳುತ್ತಿದ್ದ- ‘ದೇವ್ರಿದಾನೆ ಬಿಡಪ್ಪಾ” ಎಂಬ ಮಾತನ್ನೇ ಮೇಲಿಂದ ಮೇಲೆ ಹೇಳಿಕೊಂಡು ಶ್ರದ್ಧೆಯಿಂದ ಓದಿದ.

ಪರಿಣಾಮ, ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೇ ಮೊದಲಿಗನಾಗಿ ಪಾಸಾದ. ಕಾಲುಗಳಿಲ್ಲದ ಈ ಹುಡುಗನ ಸಾಧನೆ ಹಲವರ ಕಣ್ತೆರೆಸಿತು. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆ ವೇಳೆಗೆ ತ್ರಿಚಕ್ರವಾಹನದಲ್ಲಿ ಅಡ್ಡಾಡುವ ಮಟ್ಟಿಗೆ ರಾಮ್ ನರೇಶ್ ಸುಧಾರಿಸಿಕೊಂಡಿದ್ದ. ಗಣಿತದ ಸಮಸ್ಯೆ ಬಿಡಿಸುವಲ್ಲಿ ಚಾಣಾಕ್ಷ ಅನ್ನಿಸಿಕೊಂಡಿದ್ದ. ಈ ಹುಡುಗನ ಪ್ರತಿಭೆ ಕಂಡ ಭಾಸ್ಕರಲಾಲ್ ಎಂಬ ಅಧ್ಯಾಪಕರು, ಇವನಿಗೆ ಸ್ಕಾಲರ್‌ಶಿಪ್‌ನ ವ್ಯವಸ್ಥೆ ಮಾಡಿದರು. ಮುಂದೆ, ಗೌತಮ್ ಜೂನಿಯರ್ ಕಾಲೇಜು ಎಂಬಲ್ಲಿ ಒಂದಿಷ್ಟು ಟಿಪ್ಸ್ ಪಡೆದುಕೊಂಡ ರಾಮ್‌ನರೇಶ್, ಚೆನ್ನೈನ ಪ್ರತಿಷ್ಠಿತ ಐಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಲು ಬಂದ.

ಒಂದು ಸಂತೋಷವೆಂದರೆ- ಬದುಕಿನುದ್ದಕ್ಕೂ ಯಾರೆಂದರೆ ಯಾರೂ ಇವನ್ನು ಕೀಳರಿಮೆಯಿಂದ ನೋಡಲಿಲ್ಲ ಅಥವಾ ಹಾಗೆ ನೋಡಲು ಇವನು ಯಾರಿಗೂ ಅವಕಾಶವನ್ನೇ ಕೊಡಲಿಲ್ಲ. ಚೆನ್ನೈನ ಐಐಟಿಯಲ್ಲಂತೂ ಈ ಹುಡುಗನನ್ನು ಇಡೀ ಕಾಲೇಜಿನ ಸಿಬ್ಬಂದಿ ‘ಮಗುವಿನ ಥರಾ” ನೋಡಿಕೊಂಡಿತು. ಕಾಲೇಜಿಗೆ ತ್ರಿಚಕ್ರ ವಾಹನದಲ್ಲಿ ಬಂದು, ನಂತರ ಗೆಳೆಯರ ನೆರವಿನಿಂದ, ವ್ಹೀಲ್‌ಚೇರ್‌ನಲ್ಲಿ ಮಹಡಿಯಲ್ಲಿದ್ದ ತರಗತಿಗಳಿಗೆ ಹೋಗಬೇಕಿತ್ತು. ಇದನ್ನು ಗಮನಿಸಿದ ಕಾಲೇಜಿನ ಆಡಳಿತ ಮಂಡಳಿ, ರಾಮ್‌ನರೇಶ್‌ಗೆ ಅನುಕೂಲವಾಗಲಿ ಎಂಬ ಒಂದೇ ಕಾರಣದಿಂದ ಕಾಲೇಜಿಗೆ ಲಿಫ್ಟ್ ಹಾಕಿಸಿತು. ಅಷ್ಟೇ ಅಲ್ಲ, ಅವನನ್ನು ತರಗತಿಗೆ ಹುಷಾರಾಗಿ ಬಿಟ್ಟು ಬರುವಂತೆ ; ತರಗತಿಯ ನಂತರ ಮರಳಿ ಕರೆದೊಯ್ಯುವಂತೆ ಲಿಫ್ಟ್ ಆಪರೇಟರ್‌ಗೆ ಆದೇಶ ನೀಡಿತು. ಅಷ್ಟೇ ಅಲ್ಲ, ಈ ಹುಡುಗನ ಒಂದೊಂದು ಚಿಕ್ಕ ಗೆಲುವನ್ನೂ ಕಾಲೇಜಿನಲ್ಲಿ ದೊಡ್ಡ ಹಬ್ಬದಂತೆ ಆಚರಿಸಲಾಯಿತು.

ಆಮೇಲೆ, ಪ್ರತಿಭಾವಂತರಿಗೆ ಮೀಸಲಾದ ಎಲ್ಲ ಸ್ಕಾಲರ್‌ಶಿಪ್‌ಗಳೂ ಈ ರಾಮ್‌ನರೇಶನನ್ನೂ ಹುಡುಕಿಕೊಂಡು ಬಂದವು. ಎಲ್ಲಕ್ಕೂ ಮಿಗಿಲಾಗಿ- ಕಾರ್ತಿಕ್ ಎಂಬ ಐಐಟಿಯ ಮೊದಲ ರ್‍ಯಾಂಕ್ ವಿದ್ಯಾರ್ಥಿ, ರಾಮ್‌ನರೇಶನೊಂದಿಗೆ ಹಾಸ್ಟೆಲ್‌ನ ರೂಂ ಹಂಚಿಕೊಳ್ಳಲು ನಿರ್ಧರಿಸಿದ. ನಮಗೆ ಶೌಚಾಲಯವೂ ಜತೆಗಿರುವಂಥ ರೂಂ ಕೊಡಿ ಎಂದು ಹಾಸ್ಟೆಲ್ ವಾರ್ಡನ್‌ಗೆ ಒತ್ತಾಯಿಸಿ, ಅದರಲ್ಲಿ ಯಶಸ್ವಿಯಾದ. ಒಂದೇ ಮಾತಲ್ಲಿ ಹೇಳುವುದಾದರೆ – ಚೂರೂ ಸಂಕೋಚ ಪಡದೆ ಈ ರಾಮ್‌ನರೇಶನ ಸ್ನಾನ, ಶೌಚದ ವ್ಯವಸ್ಥೆಯನ್ನೆಲ್ಲ ಕಾರ್ತಿಕ್ ನೋಡಿಕೊಂಡ. ಇದಕ್ಕೆಲ್ಲ ಹೇಗೆ ಕೃತಜ್ಞತೆ ಹೇಳುವುದೋ ಅರ್ಥವಾಗದೆ ಈ ವಿಕಲಾಂಗ ಹುಡುಗ ಕಣ್ತುಂಬಿಕೊಂಡರೆ- ‘ದೇವ್ರಿದಾನೆ ಬಿಡಪ್ಪಾ” ಎಂದು ಇವನದೇ ಡೈಲಾಗ್ ಹೊಡೆದು ನಗಿಸುತ್ತಿದ್ದ.

ಮುಂದೆ ಐಐಟಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಪದವಿ ಪಡೆದ ದಿನ, ರಾಮ್‌ನರೇಶ್‌ಗೆ ಬೀಳ್ಕೊಡುಗೆ ನೀಡಲೆಂದೇ ಒಂದು ವಿಶೇಷ ಸಮಾರಂಭ ನಡೆಸಲಾಯಿತು. ಅವತ್ತಿನವರೆಗೂ ಒಮ್ಮೆಯೂ ಕಣ್ಣೀರು ಹಾಕದಿದ್ದ ರಾಮ್‌ನರೇಶ್ ಅವತ್ತು ಮಾತ್ರ ಹಸು ಕಂದನಂತೆ ಬಿಕ್ಕಳಿಸಿ ಅಳುತ್ತಾ ಹೇಳಿದನಂತೆ: ‘ನಿಮ್ಮೆಲ್ಲರ ಕಂಗಳಲ್ಲಿ, ನಡವಳಿಕೆಯಲ್ಲಿ, ಪ್ರೀತಿಯಲ್ಲಿ, ಮೆಚ್ಚುಗೆಯಲ್ಲಿ, ತಮಾಷೆಯಲ್ಲಿ, ಪಿಸು ಮಾತಿನಲ್ಲಿ, ನನ್ನ ರೂಂಮೇಟ್ ಕಾರ್ತಿಕ್‌ನ ಒಂದು ಬೆಚ್ಚನೆಯ ಸ್ಪರ್ಶದಲ್ಲಿ ನನಗೆ ದೇವರು ಕಾಣಿಸಿದ್ದಾನೆ. ನಿಮ್ಮೆಲ್ಲರ ಪ್ರೀತಿಗೆ ಋಣಿ. ನಾನು ವಿಕಲಾಂಗ ಅಂತ ಗೊತ್ತಾದ ಮೇಲೆ ನನಗೆ ಒಂದು ಚೆಂದದ ವ್ಹೀಲ್ ಛೇರ್ ಮತ್ತು ತ್ರಿಚಕ್ರ ವಾಹನ ಕೊಟ್ರಲ್ಲ, ಆ ದಾನಿಗಳಿಗೂ ಋಣಿ….”

***
ಪ್ರಿಯರೆ, ಈ ರಾಮ್‌ನರೇಶ್ ಈಗ ನಮ್ಮೊಂದಿಗೇ, ಈ ಬೆಂಗಳೂರಿನಲ್ಲೇ ಇದ್ದಾನೆ! ಗೂಗಲ್ ವೆಬ್‌ಸೈಟ್ ಕಂಪನಿಯಲ್ಲಿ ಅವನು ದೊಡ್ಡ ಸಂಬಳದ, ಕಂಪ್ಯೂಟರ್ ಎಂಜಿನಿಯರ್! ಅವನದು ಅದೆಂಥ ಪ್ರಚಂಡ ಆತ್ಮವಿಶ್ವಾಸ ಅಂದರೆ- ಈಗಲೂ ‘ದೇವ್ರಿದಾನೆ ಬಿಡಪ್ಪಾ” ಎಂದು ಹೇಳಿಕೊಂಡೇ ಈ ಬೆಂಗಳೂರಿನ ರಸ್ತೆಯಲ್ಲಿ ರೊಯ್ಯನೆ ತನ್ನ ಟ್ರೈಸೈಕಲ್ ಓಡಿಸುತ್ತಾನೆ. ಅಪ್ಪನ ಧೈರ್ಯ, ಅಮ್ಮನ ಪ್ರೀತಿ, ಅಕ್ಕನ ತ್ಯಾಗ, ಗೆಳೆಯರ-ಅಧ್ಯಾಪಕರ ಒಲುಮೆಯೇ ಈವರೆಗೂ ನನ್ನ ಕೈ ಹಿಡಿದು ನಡೆಸಿದೆ ಎನ್ನುತ್ತಾನೆ. ಛೆ, ನನಗೆ ಕಾಲುಗಳಿಲ್ಲ ಎಂಬ ಕೀಳರಿಮೆ ನನ್ನನ್ನು ಯಾವತ್ತೂ ಕಾಡಿಲ್ಲ ಎಂದು ಸಡಗರದಿಂದಲೇ ಹೇಳುತ್ತಾನೆ.


ಕೃಪೆ: ಎ.ಆರ್.ಮಣಿಕಾಂತ್

ನಿಕ್ ಜಿಸಿಕ್


ಅಲ್ಲ, ಕೈ-ಕಾಲುಗಳೇ ಇಲ್ಲದಿದ್ದರೂ ಆತ ಇಂಥದೊಂದು ಸಾಧನೆ ಮಾಡಲು ಸಾಧ್ಯವಾದದ್ದು ಹೇಗೆ? ಅಂಗವೈಕಲ್ಯದ ನೋವು, ಜತೆಗಿದ್ದವರ ವ್ಯಂಗ್ಯ, ಬಂಧುಗಳ ‘ಪಾಪ ಕಣ್ರೀ’ ಎಂಬಂಥ ನೋಟ, ಕುತೂಹಲಿಗಳ ಅರ್ಥವಿಲ್ಲದ ಪ್ರಶ್ನೆ, ಒಂದು ಡಿಪ್ರೆಷನ್, ವಿಚಿತ್ರ ದೇಹ ಪ್ರಕೃತಿಯ ಕಾರಣದಿಂದಲೇ ಜತೆಯಾಗುವ ಕಾಯಿಲೆಗಳು ಅವನನ್ನು ಹೆದರಿಸಲಿಲ್ವ? ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಲಿಲ್ವ? ಇಂಥವೇ ಕುತೂಹಲಕರ ಪ್ರಶ್ನೆಗಳನ್ನು ಜತೆಗಿಟ್ಟುಕೊಂಡು ಕುಳಿತರೆ, ಅದಕ್ಕೆ ಉತ್ತರವಾಗಿ ನಿಕ್ ಜಿಸಿಕ್‌ನ ಬದುಕಿನ ಕಥೆ ಈರುಳ್ಳಿಯ ಪಕಳೆಗಳಂತೆ ಬಿಚ್ಚಿಕೊಳ್ಳತೊಡಗುತ್ತದೆ.

