Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday, 9 November 2011

ಭೂಗೋಳಶಾಸ್ತ್ರ ಭಾಗ - 5 ನೇಪಾಳ

                                       

                    ಇದೊಂದು ಪರ್ವತಮಯ ದೇಶ. ಇದರ ಉತ್ತರಭಾಗಕ್ಕೆ ಚೀನಾ ಇದ್ದು ಉಳಿದ ಮೂರು ದಿಕ್ಕಿಗೆ ಭಾರತ ಆವರಿಸಿಕೊಂಡಿದೆ.

ಭೌಗೋಳಿಕ ಲಕ್ಷಣಗಳು :

೧. ಪ್ರರ್ವತ ಪ್ರದೇಶ
೨. ಟೆರಾಯಿ
೩. ಕಣಿವೆ ಪ್ರದೇಶ

       ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರವಾದ ಮೌಂಟ್ ಎವೆರೆಸ್ಟ್ ನೇಪಾಳದಲ್ಲಿದೆ. ಇನ್ನುಳಿದ ಪ್ರಮುಖ ಪರ್ವತ ಶಿಖರಗಳು ಇದೇ ಸಾಲಿನಲ್ಲಿ ಬರುತ್ತವೆ.
                                                                 ಮೌಂಟ್ ಎವೆರೆಸ್ಟ್
 ಹಿಮಾಲಯ ಪರ್ವತಗಳ ಬುಡದಲ್ಲಿರುವ ಟೆರಾಯಿ ಎಂಬ ತಗ್ಗು ಪ್ರದೇಶದಲ್ಲಿ ನದಿಗಳು ಹುಟ್ಟುತ್ತವೆ.

ಪಮುಖ ನದಿಗಳು : -
        ಕರ್ನಾಲಿ (ಘಾಘ್ರ), ಕಾಳಿ, ಘಂಡಕ್ ಮತ್ತು ಸಪ್ತಕೋಸಿ

  ಕದಿದಾದ ಪರ್ವತಗಳ ನಡುವೆ ಅನೇಕ ಕಣಿವೆಗಳಿವೆ. ಅವುಗಳಲ್ಲಿ ಕಠ್ಮಂಡು ಮತ್ತು ಪೊಖಾರ ಕಣಿವೆಗಳು ಪ್ರಮುಖವಾಗಿವೆ.


           ನೇಪಾಳದ ವಾಯುಗುಣ

    ಉತ್ತರ ಭಾಗವು ಹಿಮಚ್ಚಾದಿತವಾಗಿದ್ದು, ಉಷ್ಣತೆ ಬಹಳ ಕಡಿಮೆಯಿದೆ. ಕಾರಣ ಈ ಪ್ರದೇಶವು ಬಹಳ ಎತ್ತರವಾಗಿದೆ. ಟೆರಾಯಿ ಪ್ರದೇಶದಲ್ಲಿ ಬಿಸಿಲು ಹೆಚ್ಚಿರುತ್ತದೆ.

ಸಸ್ಯವರ್ಗ ಮತ್ತು ಪ್ರಾಣಿವರ್ಗ :

    ಹಿಮಾಲಯದ ದಕ್ಷಿಣದ ಇಳಿಜಾರುಗಳಲ್ಲಿ ದಟ್ಟವಾದ ಅರಣ್ಯಗಳಿವೆ. ಅತ್ಯಂತ ಎತ್ತರದ ಪ್ರದೇಶದಲ್ಲಿ `ಅಲ್ಫೈನ್' ಸಸ್ಯವರ್ಗವಿದೆ.
         `ರೈನೋಸಿರಸ್' (ಖಡ್ಗಮೃಗ), ಹುಲಿ, ಚಿರತೆ, ಕರಡಿ ಮತ್ತು ಜಿಂಕೆಗಳು ವಾಸಿಸುತ್ತವೆ. ಎತ್ತರದ ಪ್ರದೇಶಗಳಲ್ಲಿ ಕಸ್ತೂರಿ ಮೃಗ, ಹಿಮಚಿರತೆ, ಯಾಕ್ ಮತ್ತು ಕೆಂಪು ಪಾಂಡಾಗಳಿವೆ.

ಪ್ರಧಾನ ವೃತ್ತಿ - ವ್ಯವಸಾಯ

     ದೇಶವು ಪರ್ವತಮಯವಾಗಿರುವದರಿಂದ ಗಣಿಗಾರಿಕೆ ಸಾಧ್ಯವಾಗಿಲ್ಲ. ಅಭ್ರಕ, ತಾಮ್ರ, ಕಬ್ಬಿಣದ ಅದಿರು, ಲಿಗ್ನೈಟ್ ದೊರೆಯುತ್ತವೆ.
       ಅಮೃತ ಶಿಲೆಯನ್ನು ಹೊಳಪು ಮಾಡುವುದು ಇಲ್ಲಿನ ಜನರ ವಿಶೇಷ ಕಸುಬು

ಖಟ್ಮಂಡು, ವಿರಾಟನಗರ, ಪೋಖಾರ ಇಲ್ಲಿನ ಮುಖ್ಯ ನಗರಗಳಾಗಿವೆ.

                      ===========================

Monday, 7 November 2011

ಭೂಗೋಳಶಾಸ್ತ್ರ ಭಾಗ -4


                                      ಪಾಕಿಸ್ತಾನ
                                 


   ಪಾಕಿಸ್ತಾನದ ಪಶ್ಚಿಮದಲ್ಲಿ ಸುಲೈಮಾನ್ ಮತ್ತು ಕಿರ್ತಾರ್ ಪರ್ವತಶ್ರೇಣಿಗಳಿವೆ. ಖೈಬರ್ ಮತ್ತು ಬೋಲಾನ್ ಎಂಬ ಎರಡು ಮುಖ್ಯ ಕಣಿವೆಗಳಿವೆ.

ಪಾಕಿಸ್ತಾನದ ಪ್ರಮುಖ ನದಿ - ಸಿಂಧೂ
ಉಪನದಿಗಳು - ಝೀಲಂ, ಚೀನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್.