***
ನಿಕ್‌ಜಿಸಿಕ್ ಹುಟ್ಟಿದ್ದು 1982ರಲ್ಲಿ, ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ. ಈತ ಪಾಸ್ಟರ್ ಬೋರಿಸ್-ದಸ್ಕಾ ಜಿಸಿಕ್ ದಂಪತಿಯ ಮೊದಲ ಮಗ. ನಿಕ್‌ನ ತಾಯಿ ದಸ್ಕಾ, ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದಾಕೆ. ವಿಪರ್ಯಾಸಗಳು ಹೇಗಿರುತ್ತವೆ ನೋಡಿ; ಆಕೆ ನರ್ಸ್ ಆಗಿದ್ದರೂ ಕೂಡ, ಚೊಚ್ಚಲ ಹೆರಿಗೆಯ ಸಂಭ್ರಮದಲ್ಲಿ ಥರಾವರಿ ಚೆಕಪ್ ಮಾಡಿಸಿದರೂ ಕೂಡ, ತನಗೆ ಅಂಗವಿಕಲ ಮಗು ಹುಟ್ಟಲಿದೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಆಕೆಯನ್ನು ಮೇಲಿಂದ ಮೇಲೆ ಚೆಕ್ ಮಾಡುತ್ತಲೇ ಬಂದ ಡಾಕ್ಟರುಗಳಿಗೂ ಗೊತ್ತಿರಲಿಲ್ಲ. ಅವರೆಲ್ಲ ‘ಏನೂ ತೊಂದರೆಯಿಲ್ಲ. ನಾರ್ಮಲ್ ಡೆಲಿವರಿ ಆಗುತ್ತೆ’ ಅಂದಿದ್ದರು. ಹಾಗೆಯೇ ಆಯಿತು ಕೂಡಾ. ಆದರೆ ತಾಯಿ ಗರ್ಭದಿಂದ ಹೊರಬಂದ ಮಗುವನ್ನು ಕಂಡಾಗ ಆಸ್ಪತ್ರೆಯ ಅಷ್ಟೂ ವೈದ್ಯರು ಬೆಚ್ಚಿಬಿದ್ದರು. ಯಾಕೆಂದರೆ, ದಷ್ಟಪುಷ್ಪವಾಗಿ ಬೆಳೆದು ಮುದ್ದು ಮುದ್ದಾಗಿದ್ದ ಆ ಮಗುವಿಗೆ ಕೈಕಾಲುಗಳೇ ಇರಲಿಲ್ಲ! ಹೊಟ್ಟೆಯಿಂದ ಒಂದಿಷ್ಟು ಕೆಳಕ್ಕೆ ಒಂದು ಬೆರಳಿನಷ್ಟು ಉದ್ದಕ್ಕೆ ಸ್ಪಂಜಿನಂಥ ಎಡಪಾದವಿತ್ತು. ಅದಕ್ಕೆ ಬೆರಳುಗಳಿದ್ದವು ನಿಜ. ಆದರೆ ಅದನ್ನು ಕಾಲು ಎಂದು ಕರೆಯಲು ಯಾರೂ ಸಿದ್ಧರಿರಲಿಲ್ಲ.

ಮಗು, ಅಳುತ್ತ ಅಳುತ್ತಲೇ ತನ್ನನ್ನು ತಬ್ಬಿಕೊಳ್ಳಲಿ, ಪುಟಾಣಿ ಕೈಗಳಿಂದ ಹಾಗೇ ಒಮ್ಮೆ ಕೆನ್ನೆ ತಟ್ಟಲಿ, ಜಡೆ ಎಳೆಯಲಿ. ಪುಟ್ಟ ಕಾಲುಗಳಿಂದ ತೊಟ್ಟಿಲು ಒದೆಯಲಿ, ಹಾಲಿನ ಬಾಟಲಿಗೆ ಒದ್ದು ಬೀಳಿಸಲಿ, ಕಡೆಗೆ ಅವೇ ಪುಟ್ಟ ಕಾಲುಗಳಿಂದ ಗಂಡನ ಕೆನ್ನೆಗೋ, ಎದೆಗೋ ಒದ್ದು ಒಂದು ಸಂತೋಷದ ಘಳಿಗೆಗೆ ಸಾಕ್ಷಿಯಾಗಲಿ… ಇಂಥ ಸೆಂಟಿಮೆಂಟು ಜಗತ್ತಿನಲ್ಲಿ ಯಾವ ತಾಯಿಗೆ ತಾನೇ ಇರುವುದಿಲ್ಲ ಹೇಳಿ?

ಹೆರಿಗೆಗೂ ಮುನ್ನ ನಿಕ್‌ನ ತಾಯಿ ದಸ್ಕಾಗೂ ಇಂಥವೇ ಆಸೆಗಳಿದ್ದವು. ಮಗುವಿನ ಬಗ್ಗೆ, ಅದರ ಭವಿಷ್ಯದ ಬಗ್ಗೆ ಸಾವಿರ ಕನಸುಗಳಿದ್ದವು. ಆದರೆ ಮಡಿಲಿಗೆ ಬಂದ ಮಗುವಲ್ಲದ ಮಗುವನ್ನು ಕಂಡು ಆಕೆಗೆ ಅದೆಷ್ಟು ಸಂಕಟವಾಯಿತೋ- ಭಗವಂತ ಬಲ್ಲ. ವಿಶೇಷವೇನೆಂದರೆ, ಉಸಿರಾಡುತ್ತಿದೆ ಎಂಬುದನ್ನು ಬಿಟ್ಟರೆ ಅದು ಮಗುವೇ ಅಲ್ಲ ಎಂಬಂತಿದ್ದ ಮಗುವನ್ನು ಕಂಡು ಆಕೆ ಅಳುತ್ತಾ ಕೂರಲಿಲ್ಲ. ಹರಕೆಗೆ ಮುಂದಾಗಲಿಲ್ಲ. ತನ್ನ ಹಣೆ ಬರಹವನ್ನು ಹಳಿಯಲಿಲ್ಲ. ವಿಧಿಯನ್ನು ಶಪಿಸಲಿಲ್ಲ. ಬದಲಿಗೆ, ಪಾಲಿಗೆ ಬಂದದ್ದೇ ಪಂಚಾಮೃತ ಅಂದುಕೊಂಡಳು. ಆಕೆಯೇ ಸ್ವತಃ ನರ್ಸ್ ಆಗಿದ್ದಳಲ್ಲ? ಹಾಗಾಗಿ ಒಂದು ಅಂಗವಿಕಲ ಮಗುವನ್ನು ಹೇಗೆ ಬೆಳೆಸಬೇಕು ಎಂಬುದು ಉಳಿದೆಲ್ಲರಿಗಿಂತ ಚೆನ್ನಾಗಿ ಆಕೆಗೆ ಗೊತ್ತಿತ್ತು. ನಿಕ್‌ಗೆ ಮೂರು ವರ್ಷವಾದ ತಕ್ಷಣವೇ ಕಂಡೂ ಕಾಣದಂತಿದ್ದ ಎಡಗಾಲಿನ ಬೆರಳುಗಳ ಮಧ್ಯೆ ಚಾಕ್‌ಪೀಸ್ ಇಟ್ಟು ಅಕ್ಷರಾಭ್ಯಾಸ ಮಾಡಿಸಿಯೇ ಬಿಟ್ಟಳು.

ಮುಂದೆ ನಿಕ್‌ನನ್ನು ಸ್ಕೂಲಿಗೆ ಸೇರಿಸಲು ಹೋದರು ನೋಡಿ, ನಿಜವಾದ ಸಮಸ್ಯೆ ಶುರುವಾದದ್ದೇ ಆಗ. ಏಕೆಂದರೆ ಕೈಕಾಲುಗಳಿಲ್ಲದ ಈ ಮಗುವಿಗೆ ಪ್ರವೇಶ ನೀಡಲು ಯಾವ ಶಾಲೆಗಳ ಜನರೂ ಒಪ್ಪಲಿಲ್ಲ. ವಿಚಿತ್ರ ಸೃಷ್ಟಿ ಎಂಬಂತಿರುವ ಈ ಮಗುವನ್ನೇ ಉಳಿದ ಎಲ್ಲಾ ಮಕ್ಕಳೂ ನೋಡುತ್ತ ಕುಳಿತು ಓದನ್ನೇ ಮರೆಯಬಹುದು. ಈ ವಿಕಲಾಂಗ ಮಗು ಎಲ್ಲರಿಗೂ ಸಮಸ್ಯೆಯಾಗಬಹುದು. ‘ನಾನೇಕೆ ಉಳಿದವರಂತಿಲ್ಲ’ ಎಂಬ ಭಾವವೇ ಆ ಮಗುವನ್ನು ಡಿಪ್ರೆಷನ್‌ಗೆ ಈಡು ಮಾಡಬಹುದು. ಬರೆಯಲು ಆಗಲ್ಲವಲ್ಲ, ಹಾಗಾಗಿ ಪರೀಕ್ಷೆಯಲ್ಲೂ ಇವನಿಗೆ ರಿಯಾಯಿತಿ ಕೊಡಿ ಎಂದೂ ಕೇಳಬಹುದು ಎಂದೆಲ್ಲ ಯೋಚಿಸಿ, ಈ ಮಗುವಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು.

ಆದರೆ, ನಿಕ್‌ನ ತಾಯಿ ತಂದೆ ಈ ವಾದವನ್ನು ಒಪ್ಪಲಿಲ್ಲ. ನಮ್ಮ ಮಗು Mentally disabled ಅಲ್ಲ Just physically Handicapped. ನಾವು ಯಾವುದೇ ರಿಯಾಯಿತಿ ಕೇಳುತ್ತಿಲ್ಲ. ಹಾಗಿದ್ದರೂ ಶಾಲೆಗೆ ಪ್ರವೇಶವಿಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿ ಕೋರ್ಟ್‌ಗೇ ಹೋದರು. ಅವರ ಬೆಂಬಲಕ್ಕೆ ನಿಂತ ಕೋರ್ಟು, ನಿಕ್ ಥರದವರಿಗಾಗಿ ಶಿಕ್ಷಣ ರಂಗದಲ್ಲಿನ ಶಿಸ್ತಿನಲ್ಲಿ ಒಂದಷ್ಟು ಸಡಿಲ ನೀತಿ ಅನುಸರಿಸಿ ಎಂದು ಆದೇಶ ಹೊರಡಿಸಿತು.

ಮುಂದಿನದೆಲ್ಲ ನಿಕ್‌ನ ದಿಗ್ವಿಜಯದ ಕಥೆ. ಈ ಬದುಕಿನ ಮೇಲೆ, ಸೋಲಿನ ಮೇಲೆ ಅದ್ಯಾವುದೋ ಜನ್ಮಾಂತರದ ದ್ವೇಷವಿದೆ ಎಂಬಂತೆ ಆತ ಬದುಕಿಬಿಟ್ಟ. ಇಡೀ ತರಗತಿಗೆ ಓದುವುದರಲ್ಲಿ ಅವನೇ ಮೊದಲಿಗನಾದ! ಬಿಗಿಯಾಗಿ ಒಂದೇಟು ಹಾಕಿದರೆ ಅಪ್ಪಚ್ಚಿಯಾಗುವಂತಿದ್ದ ಎಡಗಾಲಿನ ಬೆರಳುಗಳ ಮಧ್ಯೆ ಪೆನ್ನು ಸಿಕ್ಕಿಸಿಕೊಂಡೇ ನೋಟ್ಸ್ ಬರೆದ. ಪರೀಕ್ಷೆ ಬರೆದ. ಸ್ಕೂಲ್‌ನ ಮ್ಯಾಗಜಿನ್‌ಗೆ ಲೇಖನ ಬರೆದ. ಅಷ್ಟೇ ಅಲ್ಲ, ಏಳನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಆ ಶಾಲೆಯ ಇತಿಹಾಸದಲ್ಲೇ ನಡೆದಿರಲಿಲ್ಲ ಎಂಬಂಥ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ.