ಸಿಂಧೂ ನದಿಯ ಉಪನದಿಗಳಿಂದ ಪಾಕಿಸ್ತಾನದ ನೆಲ ಫಲವತ್ತಾಗಿದೆ. ಅದಕ್ಕಾಗಿ ಪಾಕಿಸ್ತಾನವನ್ನು `ಸಿಂಧೂನದಿಯ ವರಪ್ರಸಾದ' ಎಂದು ಕರೆಯಲಾಗಿದೆ.

ಗೋಧಿ ಮತ್ತು ಭತ್ತ - ಪಾಕಿಸ್ತಾನದ ಪ್ರಮುಖ ಬೆಳೆಗಳು
ಕಬ್ಬು ಮತ್ತು ಹತ್ತಿ - ಪ್ರಮುಖ ವಾಣಿಜ್ಯ ಬೆಳೆಗಳು

ಪಾಕಿಸ್ತಾನದ ಪ್ರಮುಖ ಬಂದರು - ಕರಾಚಿ
                                
                                                           ಕರಾಚಿ
ಖೈಬರ್ ಕಣಿವೆಯ ಮುಖ್ಯದ್ವಾರ - ಪೇಷಾವರ್

Sunday, 6 November 2011

ಭೂಗೋಳಶಾಸ್ತ್ರ ಭಾಗ -3


                       

       ಏಷ್ಯಾ ಖಂಡವು 10 ಡಿಗ್ರಿ ದಕ್ಷಿಣ ಅಕ್ಷಾಂಶದಿಂದ 80 ಡಿಗ್ರಿ ಉತ್ತರ ಅಕ್ಷಾಂಶದವರೆಗೆ ೨೫ ಡಿಗ್ರಿ ಪೂರ್ವ ರೇಖಾಂಶದದಿಂದ 180 ಡಿಗ್ರಿ ಪಶ್ಚಿಮ ರೇಖಾಂಶದವರೆಗೂ ವಿಸ್ತರಿಸಿದೆ.

     ಏಷ್ಯಾ ಖಂಡವು ಮೂರು ಕಡೆ ಸಮುದ್ರಗಳಿಂದ ಒಳಗೊಂಡಿದೆ. ಅವು
ಉತ್ತರಕ್ಕೆ - ಆರ್ಕಟಿಕ್ ಸಾಗರ
ಪೂರ್ವಕ್ಕೆ ಫೆಸಿಫಿಕ್ ಸಾಗರ
ದಕ್ಷಿಣಕ್ಕೆ - ಹಿಂದೂ ಮಹಾಸಾಗರ

  ಬೇರ್ಪಡುವಿಕೆಗಳು

* ಏಷ್ಯಾ ಯುರೋಪ್‍ಗಳು ಬೇರ್ಪಟ್ತಿದ್ದು - ಯೂರಲ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಕೂಡಿದೆ.

* ಏಷ್ಯಾ - ಆಫ್ರಿಕಾ ಬೇರ್ಪಟ್ಟಿದ್ದು - ಸೂಯೆಜ್ ಕಾಲುವೆಯಿಂದ

* ಏಷ್ಯಾ - ಉತ್ತರ ಅಮೆರಿಕಾ - ಬೇರಿಂಗ್ ಜಲಸಂಧಿ

                               
                                                          ಸೂಯೆಜ್ ಕಾಲುವೆ

                                          ಮೇಲ್ಮೈ ಲಕ್ಷಣಗಳು

        ಏಷ್ಯಾದ ಉತ್ತರ ಭಾಗದ ತಗ್ಗು ಪ್ರದೇಶವು ಜಗತ್ತಿನ ಅತ್ಯಂತ ವಿಸ್ತಾರವಾದ ಪ್ರದೇಶವಾಗಿದೆ. ಈ ಪ್ರದೇಶವನ್ನು `ಮಹಾಸೈಬೇರಿಯನ್ ಮೈದಾನ' ಎಂದು ಕರೆಯುತ್ತಾರೆ.

ಉತ್ತರದಲ್ಲಿ ದಕ್ಷಿಣ ಭಾಗಕ್ಕೆ ಪರ್ವತ ಶ್ರೇಣಿ, ಪರ್ವತ ಗ್ರಂಥಿ ಮತ್ತು ಪ್ರಸ್ಥಭೂಮಿಗಳಿವೆ.

ತಿಳಿದಿರಲಿ : ಎರಡು ಅಥವಾ ಹೆಚ್ಚು ಪರ್ವತ ಶ್ರೇಣಿಗಳು ಸಂಧಿಸುವ ಸ್ಥಳವನ್ನು ಗ್ರಂಥಿ ಎನ್ನುತ್ತೇವೆ.

ಪ್ರಮುಖ ಪರ್ವತ ಗ್ರಂಥಿಗಳು = ಪಾಮಿರ್ ಮತ್ತು ಆರ್ಮಿನೀಯ

ಪ್ರಪಂಚದ ಅತ್ಯಂತ ಶಿಖರ : ಮೌಂಟ್ ಎವೆರೆಸ್ಟ್ (8,848ಮೀ)

ಪ್ರಪಂಚದ ಎರಡನೇ ಎತ್ತರದ ಶಿಖರ - ಮೌಂಟ್ ಆಸ್ಪಿನ್ ಗಾಡ್ವಿನ್ (8,611ಮೀ.)

ಇತರ ಪ್ರಮುಖ ಶಿಖರಗಳು
ಕಾಂಚನಗಂಗಾ, ಧವಳಗಿರಿ, ಅನ್ನಪೂರ್ಣ, ನಂಗಾ ಪರ್ವತ, ಮಕಾಲು

ಜಗತ್ತಿನ ಅತ್ಯಂತ ಎತ್ತರವಾದ ಟಿಬೇಟ್ ಪ್ರಸ್ಥಭೂಮಿಯು ಹಿಮಾಲಯ ಮತ್ತು ಕುನ್‍ಲುನ್ ಪರ್ವತಗಳ ನಡುವೆ ಇದ್ದು ಸಮುದ್ರಮಟ್ಟದಿಂದ 4,600 ಮೀ. ಎತ್ತರವಿದೆ. ಆದ್ದರಿಂದಲೇ ಈ ಪ್ರಸ್ಥಭೂಮಿಯು `ಜಗತ್ತಿನ ಮೇಲ್ಛಾವಣಿ' ಎಂದು ಕರೆಯುತ್ತೇವೆ.