ನಿಕ್ ಹೈಸ್ಕೂಲು ದಾಟಿ ಕಾಲೇಜಿಗೆ ಬರುವ ವೇಳೆಗೆ, ಮಗನಿಗೆ ಈಜು ಕಲಿಸಿದರೆ ಅವನ ಆರೋಗ್ಯಕ್ಕೆ ಒಳ್ಳೆಯದು ಅನಿಸಿತು. ನಿಕ್‌ನ ತಂದೆ ತಡ ಮಾಡಲಿಲ್ಲ. ಕೃತಕ ಕೈಕಾಲುಗಳನ್ನು ಖರೀದಿಸಿ, ಅವುಗಳನ್ನು ನಿಕ್‌ನ ದೇಹಕ್ಕೆ ಫಿಕ್ಸ್ ಮಾಡಿ, ಮಗನಿಗೆ ಎಲ್ಲ ಪೂರ್ವ ಸೂಚನೆಯನ್ನೂ ಕೊಟ್ಟು ಈಜು ಕಲಿಸಿಯೇಬಿಟ್ಟ! ಹಿಂದೆಯೇ ‘ಈ ಕೃತಕ ಕೈಗಳಿಂದಲೇ ಬರೆಯಲು ಪ್ರಯತ್ನಿಸು’ ಎಂದ. (ಅದಕ್ಕೂ ಮೊದಲೇ ಅದೇ ಕೃತಕ ಕೈ ಕಾಲು ಬಳಸಿ ಶೌಚಾಲಯದಲ್ಲಿ ಸ್ನಾನದ ಸಂದರ್ಭದಲ್ಲಿ ಬೇರೆಯವರಿಗೆ ಹೊರೆಯಾಗದಂತೆ ಬದುಕಲೂ ನಿಕ್‌ನ ತಂದೆ ಹೇಳಿಕೊಟ್ಟಿದ್ದ!)

ಅಪ್ಪ ಹೇಳಿದಂತೆಯೇ ಮಾಡಿದ ನಿಕ್‌ಗೆ ಬರೆಯುತ್ತ ಬರೆಯುತ್ತಲೇ ಕುತ್ತಿಗೆಯ ಸುತ್ತ ನೋವು ಕಾಣಿಸಿಕೊಂಡಿತು. ತಕ್ಷಣವೇ ಕೃತಕ ಕೈಗಳನ್ನು ಕಿತ್ತು ಬಿಸಾಕಿ ಮತ್ತೆ ಸ್ಪಂಜಿನಂಥ ಎಡಗಾಲಿಗೇ ಪೆನ್ನು ಸಿಕ್ಕಿಸಿಕೊಂಡು ಕಾಲೇಜಿಗೆ ಬಂದ. ಅಂಥ ಅಂಗವೈಕಲ್ಯದ ಮಧ್ಯೆಯೂ ಕಾಮರ್ಸ್‌ನಂಥ ಕಷ್ಟದ ಕೋರ್ಸು ಆಯ್ಕೆ ಮಾಡಿಕೊಂಡ. ಒಂದಲ್ಲ, ಎರಡು ಡಿಗ್ರಿ ಪಡೆದೂಬಿಟ್ಟ. ಮತ್ತು ಈ ಅವಧಿಯಲ್ಲಿ ಅಂತರ ಕಾಲೇಜು ಭಾಷಣ ಸ್ಪರ್ಧೆಗಳಲ್ಲಿ ಸತತವಾಗಿ ಮೂರು ಬಾರಿ ಮೊದಲ ಬಹುಮಾನ ಪಡೆದುಕೊಂಡ!

ಕೇಳಿ, ಡಿಗ್ರಿ ಪಡೆದನಲ್ಲ? ಆವರೆಗಿನ ಅವಧಿಯಲ್ಲಿ ತನ್ನ ಹೀನ ಬದುಕನ್ನು ನೆನಪಿಸಿಕೊಂಡು ಒಂದೇ ಒಂದು ಬಾರಿ ಕೂಡ ನಿಕ್ ಕಣ್ಣೀರು ಹಾಕಲಿಲ್ಲವಂತೆ. ಅವನ ಜತೆಗಿದ್ದವರಿಗೆ ಇದೇ ಒಂದು ಅಚ್ಚರಿ. ಇವನನ್ನು ಜಗತ್ತಿನ ಎಂಟನೇ ಅದ್ಭುತ ಎಂಬಂತೆ ನೋಡುತ್ತ ಅವರೆಲ್ಲ ಕೇಳಿದರಂತೆ: ‘ಅಲ್ಲಪ್ಪಾ, ಕೈ-ಕಾಲು ಎರಡೂ ಇಲ್ಲ. ಹಾಗಿದ್ರೂ ನೀನು ನಗುನಗ್ತಾನೇ ಇದೀಯಲ್ಲ? ಅದರ ಹಿಂದಿರುವ ಗುಟ್ಟೇನು? ನಿಂಗೆ ಕಣ್ಣೀರೇ ಬರೋದಿಲ್ವ?’

ಈ ಪ್ರಶ್ನೆಗಳಿಗೆ ನಿಕ್ ಹೇಳಿದ್ದಿಷ್ಟು: ಗೆಳೆಯರು, ಬಂಧುಗಳು, ಆಪ್ತರು ಬಳಿ ಬಂದಾಗ ಅವರ ಕೈಕುಲುಕಬೇಕು. ತಮಾಷೆಯಾಗಿ ಒಂದೇಟು ಹಾಕಬೇಕು. ಕೈಬೀಸಬೇಕು… ಇಂಥದೇ ಅಸೆಗಳು ನನಗೂ ಇವೆ. ಆದರೆ ನಾನಿರುವ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಇಷ್ಟಕ್ಕೂ ಇಲ್ಲದಿರುವುದನ್ನು ನೆನೆದು ಕಣ್ಣೀರು ಹಾಕಿದರೆ ಅಂಗವೈಕಲ್ಯ ಸರಿಯಾಗಿಬಿಡುತ್ತಾ? ಇಲ್ಲ ತಾನೆ? ಅಂದ ಮೇಲೆ ಅತ್ತು ಪ್ರಯೋಜನವೇನು? ದಿನ ನಿತ್ಯದ ಬದುಕಿನಲ್ಲಿ ಒಂದೆರಡು ಸಂದರ್ಭ ಬಿಟ್ಟರೆ ಕೈ ಕಾಲುಗಳ ಅಗತ್ಯ ನನಗಂತೂ ಕಂಡುಬರುತ್ತಿಲ್ಲ. ಅನಿವಾರ್ಯ ಅನ್ನಿಸಿದಾಗ ಕೃತಕ ಕೈ-ಕಾಲು ಬಳಸ್ತಾ ಇದೀನಿ. ನನ್ನ ಮಟ್ಟಿಗೆ ಹೇಳುವುದಾದರೆ ಕೈ, ಕಾಲು ಇಲ್ಲದಿರುವುದರಿಂದ ನನಗೆ ಸಮಸ್ಯೆ ಇಲ್ಲವೇ ಇಲ್ಲ. ಈಗಿನ ದೇಹ ಪ್ರಕೃತಿಯಿಂದ ನನಗೆ ಕೆಟ್ಟದ್ದಕ್ಕಿಂತ ಒಳ್ಳೆಯದೇ ಆಗಿದೆ…’

****
ನಿಕ್‌ಗೆ ಈಗ ಇಪ್ಪತ್ತಾರು ವರ್ಷ. ಅವನು ಹೇಗಿದ್ದಾನೆ ಎಂಬುದಕ್ಕೆ ಮೇಲಿನ ಚಿತ್ರ ಸಾಕ್ಷಿ. ಆಸ್ಟ್ರೇಲಿಯಾ ಸರ್ಕಾರ ಅವನನ್ನು ದೇಶದ ‘ಯುವರತ್ನ’ ಎಂದು ಕರೆದು ಗೌರವಿಸಿದೆ. ಆತನ ಹೋರಾಟದ ಬದುಕಿನ ಕಥೆ ಜಗತ್ತಿನುದ್ದಕ್ಕೂ ಮನೆಮಾತಾಗಿದೆ. ವೆಬ್‌ಸೈಟ್‌ನಲ್ಲಿ ಅವನ ಬದುಕಿನ ಕಥೆ ನೂರಾರು ಪುಟಗಳಲ್ಲಿ ದಾಖಲಾಗಿದೆ. ಸಿಎನ್‌ಎನ್-ಬಿಬಿಸಿ ಸೇರಿದಂತೆ, ಎಲ್ಲ ಹೆಸರಾಂತ ಛಾನೆಲ್‌ಗಳೂ ಅವನ ಸಂದರ್ಶನ ಪ್ರಸಾರ ಮಾಡಿವೆ. ಅವನಿಂದ ಕೈಕಾಲುಗಳನ್ನು ಕಿತ್ತುಕೊಂಡ ದೈವ (?) ಅದಕ್ಕೆ ಪ್ರತಿಯಾಗಿ ಅದ್ಭುತವಾಗಿ ಮಾತಾಡುವ ವರವನ್ನು ಅವನಿಗೆ ನೀಡಿದೆ. ಪರಿಣಾಮ, ವ್ಯಕ್ತಿತ್ವ ವಿಕಸನದ ಬಗ್ಗೆ ಪರಮಾದ್ಭುತ ಎಂಬಂತೆ ಮಾತಾಡುವದರಲ್ಲಿ ನಿಕ್ ಉಳಿದೆಲ್ಲರನ್ನೂ ಮೀರಿಸಿದ್ದಾನೆ. ಕೃತಕ ಕೈಗಳ ನೆರವಿಂದಲೇ ಕಂಪ್ಯೂಟರ್ ಬಳಸುತ್ತಾನೆ. ಗೇಮ್ಸ್ ಆಡುತ್ತಾನೆ. ಮೊಬೈಲ್‌ಗೆ ದನಿಯಾಗುತ್ತಾನೆ ಮತ್ತು, ಅಂಥ ಅಂಗವೈಕಲ್ಯದ ಮಧ್ಯೆಯೂ ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಹೋಗಿ ಉಪನ್ಯಾಸ ಕೊಟ್ಟು ಬಂದಿದ್ದಾನೆ.

ಈ ವರ್ಷ, ನಿಕ್‌ನ ಷೆಡ್ಯೂಲ್ ಗಮನಿಸಿದರೆ ಗಾಬರಿಯಾಗುತ್ತದೆ. ಯಾಕೆಂದರೆ ಅವನು ಬ್ಯುಸಿಬ್ಯುಸಿಬ್ಯುಸಿ. ಒಂದೆರಡಲ್ಲ, ಇಪ್ಪತ್ತು ದೇಶಗಳು ಅವನನ್ನು ಉಪನ್ಯಾಸ ನೀಡುವಂತೆ ಆಹ್ವಾನಿಸಿವೆ. ಈತ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ. ಹಾಗೆ ಹೋದ ಕಡೆಯಲ್ಲೆಲ್ಲ ನಿಕ್ ನಿರುದ್ವಿಗ್ನ ದನಿಯಲ್ಲಿ ತನ್ನದೇ ಬದುಕಿನ ಕಥೆ ಹೇಳುತ್ತಾನೆ. ಗೆಲ್ಲಬೇಕು ಎಂಬುದೇ ನಿಮ್ಮ ಮನದಲ್ಲಿದ್ದರೆ ಯಾವ ದೇವರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನನ್ನಂಥ ಪೆಕರನೇ ಈ ಲೆವೆಲ್‌ಗೆ ಬಂದಿರುವಾಗ ನಿಮ್ಮಂಥ ಪ್ರಚಂಡರು ಎಷ್ಟೆಲ್ಲ ಸಾಧನೆ ಮಾಡಬಹುದೋ ಯೋಚಿಸಿ ಅನ್ನುತ್ತಾನೆ. ಎಲ್ಲರ ಕಷ್ಟ ವಿಚಾರಿಸುತ್ತಾನೆ. ಅದಕ್ಕೆ ತನ್ನದೇ ಶೈಲಿಯಲ್ಲಿ ಉತ್ತರ ಹೇಳುತ್ತಾನೆ. ನೊಂದವರ ಕಂಬನಿ ಒರೆಸುತ್ತಾ ‘ಸ್ಮೈಲ್ ಪ್ಲೀಸ್’ ಎಂದು ಕಣ್ಣು ಹೊಡೆಯುತ್ತಾನೆ. ಅವನ ಅಮ್ಮನಂಥ ಮಾತು ಕೇಳುತ್ತ ಕುಳಿತರೆ ನಮಗೇ ಗೊತ್ತಿಲ್ಲದಂತೆ ಕಣ್ಣೀರು ಕೆನ್ನೆ ತೋಯಿಸಿರುತ್ತದೆ.