ಗೋಬಿ ಮರಭೂಮಿ - ಅಲ್ಟಾಯ್ ಶ್ರೇಣಿಯ ಈಶಾನ್ಯಕ್ಕೆ ಇದೆ.

ಇರಾನ್ ಪ್ರಸ್ಥಭೂಮಿ - ಪಾಮಿರ್ ಗ್ರಂಥಿಯ ಪಶ್ಚಿಮ, ಉತ್ತರದ ಮತ್ತು ದಕ್ಷಿಣ ದಿಕ್ಕಿಗಿದೆ.

ಏಷ್ಯಾ ಮೈನರ್ ಪ್ರಸ್ಥಭೂಮಿ - ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಇದೆ.


               4 ಪ್ರಮುಖ ಮಹಾನದಿ ಬಯಲುಗಳು

೧. ಯುಫ್ರಿಟಿಸ್ - ಟೈಗ್ರಿಸ್ ಬಯಲು
೨. ಸಿಂಧೂ - ಗಂಗಾ ಬ್ರಹ್ಮಪುತ್ರ ಬಯಲು
೩. ಇರಾವದಿ - ಮೆಕಾಂಗ್ ಬಯಲು
೪. ಹ್ವಾಂಗ್-ಹೋ ಮತ್ತು ಯಾಂಗ್ ಟ್ಸೆಕಿಯಾಂಗ್ ಬಯಲು

ತಿಳಿದಿರಲಿ : ದ್ವೀಪಗಳ ಸರಮಾಲೆಯನ್ನು ದ್ವೀಪಸ್ಥೋಮ ಎನ್ನುತ್ತಾರೆ.
ಪ್ರಮುಖ ದ್ವೀಪಸ್ಥೋಮಗಳು -
 ಇಂಡೋನೇಷ್ಯಾ, ಫಿಲಿಫೈನ್ಸ್, ಜಪಾನ್ ಮತ್ತು ಅಂಡಮಾನ್-ನಿಕೋಬಾರ್.



                ಏಷ್ಯಾ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು

೧. ವಿಶಾಲವಾದ ವಿಸ್ತಾರ
೨. ಪರ್ವತ ಶ್ರೇಣಿಗಳ ಎತ್ತರ ಮತ್ತು ದಿಕ್ಕು
೩. ಕಾಲಕಾಲಕ್ಕೆ ಬೀಸುವ ಮಾರುತಗಳ ದಿಕ್ಕು ಬದಲಾವಣೆ

 ಕೆಲಭಾಗಗಳನ್ನು ಹೊರತುಪಡಿಸಿದರೆ, ಇಡೀ ಏಷ್ಯಾ ಖಂಡವು ಉತ್ತರ ಗೋಳಾರ್ಧದಲ್ಲಿದೆ.

       ಏಷ್ಯಾದಲ್ಲಿ ಸರಾಸರಿ 30 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸೆಖೆ ಇರುತ್ತದೆ. ಕಾರಣವೆಂದರೆ, ಕರ್ಕಾಟಕ ಸಂಕ್ರಾಂತಿ ವೃತ್ತ ಬೇಸಿಗೆಯಲ್ಲಿ ಸೂರ್ಯ ಕಿರಣಗಳು ನೇರವಾಗಿ (ಲಂಬವಾಗಿ) ಬೀಳುತ್ತವೆ.

         ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಮಕರ ಸಂಕ್ರಾಂತಿ ವೃತ್ತದ ಮೇಲೆ ನೇರವಾಗಿ ಬಿದ್ದು ಕರ್ಕಾಟಕದ ಮೇಲೆ ಬಾಗುತ್ತವೆ. ಇದರಿಂದ ಮಧ್ಯ ಏಷ್ಯಾ ಬಹಳ ಚಳಿಯಿಂದ ಕೂಡಿರುತ್ತದೆ.

* ಏಷ್ಯಾದಲ್ಲಿ ಜನಸಾಂದ್ರತೆ ಪ್ರತಿ ಒಂದು ಕಿ.ಮೀ.ಗೆ 1000 ದಷ್ಟು ಇರುತ್ತದೆ.

* ಏಷ್ಯಾ ಜನರ ಪ್ರಧಾನ ವೃತ್ತಿ - ವ್ಯವಸಾಯ
* ಏಷ್ಯಾ ಜನರ ಪ್ರಮುಖ ಬೆಳೆ - ಭತ್ತ

ಭತ್ತ ಬೆಳೆಯುವ ಪ್ರಮುಖ ದೇಶಗಳು - ಚೀನಾ, ಭಾರತ, ಜಪಾನ, ಬಾಂಗ್ಲಾದೇಶ, ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ

ಏಷ್ಯಾದ ಪ್ರಮುಖ ಖನಿಜಗಳು - ಕಬ್ಬಿಣದ ಅದಿರು, ಕಲ್ಲಿದ್ದಲು, ಪೆಟ್ರೋಲಿಯಂ, ಬಾಕ್ಸೈಟ್, ಅಭ್ರಕ ಮತ್ತು ತವರ

* ಸೂಯೆಜ್ ಕಾಲುವೆಯು ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಕೂಡಿಸುತ್ತದೆ.

Saturday, 5 November 2011

ಭೂಗೋಳಶಾಸ್ತ್ರ ಭಾಗ - 2

                 ಅಕ್ಷಾಂಶ ಮತ್ತು ರೇಖಾಂಶ    5 ಮತ್ತು 8ನೇ ತರಗತಿ


    ಭೂಮಿ ಮತ್ತು ಅದರ ಭೌಗೋಳಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಕೆಲವು ಸಂಕೇತಗಳನ್ನು ಉಪಯೋಗಿಸಿದ್ದಾರೆ. ಈ ಸಂಕೇತಗಳು ಭೂಮಿಯ ಮೇಲೆ ಖಂಡಿತ ಕಾಣ ಸಿಗುವುದಿಅಲ್ಲ್.ಅ ಆದ್ರೆ ಅವು ಭೂಮಿ  ಮತ್ತು ಅದರ ಲಕ್ಷನಗಳನ್ನು ತಿಳಿದುಕೊಳ್ಳಲು ಉಪಯುಕ್ತವಾಗಿವೆ.