ಈ ಬ್ಯುಸಿ ಷೆಡ್ಯೂಲಿನ ಮಧ್ಯೆಯೂ no limbs, no legs, no worries (ಕೈ ಇಲ್ಲ, ಕಾಲಿಲ್ಲ, ಚಿಂತೆಯೂ ಇಲ್ಲ) ಎಂಬ ಪುಸ್ತಕ ಬರೆವ ಸನ್ನಾಹದಲ್ಲಿದ್ದಾನೆ ನಿಕ್. ಅವನ ಸಾಹಸದ ಬದುಕಿನ ಸಮಗ್ರ ವಿವರಣೆ ಬೇಕಿದ್ದರೆ ಇಂಟರ್‌ನೆಟ್‌ನಲ್ಲಿ ಗೂಗಲ್‌ಗೆ ಹೋಗಿ nick vujicic ಎಂದು ಸರ್ಚ್ ಮಾಡಿ. ನಿಮಗೆ ನಿಕ್‌ನ ವಿವರಗಳು ಮಾತ್ರವಲ್ಲ, ಆತ ಈಜು ಹೊಡೆಯುವ ಅಪರೂಪದ ದೃಶ್ಯ ಕೂಡ ನೋಡಲು ಸಿಗುತ್ತದೆ. ಈ ಜಗತ್ತಿನಲ್ಲಿ ನಿಜವಾದ ಹೀರೋಗಳು ಅಂದರೆ ನಿಕ್‌ನಂಥವರು. ನಾವು ಹಾಗೆ ಆಗಬೇಕು. ಆಲ್ವಾ?

ಕೃಪೆ: ಎ.ಆರ್.ಮಣಿಕಾಂತ್

ಇ.ಶರತ್ ಬಾಬು


ಈ ಕಥಾನಾಯಕನ ಹೆಸರು ಇ.ಶರತ್ ಬಾಬು. ಈತ ಚೆನ್ನೈನ ಮಾದಿಪಕ್ಕಂ ಎಂಬ ಕೊಳೆಗೇರಿಯಿಂದ ಬಂದವನು. ಸ್ವಂತ ಪ್ರತಿಭೆಯಿಂದ ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಸೀಟು ಪಡೆದವನು. ಎಂಬಿಎನಲ್ಲಿ ಯೂನಿವರ್ಸಿಟಿಗೇ ಎರಡನೇ ರ್‍ಯಾಂಕು ತಗೊಂಡವನು. ಈ ಹುಡುಗ ರ್‍ಯಾಂಕ್ ಬಂದನಲ್ಲ? ಆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಮರುದಿನವೇ ಅವನಿಗೆ ಸಾವಿರಾರು ಮಂದಿ ಹೊಸ ಹೊಸ ಬಂಧುಗಳು ಹುಟ್ಟಿಕೊಂಡರು. ಕಾಲೇಜಿನ ಪ್ರಾಚಾರ್ಯರಿಂದಲೇ ಇವನ ವಿಳಾಸ ಪಡೆದ ಮಲ್ಟಿ ನ್ಯಾಷನಲ್ ಕಂಪನಿಗಳ ಮುಖ್ಯಸ್ಥರು- ‘ತಿಂಗಳಿಗೆ ಒಂದೂವರೆ ಲಕ್ಷ ರೂ. ಸಂಬಳ ಕೊಡ್ತೀವಿ. ವರ್ಷಕ್ಕೆ ಎರಡು ಬಾರಿ ಫಾರಿನ್ ಟೂರು, ಜತೆಗೆ ಕಾರು, ಮನೆ, ಫೋನ್ ಬಿಲ್ಲು ಇತ್ಯಾದಿ. ಬಾ. ನಾಳೆಯಿಂದಲೇ ನಮ್ಮ ಕಂಪನಿ ಸೇರಿಕೋ.” ಎಂದು ದುಂಬಾಲು ಬಿದ್ದರು.

ಕೆಲವು ಶ್ರೀಮಂತರಂತೂ ತಾವಾಗಿಯೇ ಮುಂದೆ ಬಂದು ಮಗಳ ಫೋಟೊ ಎದುರಿಗಿಟ್ಟು- ‘ಸುಮ್ನೆ ಒಪ್ಪಿಕೊಳ್ಳಿ. ನಿಮ್ಮನ್ನೇ ಮನೆ ಅಳಿಯನನ್ನಾಗಿ ಮಾಡಿಕೊಳ್ತೀವಿ” ಎಂದು ಆಸೆ ತೋರಿಸಿದರು. ಕೊಳೆಗೇರಿಯಿಂದ ಬಂದು ಎಂಬಿಎನಲ್ಲಿ ರ್‍ಯಾಂಕ್ ಪಡೆಯುವಷ್ಟು ಮಹತ್ಸಾಧನೆ ಮಾಡಿದ ಶರತ್‌ಬಾಬುಗೆ ಸರಕಾರಿ ನೌಕರಿ ನೀಡಲು ಸಿದ್ಧ ಎಂದು ತಮಿಳ್ನಾಡು ಸರಕಾರವೂ ಘೋಷಿಸಿಬಿಟ್ಟಿತು. ಆದರೆ, ಈ ಮಾತುಗಳು ತನಗೆ ಕೇಳಿಸಲೇ ಇಲ್ಲ ಎಂಬಂತೆ, ತನ್ನನ್ನು ಓಲೈಸಲು ಬಂದಿದ್ದವರ ಸಮ್ಮುಖದಲ್ಲಿಯೇ ಶರತ್‌ಬಾಬು ಹೀಗೆ ಘೋಷಿಸಿದ: ‘ಕ್ಷಮಿಸಿ. ಯಾರ ಕೈ ಕೆಳಗೂ ಕೆಲಸ ಮಾಡಲು ನಾನು ಸಿದ್ಧನಿಲ್ಲ- ನನ್ನದೇ ಸ್ವಂತ ಹೋಟೆಲ್ ಶುರು ಮಾಡ್ತೀನಿ…”

ಈ ಮಾತು ಕೇಳಿದ್ದೇ- ಕ್ಯೂ ನಿಂತಿದ್ದ ಕನ್ಯಾಪಿತೃಗಳು ಸದ್ದಿಲ್ಲದೆ ಸರಿದು ಹೋದರು. ದಿಢೀರ್ ಹುಟ್ಟಿಕೊಂಡಿದ್ದ ಬಂಧುಗಳು ಅಷ್ಟೇ ಬೇಗ ಮಾಯವಾದರು. ಶರತ್‌ಬಾಬುವಿನೊಂದಿಗೇ ಓದಿದ ಹುಡುಗ ಹುಡುಗಿಯರು ‘ಇದೆಂಥ ಹುಚ್ಚೋ ನಿಂದು?” ಸುಮ್ನೆ ಯಾವುದಾದ್ರೂ ಮಲ್ಟಿ ನ್ಯಾಷನಲ್ ಕಂಪನಿ ಸೇರ್‍ಕ. ಲಕ್ಷ ಗಟ್ಲೆ ಸಂಬಳ ಸಿಗುತ್ತೆ. ಆರಾಮಾಗಿ ಇರಬಹುದು. ಸ್ವಂತ ಬಿಜಿನೆಸ್ಸು ತಂತಿ ಮೇಲಿನ ನಡಿಗೆ. ಅದೆಲ್ಲ ಬೇಡ” ಎಂದು ಬುದ್ಧಿ ಹೇಳಿದರು. ನೆರೆ ಹೊರೆಯವರಂತೂ – ಲಕ್ಷ್ಮಿದೇವಿ ಮನೆಗೆ ಬಂದ್ರೆ ಬಾಗಿಲು ಮುಚ್ಚಿದನಲ್ರಿ ಈ ಹುಡುಗ? ಇವನಿಗೆ ಓದಿ ಓದಿ ತಲೆಕೆಟ್ಟಿದೆ ಎಂದು ಕೊಂಕು ನುಡಿದರು. ಈ ಯಾವ ಮಾತಿಂದಲೂ ಶರತ್‌ಬಾಬು ಅಧೀರನಾಗಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬದಲಿಗೆ ತಾನು ಎಂಬಿಎ ಪದವಿ ಪಡೆದ ಅಹಮದಾಬಾದ್‌ನಲ್ಲಿಯೇ 2006ರ ಆಗಸ್ಟ್ 15ರಂದು ಒಂದು ಕ್ಯಾಂಟೀನ್ ಆರಂಭಿಸಿಯೇ ಬಿಟ್ಟ.

ಅವನಿಗೆ ಶುಭವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಅವತ್ತು ಹಲ್ಲಿ ಲೊಚಗುಡಲಿಲ್ಲ. ಯಾವ ಜ್ಯೋತಿಷಿಯೂ ಭವಿಷ್ಯ ಹೇಳಲಿಲ್ಲ.

ಹಾಗಿದ್ದರೂ ಇಂಥದೊಂದು ರಿಸ್ಕ್ ತೆಗೆದುಕೊಳ್ಳಲು ಶರತ್‌ಬಾಬು ನಿರ್ಧರಿಸಿದ್ದ. ಕೊಳೆಗೇರಿಯಲ್ಲಿಯೇ ಹುಟ್ಟಿ ಬೆಳೆದನಲ್ಲ? ಅದೇ ಕಾರಣದಿಂದ ಅವನಿಗೆ ಬಡತನದ ಕಷ್ಟ ಏನೆಂದು ಗೊತ್ತಿತ್ತು. ಬಡವರಿಗೆ ಕೈತುಂಬ ಸಂಬಳ ತರುವ ಕೆಲಸ ಸಿಗದಿರುವುದೇ ಎಲ್ಲ ಸಮಸ್ಯೆಗೂ ಮೂಲ ಎಂದು ಆತ ಅರ್ಥಮಾಡಿಕೊಂಡಿದ್ದ. ಈ ಶರತ್‌ಬಾಬುವಿನ ತಾಯಿ, ತಿಂಗಳಿಗೆ 800 ರೂ. ಸಂಬಳದ ಅಂಗನವಾಡಿಯ ಆಯಾ ಆಗಿದ್ದಳು. ಅಪ್ಪ ಕೂಲಿ ಮಾಡುತ್ತಿದ್ದ. ಮನೆ ನಿರ್ವಹಣೆಗೆ ಇಬ್ಬರ ದುಡಿಮೆಯೂ ಸಾಲುತ್ತಿಲ್ಲ ಅನ್ನಿಸಿದಾಗ, ಬೆಳಗಿನ ಮೂರು ಗಂಟೆಗೇ ಏಳುತ್ತಿದ್ದ ಶರತ್‌ಬಾಬು ತಾಯಿ-ಹೊತ್ತು ಮೂಡುವ ವೇಳೆಗೆ ನೂರಕ್ಕೂ ಹೆಚ್ಚು ಇಡ್ಲಿ ಬೇಯಿಸುತ್ತಿದ್ದಳು. ನಂತರ ಅಷ್ಟನ್ನೂ ಅದೇ ಕೊಳೆಗೇರಿಯಲ್ಲಿ ಮಾರಿ, ಒಂದಿಷ್ಟು ಪುಡಿಗಾಸು ಸಂಪಾದಿಸುತ್ತಿದ್ದಳು. ಕೆಲವೇ ದಿನಗಳಲ್ಲಿ ಆಕೆಗೆ ವ್ಯಾಪಾರ ಕುದುರಿತು. ತಿಂಗಳಿಗೆ ಎರಡು ಸಾವಿರ ರೂಪಾಯಿ- ಬರೀ ಇಡ್ಲಿ ಮಾರಾಟದಿಂದಲೇ ಸಿಗತೊಡಗಿತು.