ಪಶ್ಚಿಮದಿಂದ ಪೂರ್ವಕ್ಕೆ ಎಳೆಯಲಾದ ಅಡ್ದರೇಖೆಗಳನ್ನು ಅಕ್ಷಾಂಶಗಳೆಂದು ಕರೆಯುತ್ತಾರೆ.

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾಗಿರುವ ಉದ್ದದ ರೇಖೆಗಳನ್ನು ರೇಖಾಂಶಗಳೆಂದು ಕರೆಯುವರು.

ಅಕ್ಷಾಂಶದ ಒಂದು ಡಿಗ್ರಿ ಸುಮಾರು 111ಕಿ.ಮೀ.ಗೆ ಸಮಾನ. ಗ್ರೀಕ್ ಖಗೋಳಶಾಸ್ತ್ರಜ್ಞ ಟಾಲೆಮಿಯು ಅಕ್ಷಾಂಶ-ರೇಖಾಂಶಗಳನ್ನು ಸೃಷ್ಟಿಸಿದನೆಂದು ಹೇಳಲಾಗುತ್ತದೆ.



ಸಮಭಾಜಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ

        ಭೂಮಿಯ ಮಧ್ಯಭಾಗದಲ್ಲಿ ಹಾದು ಹೋಗಿರುವ ಸಮಭಾಜಕ ವೃತ್ತದ ಮೇಲ್ಭಾಗವನ್ನು ಉತ್ತರಾರ್ಧವೆಂದು, ಕೆಳಭಾಗವನ್ನು ದಕ್ಷಿಣಾರ್ಧವೆಂದು ಗುರುತಿಸಲಾಗಿದೆ. ಉತ್ತರದಲ್ಲಿ 90 ಡಿಗ್ರಿ ಅಕ್ಷಾಂಶ ಮತ್ತು ದಕ್ಷಿಣದಲ್ಲಿ 90 ಡಿಗ್ರಿ ಅಕ್ಷಾಂಶಗಳಿರುತ್ತವೆ. ಪ್ರತಿಯೊಂದನ್ನು ೦ ಡಿಗ್ರಿಯಿಂದ 90 ಡಿಗ್ರಿ ಅಕ್ಷಾಂಶವಾಗಿ ವಿಭಜಿಸಿ, ಉತ್ತರ ಮತ್ತು ದಕ್ಷಿಣ ಎಂದು ಗುರುತಿಸಲಾಗಿದೆ.

ಕರ್ಕಾಟಕ ಸಂಕ್ರಾಂತಿ ವೃತ್ತ - 23 1/2 ಡಿಗ್ರಿ ಉತ್ತರ
ಮಕರ ಸಂಕ್ರಾಂತಿ ವೃತ್ತ - 23 1/2 ಡಿಗ್ರಿ ದಕ್ಷಿಣ

ಉತರ ಮೇರು ವೃತ್ತ - .66 1/2 ಡಿಗ್ರಿ
ದಕ್ಷಿಣ ಮೇರು ವೃತ್ತ 66 1/2 ಡಿಗ್ರಿ

ಅಕ್ಷಾಂಶಗಳಂತೆ ರೇಖಾಂಶಗಳು ಉದ್ದದಲ್ಲಿ ಅಂತರಗಳಿರದೆ ಇವು ಸರಿ ಸಮಾನ ಉದ್ದಳತೆ ಪಡೆದಿವೆ.

ಪ್ರಮುಖ ರೇಖಾಂಶ - ಇಂಗ್ಲೆಂಡಿನ ಗ್ರೀನಿಚ್ (ಹಳ್ಳಿ ಹೆಸರು)
ಇದರ ಸೂಚ್ಯಾಂಕ - ೦ ಡಿಗ್ರಿ
ಇದನ್ನು `ಮಧ್ಯಾಹ್ನ ರೇಖೆ' ಎಂದೂ ಹೇಳುವರು.

ಗ್ರೀನಿಚ್‍ನ ೦ ಡಿಗ್ರಿಯಿಂದ 180 ಡಿಗ್ರಿಗೆ ಇರುವ ಪೂರ್ವದ ಪ್ರದೇಶವು ಪೂರ್ವ ಗೋಳಾರ್ಧವೆಂದು ಕರೆಯಲ್ಪಡುತ್ತದೆ. ಗ್ರೀನಿಚ್‍ನ ೦ ಡಿಗ್ರಿಯಿಂದ 180ಡಿಗ್ರಿವರೆಗಿನ ಪಶ್ಚಿಮ ಪ್ರದೇಶವನ್ನು ಪಶ್ಚಿಮಗೋಳಾರ್ಧವೆಂದು ಕರೆಯಲಾಗಿದೆ.

ರೇಖಾಂಶವು ಕಾಲವನ್ನು ನಿರ್ಧರಿಸಲು ನೆರವಾಗುವ ಮತ್ತು ಅಕ್ಷಾಂಶ-ರೇಖಾಂಶಗಳ ಜಾಲವು ಸ್ಥಳಗಳನ್ನು ಗುರುತಿಸಲು ಸಹಾಯಕವಾಗಿದೆ.


8ನೇ ತರಗತಿ

ಸಮಭಾಜಕ ವೃತ್ತದ ಉತ್ತರ ಗೋಳಾರ್ಧದಲ್ಲಿ 90 ಡಿಗ್ರಿ ಅಕ್ಷಾಂಶಗಳಿವೆ. ಅದೇ ದಕ್ಷಿಣಾರ್ಧಗೋಳದಲ್ಲಿ 90 ಡಿಗ್ರಿ ಅಕ್ಷಾಂಶ ಇವೆ. ಸಮಭಾಜಕ ವೃತ್ತದಿಂದ ದಕ್ಷಿಣ ಮತ್ತು ಉತ್ತರ ಧ್ರುವಗಳ ಕಡೆಗೆ ಹೋದಂತೆ ಈ ವೃತ್ತಗಳು ಚಿಕ್ಕದಾಗುತ್ತವೆ.