ಎಂಬಿಎ ಪದವಿ ಪಡೆದ ನಂತರ ಶರತ್‌ಬಾಬು ಸ್ವಂತ ಉದ್ದಿಮೆ ಆರಂಭಿಸಲು ಈ ಘಟನೆಯೇ ಪ್ರೇರಣೆಯಾಯಿತು. ಆದರೆ, ಫಲಿತಾಂಶ ಮಾತ್ರ ಅವನ ಪರವಾಗಿರಲಿಲ್ಲ. ಈ ಹುಡುಗ ವ್ಯವಹಾರಕ್ಕೆ ಹೊಸಬ ಎಂದು ಅರ್ಥವಾದ ತಕ್ಷಣ ಹಲವರು ಹೆಜ್ಜೆ ಹೆಜ್ಜೆಗೂ ಮೋಸ ಮಾಡಿದರು. ಕೆಲಸಕ್ಕೆ ಬಂದವರು, ಮೊದಲೇ ಅಡ್ವಾನ್ಸ್ ಪಡೆದು ನಾಪತ್ತೆಯಾದರು. ಇಂಥ ಸಂದರ್ಭದಲ್ಲಿಯೇ ಪರಿಚಿತರೊಬ್ಬರು ‘ಹೇಳಿ ಕೇಳಿ ಇದು ಬಿಜಿನೆಸ್ಸು. ಒಂದೇ ಕಡೆ ನಂಬಿಕೊಂಡ್ರೆ ಲಾಭ ಮಾಡೋದು ಕಷ್ಟ. ಬೇರೊಂದು ಕಡೇಲಿ ಬ್ರ್ಯಾಂಚ್ ಥರಾ ಕೇಟರಿಂಗ್ ಉದ್ದಿಮೆ ಶುರು ಮಾಡು. ಹೇಗಿದ್ರೂ ಬ್ಯಾಂಕು ಸಾಲ ಕೊಡುತ್ತೆ. ಒಂದು ಕಡೇಲಿ ಲಾಸ್ ಆದ್ರೆ ಇನ್ನೊಂದು ಕಡೇಲಿ ಲಾಭ ಆಗಬಹುದು. ಆಗ ಹೇಗಾದ್ರೂ ಬ್ಯಾಲೆನ್ಸ್ ಮಾಡಬಹುದು” ಅಂದರು.

ಸೋತವನು ಎಲ್ಲರ ಮಾತನ್ನೂ ನಂಬ್ತಾನಂತೆ. ಶರತ್‌ಬಾಬು ಕೂಡ ಹಾಗೇ ಮಾಡಿದ. ಹಿತೈಷಿಗಳ ಮಾತು ಕೇಳಿ 2006ರ ಅಕ್ಟೋಬರ್ 2ರಂದು ಅಹಮದಾಬಾದ್‌ನ ಇನ್ನೊಂದು ಮೂಲೆಯಲ್ಲಿ ಎರಡನೇ ಹೋಟೆಲ್ ಶುರು ಮಾಡಿದ. ಪರಿಣಾಮ ಮಾತ್ರ ತುಂಬ ಕೆಟ್ಟದಿತ್ತು. ಎರಡೂ ಹೋಟೆಲುಗಳಲ್ಲಿ ಅದೆಷ್ಟೇ ಶುಚಿ-ರುಚಿಯ ಉಪಾಹಾರ ಮಾಡಿಟ್ಟರೂ ವ್ಯಾಪಾರ ಕುದುರಲೇ ಇಲ್ಲ. ವರ್ಷ ಕಳೆಯುವುದರೊಳಗೆ ಅನಾಮತ್ತು ಇಪ್ಪತ್ತು ಲಕ್ಷ ರೂ.ಗಳ ಸಾಲ ಇವನ ಹೆಗಲಿಗೇರಿತು.

ಇದೇ ವೇಳೆಗೆ ಅನಾರೋಗ್ಯದಿಂದ ಶರತ್‌ಬಾಬುವಿನ ತಂದೆ ತೀರಿಕೊಂಡ. ಅಲ್ಲಿಗೆ ಇಡೀ ಸಂಸಾರದ ಹೊಣೆ ಇವನ ಹೆಗಲೇರಿತು. ವಾಸಕ್ಕೆ ಮಾದಿಕಪ್ಪಂನ ಅದೇ ಕೊಳೆಗೇರಿಯಲ್ಲಿ ಮನೆಯಿತ್ತು. ಸಮಾಧಾನದ ಮಾತಾಡಲಿಕ್ಕೆ ಅಮ್ಮ ಇದ್ದಳು. ಆದರೆ, ಸಮಾಧಾನದಿಂದ ಸಾಲ ತೀರುತ್ತಾ? ದಿನೇ ದಿನೆ ಬೆಳೆಯುತ್ತ ಹೋದ ಸಾಲದ ಮೊತ್ತ ಮತ್ತು ಸುತ್ತಮುತ್ತಲಿನವರ ಅಪಹಾಸ್ಯದ ಮಾತುಗಳನ್ನು ಕೇಳಿ ಶರತ್‌ಬಾಬು ಕಂಗಾಲಾಗಿ ಹೋದ. ಈ ಮಧ್ಯೆಯೇ ಒಂದು ಹಾಸ್ಟೆಲ್‌ಗೆ ಊಟ ಪೂರೈಸುವ ಕಾಂಟ್ರ್ಯಾಕ್ಟ್ ಪಡೆಯಲು ಮುಂಬಯಿಗೆ ಹೊರಟು ನಿಂತರೆ- ಅಹಮದಾಬಾದ್‌ನಲ್ಲಿಯೇ ರೈಲು ಮಿಸ್ಸಾಯಿತು. ಆಗ ನಡುರಾತ್ರಿ. ವಾಪಸ್ ಮನೆಗೆ ಹೋಗಲು ಬಸ್ಸಿಲ್ಲ. ಆಟೊಗೆ ಆಗುವಷ್ಟು ದುಡ್ಡೂ ಜೇಬಲ್ಲಿಲ್ಲ. ಈತ ದಿಕ್ಕು ತೋಚದೆ ನಿಂತಿದ್ದಾಗಲೇ ಅಲ್ಲಿಗೆ ಬಂದ ರೈಲ್ವೆ ಪೊಲೀಸರು ಇವನ್ಯಾರೋ ಪೋಲಿ ಸುಬ್ಬಣ್ಣ ಅಂದುಕೊಂಡು ನಾಲ್ಕು ಒದ್ದು ಓಡಿಸಿದರು.

ಈ ನೋವು, ನಿರಾಶೆ, ಅಪಮಾನಗಳ ಮಧ್ಯೆಯೂ ಆತ ಬದುಕಲ್ಲಿ ಭರವಸೆ ಕಳೆದುಕೊಳ್ಳಲಿಲ್ಲ. ಹಣ ಮಾಡಲು ಅಡ್ಡದಾರಿ ಹಿಡಿಯಲಿಲ್ಲ. ಬದಲಿಗೆ ತನಗೆ ತಾನೇ ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ” ಎಂದು ಹೇಳಿಕೊಂಡು ಮೌನವಾಗಿದ್ದ.

ಕಡೆಗೂ ಅವನ ಬದುಕಿಗೆ ಬಂಗಾರದ ದಿನ ಬಂದೇ ಬಂತು. ಅವತ್ತು ಮಾರ್ಚ್ 5, 2007. ಗೋವಾದಲ್ಲಿ ಹೊಸದಾಗಿ ಶುರುವಾದ ಯೂನಿವರ್ಸಿಟಿ ಹಾಸ್ಟೆಲ್‌ನ 1500 ವಿದ್ಯಾರ್ಥಿಗಳಿಗೆ ಊಟ ಒದಗಿಸುವ ಕಾಂಟ್ರ್ಯಾಕ್ಟ್ ಶರತ್‌ಬಾಬುಗೆ ಸಿಕ್ಕಿತು. ಅಹಮದಾಬಾದ್‌ನ ಹೋಟೆಲುಗಳ ಉಸ್ತುವಾರಿಯನ್ನು ನಂಬಿಗಸ್ತನೊಬ್ಬನಿಗೆ ವಹಿಸಿಕೊಟ್ಟು ಈತ ಸೀದಾ ಗೋವೆಗೆ ಬಂದ. ಈ ಬದುಕಿನಲ್ಲಿ ಗೆಲ್ಲಲಿಕ್ಕೆ ಇದೇ ಕಡೆಯ ಅವಕಾಶ ಎಂದುಕೊಂಡೇ ಕೇಟರಿಂಗ್ ಕೆಲಸ ಆರಂಭಿಸಿದ. ತುಂಬ ಶ್ರದ್ಧೆ, ಉತ್ಸಾಹದಿಂದ ಒಂದಿಷ್ಟು ಖರ್ಚು ಹೆಚ್ಚಾಗಿ ಲಾಭ ಕಡಿಮೆ ಬಂದರೂ ಚಿಂತೆಯಿಲ್ಲ ಎಂದುಕೊಂಡು ಉಪಾಹಾರ ತಯಾರಿಗೆ ಮುಂದಾದ. ಒಂದೇ ವಾರದ ಅವಧಿಯಲ್ಲಿ ಶರತ್‌ಬಾಬುವಿನ ಹೆಸರು ಕ್ಯಾಂಪಸ್‌ನಲ್ಲಿ ಮನೆಮಾತಾಯಿತು. ಈಗ ತಯಾರಿಸುತ್ತಿದ್ದ ತಿಂಡಿಗಳ ಶುಚಿ-ರುಚಿಗೆ ಮನಸೋತ ಯೂನಿವರ್ಸಿಟಿಯ ಕುಲಪತಿಗಳು- ‘ಕಾಲೇಜಿನ ಎಲ್ಲ ಸಮಾರಂಭಗಳಿಗೂ ನೀನೇ ಊಟ, ತಿಂಡಿ, ಕಾಫಿ ಒದಗಿಸು” ಅಂದರು.

ಪರಿಣಾಮ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದಿನವೂ ಊಟ, ಯೂನಿವರ್ಸಿಟಿಗೆ ಕಾಫಿ ತಿಂಡಿ ಒದಗಿಸುವ ಕೆಲಸದಿಂದಲೇ ದಿನಕ್ಕೆ ಭರ್ತಿ ಒಂದು ಲಕ್ಷ ರೂಪಾಯಿ ಆದಾಯ ಶರತ್‌ಬಾಬುವಿನ ಕೈ ಸೇರತೊಡಗಿತು. ನೋಡ ನೋಡುತ್ತಲೇ ಅವನ ಹೋಟೆಲಿನಲ್ಲಿ 100 ಜನ ಕೆಲಸಗಾರರು ಬಂದರು. ಆರು ತಿಂಗಳಲ್ಲಿ ನೌಕರರ ಸಂಖ್ಯೆ ದುಪ್ಪಟ್ಟಾಯಿತು. ಲಾಭವೂ ಕೈ ತುಂಬ ಬಂತು. ಪರಿಣಾಮ, ಎರಡು ವರ್ಷದಲ್ಲಿ ಮಾಡಿಕೊಂಡಿದ್ದ ಅಷ್ಟೂ ನಷ್ಟವನ್ನು ಈ ಶರತ್‌ಬಾಬು, ಕೇವಲ ಆರು ತಿಂಗಳಲ್ಲಿ ತೀರಿಸಿಬಿಟ್ಟ!

ಈಗ ಏನಾಗಿದೆ ಅಂದರೆ ತಮಿಳ್ನಾಡು, ಗೋವಾ, ಬಾಂಬೆ, ಪೂನಾ, ಅಹಮದಾಬಾದ್‌ಗಳಲ್ಲಿ ಶರತ್‌ಬಾಬುವಿನ ಕೇಟರಿಂಗ್ ಸೆಂಟರ್‌ಗಳು ಆರಂಭವಾಗಿವೆ. ಎರಡು ತಿಂಗಳ ಹಿಂದಷ್ಟೇ ಆತ ಹೈದರಾಬಾದ್‌ನಲ್ಲೂ ಒಂದು ದೊಡ್ಡ ಹೋಟೆಲು ಆರಂಭಿಸಿದ್ದಾನೆ. ಅವನ ವಾರ್ಷಿಕ ಆದಾಯ ಈಗ ನಾಲ್ಕು ಕೋಟಿ ದಾಟಿದೆ. ತಮಿಳ್ನಾಡು ಸರಕಾರ ಅವನಿಗೆ ‘ಫುಡ್ ಕಿಂಗ್” ಎಂಬ ಬಿರುದು ನೀಡಿ ಸನ್ಮಾನಿಸಿದೆ.
ಒಂದು ಸಂತೋಷವೆಂದರೆ, ಕೋಟ್ಯಾಧಿಪತಿಯಾದ ನಂತರವೂ ಶರತ್‌ಬಾಬು ಬದಲಾಗಿಲ್ಲ. ಶ್ರೀಮಂತಿಕೆ ಅವನ ತಲೆ ತಿರುಗಿಸಿಲ್ಲ. ತನ್ನ ಎಲ್ಲ ಹೋಟೆಲುಗಳಲ್ಲೂ ಆತ ಕಡು ಬಡವರಿಗೆ ನೌಕರಿ ಕೊಟ್ಟಿದ್ದಾನೆ. ಅವರಿಗೆ ಧಾರಾಳ ರಜೆ, ಕಾನೂನು ಬದ್ಧವಾದ ಎಲ್ಲ ಸವಲತ್ತು ಒದಗಿಸಿಕೊಟ್ಟಿದ್ದಾನೆ. ಸುಸ್ತಾದರೆ ರಜೆ ತಗೊಳ್ಳಿ. ಆದರೆ ಮೈಗಳ್ಳರಾಗಿ ಕೆಲಸಕ್ಕೆ ಬರಬೇಡಿ ಎಂದು ಜತೆಗಾರರಿಗೆ ನಿಷ್ಠುರವಾಗಿ ಹೇಳಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ, ಕೋಟ್ಯಾಧಿಪತಿ ಅನ್ನಿಸಿಕೊಂಡ ನಂತರ ಕೂಡ, ಬೆಳಗಿನ ಜಾವ 3 ಗಂಟೆಗೇ ಎದ್ದು ತಾನೂ ಚಟ್ನಿ ರುಬ್ಬುತ್ತಾನೆ !

****
ಅಲ್ರೀ, ಕೋಟಿ ಕೋಟಿ ದುಡ್ಡು ಕಾಲಡಿಗೆ ಬಂದು ಬಿದ್ದಿದೆ. ಈಗಾದ್ರೂ ದೊಡ್ಡದೊಂದು ಮನೆ ಕಟ್ಟಿಸೋದಿಲ್ವ? ಇನ್ನಾದ್ರೂ ರೆಸ್ಟ್ ತಗೋಬೇಕು ಅನ್ನಿಸ್ತಾ ಇಲ್ವ ಎಂದು ಪ್ರಶ್ನಿಸಿದರೆ ಅದೇ ನಿರ್ಮಲ ನಗೆಯೊಂದಿಗೆ ಶರತ್‌ಬಾಬು ಹೇಳುತ್ತಾನೆ: ‘ಅಮ್ಮನನ್ನು ಚೆನ್ನಾಗಿ ನೋಡ್ಕೋಬೇಕು. ಮೂರು ಹೊತ್ತೂ ಅವಳಿಗೆ ಒಳ್ಳೆಯ ಊಟ ಹಾಕಬೇಕು. ಪ್ರತಿ ಹಬ್ಬಕ್ಕೂ ಅವಳಿಗೆ ಒಂದೊಂದು ಹೊಸ ಸೀರೆ ತಂದುಕೊಡಬೇಕು. ಬೈ ಛಾನ್ಸ್ ಕಾಯಿಲೆ ಬಿದ್ದರೆ ಅಮ್ಮನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು. ಆಮೇಲೆ- ಅಮ್ಮನನ್ನು ಕಾರಿನಲ್ಲಿ ಕೂರಿಸ್ಕೊಂಡು ಹೋಗಬೇಕು ಅನ್ನೋದು ನನ್ನ ಹಿರಿಯಾಸೆಯಾಗಿತ್ತು. ಅಷ್ಟೂ ಆಸೆ ಈಡೇರಿದೆ. ಅಮ್ಮನ ಖುಷಿಗೆ ಅಂತಾನೇ 35 ಲಕ್ಷ ರೂಪಾಯಿನ ಕಾರು ತಗೊಂಡಿದೀನಿ. ಅದರಲ್ಲಿ ಅವಳನ್ನು ಸುತ್ತಾಡಿಸಿದೀನಿ. ಪ್ರತಿ ಹಬ್ಬದಲ್ಲೂ ಅವಳಿಗೆ ಹೊಸಬಟ್ಟೆ ಕೊಡಿಸಿದ್ದೀನಿ. ಬೇರೆ ಏರಿಯಾದಲ್ಲಿ ಮನೆ ಕಟ್ಟಿಸೋಣ್ವಾ ಅಂದರೆ- ‘ಬೇಡಪ್ಪಾ. ಅದೆಲ್ಲ ಕೋಟ್ಯಂತರದ ವ್ಯವಹಾರ. ಈಗ ಇರುವ ಮನೆಯಲ್ಲೇ ನಮಗೆ ನೆಮ್ಮದಿ ಇದೆ. ಹೊಸ ಮನೆ ಖರೀದಿಗೆ ಬಳಸುವ ದುಡ್ಡನ್ನೇ ಇನ್ನೊಂದು ಪುಟ್ಟ ಹೋಟೆಲ್ ವ್ಯವಹಾರದಲ್ಲಿ ತೊಡಗಿಸು. ಹಾಗೆ ಮಾಡಿದ್ರೆ ಒಂದಷ್ಟು ಬಡವರಿಗೆ ಕೆಲಸ ಕೊಟ್ಟಂತಾಗುತ್ತೆ. ಒಂದಿಷ್ಟು ಕುಟುಂಬಕ್ಕೆ ಆಧಾರವಾದಂತಾಗುತ್ತೆ” ಅಂದಿದ್ದಾಳೆ ಅಮ್ಮ. ಅವಳು ಹೇಳಿದಂತೆಯೇ ಕೇಳಬೇಕು. ಬದುಕಿರುವವರೆಗೂ ಬಡವರಿಗೆ ನೆರವಾಗಬೇಕು ಅನ್ನೋದೇ ನನ್ನ ಆಸೆ.”

ಕೋಟ್ಯಾಧಿಪತಿಯಾದ ನಂತರವೂ ಕೊಳೆಗೇರಿಯಲ್ಲೇ ಉಳಿದಿರುವ ಶರತ್‌ಬಾಬು ಬದುಕಿನ ಕಥೆ ಇವತ್ತು ಮನೆಮನೆಯ ಮಾತಾಗಿದೆ. ಆತನ ಯಶೋಗಾಥೆಯನ್ನು ಅವನಿಂದಲೇ ಕೇಳಲು ಅದೆಷ್ಟೋ ಯುನಿವರ್ಸಿಟಿಗಳು ದುಂಬಾಲು ಬಿದ್ದಿವೆ. ಶರತ್ ಬಾಬು ಕೂಡ ತನ್ನ ಎಲ್ಲ ಬ್ಯುಸಿ ಕೆಲಸದ ಮಧ್ಯೆ ಕರೆದಲ್ಲಿಗೆಲ್ಲ ಹೋಗಿ ಬಂದಿದ್ದಾನೆ. ಹಾಗೆ ಹೋದಲ್ಲೆಲ್ಲ ತನ್ನ ಸಂಕಟದ, ನೋವಿನ ಸಾಹಸದ ಕತೆಯನ್ನು ಹೇಳಿಕೊಂಡು ಹಗುರಾಗಿದ್ದಾನೆ. ನಾನು ಹತ್ತನೇ ತರಗತಿಯ ತನಕ ಸೀಮೆಎಣ್ಣೆ ದೀಪದ ಬೆಳಕಲ್ಲೇ ಓದಿದವನು. ಶ್ರೀಮಂತರು ಮಾತ್ರ ಕೋಟ್ಯಾಧಿಪತಿಗಳಾಗ್ತಾರೆ ಅನ್ನೋ ವಾದ ಸುಳ್ಳು. ಗೆಲ್ಲಬೇಕು ಅಂತ ಆಸೆ ಪಡುವ ಪ್ರತಿಯೊಬ್ಬರೂ ಕೋಟಿ ವೀರರಾಗಬಹುದು. ಅದಕ್ಕೆ ನಾನೇ ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಭಾರತ ಪ್ರಕಾಶಿಸುತ್ತಿದೆ, ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂಬ ಮಾತು ನಿಜವಾಗಬೇಕಾದರೆ ಎಲ್ಲ ಬಡವರಿಗೂ ಕೆಲಸ ಕೊಡಿ ಎಂದು ಸರಕಾರಗಳನ್ನು, ಸಿರಿವಂತರನ್ನು ಒತ್ತಾಯಿಸಿದ್ದಾನೆ.

‘ಮೇರಾ ಭಾರತ್ ಮಹಾನ್” ಎಂದು ಖುಷಿಯಿಂದ ಚೀರಬೇಕು ಅನ್ನಿಸುವುದು ಇಂಥ ಸಾಧಕರ ಕಥೆಯನ್ನು ಕೇಳಿದಾಗಲೇ.

ಕೃಪೆ: ಎ.ಆರ್.ಮಣಿಕಾಂತ್


ಅಮ್ಮ ಹೇಳಿದ ಎಂಟು ಸುಳ್ಳುಗಳು


ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು [^] ತುಮಕೂರಿನ ಮಧ್ಯೆ ನೆಲಮಂಗಲ ಇದೆಯಲ್ಲ? ಅದಕ್ಕೆ ಅಂಟಿಕೊಂಡ ಹಾಗೇ ಇರುವ ಪುಟ್ಟ ಗ್ರಾಮ ನಮ್ದು. ಹಳ್ಳಿ ಅಂದ್ಮೇಲೆ ಅಲ್ಲಿನ ಬದುಕು ಹೇಗಿರತ್ತೆ ಅಂತ ನಿಮಗೇನೂ ವಿವರಿಸಬೇಕಿಲ್ಲ ಅಲ್ವ? ನಮಗಂತೂ ಬಡತನವೇ ಬದುಕಾಗಿತ್ತು. ಕೂಲಿ ಕೆಲಸ ಮಾಡ್ತಿದ್ದ ಅಪ್ಪನಿಗೆ ಒಂದು ನಿಶ್ಚಿತ ಆದಾಯ ಅಂತ ಇರಲೇ ಇಲ್ಲ. ಕೆಲಸಕ್ಕೆ ಕರೀತಿದ್ದ ಸಾಹುಕಾರರು ನಾಲ್ಕು ಕಾಸು ಕೊಡ್ತಿದ್ರು ನಿಜ. ಆದ್ರೆ ಅದಕ್ಕೆ ನಾಲ್ಕು ಜನರ ಕೆಲಸ ಮಾಡಿಸಿಕೊಳ್ತಿದ್ರು. ಹಗಲಿಂದ ದುಡಿದು ದುಡಿದು ಸುಸ್ತಾಗ್ತಿತ್ತು ನೋಡಿ, ಅದಕ್ಕೇ ಅಪ್ಪ ಕುಡಿತ ಕಲಿತ. ಸಂಜೆ ಮನೆಗೆ ಬಂದವನು ಅಮ್ಮನಿಗೆ ಒಂದಿಷ್ಟು ದುಡ್ಡು ಕೊಟ್ಟು, ಮಕ್ಕಳನ್ನೆಲ್ಲ ಕುಶಾಲಿನಿಂದ ಮಾತಾಡಿಸಿ, ಸೀದಾ ಹೆಂಡದಂಗಡಿಗೆ ಹೋಗಿಬಿಡುತ್ತಿದ್ದ.

ಇಂಥ ಬದುಕಿನ ಹಲಗೆಯ ಮೇಲೆ, ಸದಾ ಅಣಕಿಸುತ್ತಿದ್ದ ಕಡು ಬಡತನದ ಮಧ್ಯೆ, ಬಂಧುಗಳ ತಾತ್ಸಾರದ ನಡುವೆ, ನೆರೆಹೊರೆಯವರ ಸಣ್ಣ ಮಾತುಗಳ ನುಂಗಿ ಅಮ್ಮ ನಮ್ಮನ್ನು ಅದೆಷ್ಟು ಚೆನ್ನಾಗಿ ಬೆಳೆಸಿದಳು ಗೊತ್ತಾ ಸಾರ್? ಆದರೆ ಹಾಗೆ ಬೆಳೆಸುವ ಸಂದರ್ಭದಲ್ಲಿ ಅಮ್ಮ ಸಂದರ್ಭಕ್ಕೆ ತಕ್ಕ ಹಾಗೆ ಸುಳ್ಳು ಹೇಳಿಕೊಂಡೇ ಬಂದಳು. ಆ ಸುಳ್ಳುಗಳ ಹಿಂದೆ ಸಂಕಟವಿತ್ತು. ಹಸಿವಿತ್ತು. ಕಣ್ಣೀರಿತ್ತು. ನಿಟ್ಟುಸಿರಿತ್ತು. ಈ ಬದುಕಿನ ಬಗ್ಗೆ ಬಡತನದ ಬಗ್ಗೆ; ಸಿಡಿಮಿಡಿಯಿತ್ತು. ಏನೂ ಮಾಡಲಾಗದ ತನ್ನ ಅಸಹಾಯಕತೆಯ ಬಗ್ಗೆ ವಿಷಾದವಿತ್ತು. ಮಕ್ಕಳು ಚೆನ್ನಾಗಿರಲಿ ಎಂಬ ಒಂದೇ ಕಾರಣಕ್ಕಾಗಿ ಅಮ್ಮ ಮೇಲಿಂದ ಮೇಲೆ ಒಂದೊಂದೇ ಸುಳ್ಳು ಹೇಳ್ತಿದ್ಲು. ಅದೆಲ್ಲ ಸುಳ್ಳು ಅಂತ ನಮಗೆ ಗೊತ್ತಾಗುವ ವೇಳೆಗೆ ತುಂಬ ತಡವಾಗಿತ್ತು. ಈಗ, ಅಮ್ಮ ಹೇಳಿದ್ದ ಸುಳ್ಳುಗಳನ್ನೆಲ್ಲ ಸಂದರ್ಭ ಸಹಿತ ನಿಮ್ಮೊಂದಿಗೆ ಹಂಚ್ಕೋಬೇಕು ಅನ್ನಿಸ್ತಿದೆ ಸಾರ್.