ಸಮಭಾಜಕ ವೃತ್ತದಲ್ಲಿ ಎರಡು ರೇಖಾಂಶಗಳ ನಡುವಿನ ಅಂತರವು ಅತಿ ಹೆಚ್ಚು ಮತ್ತು ಅದು ಧ್ರುವಗಳ ಕಡೆಗೆ ಹೋದಂತೆ ಕಡಿಮೆಯಾಗುತ್ತದೆ. ರೇಖಾಂಶಗಳು ಧ್ರುವಗಳಲ್ಲಿ ಸಂಧಿಸುತ್ತವೆ.

ಪ್ರತಿಯೋಮ್ದು ರೇಖಾಂಶಕ್ಕೂ ತನ್ನದೇ ಆದ ಸ್ಥಳೀಯ ವೇಳೆ ಇದೆ. ೮೨ ೧/೨ ಡಿಗ್ರಿ ಪೂರ್ವ ರೇಖಾಂಶವು ಭಾರತದ ಮಧ್ಯ ರೇಖಾಂಶವಾಗಿದೆ.
1884ರಲ್ಲಿ ವಾಷಿಂಗ್ಟನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ರೇಖಾಂಶ ಸಮ್ಮೇಳನದಲ್ಲಿ 180 ಡಿಗ್ರಿ ರೇಖಾಂಶವನ್ನು ಅಂತಾರಾಷ್ಟ್ರೀಯ ದಿನರೇಖೆ' ಎಂದು ಸಾರ್ವತ್ರಿಕವಾಗಿ ಅಂಗೀಕರಿಸಲಾಗಿದೆ.


                                       ಹವಾಮಾನ ವಲಯಗಳು


ಉಷ್ಣವಲಯ :
             ಉಷ್ಣವಲಯವನ್ನು ಟ್ರಾಪಿಕಲ್ ವಲಯ (ಟಾರಿಡ್) ಎಂದು ಕರೆಯಲಾಗಿದೆ. ಇದು ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಬರುತ್ತದೆ. ಈ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದರಿಂದ ಬೆಳಕು ಕೂಡ ನೇರವಾಗಿ ಬೀಳುತ್ತದೆ.



ಸಮಶೀತೋಷ್ಣವಲಯ:-
   ಕರ್ಕಟಕ ಮತ್ತು ಸಂಕ್ರಾಂತಿ ವೃತ್ತದ ನಡುವೆ ಸಮಶೀತೋಷ್ಣವಲಯವಿದೆ. ಈ ಪ್ರದೇಶದಲ್ಲಿ ಸೂರ್ಯಕಿರಣವು ವಾಲಿದಂತೆ ಬೀಳುತ್ತದೆ.

ಶೀತವಲಯ :

     ಈ ವಲಯವು ಉತ್ತರ ಗೋಳಾರ್ಧದಲ್ಲಿ ಆರ್ಕಟಿಕ್ ವೃತ್ತ ಮತ್ತು ಉತ್ತರ ಧ್ರುವದ ಮಧ್ಯೆಯೂ, ದಕ್ಷಿಣ ಗೋಳಾರ್ಧದಲ್ಲಿ ಅಂಟಾರ್ಟಿಕ ವೃತ್ತ ಮತ್ತು ದಕ್ಷಿಣ ಧ್ರುವದ ಮಧ್ಯೆಯೂ ಬರುತ್ತದೆ. ಇಲ್ಲಿ ಯಾವಾಗಲೂ ಅತಿ ಹೆಚ್ಚು ಶಾಖವಿರುತ್ತದೆ.


                                                  STANDARD TIME
       ಒಂದು ರೇಖಾಂಶದಿಂದ ಇನ್ನೊಂದು ರೇಖಾಂಶಕ್ಕೆ ಬೆಳಕು ಸರಿಯಲು ನಾಲ್ಕು ನಿಮಿಷಗಳು ಬೇಕು. ಒಂದೇ ರೇಖಾಂಶದ ಮೇಲಿರುವ ಎಲ್ಲಾ ಸ್ಥಳಗಳು ಒಂದೇ ಕಾಲವನ್ನು ಪಡೆದಿರುತ್ತವೆ. ಆದರೆ ಬೇರೆ ಬೇರೆ ರೇಖಾಂಶಗಳಲ್ಲಿ ಕಾಲ ಬದಲಾಗುವುದರಿಂದ ನಿರ್ದಿಷ್ಟ ಪ್ರದೇಶದ ಕಾಲವನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿಯೊಂದು ದೇಶದಲ್ಲಿ ರೇಖಾಂಶವೊಂದರ ಆಧಾರದ ಮೇಲೆ ಕೇಂದ್ರ ಸ್ಥಳ ಗುರುತಿಸಿ ಅಲ್ಲಿನ ಕಾಲವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ.

* ಭಾರತದಲ್ಲಿ 24 1/2 ಡಿಗ್ರಿ ರೇಖಾಂಶಕ್ಕೆ ಇರುವ ಅಲಹಾಬಾದ್‍ನ್ನು ಕೇಂದ್ರಸ್ಥಳವನ್ನಾಗಿ ಗುರುತಿಸಲಾಗಿದೆ. ಈ ಕಾಲವು ಗ್ರೀನಿಚ್ ಕಾಲಕ್ಕಿಂತ 5:30 ಗಂಟೆ ಮುಂದಿದೆ.