***
*ನಾನು ಆಗಷ್ಟೇ ಒಂದನೇ ತರಗತಿಗೆ ಸೇರಿದ್ದೆ. ಯಥಾಪ್ರಕಾರ ಮನೇಲಿ ಮಧಾಹ್ನದ ಬಡತನವಿತ್ತು. ಆದರೆ ಅದು ನಮಗೆ ಗೊತ್ತೇ ಆಗದಂತೆ ಅಮ್ಮ ಎಚ್ಚರ ವಹಿಸಿದ್ದಳು. ಬೆಳಗ್ಗೆ ಹೊತ್ತು ತಿಂಡಿ ತಿಂದು ನಮಗೆ ಅಭ್ಯಾಸವೇ ಇರಲಿಲ್ಲ. ಬೆಳಗ್ಗೆ ಬೆಳಗ್ಗೇನೇ ಅಮ್ಮ ಅಕ್ಕಿಯದೋ, ರಾಗೀದೋ ಗಂಜಿ ಮಾಡ್ತಿದ್ದಳು. ಅಪ್ಪ ಲಗುಬಗೆಯಿಂದ ಗಂಜಿ ಕುಡಿದು ಹೋದ ಮೇಲೆ ಉಳಿದಿದ್ದರಲ್ಲಿ ನಾನು ಅಮ್ಮ ಪಾಲು ಮಾಡ್ಕೋತಾ ಇದ್ವಿ. ತುಂಬಾ ಸಂದರ್ಭಗಳಲ್ಲಿ ಏನಾಗ್ತಾ ಇತ್ತು ಅಂದ್ರೆ, ಅಮ್ಮ ತಟ್ಟೆಗೆ ಗಂಜಿ ಹಾಕಿದ ತಕ್ಷಣ ನಾನು ಗಟಗಟನೆ ಕುಡಿದುಬಿಡ್ತಿದ್ದೆ. ಎರಡೇ ನಿಮಿಷದಲ್ಲಿ ನನ್ನ ತಟ್ಟೆ ಖಾಲಿಯಾದದ್ದು ಕಂಡು ಅಮ್ಮ, ಒಮ್ಮೆ ಮೆಲ್ಲನೆ ನಕ್ಕು ತನ್ನ ತಟ್ಟೇಲಿ ಇದ್ದುದನ್ನೂ ನನಗೇ ಕೊಡ್ತಿದ್ಲು.

ನಾನು ಅಚ್ಚರಿಯಿಂದ’ಅಯ್ಯೋ ಯಾಕಮ್ಮಾ ಎಂಬಂತೆ ನೋಡಿದರೆ ಕಂದಾ, ನನಗೆ ಈಗ ಹಸಿವಾಗ್ತಾನೇ ಇಲ್ಲ ನೋಡಪ್ಪ. ನೀನು ಸ್ಕೂಲಿಗೆ ಹೋಗ್ಬೇಕಲ್ಲ? ಸುಸ್ತಾಗುತ್ತೆ. ತಗೋ, ಹೊಟ್ಟೆ ತುಂಬ ಕುಡಿ. ಹೇಗಿದ್ರೂ ನಂಗೆ ಹಸಿವಾಗ್ತಾ ಇಲ್ಲವಲ್ಲ. ಅನ್ನುತ್ತಿದ್ದಳು. ಅದು ಅಮ್ಮ ಹೇಳಿದ ಮೊದಲ ಸುಳ್ಳು.

*ಬಡವರಿಗೆ ಭಯ ಭಕ್ತಿ ಜಾಸ್ತಿ ಅಂತಾರೆ. ನಮ್ಮ ಮಟ್ಟಿಗೂ ಈ ಮಾತು ನಿಜವಾಗಿತ್ತು. ಅದೇ ಕಾರಣದಿಂದ ಹಬ್ಬ ಹರಿದಿನಗಳೂ ಜಾಸ್ತಿ ಇದ್ದವು. ಪ್ರತಿ ಹಬ್ಬಕ್ಕೂ ಬೆಲ್ಲದ ಪಾಯಸವೇ ಸ್ಪೆಷಲ್ಲು! ಆಗಲೂ ಅಷ್ಟೇ ಸಾರ್. ಅಮ್ಮ ಒಂದು ಪಾತ್ರೇಲಿ ಪಾಯಸ ಮಾಡಿರ್ತಾ ಇದ್ದಳು. ಹಬ್ಬದ ದಿನ ಮಾತ್ರ ಗಂಜಿಯ ಬದಲಿಗೆ ಅನ್ನ ಮಾಡಿರ್ತಾ ಇದ್ಳು. ನಾನು ಆಸೆಯಿಂದ ತಟ್ಟೆ ತುಂಬಾ ಅನ್ನ ಹಾಕಿಸ್ಕೊಂಡು ಗಬಗಬಾಂತ ತಿಂದು ಮುಗಿಸ್ತಿದ್ದೆ. ಆಮೇಲೆ ಒಂದು ರೌಂಡ್ ಪಾಯಸ ಕುಡಿದು, ಮತ್ತೆ ಆ ಪಾತ್ರೆಯ ಕಡೆಗೇ ಆಸೆಯಿಂದ ನೋಡ್ತಿದ್ದೆ ನೋಡಿ, ಆಗಲೇ ಅಮ್ಮ ಅಷ್ಟೂ ಪಾಯಸವನ್ನು ನಂಗೆ ಕೊಟ್ಟು ‘ಕಂದಾ, ಎಲ್ಲವನ್ನೂ ಕುಡ್ಕೋ. ನನಗೆ ವಿಪರೀತ ಹಲ್ಲು ನೋವು ಕಣಪ್ಪಾ. ಜತೆಗೆ ಸಿಹಿ ಅಂದ್ರೆ ನಂಗೆ ಇಷ್ಟವಿಲ್ಲ’ ಅಂದುಬಿಡುತ್ತಿದ್ದಳು. ನಂತರ ಸರಸರನೆ ಅಡುಗೆ ಮನೆಗೆ ಹೋಗಿ, ಒಂದು ಚೊಂಬಿನ ತುಂಬಾ ನೀರು ಕುಡಿದು- ‘ಹೌದಪ್ಪಾ, ನನಗೆ ಸಿಹಿ ಇಷ್ಟವಿಲ್ಲ’ ಅಂತಿದ್ಲು. ಅದು ಅಮ್ಮ ಹೇಳಿದ ಎರಡನೇ ಸುಳ್ಳು!

*ಆಗಷ್ಟೇ ನಾನು ಐದನೇ ತರಗತಿಗೆ ಬಂದಿದ್ದೆ. ಸ್ಕೂಲಿಂದ ಟೂರ್ ಹೊರಟಿದ್ರು. ಒಬ್ಬರಿಗೆ 300 ರೂ. ಶುಲ್ಕ. ಎಲ್ಲ ವಿಷಯ ಹೇಳಿ ‘ಅಪ್ಪಾ, ಕಾಸು ಕೊಡಪ್ಪಾ’ ಅಂದೆ. ‘ಮಗಾ, ಇಡೀ ವರ್ಷ ದುಡಿದ್ರೂ ನನಗೆ ಅಷ್ಟು ದುಡ್ಡು ಸಿಗಲ್ಲ. ಬಡವಾ ನೀ ಮಡಗಿದಂಗಿರು ಅಂದಿದಾರೆ ದೊಡ್ಡವರು. ಹಾಗೇ ಇರು. ಟೂರೂ ಬೇಡ, ಗೀರೂ ಬೇಡ’ ಅಂದೇಬಿಟ್ಟ ಅಪ್ಪ. ಅವತ್ತಿಂದಲೇ ಹಗಲಿಡೀ ಕೆಲಸ ಮುಗಿಸಿ, ರಾತ್ರಿ ಅದೆಷ್ಟೋ ಹೊತ್ತಿನವರೆಗೂ ಬೀಡಿ ಕಟ್ತಾ ಇರ್‍ತಿದ್ಲು ಅಮ್ಮ. ಯಾಕಮ್ಮಾ ಹೀಗೆ ಅಂದ್ರೆ ‘ನಂಗೆ ರಾತ್ರಿ ಹೊತ್ತು ನಿದ್ರೇನೇ ಬರ್‍ತಿಲ್ಲ ಮಗನೇ’ ಅಂದು ಕೆಲಸ ಮುಂದುವರಿಸ್ತಾ ಇದ್ಳು. ಕಡೆಗೊಂದು ದಿನ ಮುದುರಿ ಮುದುರಿ ಮುದುರಿಕೊಂಡಿದ್ದ ನೋಟುಗಳನ್ನೆಲ್ಲ ಕೊಟ್ಟು “ಟೂರ್‌ಗೆ ಹೋಗಿದ್ದು ಬಾಪ್ಪ” ಅಂದಳು. ಅದು ಸಾಲ ಮಾಡಿದ ಹಣ ಎದು ನನಗೆ ಗೊತ್ತಾಗುವ ವೇಳೆಗೆ ಅಮ್ಮ ಮತ್ತೆ ಬೀಡಿ ಕಟ್ಟಳು ಕುಳಿತಾಗಿತ್ತು. ಹಿಂದೆಯೇ ‘ಅಯ್ಯೋ ನಂಗೆ ನಿದ್ರೇನೇ ಬರ್‍ತಿಲ್ಲ’ ಎಂಬ ಅದೇ ಹಳೆಯ ಮಾತು ಬೇರೆ. ಹೌದು. ಅದು ಅಮ್ಮ ಹೇಳಿದ ಮೂರನೇ ಸುಳ್ಳು.

*ಏಳನೇ ತರಗತಿಗೆ ಬರುವ ವೇಳೆಗೆ ನನಗೆ ಸ್ಕಾಲರ್‌ಷಿಪ್ ಬಂತು. ಭರ್ತಿ ನೂರು ರೂಪಾಯಿ. ಅದರಲ್ಲಿ ಅಮ್ಮನಿಗೆ ಒಂದು ಹೊಸ ಸೀರೆ ತೆಗೆದುಕೊಡೋಣ ಅಂತ ಆಸೆಯಿತ್ತು. ದುಡ್ಡನ್ನು ಅಮ್ಮನಿಗೆ ಕೊಟ್ಟು, ‘ಕೆಂಪು ಕಲರ್ದು ಒಂದು ಸೀರೆ ತಗೋಮ್ಮ. ಅದರಲ್ಲಿ ನೀನು ಚೆಂದ ಕಾಣ್ತೀಯ’ ಅಂದೆ.ಅಷ್ಟಕ್ಕೇ ನನ್ನನ್ನು ಬಾಚಿ ತಪ್ಪಿಕೊಂಡು ಹಣೆಗೆ ಮುತ್ತಿಟ್ಟು, ನಿಂತಲ್ಲೇ ಬಿಕ್ಕಳಿಸಿದಳು ಅಮ್ಮ. ನಂತರ, ಅವತ್ತೇ ಸಂತೆಗೆ ಹೋಗಿ ಅಪ್ಪನಿಗೂ ನನಗೂ ಹೊಸ ಬಟ್ಟೆ ತಂದಳು. ‘ನಿನಗೆ’ ಅಂದಿದ್ದಕ್ಕೆ ನನಗ್ಯಾಕಪ್ಪ ಬಟ್ಟೆ? ನನಗೆ ಅಂಥ ಆಸೆಯೇನೂ ಇಲ್ಲ ಎಂದು ತೇಲಿಸಿ ಮಾತಾಡಿದಳು. ಅದು ಅಮ್ಮ ಹೇಳಿದ ನಾಲ್ಕನೇ ಸುಳ್ಳು!

*ಕೆಲಸ ಮತ್ತು ಕುಡಿತ ಎರಡೂ ವಿಪರೀತ ಇತ್ತಲ್ಲ, ಅದೇ ಕಾರಣದಿಂದ ಅಪ್ಪ ಅದೊಂದು ದಿನ ದಿಢೀರ್ ಸತ್ತು ಹೋದ. ಆಗ ಅಮ್ಮನಿಗೆ ಬರೀ 32 ವರ್ಷ! ಸಂಸಾರದ ದೊಡ್ಡ ಹೊರೆ ಅಮ್ಮನ ಹೆಗಲಿಗೆ ಬಿತ್ತು. ಬಡತನದ ಮಧ್ಯೆ, ಹಸಿವಿನ ಮಧ್ಯೆ, ಹೋರಾಟದ ಮಧ್ಯೆಯೇ ಬದುಕಿದೆವಲ್ಲ, ಹಾಗಾಗಿ ಅಮ್ಮನಿಗೆ ದಾಂಪತ್ಯ ಸುಖ ಅಂದರೆ ಏನೆಂದೇ ಗೊತ್ತಾಗಿರಲಿಲ್ಲ. ಅದನ್ನೇ ಪಾಯಿಂಟ್ ಎಂದಿಟ್ಟುಕೊಂಡ ಬಂಧುಗಳು- ‘ಇನ್ನೊಂದು ಮದುವೆ ಮಾಡ್ಕೊಳ್ಳೇ. ನಿಂಗಿನ್ನೂ ಚಿಕ್ಕ ವಯಸ್ಸು. ಗಂಡಿನ ಸಾಂಗತ್ಯ ಬಯಸುವ ವಯಸ್ಸು ಅದು’ ಎಂದೆಲ್ಲಾ ಒತ್ತಾಯಿಸಿದರು.’ಇಲ್ಲ. ಇಲ್ಲ. ನನ್ನೆದೆಯಲ್ಲಿ ಈಗ ಪ್ರೀತಿ ಪ್ರೇಮ, ಪ್ರಣಯ ಎಂಬಂಥ ಸೆಂಟಿಮೆಂಟಿಗೆ ಜಾಗವೇ ಇಲ್ಲ’ ಅಂದು ದೃಢವಾಗಿಯೇ ಹೇಳಿಬಿಟ್ಟಳಲ್ಲ ಅಮ್ಮ…ನಂಗೆ ಗೊತ್ತು. ಅದು, ಅಮ್ಮ ಹೇಳಿದ ಐದನೇ ಸುಳ್ಳು.

*ಓದು ಮುಗಿದದ್ದೇ ತಡ, ನಂಗೆ ಕೆಲಸ ಸಿಕ್ತು. ಸಿಟಿಯಲ್ಲಿ ದೊಡ್ಡ ಮನೆ ಮಾಡಿದೆ. ಒಂದಿಷ್ಟು ದುಡ್ಡು ಮಾಡಿಕೊಂಡೆ. ಅಮ್ಮ ನನಗೋಸ್ಕರ ಪಟ್ಟ ಕಷ್ಟವೆಲ್ಲ ಗೊತ್ತಿತ್ತಲ್ಲ, ಅದೇ ಕಾರಣದಿಂದ, ಈ ಹಣವನ್ನೆಲ್ಲ ಅಮ್ಮನ ಕೈಗಿಟ್ಟು ‘ಇದೆಲ್ಲಾ ನಿನ್ನದು ಅಮ್ಮಾ. ತಗೊಂಡು ಹಾಯಾಗಿರು. ಈಗಿಂದಾನೇ ಕೆಲಸ ಮಾಡೋದು ನಿಲ್ಸು. ಈ ಗುಡಿಸಲಿನಂಥ ಮನೆ ಬಿಟ್ಟು ಬೆಂಗಳೂರಿಗೆ ಬಾ. ನನ್ನ ಜತೇಲೇ ಇದ್ದು ಬಿಡು’ ಎಂದೆಲ್ಲಾ ಹೇಳಬೇಕು ಅನ್ನಿಸ್ತು. ಸಡಗರದಿಂದಲೇ ಊರಿಗೆ ಹೋದವನು ಎಲ್ಲವನ್ನೂ ಹೇಳಿದೆ. ಅಷ್ಟೂ ದುಡ್ಡನ್ನು ಅಮ್ಮನ ಮುಂದೆ ಸುರಿದೆ. ಅಮ್ಮ ಅದನ್ನು ನೋಡಲೇ ಇಲ್ಲ ಎಂಬಂತೆ, ಅಷ್ಟನ್ನೂ ತೆಗೆದು ನನ್ನ ಕೈಲಿಟ್ಟು ಹೇಳಿದಳು: ‘ಮಗಾ, ನನ್ನತ್ರ ದುಡ್ಡಿದೆ ಕಣಪ್ಪಾ. ಮಡಿಕೆ, ಕುಡಿಕೆಯಲ್ಲೆಲ್ಲ ಅಡಗಿಸಿಟ್ಟಿದೀನಿ ಕಣೋ. ಅದೆಲ್ಲ ಖರ್ಚಾದ ಮೇಲೆ ನಿನ್ನ ಹತ್ರ ಕೇಳ್ತೀನಿ. ಸದ್ಯಕ್ಕಂತೂ ನನಗೆ ದುಡ್ಡಿನ ಅಗತ್ಯಾನೇ ಇಲ್ಲ. ಅದು ಹೌದು, ಅದು ಅಮ್ಮ ಹೇಳಿದ ಆರನೇ ಸುಳ್ಳು.

*ಉಹುಂ, ಅಮ್ಮ ನನ್ನ ಯಾವುದೇ ಆಸೆಗೂ ಅಡ್ಡಿ ಬರಲಿಲ್ಲ. ಮುಂದೆ ನನ್ನಿಷ್ಟದಂತೆಯೇ ಮದುವೆಯಾಯಿತು. ಶ್ರೀಮಂತರ ಮನೆಯಿಂದ ಬಂದಿದ್ದ ನನ್ನ ಹೆಂಡತಿ ಅಮ್ಮನಿಗೆ ಅಡ್ಜೆಸ್ಟ್ ಆಗಲೇ ಇಲ್ಲ. ಅಮ್ಮನ ಮೇಲೆ ಅವಳದು ದಿನಾಲೂ ಒಂದಲ್ಲ ಒಂದು ದೂರು. ನಿಮ್ಮಲ್ಲಿ ಸುಳ್ಳು ಹೇಳೋದೇಕೆ ಸಾರ್? ಪ್ರಾಯದ ಮದ, ಹೆಂಡತಿ ಮೇಲಿನ ಮೋಹ ನೋಡಿ, ನಾನೂ ಅವಳ ತಾಳಕ್ಕೆ ತಕ್ಕಂತೆಯೇ ಕುಣಿದೆ. ಒಂದೆರಡು ಬಾರಿ ಅಮ್ಮನನ್ನೇ ಗದರಿಸಿಬಿಟ್ಟೆ. ಹೊಂದಾಣಿಕೆ ಮಾಡ್ಕೊಂಡು ಹೋಗೋಕ್ಕಾಗಲ್ವ ಎಂದು ರೇಗಿಬಿಟ್ಟೆ. ಅವತ್ತು ಇಡೀ ದಿನ ಅಮ್ಮ ಮಂಕಾಗಿದ್ದಳು. ಆ ದೃಶ್ಯ ಕಂಡದ್ದೇ ನನಗೆ ಕಪಾಲಕ್ಕೆ ಹೊಡೆದಂತಾಯಿತು. ‘ಅಮ್ಮಾ. ತಪ್ಪಾಯ್ತು ಕ್ಷಮಿಸು’ ಎಂದು ನಾನು ಕೇಳುವ ಮೊದಲೇ-’ನಾನು ಹಳೇ ಕಾಲದ ಹೆಂಗ್ಸು. ತಪ್ಪು ಮಾಡಿಬಿಟ್ಟೆ. ಕ್ಷಮಿಸಿಬಿಡ್ರಪ್ಪಾ’ ಎಂದ ಅಮ್ಮ ‘ನಮ್ಮಿಬ್ಬರದೂ ತಪ್ಪಿಲ್ಲ’ ಎಂದು ಘೋಷಿಸಿದಳು. ಅದು ಅಮ್ಮ ಹೇಳಿದ ಏಳನೇ ಸುಳ್ಳು.

*ಕಾಲ ಅನ್ನೋದು ಕೃಷ್ಣ ಚಕ್ರದ ಥರಾ ಗಿರಗಿರಗಿರಾಂತ ಓಡಿಬಿಡ್ತು. ಅಮ್ಮ ಆಸ್ಪತ್ರೆ ಸೇರಿದ್ದಳು. ದಡಬಡಿಸಿ ಹೋದರೆ ‘ನಿಮ್ಮ ತಾಯಿಗೆ ಕ್ಯಾನ್ಸರ್ ಕಣ್ರೀ. ಆಗಲೇ ಫೈನಲ್ ಸ್ಟೇಜ್‌ಗೆ ಬಂದು ಬಿಟ್ಟಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಿ. ಇನ್ನು ಕೆಲವೇ ದಿನ ಅವರು ಬದುಕೋದು. ಆಗಾಗಿ ಹುಶಾರಾಗಿ ನೋಡಿಕೊಳ್ಳಿ ಅಂದ್ರು ಡಾಕ್ಟರ್. ನಾನು ಹೆದರುತ್ತ, ಹೆದರುತ್ತಲೇ ಅಮ್ಮನ ಬಳಿ ಬಂದೆ. ಒಂದು ಕಾಲದಲ್ಲಿ ಸುರಸುಂದರಿಯಂತಿದ್ದ ಅಮ್ಮ; ತನ್ನ ಪಾಡಿಗೆ ತಾನೇ ಹಾಡು ಹೇಳಿಕೊಂಡು ಡ್ಯಾನ್ಸು ಮಾಡುತ್ತಿದ್ದ ಅಮ್ಮ; ಮಿಣುಕು ದೀಪದ ಬೆಳಕಲ್ಲಿ ಅಪ್ಸರೆಯಂತೆ ಕಾಣುತ್ತಿದ್ದ ಅಮ್ಮ; ದಿನವೂ ನನಗೆ ದೃಷ್ಟಿ ತೆಗೆಯುತ್ತಿದ್ದ ಅಮ್ಮ; ತನ್ನ ಪಾಲಿನ ಊಟವನ್ನೆಲ್ಲ ನನಗೇ ಕೊಡುತ್ತಿದ್ದ ಅಮ್ಮ; ಎಲ್ಲ ಸಂಕಟಗಳಿಗೂ ಸವಾಲು ಹಾಕಿ ಗೆದ್ದ ಅಮ್ಮ ಜೀವಚ್ಛವವಾಗಿ ಮಲಗಿದ್ದಳು. ಆಕೆಯ ಕಂಗಳಲ್ಲಿ ಕಾಂತಿ ಇರಲಿಲ್ಲ. ಕಂಬನಿಯೂ ಇರಲಿಲ್ಲ.

ಅಮ್ಮನನ್ನು ಆ ಸ್ಥಿತಿಯಲ್ಲಿ ನೋಡಿದ್ದೇ ನನಗೆ ಕಣ್ತುಂಬಿ ಬಂತು. ಆಕೆಯನ್ನು ಕಡೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬ ಗಿಲ್ಟ್ ಕಾಡಿತು. ತಕ್ಷಣವೇ, ಅದು ಆಸ್ಪತ್ರೆ ಎಂಬುದನ್ನೂ ಮರೆತು ಜೋರಾಗಿ ಬಿಕ್ಕಳಿಸಿದೆ. ತಕ್ಷಣವೇ, ನಡುಗುತ್ತಿದ್ದ ಕೈಗಳಿಂದ ನನ್ನ ಕಂಬನಿ ತೊಡೆದ ಅಮ್ಮ ಹೇಳಿದಳು: ನಂಗೇನೂ ಆಗಿಲ್ಲ ಕಂದಾ, ಅಳಬೇಡ. ನಂಗೇನೂ ಆಗಿಲ್ಲ. ಅದು, ಅಮ್ಮ ಹೇಳಿದ ಕೊನೆಯ ಸುಳ್ಳು!

ನ್ಯಾ.ಶಿವರಾಜ್ .ವಿ. ಪಾಟೀಲ


ನನಗೆ ಹಾಗೂ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ - ವ್ಯಕ್ತಿತ್ವ