ಕಾಲಗಳು ಅಥವಾ ಋತುಗಳು

              ಸೂರ್ಯನತ್ತ ಧ್ರುವಗಳ ವಾಲುವಿಕೆಯು ಬದಲಾಗುವುದರಿಂದ ವರ್ಷದ ಆರು ತಿಂಗಳ ಕಾಲವು ಉತ್ತರ ಧ್ರುವ ಸೂರ್ಯನ ಬಿಸಿಲನ್ನು ಅನುಭವಿಸಿದರೆ ಮುಂದಿನ ಆರು ತಿಂಗಳು ದಕ್ಷಿಣಧ್ರುವ ಬಿಸಿಲನ್ನು ಅನುಭವಿಸುತ್ತದೆ. ಒಂದು ಭಾಗ ಬೇಸಿಗೆಯಲ್ಲಿದ್ದರೆ ಮತ್ತೊಂದು ಭಾಗ ಚಳಿಗಾಲದಲ್ಲಿರುತ್ತದೆ.

ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಸೂರ್ಯನು ಭೂಮಧ್ಯ ರೇಖೆಯ ಮೇಲೆ ನೇರವಾಗಿ ಪ್ರಕಾಶಿಸುತ್ತಾನೆ. ಈ ದಿನಗಳಲ್ಲಿ ಎಲ್ಲಾ ಪ್ರದೇಶಗಳಲ್ಲಿ 12 ಗಂಟೆ ಹಗಲು, 12 ಗಂಟೆ ರಾತ್ರಿ ಇರುತ್ತದೆ. ಬೇರೆ ಬೇರೆ ದಿನಗಳಲ್ಲಿ ಹಗಲು ರಾತ್ರಿಗಳಲ್ಲಿ ವ್ಯತ್ಯಾಸವಿರುತ್ತದೆ.

ಹೆಚ್ಚಿನ ಮಾಹಿತಿ :
   ಜೂನ್ ತಿಂಗಳಲ್ಲಿ ಉತ್ತರಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ. ಈ ಕಾರಣದಿಂದ ನಾರ್ವೆಯಂತಹ ದೇಶಗಳಲ್ಲಿ 24 ಗಂಟೆಯು ಬಿಸಿಲ ಬೇಸಿಗೆ ಇರುತ್ತದೆ.
        ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್‍ದಲ್ಲಿ ಸೂರ್ಯ ಮುಳುಗುವದೇ ಇಲ್ಲ.

                   

Friday, 4 November 2011

ಭೂಗೋಳಶಾಸ್ತ್ರ ಭಾಗ -1

           ಸ್ಪರ್ಧಾತ್ಮಕ ಪರೀಕ್ಷೆ(ಐ.ಎ.ಎಸ್, ಕೆ.ಎ.ಎಸ್. ಪಿ.ಎಸ್.ಐ. ಪಿ.ಡಿ.ಓ. ಎಫ್.ಡಿ.ಎ. ಎಸ್.ಡಿ.ಎ. ಪಿ.ಸಿ. ಬಿ.ಎಡ್. ಡಿ.ಎಡ್ ಇತ್ಯಾದಿ) ಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತವಾಗಲೆಂದು ಡಿ.ಎಸ್.ಇ.ಆರ್.ಟಿ. ಪಠ್ಯಪುಸ್ತಕಗಳ ನೋಟ್ಸ್‍ನ್ನು ತೆಗೆದು ಇಲ್ಲಿ ಬೆರಳಚ್ಚಿಸಿ ಪ್ರಕಟಿಸುತ್ತಿದ್ದೇನೆ. ಇಂದು ಮಾರುಕಟ್ಟೆಯಲ್ಲಿ ಕೇವಲ ಡಿ.ಎಸ್.ಇ.ಆರ್.ಟಿ. ಆಧಾರಿತ ಮಾರ್ಗದರ್ಶಿ ಪುಸ್ತಕಗಳು ಸಿಗುವುದು ದುರ್ಲಭವಾದ್ದರಿಂದ ಹಾಗೂ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರೆಲ್ಲ ಡಿ.ಎಸ್.ಇ.ಆರ್.ಟಿ. ಪುಸ್ತಕಗಳನ್ನು ಓದಬೇಕಾದ ಅನಿವಾರ್ಯತೆ ಇರುವುದರಿಂದ ಪುಸ್ತಕಗಳ ಸಂಗ್ರಹಕ್ಕಾಗಿ ಕಂಡ ಕಂಡ ಶಾಲೆಗಳಿಗೆಲ್ಲಾ ಅಲೆದಾಡುತ್ತಾರೆ. ಅವರ ಶ್ರಮವನ್ನು ತಪ್ಪಿಸಲೆಂದು ನಾನು ಮಾಡುವ ಪುಟ್ಟ ಪ್ರಯತ್ನ ಅಷ್ಟೆ. ನಿಮಗೆ ಇಷ್ಟವಾದರೆ ಒಂದೆರಡು ಸಾಲು ಕಮೆಂಟಿಸಿ...


                                              ಭೂಗೋಳಶಾಸ್ತ್ರ

                                                  ಸೌರವ್ಯೂಹ               5 ನೇ ತರಗತಿ

                                      

* ಸೂರ್ಯನ ಕುಟುಂಬವೇ ಸೌರವ್ಯೂಹ

* ಭೂಮಿಗೆ ಸಮೀಪವಿರುವ ಗ್ರಹ - ಶುಕ್ರ

* ಅತ್ಯಂತ ಹೆಚ್ಚು ಪ್ರಕಾಶಮಾನವಾದ ಗ್ರಹ - ಶುಕ್ರ

* ಶುಕ್ರ ಮತ್ತು ಬುಧ ಗ್ರಹಗಳನ್ನು ಹೊರತುಪದಿಸಿದರೆ ಉಳಿದೆಲ್ಲ ಗ್ರಹಗಳಿಗೆ ಉಪಗ್ರಹಗಳಿವೆ.

* ಗಾತ್ರದಲ್ಲಿ ಚಂದ್ರನಿಗಿಂತ ಭೂಮಿಯು 50 ಪಟ್ಟು ದೊಡ್ಡದಿದೆ.

* ಭೂಮಿ ಮತ್ತು ಚಂದ್ರನ ನಡುವಿನ ದೂರ - 3,84,403 ಕಿ.ಮೀ.

* ಚಂದ್ರ ತನ್ನ ಕಕ್ಷೆಯಲ್ಲಿ ಚಲಿಸುತ್ತಾ 27 ದಿನ ಮತ್ತು 8 ಗಂಟೆಗಳಲ್ಲಿ ಭೂಮಿಯನ್ನು ಒಮ್ಮೆ ಸುತ್ತುತ್ತದೆ.

 * ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತನ್ನ ಕಕ್ಷೆಯ ಸುತ್ತ ಸುತ್ತುತ್ತದೆ.

ಭೂಮಿಗೆ ಒಮ್ದು ಕಾಲ್ಪನಿಕ ಅಕ್ಷವಿದೆ. ಇದು ಒಂದು ಸರಳ ರೇಖೆಯಂತಿದೆ. ಭೂ ಮಧ್ಯಭಾಗದಲ್ಲಿ ಒಂದು ಧ್ರುವದಿಂದ ಮತ್ತೊಂದು ಧ್ರುವಕ್ಕೆ ಈ ರೇಖೆಯು ಹಾದು ಹೋಗಿರುವುದು. ಈ ಅಕ್ಷದ ಎರಡು ಬಿಂದುಗಳನ್ನು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಎಂದು ಗುರುತಿಸಲಾಗಿದೆ. ಅಕ್ಷವು ಯಾವಾಗಲೂ ಧ್ರುವ ನಕ್ಷತ್ರದ ಕಡೆಗೆ ಮುಖ ಮಾಡಿರುತ್ತದೆ. ಧ್ರುವ ನಕ್ಷತ್ರವು ಉತ್ತರ-ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ.

ಭೂಮಿಯ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವದರಿಂದ ಅದರ ಪೂರ್ವ ಭಾಗವು ಮೊದಲು ಸೂರ್ಯನ ಬೆಳಕನ್ನು ಪಡೆಯುತ್ತದೆ. ಅದರಿಂದಾಗಿ ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗುವಂತೆ ತೋರುವುದು.

ಭೂಮಿಯ ಮೇಲೆ ನಿಂತು ನೋಡಿದಾಗ ಸುತ್ತಲೂ ಆವರಿಸಿರುವ ನಕ್ಷತ್ರಗಳಲ್ಲಿ ಅರ್ಧದಷ್ಟನ್ನು ಮಾತ್ರ ನೋಡಬಹುದು

ಭೂಮಿಗೆ ಸೂರ್ಯನ ಸುತ್ತ ಒಮ್ಮೆ ಪ್ರದಕ್ಷಿಣೆ ಮಾಡಲು 365 ದಿನ 5 ಗಂಟೆ 49 ನಿಮಿಷ 12 ಸೆಕೆಂಡುಗಳು ಬೇಕು.

Thursday, 3 November 2011

ನಮ್ಮ ಅಕ್ಕನ ಮಗು

ಪ್ರಿಯರೇ, ಕೆಲವು ಗಂಟೆಗಳ ಹಿಂದೆಯಷ್ಟೇ ನಮ್ಮ ಅಕ್ಕನವರು ನವಜಾತ ಶಿಶು(ಹೆಣ್ಣು)ವೊಂದಕ್ಕೆ ಜನ್ಮ ನೀಡಿದರು. ನಮಗೆಲ್ಲಾ ಬಹಳ ಸಂತೋಷವಾಗಿದೆ. ಆ ಮಗುವಿನ ಮುದ್ದು ಚಿತ್ರ ಇಲ್ಲಿದೆ. ಹಾಗೆ ಸುಮ್ಮನೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು, ಅಷ್ಟೆ.

ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು

ಭಾರತ ಸೇನಾ ಪಡೆಗಳ ಮುಖ್ಯಸ್ಥರು

ರಕ್ಷಣಾಪಡೆಯ ಸರ್ವೋಚ್ಚ ಮುಖ್ಯಸ್ಥರು
: ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್
ಭೂಸೇನಾ ಮುಖ್ಯಸ್ಥರು : ಜನರಲ್ ವಿ.ಕೆ.ಸಿಂಗ್
ನೌಕಾಪಡೆಯ ಮುಖ್ಯಸ್ಥರು: ಅಡ್ಮಿರಲ್ ನಿರ್ಮಲ್ ಕುಮಾರ್ ವರ್ಮಾ
ವಾಯುಪಡೆಯ ಮುಖ್ಯಸ್ಥರು: ಏರ್‌ಚೀಫ್ ಮಾರ್ಷಲ್ ಪಿ.ವಿ.ನಾಯಕ್



ಭಾರತೀಯ  ನ್ಯಾಯಾಂಗೀಯ ಮುಖ್ಯಸ್ಥರು

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು : ಎಸ್.ಎಚ್.ಕಪಾಡಿಯಾ
ಅಟಾರ್ನಿ ಜನರಲ್ ಆಫ್ ಇಂಡಿಯಾ : ಗೂಳಂ ಈ ವಹನಾವಟಿ
ಸಾಲಿಸಿಟರ್ ಜನರಲ್ ಆಫ ಇಂಡಿಯಾ : ಗೋಪಾಲ ಸುಬ್ರಹ್ಮಣ್ಯಂ


ಭಾರತದ ಪ್ರಮುಖ ಆಯೋಗಗಳ ಮುಖ್ಯಸ್ಥರು

ಯೋಜನಾ ಆಯೋಗದ ಅಧ್ಯಕ್ಷರು : ಡಾ.ಮನನೋಹನ್ ಸಿಂಗ್

ಯೋಜನಾ ಆಯೋಗದ ಉಪಾಧ್ಯಕ್ಷ : ಡಾ.ಮಾಂಟೆಂಕ್ ಸಿಂಗ್ ಅಹ್ಲುವಾಲಿಯಾ

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ : ಗಿರಿಜಾ ವ್ಯಾಸ್

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು : ನಿವೃತ್ತ ನ್ಯಾ.ಕೆ.ಜಿ.ಬಾಲಕೃಷ್ಣನ್

ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರು : ಸುಖದೇವ್ ಥೋರಟ್

ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರು : ಪ್ರೊ.ಡಿ.ಪಿ.ಅಗರ್‌ವಾಲ್

ರಾಷ್ಟ್ರೀಯ ಕೃಷಿಕ ಆಯೋಗದ ಅಧ್ಯಕ್ಷರು : ಪ್ರೊ.ಎಂ.ಎಸ್.ಸ್ವಾಮಿನಾಥನ್

ಧನ ವಿನಿಯೋಗ ಆಯೋಗದ ಅಧ್ಯಕ್ಷರು :  ರತನ್ ಟಾಟಾ

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು : ಮಹ್ಮದ್ ಶಫಿ ಖುರೇಷಿ



ಭಾರತದ ವಿವಿಧ ಇಲಾಖೆಗಳ ಮುಖ್ಯಸ್ಥರು

ಲೋಕಸಭಾ ಸ್ಪೀಕರ್ (ಸಭಾಪತಿ) : ಮೀರಾ ಕುಮಾರ್

ರಾಜ್ಯಸಭೆಯ ಅಧ್ಯಕ್ಷರು : ಮಹಮ್ಮದ್ ಹಮೀದ್ ಅನ್ಸಾರಿ

ರಾಜ್ಯಸಭೆಯ ಉಪಾಧ್ಯಕ್ಷರು : ಕೆ.ರೆಹಮಾನ್ ಖಾನ್

ಲೋಕಸಭೆಯ ಉಪಸಭಾಪತಿ : ಕರಿಯಾ ಮುಂಡಾ

ಮುಖ್ಯ ಚುನಾವಣಾ ಆಯುಕ್ತರು : ಎಸ್.ವೈ.ಖುರೇಶಿ

ಕಂಟ್ರೋಲರ್ ಆಂಡ್ ಅಡಿಟರ್ ಜನರಲ್ ಆಫ್ ಇಂಡಿಯಾ : ವಿನೋದ್ ರಾಯ್

ರಿಸರ್ವ್ ಬ್ಯಾಂಕ್‍ನ ಗವರ್ನರ್ : ಡಿ.ಸುಬ್ಬರಾವ್

ಕೇಂದ್ರ ಜ್ಞಾನ ಆಯೋಗದ ಅಧ್ಯಕ್ಷರು : ಡಾ.ಸ್ಯಾಮ್ ಪಿತ್ರೋಡಾ

ರಾಜ್ಯ ಜ್ಞಾನ ಆಯೋಗದ ಅಧ್ಯಕ್ಷರು : ಡಾ.ಕೆ.ಕಸ್ತೂರಿ ರಂಗನ್

ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷರು : ನಂದನ್ ನಿಲೇಕಣಿ

ಕೇಂದ್ರ ಕಾನೂನು ಆಯೋಗದ ಮುಖ್ಯಸ್ಥರು :  ನ್ಯಾ. ಪಿ.ವಿ.ರೆಡ್ಡಿ

ರಾಷ್ಟ್ರೀಯ ಭದ್ರತಾ ಸಲಹೆಗಾರ : ಶಿವಶಂಕರ್ ಮೆನನ್

೧೩ನೇ ಹಣಕಾಸು ಆಯೋಗದ ಅಧ್ಯಕ್ಷರು : ಡಾ.ವಿಜಯ್ ಕೇಳ್ಕರ್

ಭಾರತದ ವಿದೇಶಾಂಗ ಕಾರ್ಯದರ್ಶಿ : ನಿರುಪಮಾ ರಾವ್

ಇಸ್ರೋ ಅಧ್ಯಕ್ಷರು: ಡಾ.ಕೆ.ರಾಧಾಕೃಷ್ಣನ್

ನಬಾರ್ಡ್‍ದ ಅಧ್ಯಕ್ಷರು : ಯು.ಸಿ.ಸಾರಂಗಿ

ಅಧ್ಯಕ್ಷರು, ಪ್ರಸಾರ ಭಾರತಿ : ಶ್ರೀಮತಿ ಮೃಣಾಲ್ ಪಾಂಡೆ

ಸಿ.ಇ.ಓ. ಇನ್ಫೋಸಿಸ್ : `ಕ್ರಿಸ್' ಗೋಪಾಲಕೃಷ್ಣ

ಸಿ.ಇ.ಓ. ಕಿಂಗ್ ಫಿಶರ್ : ವಿಜಯ ಮಲ್ಯ

ಸಿ.ಇ.ಓ. ಐ.ಸಿ.ಐ.ಸಿ.ಐ ಬ್ಯಾಂಕ್ : ಚಂದಾ ಕೊಚ್ಚಾರ






ವಿಶ್ವಸಂಸ್ಥೆ

ಬಾನ್-ಕಿ-ಮೂನ್ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ಇರಿನಾ ಬೊಕೊವಾ - ಯುನೆಸ್ಕೋದ ಮಹಾನಿರ್ದೇಶಕರು

ಮಿಸ್ ಆಶಾ ರೋಸ್ ಮಿಗಿರೋ : ವಿಶ್ವಸಂಸ್ಥೆಯ ಮೊದಲ ಉಪಪ್ರಧಾನ ಕಾರ್ಯದರ್ಶಿ

ಡಾ.ಮಾರ್ಗರೇಟ್ ಚಾನ್ : ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು

ಜೂಯನ್ ಸೋಮಾವಿಯ : ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಹಾನಿರ್ದೇಶಕರು

ಜಾಕಶ್ ಡಿಯೋಫ್ : ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾನಿರ್ದೇಶಕರು

ಕ್ಯಾರೋಲ್ ಬೆಲ್ಲಮಿ : ಕಾರ್ಯ ನಿರ್ವಾಹಕ ನಿರ್ದೇಶಕರು, ಯುನಿಸೆಫ್

ಹ್ಯಾಮಡೂನ್ ಟೂರ್ : ಪ್ರಧಾನ ಕಾರ್ಯದರ್ಶಿ, ಐ.ಟಿ.ಯು

ಸುರೀನ್ ಪಿಟ್ಸ್‍ವಾನ್ : ಪ್ರಧಾನ ಕಾರ್ಯದರ್ಶಿ, ಐ.ಟಿ.ಯು.